ಒಂದು ಹಂತದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ (rashmika mandanna) ತೆಲುಗಿಗೆ ಹಾರಿ, ಏಕಾಏಕಿ ಗಿಟ್ಟಿಸಿಕೊಳ್ಳಲು ಶುರುವಿಟ್ಟ ಅವಕಾಶಗಳನ್ನು ಕಂಡು ಬಹುತೇಕರು ಅವಾಕ್ಕಾಗಿದ್ದರು. ಅದಾಗಿ ಕೆಲವೇ ವರ್ಷ ಕಳೆಯುವ ಮುನ್ನ ಮತ್ತೋರ್ವ ನಟಿ ತೆಲುಗಿಗೆ ಎಂಟ್ರಿ ಕೊಟ್ಟು ಹವಾ ಸೃಷ್ಟಿಸಿದ್ದಾಳೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ನಟರೊಂದಿಗೆ ನಾಯಕಿಯಾಗೋ ಅವಕಾಶ ಪಡೆದುಕೊಂಡು ಹುಬ್ಬೇರುವಂತೆ ಮಾಡಿದ್ದಾಳೆ. ಹಾಗೊಂದು ಅಚ್ಚರಿಗವೆ ಕಾರಣವಾಗಿರುವಾಕೆ (sreeleela) ಶ್ರೀಲೀಲಾ. ಈಗಂತೂ ಶ್ರೀಲೀಲಾ (actress sreeleela) ತೆಲುಗರ ಪಾಲಿನ ಹೊಸಾ ಕ್ರಶ್ಯು. ಆಕೆಯ ಸ್ಪೀಡು ಮತ್ತು ಕೈಲಿರೋ ಅವಕಾಶಗಳನ್ನು ನೋಡಿದರೆ, ಬಹುಶಃ ಇನ್ನೊಂದಷ್ಟು ವರ್ಷಗಳ ಕಾಲ ಆಕೆಯ ಪಟ್ಟ ನಿರಾತಂಕ!

ಹೀಗೆ ಅವಕಾಶಗಳ ಒಡ್ಡೋಲಗದಲ್ಲಿ ಮೆರವಣಿಗೆ ಹೊರಟಿರೋ ಶ್ರೀಲೀಲಾ ಕಡೆಯಿಂದೊಂದು ಸುದ್ದಿಯೀಗ ಹೊರ ಬಿದ್ದಿದೆ. ಆಕೆ ಹಠಾತ್ತನೆ ಒಂದಷ್ಟು ಕಾಲ ಚಿತ್ರರಂಗದ ಸಾಹಚರ್ಯದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾಳೆ. ಈ ವಿಚಾರ ಕೇಳಿದಾಕ್ಷಣ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ. ಹಾಗಂತ ಆಕೆ ಸಿನಿಮಾ, ಚಿತ್ರೀಕರಣದಿಂದ ದೂರವುಳಿಯಲು ತೀರ್ಮಾನಿಸಿರೋದರ ಹಿಂದೆ ಯಾವುದೇ ವಿವಾದಗಳಾಗಲಿ, ತಕರಾರುಗಳಾಗಲಿ ಇಲ್ಲ. ಒಂದು ಮೂಲದ ಪ್ರಕಾರ ಓದಿನ ಉದ್ದೇಶದಿಂದ ಇದೇ ನವೆಂಬರ್ ತಿಂಗಳಿಂದ ಒಂದಷ್ಟು ಕಾಲ ಬ್ರೇಕ್ ತೆಗೆದುಕೊಳ್ಳಲು ಶ್ರೀಲೀಲಾ ತೀರ್ಮಾನಿಸಿದ್ದಾಳಂತೆ.

ಶ್ರೀಲೀಲಾ ಮೂಲತಃ ಎಂಬಿಬಿಎಸ್ ವಿದ್ಯಾರ್ಥಿ. ಓದಿನ ನಡುವಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ ಕೂಡಾ ಓದಿನತ್ತ ಆಕೆಯ ವಿಶೇಷ ಆಸಕ್ತಿ ಇತ್ತು. ಆ ನಂತರದಲ್ಲಿ ನಾಯಕಿಯಾಗಿ ಆಗಮಿಸಿದರೂ ಕೂಡಾ ಡಾಕ್ಟರಿಕೆ ಮತ್ತು ವೃತ್ತಿ ಬದುಕನ್ನು ಒಟ್ಟೊಟ್ಟಿಗೇ ನಿಭಾಯಿಸುವ ಇರಾದೆ ಶ್ರೀಲೀಲಾಗಿತ್ತು. ಈ ಕಲಿಕೆಗೆ ಸಂಬಂಧಪಟ್ಟಂತೆ ಪರೀಕ್ಷೆ ಒಂದಿರೋದರಿಂದ, ಅದಕ್ಕಾಗಿ ಎರಡು ತಿಂಗಳ ಕಾಲ ಮೀಸಲಿಡಲು ಶ್ರೀಲೀಲಾ ತೀರ್ಮಾನಿಸಿದ್ದಾಳಂತೆ. ಈಗಾಗಲೇ ಸಿನಿಮಾ ತಂಡಗಳ ಬಳಿ ಮಾತಾಡಿಕೊಂಡು ಅದಕ್ಕೆ ರೆಡಿಯಾಗಿದ್ದಾಳೆ. ಅಂದಹಾಗೆ, ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಅದೆಷ್ಟು ಬೇಡಿಕೆ ಹೊಂದಿದ್ದಾಳೆಂದರೆ, ಈಗ ಒಪ್ಪಿಕೊಂಡಿರೋ ಸಿನಿಮಾಗಳೇ ಇನ್ನೊಂದು ವರ್ಷಕ್ಕಾಗುವಷ್ಟಿದ್ದಾವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!