Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಈವತ್ತಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಬಹುತೇಕ ಭಾಷೆಗಳ ಚಿತ್ರರಂಗಗಳು ಸದ್ದು ಮಾಡುತ್ತಿವೆ. ಹಲವಾರು ಉತ್ಕೃಷ್ಟ ತಂತ್ರಜ್ಞಾನಗಳಿಗೆ ಸಿನಿಮಾ ಜಗತ್ತು ತೆರೆದುಕೊಂಡಿದೆ. ಒಂದು ಕಾಲದಲ್ಲಿ ಕೆಲ ಸಿನಿಮಾಗಳೇ ವೈಜ್ಞಾನಿಕ ವಿಚಾರಧಾರೆಗಳಿಗೆ ತೆರೆದುಕೊಂಡು ಮೌಢ್ಯ ನಿವಾರಣೆಗೆ ಪ್ರಯತ್ನಿಸಿದ್ದೂ ಇದೆ. ಇಂಥಾ ಭಾರತೀಯ ಸಿನಿಮಾ ರಂಗವನ್ನು ಈವತ್ತಿಗೂ ಮೌಢ್ಯಗಳು ಒಳಗಿಂದೊಳಗೇ ಆಳುತ್ತಿದೆ ಅಂದರೆ ಅಚ್ಚರಿಯಾಗದಿರೋದಿಲ್ಲ. ಹಾಗಂದಾಕ್ಷಣ ಮುಹೂರ್ತ ಸಮಾರಂಭ ಮುಂತಾದವುಗಳಲ್ಲಿ ನಡೆಯೋ ಪೂಜೆ ಪುನಸ್ಕಾರಗಳ ವಿಚಾರ ಅಂದುಕೊಳ್ಳುವಂತಿಲ್ಲ. ಅದೇನು ಮೌಢ್ಯ ಅನ್ನಲಾಗೋದಿಲ್ಲ. ಈಗ ಹೇಳ ಹೊರಟಿರೋದು ಚಿತ್ರರಂಗ ಈವತ್ತಿಗೂ ನೆಚ್ಚಿಕೊಂಡಿರುವ ಚಿತ್ರವಿಚಿತ್ರವಾದ ಮೂರ್ಖ ನಂಬಿಕೆಗಳ ಬಗ್ಗೆ! ಇಲ್ಲಿ ಒಂದೆರಡು ಸೋಲುಗಳೆದುರಾದರೂ ಅಂಥವರನ್ನು ಐರನ್ ಲೆಗ್ ಅಂತೆಲ್ಲ ಮೂದಲಿಸಲಾಗುತ್ತೆ. ನಾಯಕ ನಟರು ಇಂಥಾ ಮೌಢ್ಯದಿಂದ ಹೇಗೋ ಬಚಾವಾಗುತ್ತಾರೆ. ಆದರೆ, ಅದರ ನೇರ ಪರಿಣಾಮವಾಗುತ್ತಿರೋದು ನಟಿಯರ ಮೇಲೆ. ಇದೆಲ್ಲವನ್ನೂ ಹೇಳಲು ಕಾರಣವಾಗಿರೋದು ಮಂಗಳೂರು ಹುಡುಗಿ ಪೂಜಾ ಹೆಗ್ಡೆ ಈವತ್ತಿಗೆ ತಲುಪಿಕೊಂಡಿರುವ ಹೀನಾಯ ಸ್ಥಿತಿ. ಆಕೆ ಈಗೊಂದಷ್ಟು ವರ್ಷಗಳಿಂದ ನಟಿಸಿದ ಚಿತ್ರಗಳೆಲ್ಲ ಸೋಲು ಕಂಡು ಕಂಗಾಲಾಗಿದ್ದಾಳೆ. ಈ ಕಾರಣದಿಂದಲೇ ಕಳೆದೊಂದು ವರ್ಷದಿಂದ…

Read More

ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿದೆ. ಆದರೆ, ಪಕ್ಕಾ ರಜನೀ ಶೈಲಿಯಲ್ಲಿ ಕೂಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಸೃಷ್ಟಿಸುತ್ತಿರೋದು ಸುಳ್ಳಲ್ಲ. ಹೈಪಿಗೆ ಒಂದಷ್ಟು ಹತ್ತಿರಾಗಿ ಮೂಡಿ ಬಂದಿದ್ದರೂ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಅವಕಾಶದಿಂದ ಕೂಲಿ ವಂಚಿತವಾದಂತಿದೆ. ಇದೇ ಹೊತ್ತಿನಲ್ಲಿ ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ದೊಡ್ಡ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ನಿಜಕ್ಕೂ ವಿಶೇಷವಾದ ಸಿನಿಮಾ. ಯಾಕೆಂದರೆ, ಇಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಸಲಿದ್ದಾರೆ. ಇದೊಂದು ರೀತಿಯಲ್ಲಿ ಅಪೂರ್ವ ಸಂಗಮ ಅನ್ನಲಡ್ಡಿಯಿಲ್ಲ. ಭರ್ತಿ ನಾಲಕ್ಕು ದಶಕಗಳ ನಂತರ ಈ ಇಬ್ಬರು ನಟರು ಒಂದೇವ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆಂದರೆ, ಅದು ಸಿನಿಮಾ ಪ್ರೇಮಿಗಳ ಪಾಲಿಗೆ ಪಕ್ಕಾ ಥ್ರಿಲ್ಲಿಂಗ್ ವಿಚಾರ. ೧೯೭೯ರಲ್ಲಿ…

Read More

ಕರ್ನಾಟಕದಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಭಾರೀ ಗೆಲುವು ದಕ್ಕಿಸಿಕೊಂಡ ಅನೇಕ ನಟಿಯರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದರೂ ಕೂಡಾ, ಆಕೆಗೂ ಮುನ್ನವೇ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾಕೆ ಪೂಜಾ ಹೆಗ್ಡೆ. ಸರಿಸುಮಾರು ಏಳೆಂಟು ವರ್ಷಗಳ ಕಾಲ ಈಕೆ ತೆಲುಗು ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ವಿಜೃಂಭಿಸಿದ್ದಳು. ಆ ಕಾಲದಲ್ಲಿ ಆಕೆಯ ಬಗೆಗಿದ್ದ ಕ್ರೇಜ್, ಬೇಡಿಕೆಗಳನ್ನು ನೋಡಿದ್ದವರಿಗೆ, ಈವತ್ತು ಪೂಜಾ ಹೆಗ್ಡೆ ಮಂಕಾಗಿರುವ ರೀತಿ ಕಂಡರೆ ಅಚ್ಚರಿಯಾಗದಿರೋದಿಲ್ಲ. ಒಂದು ಸುದೀರ್ಘ ವನವಾಸದ ನಂತರವೂ ಆಕೆ ಮುಟ್ಟಿದ್ದೆಲ್ಲವೂ ಮಣ್ಣಾಗುವಂತಾಗಿದೆ. ಇದೇ ಹೊತ್ತಿನಲ್ಲಿಮ ಪೂಜಾ ಮಲೆಯಾಳ ಚಿತ್ರರಂಗಕ್ಕೆ ತೆರಳಿ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿರೋ ಸುದ್ದಿ ಬಂದಿದೆ! 2020ರಲ್ಲಿ ಅಲಾ ವೈಕುಂಟಪುರಾಲೋ ಅಂತೊಂದು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಳು. ಅದು ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಆ ಕ್ಷಣದಿಂದ ಇಲ್ಲಿಯವರೆಗೂ ಪೂಜಾ ಹೆಗ್ಡೆ ಪಾಲಿಗೆ ಮತ್ತೊಂದು ಗೆಲುವು ಮರೀಚಿಕೆಯಾಗಿದೆ. ಎಲ್ಲಾ ಸಿನಿಮಾಗಳೂ ಗೆಲ್ಲುತ್ತವೆ ಎಂದೇನೂ ಅಲ್ಲ. ಒಂದು ಸೋಲಿನ ನಂತರ ಮತ್ತೊಂದು ಸುಮಾರಾದ…

Read More

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು. ಈಕೆ ಸಪ್ತಸಾಗರದಾಚೆಯ ನಂತರ ಸೀದಾ ತಮಿಳಿಗೆ ಹಾರಿ ವಿಜಯ್ ಸೇತುಪತಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಹಿನ್ನಡೆಯ ಹಿಂಚುಮುಂಚಲ್ಲಿಯೇ ಅಚ್ಚರಿದಾಯಕವಾಗಿ ಈ ಹುಡುಗಿಕಗೆ ದೊಡ್ಡ ದೊಡ್ಡ ಅವಕಾಶಗಳು ಒಲಿದು ಬರುತ್ತಿವೆ. ಇದೀಗ ರುಕ್ಮಿಣಿಗೆ ರಾಕಿ ಭಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿದೆ. ರೆಟ್ರೋ ಶೈಲಿಯ ಟಾಕ್ಸಿಕ್ ಚಿತ್ರ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ಹುಮಾ ಖುರೇಶಿ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹತ್ವದ ಪಾತ್ರಕ್ಕೆ ನಿರ್ದೇಶಕಿ ಗೀತು ಮೋಹನ್…

Read More

ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ ಚಿತ್ತ ಒಜಿಯತ್ತ ಹೊರಳಿಕೊಂಡಿದೆ. ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಒಂದುಯ ಹಂತದಲ್ಲಿ ಓಜಿ ಪವನ್ ವೃತ್ತಿ ಬದುಕಿನ ಕಡೇಯ ಸಿನಿಮಾ ಎಂದೂ ಗುಲ್ಲೆದ್ದಿತ್ತು. ಅದು ಸುಳ್ಳೆಂಬುದು ಜಾಹೀರಾದರೂ ಸಹ ಓಜಿಗೆ ಅಂಟಿಕೊಂಡಿದ್ದ ಅಭಿಮಾನಿಗಳ ಸೆಂಟಿಮೆಂಟು ಮತ್ತಷ್ಟು ತೀವ್ರಗೊಂಡಿದೆ. ಇದೇ ಹೊತ್ತಿನಲ್ಲಿ ಈ ಸಿನಿಮಾ ಭಾಗವಾಗಿರುವ ಕಲಾವಿದರ ಫಸ್ಟ್ ಲುಕ್ ಅನಾವರಣ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಪವನ್ ಕಲ್ಯಾಣ್ ನಾಯಕನಾಗಿ ನಟಿಸಿರೋ ಓಜಿ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ ಪ್ರಿಯಾಂಕಾ ಮೋಹನ್ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದೀಗ ಆಕೆಯ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲಿಯೇ ಪ್ರಿಯಾಂಕಾ ನಿರ್ವಹಿಸಿರುವ ಪಾತ್ರದ…

Read More

ಶೋಮ್ಯಾನ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಪ್ರೇಮ್ ಇದೀಗ ಕೇಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸನಿಮಾ ಟ್ರೈಲರ್ ಕೂಡಾ ಒಂದಷ್ಟು ಚರ್ಚೆ ಹುಟ್ಟು ಹಾಕಿದೆ. ಹೀಗೆ ಒಂದೆಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದುಕೊಂಡೇ, ಮತ್ತೊಂದೆಡೆಯಲ್ಲಿ ತಮ್ಮಿಷ್ಟದ ಕೃಷಿ ಕಾರ್ಯದಲ್ಲಿಯೂ ಪ್ರೇಮ್ಸ್ ಬ್ಯುಸಿಯಾಗಿದ್ದಾರೆ. ಈತ ಹಳ್ಳಿಗಾಡಿನ ಭಾಷೆ, ಮುಗ್ಧತೆಯ ಕಾರಣದಿಂದಲೇ ಸಾಕಷ್ಟು ಮಂದಿಯ ಪ್ರೀತಿ ಸಂಪಾದಿಸಿಕೊಂಡಿರುವ ನಿರ್ದೇಶಕ. ಹಾಗಂತ ವ್ಯವಹಾರಗಳಲ್ಲಿ ಪ್ರೇಮ್ಸ್ ಮುಗ್ಧರೇನಲ್ಲ. ಒಂದು ಸಿನಿಮಾವನ್ನು ನಿರ್ದೇಶನದ ಜೊತೆಗೆ ವ್ಯಾವಹಾರಿಕವಾಗಿಯೂ ಸರಿದೂಗಿಸಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಇಂಥಾ ಪ್ರೇಮ್ಸ್ ಆನ್‌ಲೈನಲ್ಲಿಯೇ ಎಮ್ಮೆ ಖರೀದಿ ವ್ಯವಹಾರ ನಡೆಸುವ ಮೂರ್ಖತನ ಮಾಡಲು ಹೋಗಿ ನಾಲಕ್ಕೂವರೆ ಲಕ್ಷ ಕಳೆದುಕೊಂಡಿರೋ ವಿಚಾರವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ! ಜೋಗಿ ಪ್ರೇಮ್ಸ್ ಹೈನುಗಾರಿಕೆ ನಡೆಸೋ ಕನಸಿನ ಪ್ರಾಜೆಕ್ಟೊಂದನ್ನು ಇತ್ತೀಚೆಗೆ ಕಾರ್ಯರೂಪಕ್ಕೆ ತಂದಿದ್ದರು. ಹೀಗೆ ಹೈನುಗಾರಿಕೆ ನಡೆಸಲು ಹೊರಟಾಗ ಹಸು ಹಾಗೂ ಎಮ್ಮೆಗಳನ್ನು ಖರೀದಿಸೋದೇ ದೊಡ್ಡ ಸವಾಲು. ಯಾಕೆಂದರೆ, ನಾನಾ ಅವತಾರಗಳಲ್ಲಿ ವಂಚಿಸುವ ಒಂದು ಮಾಫಿಯಾ ರೈತಾಪಿ ವರ್ಗವನ್ನು ಲಾಗಾಯ್ತಿನಿಂದಲೂ ಕಾರ್ಯನಿರ್ವಹಿಸುತ್ತಿದೆ. ತೀರಾ ಅನುಭವಸ್ಥರು…

Read More

ಕನ್ನಡ ಚಿತ್ರರಂಗದ ಮಟ್ಟಿಗೆ ಸೂಪರ್ ಸ್ಟಾರ್ ಆಗಿ ಮೆರೆದವನು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದುವರೆಗಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರೋ ದರ್ಶನ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಾತ. ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತಿದ್ದ ಈತ ಒಂದು ಹಂತದಲ್ಲಿ ಸ್ಫೂರ್ತಿಯಾಗಿ ಕಾಣಿಸುತ್ತಿದ್ದದ್ದು ಸುಳ್ಳಲ್ಲ. ನಾಲಗೆಯ ಮೇಲೆ, ವರ್ತನೆಗಳ ಮೇಲೆ ನಿಗಾ ವಹಿಸಿದ್ದರೆ ಸರ್ವರಿಗೂ ಸಾರ್ವಕಾಲಿಕ ಸ್ಫೂರ್ತಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಗೆಲುವು ಸಿಗುತ್ತಲೇ ಅಮರಿಕೊಳ್ಳುತ್ತಾ ಸಾಗಿದ ದುರಹಂಕಾರ, ಸಿಕ್ಕ ಸಿಕ್ಕಲ್ಲಿ ಮೇಯುವ ಬುದ್ಧಿ, ಸಾರ್ವಜನಿಕವಾಗಿಯೇ ಅಬ್ಬರಿಸಿ ಮೆರೆದಾಡೋ ದುಷ್ಟತನಗಳೆಲ್ಲವೂ ದರ್ಶನ್ ತಲುಪಿಕೊಂಡಿರುವ ಪ್ರಸ್ತುತ ಸ್ಥಿತಿಗೆ ಪ್ರಧಾನ ಕಾರಣವಾಗಿ ಗೋಚರಿಸುತ್ತವೆ. ಸದ್ಯದ ಮಟ್ಟಿಗೆ ಹೇಳೋದಾದರೆ, ದರ್ಶನ್ ಅಕ್ಷರಶಃ ಅದುರಿ ಹೋಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪ್ರವೇಶಿಸಿದ ಘಳಿಗೆಗೂ, ಈವತ್ತಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ. ಕಾಸು ಚೆಲ್ಲುವ ಮೂಲಕ ಜೈಲೊಳಗೆ ವೈಭೋಗದಿಂದ ಬದುಕಿದ್ದ ದರ್ಶನ್ ಪಟಾಲಮ್ಮಿಗೆ ಹೆಜ್ಜೆ ಹೆಜ್ಜೆಗೂ ಆಘಾತಗಳು ಎದುರಾಗುತ್ತಿವೆ. ಇದೆಲ್ಲದರ ನಡುವೆಯೇ ಈ ಪ್ರಕರಣದ ಗಂಭೀರ…

Read More

ಕನ್ನಡ ಚಿತ್ರರಂಗದಿಂದ ಸೀದಾ ತೆಲುಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡದಂತೆ ಗೆಲುವು ಕಂಡಿದ್ದೀಗ ಇತಿಹಾಸ. ಆದರೆ, ಸಾಲು ಸಾಲು ಗೆಲುವುಗಳ ಬೆನ್ನಲ್ಲಿಯೇ ಒಂದಷ್ಟು ಸೋಲುಗಳೂ ಕೂಡಾ ಈಕೆಯನ್ನು ಎದುರುಗೊಳ್ಳುತ್ತಾ ಬಂದಿವೆ. ಒಂದು ಹಂತದಲ್ಲಿ ತೆಲುಗಿನಲ್ಲೀಕೆ ನೇಪಥ್ಯಕ್ಕೆ ಸರಿಯೋದು ಗ್ಯಾರೆಂಟಿ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿತ್ತು. ಹೀಗೆ ಟ್ರೋಲುಗಳು ಹರಿದಾಡಿದಾಗೆಲ್ಲ ಈಕೆ ಅಚ್ಚರಿದಾಯಕವಾಗಿ ಪುಟಿದೆದ್ದು ಬಿಡೋದಿದೆ. ಈಗಲೂ ಕೂಡಾ ಅಂಥಾದ್ದೇ ಸೋಲು ಗೆಲುವುಗಳ ತೂಗುಯ್ಯಾಲೆಯಲ್ಲಿ ಜೀಕುತ್ತಿರುವಾಕೆ ರಶ್ಮಿಕಾ. ಆದರೆ, ಇಂಥಾ ಏಳುಬೀಳುಗಳಾಚೆಗೂ ಆಕೆ ಬಾಲಿವುಡ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾಳೆ. ಆ ಚಿತ್ರದ ದಿಕ್ಕಿಂದ ಹಾರರ್ ಸಂಗತಿಯೊಂದೀಗ ಜಾಹೀರಾಗಿದೆ! ರಶ್ಮಿಕಾ ಬಾಲಿವುಡ್ ಸಿನಿಮಾ ಆರಂಭಿಕವಾಗಿ ಒಪ್ಪಿಕೊಂಡಾಗ ಅದರತ್ತ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆಕೆ ಶಾರೂಖ್ ಖಾನ್ ಜೊತೆ ನಟಿಸಿದ್ದ ಸಿಕಂದರ್ ಚಿತ್ರ ಕವುಚಿಕೊಳ್ಳುತ್ತಲೇ ರಶ್ಮಿಕಾ ಬಾಲಿವುಡ್ಡಿನಲ್ಲಿ ಗೋತಾ ಹೊಡೆದಳೆಂಬಂಥಾ ಕುಹಕದ ಮಾತುಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲಿಯೇ ರಶ್ಮಿಕಾ ನಟಿಸಿದ್ದ ಚಾವಾ ಗೆಲುವು ಕಂಡಿತ್ತು. ಇದೀಗ ಆ ಗೆಲುವಿನ ಖುಷಿಯಲ್ಲಿಯೇ ಥಮಾ ಅಂತೊಂದು ಬಾಲಿವುಡ್…

Read More

ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್’ ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದ. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದ. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಇದೆಲ್ಲದರ ಮೇಲೆ ಈ ಹಿಂದೆ ಬಂಧೀಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯ ನೆರಳಿದೆ ಎಂಬ ಆರೋಪವೂ ಇದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ. ಪರಿವರ್ತನೆಯ ತಾಣವಾದ ಜೈಲು ಫಟಿಂಗ ಅಧಿಕಾರಿಗಳ ಕೈಗೆ ಸಿಕ್ಕರೆ ಏನಾಗಬಹುದೋ ಅದೆಲ್ಲವಕ್ಕೂ ಪರಪ್ಪನ ಅಗ್ರಹಾರ ತಾಜಾ ಉದಾಹರಣೆಯಂತಾಗಿದೆ! -ಸಂತೋಷ್ ಬಾಗಿಲಗದ್ದೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸಿಕ್ಕಿದ್ದ ಬೇಲ್ ರದ್ದಾಗಿದ್ದರಿಂದಾಗಿ ದರ್ಶನ್ ಪಟಾಲಮ್ಮು…

Read More

ತಲೈವಾ ರಜನೀಕಾಂತ್ ಅಭಿನಯದ ಕೂಲಿ ಚಿತ್ರ ಬಿಡುಗಡೆಗೊಂಡಿದೆ. ಜೈಲರ್ ಮೂಲಕ ಮತ್ತೆ ಮೈ ಕೊಡವಿಕೊಂಡಿದ್ದ ರಜನೀಕಾಂತ್ ಕೂಲಿ ಮೂಲಕ ಮತ್ತೊಂದು ದಾಖಲೆ ಬರೆಯುತ್ತಾರೆಂಬಂತೆ ಬಿಲ್ಡಪ್ಪುಗಳು ಹರಿದಾಡಿದ್ದವು. ಈ ತಮಿಳು ಮಂದಿ ಎಷ್ಟು ಸಿನಿಮಾರಾಧಕರೋ, ತಮ್ಮಿಷ್ಟದ ನಟನ ಸಿನಿಮಾ ಬಗ್ಗೆ ಊರಗಲ ಹೈಪು ಸೃಷ್ಟಿಸೋದರಲ್ಲಿಯೂ ಅಷ್ಟೇ ನಿಸ್ಸೀಮರು. ಸಿನಿಮಾ ನಿರ್ಮಾತೃಗಳೂ ಕೂಡಾ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಒಂದಷ್ಟು ಬಚಾವಾಗಲೋಸುಗ ಅಂಥ ಭ್ರಾಮಕ ಹೈಪುಗಳನ್ನೇ ನೆಚ್ಚಿಕೊಳ್ಳುತ್ತಾರೆ. ಕೂಲಿ ಬರಖತ್ತಾಗೋದು ಕಷ್ಟ ಎಂಬರಿತ ಕೂಲಿ ತಂಡ ಕೂಡಾ ಅಂಥಾದ್ದೊಂದು ಬುದ್ಧಿವಂತಿಕೆಯ ನಡೆ ಅನುಸರಿಸಿತ್ತಾ? ಈ ಪ್ರಶ್ನೆಗೆ ಸಿನಿಮಾ ನೋಡಿದ ಮೇಲೆ ಹೌದೆಂಬ ಉತ್ತರವೇ ಗಟ್ಟಿಯಾಗುತ್ತೆ. ಭಯಾನಕ ಪ್ರಚಾರ ಪಡೆದುಕೊಂಡು ತೆರೆಗಂಡಿದ್ದ ಕೂಲಿ ತೀರಾ ಮಾಮೂಲಿ ಎಂಬ ವಿಮರ್ಶೆಗಳೇ ಅಷ್ಟ ದಿಕ್ಕುಗಳಲ್ಲಿಯೂ ಇಟ್ಟಾಡಲಾರಂಭಿಸಿದೆ. ವಿಕ್ರಮ್ ಥರದ ಸಿನಿಮಾ ಮೂಲಕ ಕಮಲ್ ಹಾಸನ್‌ರಂಥಾ ನಟರನ್ನಿಟ್ಟುಕೊಂಡು ಮ್ಯಾಜಿಕ್ಕು ಮಾಡಿದ್ದಾತ ಲೋಕೇಶ್ ಕನಗರಾಜ್. ಅಂಥಾ ಯುವ ನಿರ್ದೇಶಕನ ಸಾರಥ್ಯದಲ್ಲಿ ರಜನಿ ಗೆಲುವಿನ ಪರ್ವ ಮುಂದುವರೆಯುತ್ತದೆಂದೇ ಬಹುತೇಕರು ಭಾವಿಸಿದ್ದರು. ಯಾವಾಗ ಮೆಲ್ಲಗೆ…

Read More