ದಾ ಭಿನ್ನ ಬಗೆಯ ಪಾತ್ರಗಳನ್ನು ಧ್ಯಾನಿಸುತ್ತಾ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿರುವವರು (actress archana kottige) ಅರ್ಚನಾ ಕೊಟ್ಟಿಗೆ. ಈ ಹಿಂದೆ ಬಿಡುಗಡೆಗೊಂಡಿದ್ದ ಒಂದಷ್ಟು ಹಿಟ್ ಚಿತ್ರಗಳಲ್ಲಿ ಅರ್ಚನಾರ ಇರುವಿಕೆ ಇದೆ. ಬಿಡುಗಡೆಗೆ ಸಿದ್ಧಗೊಂಡಿರುವ ಮತ್ತೊಂದಷ್ಟು ಸಿನಿಮಾಗಳಲ್ಲಿ, ಮತ್ತಷ್ಟು ಥರದ ಪಾತ್ರಗಳಲ್ಲಿ ಪ್ರೇಕ್ಷಕರನ್ನ ಎದುರುಗೊಳ್ಳಲು ಅರ್ಚನಾ ಉತ್ಸುಕರಾಗಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹಾ ಖುಷಿಯನ್ನು ಅವರ ಪಾಲಿಗೆ ಬದುಕು ಕೊಡಮಾಡಿದೆ. ಬಹುಶಃ ಅಕ್ಷರ ಕಲಿತ ಶಾಲಾ ಕಾಲೇಜುಗಳಲ್ಲಿ ಸಿಗುವ ಸಣ್ಣ ಸಮ್ಮಾನವೂ ಕೂಡಾ ಪ್ರತಿಯೊಬ್ಬರ ಪಾಲಿಗೆ ಹಿರಿದಾದದ್ದು. ಅನೇಕರು ಆ ಕ್ಷಣಕ್ಕಾಗಿ ಹಾತೊರೆಯೋದಿದೆ. ಅಂಥಾ ಕ್ಷಣವೊಂದು ಅರ್ಚನಾ ಪಾಲಿಗೆ ತಾನೇ ತಾನಾಗಿ ಒಲಿದು ಬಂದಿದೆ!

ಅರ್ಚನಾ ಕೊಟ್ಟಿಗೆ (archana kottige) 2015-18ನೇ ಸಾಲಿನಲ್ಲಿ ಬೆಂಗಳೂರಿನ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ವ್ಯಾಸಂಗ ನಡೆಸಿದ್ದರು. ಇದೀಗ ಅದೇ ಯೂನಿವರ್ಸಿಟಿಯ ಭಾಗವಾಗಿರುವ ಕ್ರೈಸ್ಟ್ ಶಾಲೆಯಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅರ್ಚನಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಇದೇ ಮೂರನೇ ತಾರೀಕಿನಂದು ನಡೆದ ಅತ್ಯಂತ ಅರ್ಥವತ್ತಾದ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ಥಕ ಕ್ಷಣಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ನಿಜಕ್ಕೂ ಕನ್ನಡತನದ ಘನತೆ, ಗೌರವವನ್ನು ಮಿರುಗುವಂತೆ ಮಾಡಿದ್ದ ಕಾರ್ಯಕ್ರಮ. ಕುವೆಂಪು, ಡಾ. ರಾಜ್ ಕುಮಾರ್ ಅವರಂಥಾ ಕನ್ನಡದ ಅಸ್ಮಿತೆಯನ್ನು ನೆನೆಯುತ್ತಲೇ, ಅರ್ಥಪೂರ್ಣವಾಗಿ ನಡೆದಿದ್ದ ಸಮಾರಂಭವದು. ಅದರಲ್ಲಿ ಪಾಲುದಾರರಾದ ತುಂಬು ಸಂಭ್ರಮ ಅರ್ಚನಾರಲ್ಲಿದೆ.

ಓದಿನ ದಿನಗಳಲ್ಲಿ ಅರ್ಚನಾ ಕ್ರೈಸ್ಟ್ ಕಾಲೇನಿನಲ್ಲೊಂದು ಸೀಟು ಸಿಕ್ಕರೆ ಸಾಕೆಂದು ಹಂಬಲಿಸಿದ್ದರಂತೆ. ಕಡೆಗೂ ಶತ ಪ್ರಯತ್ನ ನಡೆಸಿ ಕ್ರೈಸ್ಟ್ ಕಾಲೇಜಿನಲ್ಲಿ ಡಿಗ್ರಿ ಪೂರೈಸಿಕೊಳ್ಳುವ ಸದವಕಾಶವನ್ನವರು ಪಡೆದುಕೊಂಡಿದ್ದರು. 2018ರಲ್ಲಿ ಪದವಿ ಪೂರೈಸಿಕೊಂಡಿದ್ದ ಅರ್ಚನಾ, ನಂತರ ನಟಿಯಾಗಿ ಪಾದಾರ್ಪಣೆ ಮಾಡಿದ್ದರು. ಈ ಐದು ವರ್ಷಗಳ ಅವಧಿಯಲ್ಲವರು ಸ್ಯಾಂಡಲ್ ವುಡ್ಡಿನ ಪ್ರತಿಭಾನ್ವಿತ ನಟಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂಥಾ ಪ್ರಸಿದ್ಧಿಯೇ ಅವರ ಪಾಲಿಗೆ ಇಂಥಾದ್ದೊಂದು ಅಮೋಘ ಕ್ಷಣ ದಕ್ಕುವಂತೆ ಮಾಡಿದೆ. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲು ತಯಾರಿ ಆರಂಭಿಸಿದಾಗ ಮುಖ್ಯ ಅತಿಥಿಯಾಗಿ ಯಾರನ್ನು ಕರೆಯಬೇಕೆಂಬ ಬಗ್ಗೆ ವಿಸ್ತಾವಾಗಿ ಚರ್ಚೆ ನಡೆದಿತ್ತು. ಆಗ ಆಡಳಿತ ಮಂಡಳಿಯವರೊಬ್ಬರು ತಮ್ಮ ಸಂಸ್ಥೆಯಲ್ಲಿಯೇ ವ್ಯಾಸಂಗ ನಡೆಸಿ, ಪ್ರಸಿದ್ಧಿ ಪಡೆದುಕೊಂಡಿರುವ ಅರ್ಚನಾ ಕೊಟ್ಟಿಗೆ ಹೆಸರನ್ನು ಸೂಚಿಸಿದ್ದರಂತೆ.

ಅದನ್ನು ಕೇಳಿದೇಟಿಗೆ ಖುಷಿಗೊಂಡಿದ್ದ ಫಾದರ್ ಕಡೆಯಿಂದ ಅರ್ಚನಾರನ್ನು ಸಂಪರ್ಕಿಸುವಂತೆ ಸಂದೇಶ ರವಾನೆಯಾಗಿತ್ತು. ಆ ವಿಚಾರ ತಿಳಿಯುತ್ತಲೇ ಅತ್ಯಂತ ಸಂತಸದಿಂದ ಅರ್ಚನಾ ಒಪ್ಪಿಗೆ ಸೂಚಿಸಿದ್ದರಂತೆ. ಅದರ ಫಲವಾಗಿ ತಾನು ಓದಿದ ಸಂಸ್ಥೆಯ ಶಾಲೆಯ ಕಾರ್ಯಕ್ರಮದಲ್ಲಿ, ಅದರಲ್ಲಿಯೂ ವಿಶೇಷವಾಗಿ ತನಗೆ ಬದುಕು ಕೊಟ್ಟ ಕನ್ನಡದ ಕಾರ್ಯಕ್ರಮದಲ್ಲಿ ಭಾಗಿಯಾಗೋ ಅವಕಾಶ ಅವರ ಪಾಲಿಗೆ ಕೂಡಿ ಬಂದಿದೆ. ಇಂಥಾದ್ದೊಂದು ಅವಕಾಶ ಸುಮ್ಮನೇ ಸಿಗುವಂಥಾದ್ದಲ್ಲ. ಅದು ಏನಾದರೊಂದು ಸಾಧಿಸಬೇಕೆಂಬ ತಪನೆ ಹೊಂದಿರುವವರ ಸಾರ್ವಕಾಲಿಕ ಕನಸು. ವಿಶೇಷವೆಂದರೆ, ಅರ್ಚನಾ ಪಾಲಿಗದು ತುಸು ಬೇಗನೆ ಒಲಿದು ಬಂದಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!