ಸಿನಿಮಾ ರಂಗದಲ್ಲಿ ಬರೀ ಬಿಲ್ಡಪ್ಪುಗಳನ್ನು ನೆಚ್ಚಿಕೊಂಡೇ ವೃತ್ತಿ ಬದುಕನ್ನು ಮ್ಯಾನೇಜು ಮಾಡಿದ ಒಂದಷ್ಟು ನಟರಿದ್ದಾರೆ. ಕಿಲುಬುಗಾಸಿನ ನಟನೆ ಬಾರದಿದ್ದರೂ ಊರು ತುಂಬಾ ಅಭಿಮಾನಿ ಸಂಘಗಳನ್ನು ಹುಟ್ಟಿಸಿ, ಮಹಾ ನಟರಂತೆ ಪೋಸು ಕೊಡುತ್ತಲೇ ಎದ್ದು ಹೋದವರಿದ್ದಾರೆ. ಆದರೆ, ಅಂಥಾ ಬಿಲ್ಡಪ್ಪುಗಳ ಒಡ್ಡೋಲಗದಲ್ಲಿ ಭರ್ತಿ ನಲವತ್ತು ವರ್ಷಗಳ ಕಾಲ ಚಾಲ್ತರಿಯಲ್ಲಿರುವ ನಟರು ತೀರಾ ವಿರಳ. ಅಂಥಾ ಮಹಾನಟನೊಬ್ಬನ ನಾನಾ ಅವತಾರಗಳನ್ನು ನೋಡುವ ಸೌಭಾಗ್ಯ ಸಿಕ್ಕಿರೋದು ಈ ಜನರೇಷನ್ನಿನ ಪ್ರೇಕ್ಷಕರ ಮಹಾ ಭಾಗ್ಯ. ಅಂಥಾ ಭಾಗ್ಯವೊಂದರ ಅನಭಿಷಿಕ್ತ ವಾರಸೂದಾರ ನಂದಮೂರಿ ಬಾಲಕೃಷ್ಣ ಅಲಿಯಾಸ್ ಬಾಲಯ್ಯ. ಇಂಥಾ ಮಹಾನಟನ ಅಖಂಡ ಕಾಮಿಡಿ ಕಂಡು ಪ್ಯಾನಿಂಡಿಯಾ ಲೆವೆಲ್ಲಿನ ಪ್ರೇಕ್ಷಕರಿಗೆ ನಡುಕ ಶುರುವಾಗಿ ಬಿಟ್ಟಿದೆ!
ಹೇಳಿಕೇಳಿ ಇದೀಗ ತೆಲುಗು ಚಿತ್ರರಂಗದ ಪಾಲಿನ ಹವಾ ಚಾಲ್ತಿಯಲ್ಲಿದೆ. ಅಲ್ಲಿನ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಸದ್ದು ಮಾಡುತ್ತಾ, ಬಾಲಿವುಡ್ ಸಿನಿಮಾಇಗಳನ್ನೇ ಮಂಕಾಗಿಸುತ್ತಿವೆ. ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಘನತೆ ಬಾಲಿವುಡ್ಡನ್ನು ಮೀರಿ ಹಬ್ಬಿಕೊಂಡಿದೆ. ಇದೆಲ್ಲದರಿಂದಾಗಿ ದಕ್ಷಿಣದ ಸಿನಿಮಾಗಳ ಬಗ್ಗೆ ಬೆರಗಿನ ಭಾವವೊಂದು ಉತ್ತರದ ದಿಕ್ಕಿನಲ್ಲಿಯೂ ಹಬ್ಬಿಕೊಂಡಿದೆ. ಇಂಥಾ ಹೊತ್ತಿನಲ್ಲಿ ದೃಷ್ಟಿಬೊಟ್ಟಿನಂತೆ ಚಾಲ್ತಿಯಲ್ಲಿರೋದು ಬಾಲಯ್ಯನ ಅಖಂಡ೨ ಚಿತ್ರ. ಮಾಮೂಲು ವರಸೆಯಂತೆ ತ್ರಿಶೂಲ ಹಿಡಿದು ರುದ್ರತಾಂಡವವಾಡಿರೋ ಬಾಲಯ್ಯನ ಅವತಾರಗಳು ಟ್ರೈಲರ್ ಮೂಲಕ ಜಾಹೀರಾಗಿದೆ. ಅದೀಗ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿಯೇ ಟ್ರೋಲಾಗುತ್ತಿದೆ.
ನಿಜ, ಸಿನಿಮಾ ಅನ್ನೋದೇ ಮನೋರಂಜನೆಯ ಮಾಧ್ಯಮ. ಹಾಗಂತ ತೀರಾ ಅತಿರೇಕ, ನಗೆಪಾಟಲಿನಂಥಾ ದೃಷ್ಯ ಕಟ್ಟಿದರೆ ಬಚಾವಾಗೋದು ಕಷ್ಟ. ಆದರೆ, ಈ ಬಾಲಯ್ಯನಿಗೆ ಬಿಟ್ಟಿ ಬಿಲ್ಡಪ್ಪು ಬಿಟ್ಟರೆ ಬೇರೆ ಗೊತ್ತಿಲ್ಲ. ಅಖಂಡ೨ನಲ್ಲಿಯೂ ಕೂಡಾ ಅದನ್ನೇ ಮುಂದುವರೆಸಿದ್ದಾನೆ. ಇದನ್ನು ಕಂಡು ಉತ್ತರದ ಮಂದಿಯೂ ಮೂದಲಿಸಲಾರಂಭಿಸಿದ್ದಾರೆ. ಅಖಂಡ ೨ ಮೂಲಕ ದಕ್ಷಿಣ ಭಾರತೀಯ ಸಿನಿಮಾಗಳ ಘನತೆಗೆ ಕುತ್ತುಂಟಾಗಿದೆ ಎಂಬಂಥಾ ವಿಶ್ಲೇಷಣೆಗಳೂ ಕೂಡಾ ಕೇಳಿ ಬರುತ್ತಿದ್ದಾವೆ. ಇಂಥಾ ಬಾಲಯ್ಯ ಒಂದರ್ಥದಲ್ಲಿ ಪವಾಡ ಪುರುಷ. ಈತ ಸೆಟೆದು ನಿಂದು ಒಂದೇ ಕೈಯಲ್ಲಿ ರೈಲನ್ನು ತಡೆದು ನಿಲ್ಲಿಸಬಲ್ಲ. ಬೋಗಿಗಳನ್ನೆಲ್ಲ ಎಣಿಸೆಣಿಸಿ ಕಿತ್ತೆಸೆಯ ಬಲ್ಲ. ಇಂಥಾ ಸೀರಿಯಸ್ ಕಾಮಿಡಿಕಗಳ ಮೂಲಕವೇ ಸ್ಟಾರ್ ನಟ ಅನ್ನಿಸಿಕೊಂಡಿರೋ ಬಾಲಯ್ಯನ ಪ್ರಭೆ ಅರವತ್ತು ದಾಟಿ ಮುಂದುವರೆದಿದೆ. ಆತನ ವೃತ್ತಿ ಬದುಕಿಗೆ ನಲವತ್ತು ವರ್ಷವೂ ತುಂಬಿದೆ. ಈ ಸಾಧನಾ ಸಮಾವೇಶದಲ್ಲಿ ಎಣ್ಣೆ ಏಟಲ್ಲಿ ಮಾತಾಡಿರುವ ಬಾಲಯ್ಯನ ಮೀಸೆ ಉದುರಿದೆ. ಸಾರ್ವಜನಿಕ ಸಮಾರಂಭದಲ್ಲಿ ನಟಿಯೊಬ್ಬಳ ಅಂಡು ಸವರಿ ಉಗಿಸಿಕೊಂಡಿದ್ದ ಬಾಲಯ್ಯನ ಬತ್ತಳಿಕೆಯಲ್ಲಿ ಇನ್ನೆಷ್ಟು ಅವತಾರಗಳು ಬಾಕಿ ಉಳಿದಿವೆಯೋ ಭಗವಂತನೇ ಬಲ್ಲ!