Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»chandan shetty new movie: `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಇದು ಅಪರೂಪದ ಟೀನೇಜ್ ಸ್ಟೋರಿ!
    ಸ್ಪಾಟ್ ಲೈಟ್

    chandan shetty new movie: `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಇದು ಅಪರೂಪದ ಟೀನೇಜ್ ಸ್ಟೋರಿ!

    By Santhosh Bagilagadde26/08/2023Updated:26/08/2023
    Facebook Twitter Telegram Email WhatsApp
    b5c19329 1b67 41f8 a08e 0dff09a9b88c
    Share
    Facebook Twitter LinkedIn WhatsApp Email Telegram

    ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿಯೂ ಒಂದಷ್ಟು ಬ್ಯುಸಿಯಾಗಿರುವಾತ (rapper chandan shetty) ಚಂದನ್ ಶೆಟ್ಟಿ. ಒಂದು ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡುತ್ತಲೇ ಮತ್ತೊಂದರತ್ತ ಕೈ ಚಾಚೋದು ಹೊಸತೇನಲ್ಲ. ರ್ಯಾಪರ್ ಆಗಿ ಜನಪ್ರಿಯತೆ ಪಡೆದುಕೊಂಡಿರುವ (chandan shetty new movie) ಚಂದನ್, ಈಗಾಗಲೇ ಎಲ್ರ ಕಾಲೆಳಿಯುತ್ತೆ ಕಾಲ ಅಂತೊಂದು ಸಿನಿಮಾದಲ್ಲಿ ನಟಿಸಿರೋದು ಗೊತ್ತೇ ಇದೆ. ಅದು ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ, ಆತ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ ಸುದ್ದಿ ಹೊರಬಿದ್ದಿತ್ತು. ಚಿತ್ರತಂಡ ಟೈಟಲ್ ಪ್ರೋಮೋ ಮೂಲಕವೇ ಶೀರ್ಷಿಕೆಯ ಬಗೆಗೊಂದು ಕುತೂಹಲ ಹುರಿಗೊಳಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಿತ್ತು. ಇದೀಗ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (vidyarthi vidyarthiniyare) ಎಂಬ ಶೀರ್ಷಿಕೆ ಅನಾವರಣಗೊಂಡಿದೆ.

    6f80ff9d e54b 4b10 8c7d bed1976e8194ಈ ಶೀರ್ಷಿಕೆಯೇ ಇದೊಂದು ಟೀನೇಜ್ ಸ್ಟೋರಿ ಎಂಬುದನ್ನು ಸ್ಪಷ್ಟವಾಗಿ ಧ್ವನಿಸುವಂತಿದೆ. ನಿರ್ದೇಶಕ ಅರುಣ್ ಅಮುಕ್ತ ಈ ಮೂಲಕ ಪರಿಣಾಮಕಾರಿಯಾಗಿ ಯುವ ಮನಸುಗಳನ್ನು ಮುಟ್ಟಿ, ಫ್ಯಾಮಿಲ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಈ ಹಿಂದೆ ಶ್ರೀಮುರುಳಿ ನಟಿಸಿದ್ದ ಲೂಸ್‍ಗಳು ಎಂಬ ಸಿನಿಮಾವನ್ನು ಅರುಣ್ ಅಮುಕ್ತ ನಿರ್ದೇಶನ ಮಾಡಿದ್ದರು. ಅದಾಗಿ ಒಂದಷ್ಟು ಗ್ಯಾಪಿನ ನಂತರ, ಸರಿಕಟಟಾದ ತಯಾರತಿ ಮಾಡಿಕೊಂಡೇ ಈ ಸಿನಿಮಾವನ್ನು ಕೈಗೆತ್ತಿಕೊಂಡಂತಿದೆ. ಈ ಟೈಟಲ್ ಪ್ರೋಮೋ ಮತ್ತು ಅದನ್ನು ಲಾಂಚ್ ಮಾಡುವ ವಿಚಾರದಲಿಯೂ ಕೂಡಾ ಅರುಣ್ ಒಂದಷ್ಟು ಕ್ರಿಯೇಟಿವಿಟಿಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

    443e1140 6f9d 46e7 aaee 6688fb9ec468ಶಾಲಾ ಕಲೇಜು ಕಾಲಘಟ್ಟದ ಸಿನಿಮಾಗಳ ಬಗ್ಗೆ ಪ್ರೇಕ್ಷಕ ವಲಯದಲೊಂದು ವಿಶೇಷವಾ ಪ್ರೀತಿ ಇದೆ. ಅಂಥಾದೊಂದು ದೃಷ್ಯ ಸಿನಿಮಾಗಲ್ಲಿ ಸಣಣಗೆ ಸರಿದು ಹೋದರೂ, ನೆನಪುಗಳ ನೆತ್ತಿ ನೇವರಿಸಿ ಸಂಭ್ರಮಿಸುವವರಿದ್ದಾರೆ. ಆ ಕಾಲ ಕೀಟಲೆ, ಕ್ವಾಟಲೆಗಳನ್ನು ಕಣ್ತುಂಬಿಕೊಂಡು ನಗುವ ಕ್ಷಣಗಳಿಗಾಗಿ ಕಾದು ಕೂತವರಿದ್ದಾರೆ. ಪ್ರೇಕ್ಷಕರಲ್ಲಿ ಅಂಥಾದ್ದೊಂದು ತುಡಿತ ಇರೋದರಿಂದಲೇ ಸರ್ಕಾರಿ ಹಿರಿಯ ಪ್ರಾಮಿಕ ಶಾಲೆ, ಕಿರಿಕ್ ಪಾರ್ಟಿ, ಇತ್ತೀಚೆಗೆ ಬಂದ ಡೇರ್ ಡೆವಿಲ್ ಮುಸ್ತಫಾ, ಹಾಟೆಲ್ ಹುಡುಗರು ಬೇಕಾಗಿದ್ದಾರೆ ಮುಂತಾದ ಸಿನಿಮಾಗಳು ಸಮ್ಮೋಹಕ ಗೆಲುವು ದಾಖಲಿಸಿದ್ದವು. ಇದೀ ಆ ಜಾನರ್‍ನಲ್ಲಿಯೇ ಹಲವು ವಿಶೇಷತೆಗನ್ನು ಹೊಂದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಕುತೂಹಲವನ್ನು ಚಾಲೂ ಮಾಡಿದೆ.

    0cc8f867 946a 4c16 892e 0391420a354fತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ಭಿನ್ನವಾಗಿ ಕಟ್ಟಿಕೊಡಲು ಚಿತ್ರತಂಡ ತಯಾರಾಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ಒಂದಷ್ಟು ಮಹತ್ವದ ಸುದ್ದಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿವೆ. 

    arunamuktha chandanshetty rapperchandanshetty vidyarthividyarthiniyare
    Share. Facebook Twitter LinkedIn WhatsApp Telegram Email
    Previous Articleshivaraj kumar captain miller: ಅಲ್ಲಿ ಕಾಣಿಸಿದ್ದು ಮಫ್ತಿ ಛಾಯೆಯ ಪಾತ್ರ!
    Next Article vaishnavi chaitanya: ಬೇಬಿ ಹೀರೋಯಿನ್ ವೈಷ್ಣವಿಗೆ ಯಾಕಿಂಥಾ ಆಘಾತ?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    09/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.