ಕೊರೋನಾ ನಂತರದಲ್ಲಿ ಓಟಿಟಿ (ott) ಪ್ಲಾಟ್‍ಫಾರ್ಮಿನತ್ತ ಒಂದು ವರ್ಗದ ಪ್ರೇಕ್ಷಕರು ಸಂಪೂರ್ಣವಾಗಿ ವಾಲಿದಂತಿದೆ. ಈಗಂತೂ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಒಂದು ಕಡೆಯಲ್ಲಿ ಚಿತ್ರಮಂದಿರಗಳ ಸಮಸ್ಯೆ, ಶೋಗಳ ವಿಚಾರದಲ್ಲಾಗುವ ದೋಖಾಗಳಿಂದಾಗಿ ಕನ್ನಡದಲ್ಲಿಯೂ ಚೆಂದದ ಸಿನಿಮಾಗಳು ಸೋಲುತ್ತಿವೆ ಎಂಬ ಕೂಗೂ ಎದ್ದಿದೆ. ಇದು ನಮ್ಮಲ್ಲಿನ ವಿಚಾರವಾದರೆ, ನೆರೆಹೊರೆಯ ಸಿನಿಮಾ ರಂಗಗಳಲ್ಲಿಯೂ ಇಂಥಾದ್ದೇ ಸಮಸ್ಯೆಗಳಿದ್ದಾವೆ. ಇದೆಲ್ಲದರಾಚೆಗೆ, ಸಿನಿಮಾ ಮಂದಿರದಲ್ಲಿ ಒಂದಷ್ಟು ಪ್ರದರ್ಶನ ಕಂಡ, ಗೆದ್ದ ಚಿತ್ರಗಳು ಓಟಿಟಿಯಲ್ಲಿ ಮತ್ತೆ ಕ್ರೇಜ್ ಹುಟ್ಟುಹಾಕೋದೂ ಇದೆ. ಇದೀಗ ಲಾಲ್ ಸಲಾಮ್ ಜೊತೆ ಜೊತೆಗೇ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆದಿದ್ದ ಲವರ್ ಚಿತ್ರದ ಓಟಿಟಿ ಎಂಟ್ರಿಗೆ ವೇದಿಕೆ ಸಜ್ಜುಗೊಂಡಿದೆ.

ಇದು ಮಣಿಕಂಠನ್ ನಾಯಕನಾಗಿ ನಟಿಸಿರುವ ಚಿತ್ರ. ಈಗಾಗಲೇ ಈತ ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವತ್ತ ದಾಪುಗಾಲಿಡುತ್ತಿದ್ದಾನೆ. ಈ ಹಿಂದೆ ಗುಡ್ ನೈಟ್ ಅಂತೊಂದು ಚಿತ್ರದ ಮೂಲಕ ಮಣಿಕಂಠನ್ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ. ಅದರ ಬೆನ್ನಲ್ಲಿಯೇ ತೆರೆಕಂಡಿದ್ದ ಲವ್ ಚಿತ್ರ ಕೂಡಾ ಗೆಲುವು ದಾಖಲಿಸಿದೆ. ಹೀಗೆ ಲವರ್ ಚಿತ್ರ ಕ್ರೇಜ್ ಮೂಡಿಸುತ್ತಲೇ, ಅದು ಓಟಿಟಿಯಲ್ಲಿ ಬಿಡುಗಡೆಗೊಳ್ಳುವ ದಿನಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರ ಸಂಖ್ಯೆ ವೃದ್ಧಿಸಿದೆ. ಇದೀಗ ಅದಕ್ಕೂ ಮುಹೂರ್ತ ಫಿಕ್ಸಾಗಿದೆ. ಇದೇ ಮಾರ್ಚ್ 27ರಂದು ಲವರ್ ಸಿಡ್ನಿ ಹೋಸ್ಟರ್ ಮೂಲಕ ಓಟಿಟಿಗೆ ಅಡಿಯಿರಿಸಲಿದೆ.

ಮಣಿಕಂಠನ್ ತಮಿಳು ಚಿತ್ರರಂಗದಲ್ಲಿ ಮೆಲ್ಲಗೆ ತನ್ನ ಸ್ಥಾನ ಭದ್ರಗೊಳಿಸಿಕೊಳ್ಳುತ್ತಿದ್ದಾನೆ. ಈ ಹಿಂದೆ ಈತ ನಾಯಕನಾಗಿ ನಟಿಸಿದ್ದ ಗುಡ್ ನೈಟ್ ಕೂಡಾ ಪ್ರೇಕ್ಷಕರಿಗೆ ಹಿಡಿಸಿತ್ತು. ಇದೀಗ ಲವರ್ ಚಿತ್ರ ಲಾಲ್ ಸಲಾಮ್ ಜೊತೆ ಬಿಡುಗಡೆಗೊಂಡಾಗ ಇದು ಬಚಾವಾಗೋದು ಕಷ್ಟ ಎಂಬಂಥಾ ವಾತಾವರಣವಿತ್ತು. ಸಾಕ್ಷಾತ್ತು ರಜನೀಕಾಂತ್ ಇದ್ದರೂ ಕಿಊಡಾ ಲಾಲ್ ಸಲಾಮ್ ಹೀನಾಯವಾಗಿ ಕವುಚಿಕೊಂಡಿದೆ. ಆದರೆ, ಲವ್ ಮಾತ್ರ ಗೆದ್ದು ಬೀಗಿದೆ. ಇದೇ ಚಿತ್ರ ತೆಲುಗಿನಲ್ಲಿ ಲವರ್ ಎಂಬ ಹೆಸರಿನಲ್ಲಿ ಬಿಡುಗಡೆಗೊಂಡರೂ ಗೆಲುವು ಕಂಡಿಲ್ಲ. ಆದರೆ, ತಮಿಳುನಾಡಿನಲ್ಲಿ ಮಾತ್ರ ಅದರ ಓಟಕ್ಕೆ ಸಾಟಿಯಿಲ್ಲ!

About The Author