ravike prasanga pre release event: ಭರ್ಜರಿ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ತಲ್ಲೀನ!

798593c6-7d50-4fff-97cb-07d9df924be7

ಸಂತೋಷ್ ಕೊಡಂಕೇರಿ (director santhosh kodankeri) ನಿರ್ದೇಶನದ `ರವಿಕೆ ಪ್ರಸಂಗ’ (ravike prasanga movie) ಚಿತ್ರ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಬಿಡುಗಡೆಗೆ ಇನ್ನೇನುಯ ಕೆಲವೇ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಅದರ ಭಾಗವಾಗಿಯೇ ಕನಕಪುರದ (Forum Malls) ಪೋರಂ ಮಾಲ್ ನಲ್ಲಿ ನಅದ್ದೂರಿಯಾಗಿ ಪ್ರೀ ರಿಲೀಸ್ ಇವೆಂಟ್ ನಡೆದಿದೆ. ಈಗಾಗಲೇ ರವಿಕೆ ಪ್ರಸಂಗದ ಬಗ್ಗೆ ನಿರೀಕ್ಷೆ ಮೂಡಿಸಿಕೊಂಡಿರುವ ಪ್ರೇಕ್ಷಕರು ಬಹು ಸಂಖ್ಯೆಯಲ್ಲಿ ಸೇರಿದ್ದ ಆ ಸಮಾರಂಭದಲ್ಲಿ ಒಂದಿಡೀ ಚಿತ್ರತಂಡ ಭಾಗಿಯಾಗಿ, ಪ್ರೇಕ್ಷಕರಿಗೆ ಅನೇಕ ಸ್ಪರ್ಧೆಗಳನ್ನೊಡ್ಡುವ ಮೂಲಕ ಗಮನ ಸೆಳೆಯಿತು. 

ಈ ಪ್ರೀ ರಿಲೀಸ್ ಇವೆಂಟ್ ನಲ್ಲಿ ನಿರ್ದೇಶಕ ಸಂತೋಷ್ ಕೊಡಂಕೇರಿ, ಕಥೆಗಾರ್ತಿ ಹಾಗೂ ಸಂಭಾಷಣಾಗಾರ್ತಿ ಪಾವನಾ ಸಂತೋಷ್, ಚಿತ್ರದ ನಾಯಕಿ ಗೀತಾ ಭಾರತಿ ಭಟ್, ಪದ್ಮಜಾ ರಾವ್, ಪೋಷಕ ಕಲಾವಿದರು, ಸಂಕಲನಕಾರ ರಘು ಮುಂತಾದವರು ಭಾಗಿಯಾಗಿದ್ದರು. ಪ್ರಧಾನವಾಗಿ ಈ ಸಿನಿಮಾದ ಕೇಂದ್ರ ಬಿಂದುವಾದ ಗೀತಾ ಭಾರತಿ ಭಟ್ ರವಿಕೆ ಪ್ರಸಂಗ ಚಿತ್ರದ ಹಾಡಿಗೆ ಪ್ರೇಕ್ಷಕರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದೇ ಹೊತ್ತಿನಲ್ಲಿ ಚಿತ್ರತಂಡದ ಬತ್ತಳಿಕೆಯಿಂದ ಒಂದೊಂದೇ ಪ್ರಚಾರದ ಪಟ್ಟುಗಳೂ ಕೂಡಾ ಅನಾವರಣಗೊಂಡಿವೆ. ಈ ವೇದಿಕೆಯಲ್ಲಿಯೇ ಕರ್ನಾಟಕದ ಬೆಸ್ಟ್ ಟ್ರೈಲರ್ ಗುರುತಿಸುವ ವಿನಾತನ ಕಂಟೆಸ್ಟ್ ಒಂದಕ್ಕೆರ ಚಾಲನೆ ನೀಡಲಾಯ್ತು.

ಅತ್ಯಂತ ಕ್ರಿಯಾಶೀಲವಾಗಿ, ವ್ಯವಸ್ಥಿತವಾಗಿ ರವಿಕೆ ಪ್ರಸಂಗದತ್ತ ಪ್ರೇಕ್ಷಕರನ್ನು ಸೆಳೆಯುವ ಕೆಲಸಕ್ಕೆ ಚಿತ್ರತಂಡ ಕೈ ಹಾಕಿದೆ. ಅದರ ಭಾಗವಾಗಿಯೇ ರಾಜ್ದ ಏಳು ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಸ್ಟಿಕರ್ ಅಂಟಿಸುವ ಕಾರ್ಯವೂ ಚಾಲೂ ಆಗಿದೆ. ನಾಯಕಿ ಗೀತಾ ಭಾರತಿ ಭಟ್ ಸ್ವತಃ ಆಟೋಗಳಿಗೆ ಸ್ಟಿಕರ್ ಅಚಿಟಿಸುವ ಮೂಲಕ ಈ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇದಿಕೆಯಲ್ಲಿ ಹಲವು ಗಣ್ಯರು ಈ ಸಿನಿಮಾ ಬಗ್ಗೆ ಮನದುಂಬಿ ಮಾತಾಡಿದ್ದಾರೆ. ನಂತರ ಅನೇಕರನ್ನು ಚಿತ್ರತಂಡ ಸನ್ಮಾನದ ಮೂಲಕ ಗೌರವಿಸಿದೆ.

ಈಗಾಗಲೇ ರವಿಕೆ ಪ್ರಸಂಗ ಎಂಬುದೊಂದು ವಿಭಿನ್ನ ಕಥೆಯಿರೋ ಚಿತ್ರವೆಂಬುದು ಮನದಟ್ಟಾಗಿದೆ. ಹೆಣ್ಣುಮಕ್ಕಳ ಭಾವಕೋಶದಲ್ಲಿ ಪರ್ಮನೆಂಟಾಗಿ ಸ್ಥಾನ ಗಿಟ್ಟಿಸಿಕೊಂಡಿರುವ ರವಿಕೆಯ ಸುತ್ತಾ, ಸೂಕ್ಷ್ಮ ಭಾವಗಳು ಪೋಣಿಸಿಕೊಂಡಂತಿರುವ ಈ ಸಿನಿಮಾ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.