ಬಿಗ್ ಬಾಸ್ (bigboss kannada) ಶೋ ಸ್ಪರ್ಧಿಗಳು ವಾಪಾಸಾದ ತಕ್ಷಣವೇ ಸಿನಿಮಾ ಹಂಗಾಮಾ ಶುರುವಿಟ್ಟುಕೊಳ್ಳುವುದು ರೂಢಿ. ಆದರೆ, (rock star roopesh shetty) ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ವಿಚಾರದಲ್ಲಿ ಮಾತ್ರ ಅದು ನಿಜವಾಗಿರಲಿಲ್ಲ. ಯಾಕೆಂದರೆ, ಬಿಗ್ ಬಾಸ್ ಶೋ ಮುಗಿದು ಅರ್ಧ ವರ್ಷವಾಗುತ್ತಾ ಬಂದರೂ ಕೂಡಾ, ಅವರ ಹೊಸಾ ಸಿನಿಮಾ ಅನೌನ್ಸ್ ಆಗಿರಲಿಲ್ಲ. ಬಹುಶಃ (roopesh shetty) ರೂಪೇಶ್ ರನ್ನು ಮೆಚ್ಚಿಕೊಂಡ ಮಂದಿಗೆ ಆ ವಿಚಾರವಾಗಿ ಬೇಸರವಿದ್ದರೂ ಇದ್ದೀತು. ಇದೀಗ ಅವರೆಲ್ಲರೂ ಖುಷಿಗೊಳ್ಳುವಂಥಾ ವಿಚಾರವೊಂದು ಜಾಹೀರಾಗಿದೆ. ರೂಪೇಶ್ ಶೆಟ್ಟಿ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ, ಅವರು ನಟಿಸುತ್ತಿರೋ ಕನ್ನಡ ಸಿನಿಮಾದ ಟೈಟಲ್ ಘೋಷಣೆಯಾಗಿದೆ!

ಅಂದಹಾಗೆ, ಈ ಚಿತ್ರಕ್ಕೆ `ಅಧಿಪತ್ರ’ ಎಂಬ ನಾಮಕರಣ ಮಾಡಲಾಗಿದೆ. ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿರವನ್ನು ಚಯನ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ. ಸದ್ಯದ ಮಟ್ಟಿಗೆ ಚಿತ್ರತಂಡ ಇವಿಷ್ಟು ವಿಚಾರಗಳನ್ನು ಮಾತ್ರವೇ ಬಿಟ್ಟುಕೊಟ್ಟಿದೆ. ಈ ಟೈಟಲ್ಲು ಕೇಳಿದಾಕ್ಷಣವೇ ಅದರ ಸುತ್ತಲೂ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚಿನ ದಿನಮಾನಗಳಲ್ಲಿ ವಿಶೇಷವಾದ ಶೀರ್ಷಿಕೆಗಳನ್ನು ಹುಡುಕಿ, ಆ ಮೂಲಕ ಪ್ರೇಕ್ಷಕರ ಚಿತ್ತ ಸೆಳೆದುಕೊಳ್ಳುವ, ಅದರೊಂದಿಗೆ ಆರಂಭಿಕವಾಗಿಯೇ ಸದ್ದು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಧಿಪತ್ರ ಕೂಡಾ ಅದರ ಭಾಗವಾಗಿ ಕಾಣಿಸುತ್ತಿದೆ.

ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿ ಸೀಜನ್ನಿನ ಸ್ಪರ್ಧಿಯಾಗಿ, ಆ ನಂತರ ಮುಖ್ಯ ಭಾಗದಲ್ಲಿಯೂ ಭಾಗಿಯಾಗಿ ವಿನ್ನರ್ ಅನ್ನಿಸಿಕೊಂಡಿದ್ದರು. ಈ ಮೂಲಕ ಸಹಜವಾಗಿಯೇ ಅವರ ಬಗೆಗೊಂದು ಕ್ರೇಜು ಮೂಡಿಕೊಂಡಿತ್ತು. ಹಾಗಿದ್ದರೂ ರೂಪೇಶ್ ಯಾಕೆ ಹೀರೋ ಆಗಿ ಆಗಮನಿಸುತ್ತಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಅದಕ್ಕೆ ಒಂದು ದೊಡ್ಡ ಗೆಲುವಿನ ಸಮ್ಮುಖದಲ್ಲಿಯೇ ಉತ್ತರವಿದೆ. ಹೇಳಿಕೇಳಿ ರೂಪೇಶ್ ಶೆಟ್ಟಿ ತುಳು ಚಿತ್ರರಂಗದ ಮೂಲಕ ಹುರಿಗೊಂಡ ಪ್ರತಿಭೆ. ಬಿಗ್ ಬಾಸ್ ಶೋ ಮುಗಿಸಿಕೊಂಡ ನಂತರ ಅವರು ಸರ್ಕಸ್ ಎಂಬ ತುಳು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ಬಿಡುಗಡೆಗೊಂಡು ಬಿಗ್ ಹಿಟ್ ಆಗಿ ದಾಖಲಾಗಿದೆ. ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಮೊದಲ ತುಳು ಚಿತ್ರವೆಂಬ ಹೆಗ್ಗಳಿಕೆಗೂ ಆ ಸಿನಿಮಾ ಪಾತ್ರವಾಗಿದೆ.

ಸರ್ಕಸ್ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದ ರೂಪೇಶ್ ಶೆಟ್ಟಿ ಸಹಜವಾಗಿಯೇ ಒತ್ತಡದಲಿದ್ದರಂತೆ. ಅದನ್ನು ಮುಗಿಸಿಕೊಂಡೇ ಕನ್ನಡದ ಪ್ರೇಕ್ಷಕರನ್ನು ಮುಖಾಮುಖಿಯಾಗೋ ನಿರ್ಧಾರಕೂ ಬಂದಿದ್ದರಂತೆ. ಕಡೆಗೂ ಒಂದೊಳ್ಳೆ ಅವಕಾಶವೇ ರೂಪೇಶ್‍ರನ್ನು ಅರಸಿ ಬಂದಿದೆ. ಅಧಿಪತ್ರ ಯಾವ ಬಗೆಯ ಚಿತ್ರ, ತಾರಾಗಣದಲ್ಲಿ ಯಾರ್ಯಾರಿರಲಿದ್ದಾರೆ? ತಾಂತ್ರಿಕವರ್ಗ ಸೇರಿದಂತೆ ಮತ್ತೊಂದಷ್ಟು ಮಹತ್ವದ ವಿಚಾರಗಳು ಹಂತ ಹಂತವಾಗಿ ಜಾಹೀರಾಗಲಿವೆ. ಈಗಾಗಲೇ ಎಲ್ಲ ತಯಾರಿಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ, ಸೆಪ್ಟೆಂಬರ್ ನಿಂದ ಚಿತ್ರೀಕರಣ ಶುರು ಮಾಡಲು ನಿರ್ಧರಿಸಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!