ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ಗಾಯಕಿಯಾಗಿರುವ ಮಂಗ್ಲಿ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದ್ದಾಳೆ. ತೆಲುಗುನಾಡಿನ ಜಾನಪದ ಗೀತೆಗಳನ್ನೇ ಉಸಿರಾಗಿಸಿಕೊಂಡು, ಅದನ್ನೇ ಶಕ್ತಿಯಾಗಿಸಿಕೊಂಡು ಗಾಯಕಿಯಾಗಿ ಬೆಳೆದು ನಿಂತಿದ್ದಾಕೆ ಮಂಗ್ಲಿ ಅಲಿಯಾಸ್ ಸತ್ಯವತಿ ರಾಥೋಡ್. ಬಡತನವನ್ನೇ ಹಾಸಿ ಹೊದ್ದಂತಿದ್ದ ಬಂಜಾರಾ ಸಮುದಾಯದ ತಾಂಡಾದಿಂದ ಬಂದ ಹುಡುಗಿಯೊಬ್ಬಳು ಸಿನಿಮಾ ರಂಗದಲ್ಲಿ ಸ್ಟಾರ್ ಸಿಂಗರ್ ಆಗಿ ಮಿಂಚುತ್ತಾಳೆಂದರೆ, ಅದಕ್ಕಿಂತ ಹೆಮ್ಮೆಯ ವಿಚಾರ ಬೇರೇನಿರಲು ಸಾಧ್ಯ? ಈ ಕಾರಣದಿಂದಲೇ ಈಕೆಯನ್ನು ಕೋಟ್ಯಂತರ ಮಂದಿ ಬೇಷರತ್ತಾಗಿ ಮೆಚ್ಚಿಕೊಂಡಿದ್ದರು. ಇಂಥಾ ಯಶದ ಪ್ರಭೆಯಲ್ಲಿ ಮಂಗ್ಲಿ ಮೈಮರೆತಳಾ? ಬಣ್ಣದ ಲೋಕದ ಮಾಮೂಲಿ ಪಟ್ಟುಗಳಿಗೆ ತನ್ನನ್ನು ತಾನು ವಶವಾಗಿಸಿಕೊಂಡಳಾ? ಈಗ ಆಕೆಯ ಮೇಲೆ ಕೇಳಿ ಬಂದಿರುವ ಆರೋಪದ ಹಿನ್ನೆಲೆಯಯಲ್ಲಿ ಇಂಥಾ ಹತ್ತಾರು ಪ್ರಶ್ನೆಗಳು ಸಹಜವಾಗಿಯೇ ಕಾಡಲಾರಂಭಿಸಿವೆ!

ಸಾಮಾನ್ಯವಾಗಿ, ಸೆಲೆಬ್ರಟಿಗಳ ಬರ್ತ್‌ಡೇ ಪಾರ್ಟಿಗಳಲ್ಲಿ ಡ್ರಗ್ಸ್ ನಶೆ ಏರಿಕೊಳ್ಳೋದು ಮಾಮೂಲು. ಅಂಥಾ ಪಾರ್ಟಿಗಳಲ್ಲಿ ಆಯಕಟ್ಟಿನ ಅಧಿಕಾರಿಗಳ ಮಕ್ಕಳು, ರಾಜಕಾರಣಿಗಳ ದುಷ್ಟ ಕುಡಿಗಳು ತೊನೆಯುತ್ತವಾದ್ದರಿಂದ ಅದೆಷ್ಟೋ ಪ್ರಕರಣಗಳು ನಾಲಕ್ಕು ಗೋಡೆಗಳ ನಡುವೆಯೇ ಮುಚ್ಚಿ ಹೋಗುತ್ತವೆ. ಮಂಗ್ಲಿ ಕೂಡಾ ಅಂಥಾದ್ದೇ ರಾಜಕೀಯ ಪ್ರಭಾವ ಹೊಂದಿರುವಾಕೆ. ಈ ಕಾರಣದಿಂದಲೇ ಹೇಗೋ ಬಚಾವಾಗಬಹುದೆಂಬ ಭ್ರಮೆಯಲ್ಲಿ ಬರ್ತ್‌ಡೇ ಸಂಭ್ರಮದಲ್ಲಿ ಡ್ರಗ್ ಪಾರ್ಟಿ ಮಾಡಿದಳಾ? ಪೊಲೀಸರು ರೇಡು ನಡೆಸಿದಾಗ ಆಕೆ ಆವಾಜುಯ ಬಿಟ್ಟ ಪರಿ ನೋಡಿದರೆ ಏಕೋ ಆ ಶಂಕೆಯೇ ನಿಜವೆನ್ನಿಸುತ್ತೆ. ಇತ್ತೀಚಿನ ದಿನಗಳಲ್ಲಿ ಮಂಗ್ಲಿಯ ಹಾವಭಾವ, ವರ್ತನೆ ಮತ್ತು ಜೀವನ ಕ್ರಮದಲ್ಲಾದ ಬದಲಾವಣೆಗಳನ್ನು ಹತ್ತಿರದಿಂದ ಬಲ್ಲವರೂ ಕೂಡಾ ಆಕೆಯ ಬೆಗೆಗೊಂದು ಶಂಕೆಯಿಟ್ಟುಕೊಂಡಿರೋದು ಸತ್ಯ.

ತೀರಾ ಬಡತನದಿಂದ ಮೇಲೆದ್ದು ಬಂದವರು, ಗೆದ್ದ ನಂತರವೂ ಆ ನೆನಪುಗಳನ್ನು ಎದೆಯಲ್ಲಿಟ್ಟುಕೊಂಡು ತಗ್ಗಿ ಬಗ್ಗಿ ನಡೆಯುತ್ತಿದ್ದ ಕಾಲವೊಂದಿತ್ತು. ಆದರೀಗ ಬಡತನದ ಹಿನ್ನೆಲೆ ಸಿಂಪಥಿ ಗಿಟ್ಟಿಸಿಕೊಳ್ಳೋ ಸರಕಾಗಿಯಷ್ಟೇ ಉಳಿದುಕೊಂಡಿದೆ. ಯಾಕೆಂದರೆ, ಅಂಥಾ ಹಿನ್ನೆಲೆಯಿಂದ ಬಂದವರು ಸಣ್ಣ ಗೆಲುವು ಕಾಣುತ್ತಲೇ ಹೈಫೈ ಶೋಕಿ ಅಚಿಟಿಸಿಕೊಂಡು ನಾನಾ ಚಟಗಳನ್ನು ಅಚಿಟಿಸಿಕೊಂಡು ಹಡಾಲೆದ್ದು ಹೋದ ಅದೆಷ್ಟೋ ಉದಾಹರಣೆಗಳಿದ್ದಾವೆ. ಅಂಥವರಿಗೆ ತಾನೇ ತಾನಾಗಿ ತೋರಿಕೆಯ ಬದುಕು ಆಪ್ಯಾಯವಾಗುತ್ತೆ. ಪಾರ್ಟಿಗಳ ಚಟ ಅಂಟಿಕೊಳ್ಳುತ್ತೆ. ಡ್ರಗ್ಸಿನಂಥಾ ನಶೆ ಆವರಿಸಿಕೊಳ್ಳುತ್ತೆ. ಮಂಗ್ಲಿ ಕೂಡಾ ಅಂಥಾದ್ದೇ ಮಾಯೆಗೆ ವಶವಾಗಿದ್ದರೂ ಅಚ್ಚರಿಯೇನಿಲ್ಲ. ಬರಬರುತ್ತಾ ಮಂಗ್ಲಿಗಂಟಿಕೊಂಡಿದ್ದ ತಿಮಿರೆಂಬುದು ಆ ಸಾಧ್ಯತೆಯನ್ನು ಪುಷ್ಟೀಕರಿಸುವಂತಿದೆ.

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಬಿಸಿನಪೆಲ್ಲೆ ಎಂಬೂರಿನ ತಾಂಡಾದ ಕೂಸಾದ ಮಂಗ್ಲಿ ಬಾಲ್ಯದಿಂದ, ಓದಿನವರೆಗೂ ಕೂಡಾ ಕಡುಗಷ್ಟಗಳನ್ನು ಕಂಡುಂಡು ಬೆಳೆದಿದ್ದ ಹುಡುಗಿ. ತನ್ನ ತಂದೆಯ ಒತ್ತಾಸೆಯಿಂದ ಗಾಯಕಿಯಾಗಿ ಪಳಗಿಕೊಳ್ಳಲಾರಂಭಿಸಿದ್ದ ಮಂಗ್ಲಿ ಆರಂಭದಿಂದಲೇ ನೆಲದ ಸೊಗಡಿನ ಜಾನಪದ ಗೀತೆಗಳ ಮೂಲಕ ಮನಗೆದ್ದಿದ್ದಳು. ಅಂಥಾದ್ದೊಂದು ನೆಲಮೂಲದ ಸೂಕ್ಷ್ಮವಂತಿಕೆ ಹೊಂದಿದ್ದ ಈ ಹುಡುಗಿ ನೋಡ ನೋಡುತ್ತಲೇ ಸ್ವಂತದ ಆಲ್ಬಂ ಸಾಂಗ್‌ಗಳನ್ನು ಮಾಡುತ್ತಾ, ಕಿರುತೆರೆ ನಿರೂಪಕಿಯಾಗಿ ಮಿಂಚಿದ್ದಳು. ಆ ನಂತರದಲ್ಲಿ ಸಿನಿಮಾ ಹಾಡುಗಳ ಮೂಲಕ ತೆಲುಗು ನಾಡಿನ ಗಡಿ ದಾಟಿ ಎಲ್ಲೆಡೆ ಫೇಮಸ್ ಆಗಿದ್ದಳು. ಇಂಥಾ ಕಷ್ಟದ ಹಾದಿಗೆ ದಕ್ಕಿದ ಗೆಲುವನ್ನು ಸಂಭಾಳಿಸೋದೇ ನಿಜವಾದ ಗೆಲುವು. ಆದರೆ, ಅದರಲ್ಲಿ ಮಂಗಿ ಆಗಾಗ ಸೋತಿದ್ದಾಳೆ. ಈ ಡ್ರಗ್ಸ್ ಕಿಸುರಿನ ಮೂಲಕ ಮುಗ್ಗರಿಸಿಬಿಟ್ಟಿದ್ದಾಳೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!