ಚಿತ್ರಲ್ ರಂಗಸ್ವಾಮಿ… (actress chitral ragaswamy) ಹೀಗೊಂದು ಹೆಸರು ಹೇಳಿದರೆ ಥಟ್ಟನೆ ಗುರುತು ಹತ್ತೋದು ಕಷ್ಟ. ಆದರೆ, ಆಕೆಯ ಫೋಟೋ ನೋಡಿದರೆ, ಕೆಲ ಸಿನಿಮಾ ಧಾರಾವಾಹಿಗಳಲ್ಲಿನ ಸಣ್ಣಪುಟ್ಟ ಪಾತ್ರಗಳು ಹಾದು ಹೋಗುತ್ತವೆ. ಕೆಲವೊಮ್ಮೆ ಸೀರಿಯಲ್ಲುಗಳಲ್ಲೋ, ಸಿನಿಮಾಗಳಲ್ಲೋ ಕಾಣಿಸಿಕೊಳ್ಳುವ ನಟ ನಟಿಯರು ಏಕಾಏಕಿ ಮಾಯವಾಗಿ ಬಿಡ್ತಾರೆ. ಜನ ಕೂಡಾ ಅಂಥವರನ್ನ ಅಷ್ಟೇ ಸಲೀಸಾಗಿ ಮರೆತು ಬಿಡ್ತಾರೆ. ಅಂಥವರ ಖಾಸಗೀ ಲೋಕದ ಚಡಪಿಕೆಗಳು, ನೋವು, ನಿರಾಸೆಗಳು ಮುಖ್ಯವಾಹಿನಿಗೆ ದಾಟಿಕೊಳ್ಳೋದೇ ಇಲ್ಲ. ಅಂಥಾದ್ದೊಂದು ಬದುಕಿನ ಹೊಡೆತಗಳನ್ನ, ಖಿನ್ನತೆಗಳನ್ನ ಮೀರಿಕೊಂಡು ಮಿಂಚಲು ಅಣಿಯಾಗಿರುವಾಕೆ ಚಿತ್ರಲ್ ರಂಗಸ್ವಾಮಿ!

ಈಕೆ ಈ ಬಾರಿ ಬಿಗ್ ಬಾಸ್ (bigg boss season 10) ಸ್ಪರ್ಧಿಯಾಗಲಿದ್ದಾರೆಂಬ ಸುದ್ದಿ ಹಬ್ಬಿಕೊಂಡಿತ್ತು. ಅದಕ್ಕೆ ಸರಿಯಾಗಿ ಚಿತ್ರಲ್ ವೇದಿಕೆ ಪ್ರವೇಶಿಸಿದರಾದರೂ, ಮನೆ ಸೇರಿಕೊಳ್ಳೋದು ಸಾಧ್ಯವಾಗಿರಲಿಲ್ಲ. ಆದರೂ ಈಕೆಯ ಬಗೆಗಿನ ಸುದ್ದಿಗಳು, ಚರ್ಚೆಗಳು ಇನ್ನೂ ನಿಂತಿಲ್ಲ. ಯಾಕಂದ್ರೆ, ಈ ಹುಡುಗಿ ಎದುರಿಸಿದ ಸವಾಲುಗಳು ಮತ್ತು ಅದಕ್ಕೆ ಸೆಡ್ಡು ಹೊಡೆದು ನಿಂತ ಪರಿಯೇ ಅಂಥದ್ದಿದೆ. ಸಾಮಾನ್ಯವಾಗಿ ಎಂಥಾ ಗಟ್ಟಿಗರೇ ಆಗಿದ್ದರೂ ಕೂಡಾ ಪದೇ ಪದೆ ಆಘಾತಗಳಾದಾಗ, ಎದ್ದು ನಿಂತಾಗೆಲ್ಲ ಬದುಕೆಂಬುದು ಒದ್ದು ಕೆಡವಿದಾಗ ಕಂಗಾಲಾಗುತ್ತಾರೆ. ಮೇಲೇಳಲು ಸಾಧ್ಯವೇ ಇಲ್ಲವೆಂಬಂತೆ ಕುಸಿದು ಬಿಡುತ್ತಾರೆ. ಆದರೆ, ಚಿತ್ರಾಲ್ ಮಾತ್ರ ಬದುಕಿನ ಪ್ರಹಾರವಾದಾಗೆಲ್ಲ ಪುಟಿದೆದ್ದು ನಿಂತವರು. ಆ ಮೂಲಕ ಒಂದಷ್ಟು ಆಯಾಮಗಳಲ್ಲಿ ಎಲ್ಲರಿಗೂ ಸ್ಫೂರ್ತಿಯಂತಿರುವವರು.

ಚಿತ್ರಾಲ್ ಗೆ ಬದುಕು ಎಲ್ಲ ರೀತಿಯಲ್ಲಿಯೂ ಸವಾಲೊಡ್ಡಿತ್ತು. ಇದ್ದಕ್ಕಿದ್ದಂತೆ ಧಾರಾವಾಹಿಗಳ ಅವಕಾಶಗಳೂ ಕಡಿಮೆಯಾಗಿದ್ದವು. ಅದಕ್ಕೆ ಸರಿಯಾಗಿ ಪ್ರೀತಿಯೂ ಕೈ ಕೊಟ್ಟಿತ್ತು. ಅಂಥಾ ಆಘಾತದಲ್ಲಿ ಕಣ್ಣೀರು ಸುರಿಸದೆ, ಈ ಕ ಹಿಡಿದದ್ದು ಜಿಮ್ ದಾರಿಯನ್ನು. ಕಣ್ಣೀರನ್ನೂ ಬೆವರಾಗಿ ಹರಿಸುತ್ತಾ, ದೇಹವನ್ನು ಹುರಿಗೊಳಿಸಿಕೊಂಡಿದ್ದ ಚಿತ್ರಲ್ ನೋಡ ನೋಡುತ್ತಲೇ ಲೇಡಿ ಬಾಡಿ ಬಿಲ್ಡರ್ ಆಗಿದ್ದರು. ಬಹುಮಾನವನ್ನೂ ಗೆದ್ದುಕೊಂಡಿದ್ದರು. ಇದೀಗ ಕೆ ಬಹು ಜನಪ್ರಫಿಟ್ನೆಸ್ ಟೈನರ್ ಆಗಿದ್ದಾರೆ. ಒಂದು ಮಟ್ಟಿಗೆ ಸವಾಲುಗಳಿಗೆ ಸೆಡ್ಡು ಹೊಡೆದು ಗೆದ್ದಿದ್ದಾರೆ. ಈಕೆ ನಿಜಕ್ಕೂ ಬಿಗ್ ಬಾಸ್ ಮನೆ ಸೇರಿಕೊಳ್ಳಬೇಕಿತ್ತು!

About The Author