ಕೇವಲ ಹೀರೋ ಆಗಿ ಮಾತ್ರವಲ್ಲ; ಓರ್ವ ವ್ಯಕ್ತಿಯಾಗಿಯೂ ಗೌರವ ಮೂಡಿಸಬಲ್ಲ ವ್ಯಕ್ತಿತ್ವ ಹೊಂದಿರುವಾತ (actor suriya) ಸೂರ್ಯ. ಆತನ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ, ಸಾಮಾಜಿಕ ಳಕಳಿಯ ಬಗ್ಗೆ ಅಭಿಮಾನದಾಚೆಗೂ ಮೆಚ್ಚುಗೆ ಇದೆ. ಒಂದು ಸಿನಿಮಾಕ್ಕಾಗಿನ ಸಮರ್ಪಣಾ ಭಾವವಿದೆಯಲ್ಲಾ? ಅದರಲ್ಲೂ ಕೂಡಾ ಸೂರ್ಯನದ್ದು ಮಾದರಿ ನಡೆ. ಅದೆಲ್ಲದರ ಫಲವಾಗಿಯೇ ಸೂರ್ಯ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹೀಗೆ ದಕ್ಕಿದ ಸ್ಟಾರ್ ಗಿರಿಯನ್ನು ಪ್ರತೀ ಹಂತದಲ್ಲಿಯೂ ಸಂಭಾಳಿಸಿಕೊಂಡು ಹೋಗೋದೊಂದು ಕಲೆಯೂ ಹೌದು, ಸವಾಲೂ ಹೌದು. ಆ ಕ್ಷಣಕ್ಕೆ ತೆಗೆದುಕೊಳ್ಳುವ ನಿರ್ಧಾರವೇ ಎಲ್ಲವನ್ನೂ ನಿರ್ಧರಿಸಿ ಬಿಡುತ್ತದೆ. ಇಂಥಾ ನಿರ್ಧಾರ ಕೈಗೊಳ್ಳುವಲ್ಲಿ ಸೂರ್ಯ ಎಡವಿದರಾ? ಮುಲಾಜಿಗೆ ಬಿದ್ದು ಸಿನಿಮಾ ಒಪ್ಪಿಕೊಂಡು ಯಾಮಾರಿದರಾ? ಸದ್ಯ (kanguva movie) ಕಂಗುವಾ ಚಿತ್ರದ ಸೋಲಿನ ಭೂಮಿಕೆಯಲ್ಲಿ ಇಂಥಾ ಒಂದಷ್ಟು ಪ್ರಶ್ನೆಗಳು ಪಡಿಮೂಡಿಕೊಂಡಿವೆ!

ನಿಖರವಾಗಿ ಹೇಳೋದಾದರೆ, ಅಂಥಾದ್ದೊಂದು ತಪ್ಪು ನಿರ್ಧಾರವೇ ಕಂಗುವಾ ಚಿತ್ರದ ರೂಪದಲ್ಲಿ ಸೂರ್ಯ ಪಕ್ಕೆಗೆ ತಿವಿದು ಬಿಟ್ಟಿದೆ. ಜೈ ಭೀಮ್ ನಂಥಾ ಸಿನಿಮಾಗಳ ಮೂಲಕ ಸೂರ್ಯನ ಪ್ರಭೆ ಮತ್ತಷ್ಟು ಪ್ರಖರವಾಗಿತ್ತು. ಆದರೆ, ಆ ನಂತರದಲ್ಲಿ ಎಥರ್ಕುತುನಿಂದವನ್ ಮಹಾ ಸೋಲು ಕಂಡಿತ್ತು. ಇಂಥಾದ್ದೊಂದು ಸೋಲಿನ ನಂತರವಾದರೂ ಸೂರ್ಯ ಎಚ್ಚರಿಕೆಯಿಂದ ಮುಂದುವರೆದಿದ್ದರೆ ಬಹುಶಃ ಇಂಥಾ ಸೋಲಾಗುತ್ತಿರಲಿಲ್ಲ. ಅಷ್ಟಕ್ಕೂ ಕಂಗುವಾ ಚಿತ್ರದ ಬಗ್ಗೆ ಆರಂಭದಲ್ಲಿಯೇ ನಿರಾಶಾದಾಯಕ ವಾತಾವರಣ ಮೂಡಿಕೊಂಡಿತ್ತು. ಈ ಸಿನಿಮಾ ನಿರ್ದೇಶಕನ ಬಗ್ಗೆಯೇ ಯಾರಲ್ಲಿಯೂ ನಂಬಿಕೆ ಇರಲಿಲ್ಲ. ಆರಂಭದಲ್ಲಿಯೇ ಈ ಬಗೆಗಿನ ವಿಚಾರಗಳ ಹಬ್ಬಿಕೊಂಡಿದ್ದರೂ ಸೂರ್ಯ ತಲೆ ಕೆಡಿಸಿಕೊಳ್ಳದೆ ಮುಂದುವರೆದಿದ್ದರು. ಅದರ ಫಲವಾಗಿಯೇ, ಎಫರ್ಟು ಹಾಕಿದ್ದರೂ ಕೂಡಾ ಕಂಗುವಾ ಕಾಲೆತ್ತಿಕೊಂಡಿದೆ.

ಇಂಥಾ ಹೊತ್ತಿನಲ್ಲಿ ಸೂರ್ಯನ ನಿರ್ಧಾರಗಳಲ್ಲಿನ ಯಡವಟ್ಟುಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಅಷ್ಟಕ್ಕೂ ಈತ ಈ ಹಿಂದೆಯೂ ವೃತ್ತಿ ಬದುಕಲ್ಲಿ ಹೀಗೆಯೇ ಒಂದಷ್ಟು ಘಟ್ಟಗಳಲ್ಲಿ ಮುಗ್ಗರಿಸಿದ್ದಿದೆ. ಅದರಾಚೆಗೂ ಮತ್ತೊಂದು ಗೆಲುವಿನ ಮೂಲಕ ಸಾವರಿಸಿಕೊಂಡು ನಿಂತ ಉದಾಹರಣೆಗಳೂ ಇದ್ದಾವೆ. ಆದರೀಗ ಕಾಲವೆಂಬುದು ಹಿಂದಿನಂತಿಲ್ಲ. ಅದೆಂಥಾ ದೊಡ್ಡ ಸ್ಟಾರ್ ನಟನೇ ಆದರೂ ಸೋಲೊಂದರ ಸುನಾಮಿಯಲ್ಲಿ ವೃತ್ತಿಬದುಕಿನ ಭವಿಷ್ಯವೇ ಕೊಚ್ಚಿ ಹೋಗುವ ಸಾಧ್ಯತೆಗಳಿವೆ. ಈ ನಡುವೆ ಸುಧಾ ಕೊಂಗಾರ ನಿರ್ದೇಶನದ ಚಿತ್ರವನ್ನು ಸೂರ್ಯ ಕೈ ಬಿಟ್ಟಿದ್ದಾರೆ. ಆ ಅವಕಾಶ ಶಿವಕಾರ್ತಿಕೇಯನ್ ಪಾಲಾಗಿದೆ. ಈ ಹಿಂದೆ ರಾಜಮೌಳಿ ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದ ಸೂರ್ಯ, ಆ ಬಗ್ಗೆ ಇತ್ತೀಚೆಗಷ್ಟೇ ಪಶ್ಚಾತ್ತಾಪದ ಮಾತುಗಳನ್ನಾಡಿದ್ದರು. ಕಂಗುವಾ ಸೋಲಿನಿಂದ ಆತ್ಮ ವಿಮರ್ಶೇ ಮಾಡಿಕೊಂಡುಜ, ಎಚ್ಚರದ ಹೆಜ್ಜೆ ಇಡದಿದ್ದರೆ ಸೂರ್ಯನ ಸ್ಟಾರ್ ಡಂಗೆ ಕಂಟಕವಾಗೋದು ಖರೇ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!