ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ರಿಯಾಲಿಟಿ ಶೋಗಳು ಕುಟುಂಬ ಸಮೇತರಾಗಿ ನೋಡುವ ಗುಣವನ್ನೇ ಕಳೆದುಕೊಂಡಿವೆ. ಡಬಲ್ ಮೀನಿಂಗ್ ಡೈಲಾಗುಗಳು, ಆಂಕರುಗಳೆನ್ನಿಸಿಕೊಂಡವರ ಅತಿರೇಕದ ವರ್ತನೆ ಮತ್ತು ಏನನ್ನೂ ಬಿಡದಂತೆ ಟಿಆರ್‌ಪಿಗಾಗಿ ಬಾಯಿ ಬಿಡುವ ಹೀನ ಮನಃಸ್ಥಿತಿ… ಇಂಥಾ ದಾರಿದ್ರ್ಯವೇ ಸದ್ಯದ ಮಟ್ಟಿಗೆ ಕನ್ನಡದ ಕಿರುತೆರೆ ಜಗತ್ತಿನಲ್ಲಿ ತಾಂಡವವಾಡುತ್ತಿದೆ. ಅದರಲ್ಲಿಯೂ ಒಂದು ಕಾಲಕ್ಕೆ ಹೊಸಾ ಥರದ ಕಾರ್ಯಕ್ರಮಗಳ ಮೂಲಕ ವಿಶ್ವಾಸ ಗಿಟ್ಟಿಸಿಕೊಂಡಿದ್ದ ಜೀ ಕನ್ನಡ ವಾಹಿನಿಯೀಗ ಅಭಿಮಾನಿ ಪ್ರೇಕ್ಷಕ ವರ್ಗವನ್ನೇ ಮುಜುಗರಕ್ಕೀಡು ಮಾಡಿದೆ.
ಈ ಹಿಂದೆ ಭರ್ಜರಿ ಬ್ಯಾಚುಲರ್ಸ್ ಅಂತೊಂದು ಪಕ್ಕಾ ಬರಗೆಟ್ಟ ಶೋವೊಂದು ಇದೇ ವಾಹಿನಿಯಲ್ಲಿಮ ಪ್ರಸಾರವಾಗಿತ್ತು. ಮಾನವಂತರು ನೋಡಲು ಹಿಂದೇಟು ಹಾಕುವಂತಿದ್ದ ಆ ಶೋ ಕಡೆಗೂ ಮುಗಿದಿದೆ. ಅದರ ಬ ಎನ್ನಲ್ಲಿಯೇ ನಾವು ನಮ್ಮವಬರು ಎಂಬ ಹೊಸಾ ಶೋ ಶುರುವಾಗಿದೆ. ಇದರಲ್ಲಿ ಅಮೂಲ್ಯ, ತಾರಾ ಮತ್ತು ಶರಣ್ ಥರದವರು ಜಡ್ಜುಗಳಾಗಿದ್ದರಿಂದ ಕೊಂಚ ನಿರೀಕ್ಷೆ ಇತ್ತು. ಆದರೆ, ಈ ಶೋ ಆರಂಭದಲ್ಲಿಯೇ ಪಕ್ಕಾ ಟಿಆರ್‍ಪಿ ಹಿಂಡಿಕೊಳ್ಳುವ ಪಥದಲ್ಲಿ ಹೆಜ್ಜೆಯಿಟ್ಟಿದೆ. ತೀರ್ಪುಗಾರಳಾಗಿ ಕುಂತಿರೋ ಅಮುಲ್ಯಾಳನ್ನು ವಿನಾಕಜಾರಣ ಅಳಿಸುವ ಮೂಲಕ ಮೈಲೇಜು ಗಿಟ್ಟಿಸಿಕೊಳ್ಳಲು ನೋಡಿ ಪ್ರೇಕ್ಷಕರಿಂ ದ ಹೀನಾಮಾನ ಉಗಿಸಿಕೊಂಡಿದೆ.
ರಕ್ಷಾ ಬಂಧನದಂದು ಮರೆಯಾದ ಅಮೂಲ್ಯಾ ಅಣ್ಣನ ಎಐ ವೀಡಿಯೋ ಮೂಲಕ ಈ ಶೋನ ಮಂದಿ ಅಮೂಲ್ಯಾಗೆ ಸರ್‌ಪ್ರೈಸ್ ಕೊಟ್ಟಿದೆ. ಅದನ್ನು ಕಂಡು ಅಮೂಲ್ಯಾ ಭಾವಿಕಳಾಗಿ ಅತ್ತಿದ್ದಾಳೆ. ಅಣ್ಣನನ್ನು ಕಳೆದುಕೊಂಡಸ ನೋವಿನ್ನೂ ಆಕೆಯಲ್ಲಿ ಹಸಿಯಾಗಿದೆ. ಇಂಥಾ ಹೊತ್ತಿನಲ್ಲಿ ಅದನ್ನು ಮತ್ತೆ ನೆನಪಿಸಿ ಕಣ್ಣೀರುಗರೆಸಿ, ಟಿಆರ್‌ಪಿ ಗಿಟ್ಟಿಸುವ ವಾಹಿನಿಯ ಪ್ಲಾನಿಗೆ ಲಾತಾ ಬಿದ್ದಿದೆ. ಇಂಥಾ ಶೋವನ್ನು ಆಸ್ಥಾನ ಕಲಾವಿದ ನಿರಂಜನ್ ದೇಶಪಾಂಡೆ ನಡೆಸಿಕೊಡುತ್ತಿದ್ದಾನೆ. ಈ ಹಿಂದೆ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಈತ ಜಾನ್ ಸೀನ್ಸ್‌ನ ಕಸಿನ್ ಬ್ರದರ್‌ನಂತೆ ತೊನೆಯಲು ಹೋಗಿ ಉಗಿಸಿಕೊಂಡಿದ್ದ. ಇಂಥಾ ಮಹಾನ್ ನಿರೂಪಕನ ಸಾರಥ್ಯದಲ್ಲಿ ಇನ್ನೂ ಎಂತೆಂಥಾ ಅಸಹ್ಯಗಳನ್ನು ನೋಡೋದಿದೆಯೋ…