Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»ambuja rajani: ರಜನಿಯ ವೃತ್ತಿ ಬದುಕಿನ ದಿಕ್ಕು ಬದಲಾದೀತಾ?
    ಸ್ಪಾಟ್ ಲೈಟ್

    ambuja rajani: ರಜನಿಯ ವೃತ್ತಿ ಬದುಕಿನ ದಿಕ್ಕು ಬದಲಾದೀತಾ?

    By Santhosh Bagilagadde15/07/2023Updated:15/07/2023
    Facebook Twitter Telegram Email WhatsApp
    9a603d77 dc15 4af3 9774 8b626bddd285
    Share
    Facebook Twitter LinkedIn WhatsApp Email Telegram

    ಕಿರುತೆರೆಯಿಂದ ಹಿರಿತೆರೆಗೆ ಆಗಮಿಸಿರುವವರು, ಆಗಮಿಸುತ್ತಿರುವವರ ದಂಡು ದೊಡದಿದೆ. ಹಾಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಪ್ರತೀ ನಟ ನಟಿಯರ ಆದ್ಯತೆಗಳೂ ಬೇರೆ ತೆರನಾಗಿರುತ್ತವೆ. ಕೆಲ ಮಂದಿ ಏಕಾಏಕಿ ಮಿಂಚುವ ಇರಾದೆ ಹೊಂದಿದ್ದರೆ, ಮತ್ತೆ ಕೆಲವರಲ್ಲಿ ವಿಶೇಷ ಪಾತ್ರಗಳ ಮೂಲಕ ಪೇಕ್ಷಕರ ಮನಸಿಗಿಳಿಯುವ ತಪನೆಯಿರುತ್ತದೆ. ಅಂಥಾ ವಿರಳ ಮತ್ತು ಅಪರೂಪದ ಕಲಾವಿದರ ಸಾಲಿನಲ್ಲಿ ರಜನಿ (rajani) ಕೂಡಾ ಸೇರಿಕೊಳ್ಳುತ್ತಾರೆ. ರಜನಿ ಕಿರುತೆರೆ ಪ್ರೇಕ್ಷಕರ ಪಾಲಿಗೆ ಚಿರಪರಿಚಿತ ನಟಿ. ಕಿರುತೆರೆಯಲ್ಲಿ ಒಂದಷ್ಟು ಯಶ ಕಂಡಿದ್ದ ಅಮೃತವರ್ಶಿಣಿ (amruthavarshini) ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿದ್ದವರು ರಜನಿ. ಆ ಬಳಿಕ ಕಿರುತೆರೆ ಜಗತ್ತಿನಲ್ಲಿಯೇ ಹಲವು ಆಯಾಮಗಳಲ್ಲಿ ಸಕ್ರಿಯರಾಗಿದ್ದ ಅವರೀಗ `ಅಂಬುಜ’ ಚಿತ್ರದ ನಾಯಕಿಯಾಗಿ, ವಿಶಷ್ಟ ಪಾತ್ರವೊಂದರ ಮೂಲಕ ಹಿರಿತೆರೆಯ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ.

    b60efa68 85ce 4c75 bab3 83cf592f24e0ಸಾಮಾನ್ಯವಾಗಿ, ನಟಿಯರನೇಕರು ಏಕಾಏಕಿ ಪಕ್ಕಾ ಕಮರ್ಶಿಯಲ್ ಪ್ರಕಾರದ ಸಿನಿಮಾದಲ್ಲಿ ಅವಕಾಶ ಸಿಕ್ಕು ಮಿಂಚಿಬಿಡುವ ಆಲೋಚನೆಯಲ್ಲಿರುತ್ತಾರೆ. ಅಂಥವರ ನಡುವೆ, ನಾಯಕಿ ಪಾತ್ರ ಸಿಗದಿದ್ದರೂ ಪರವಾಗಿಲ್ಲ; ಸಣ್ಣ ಪಾತ್ರವಾದರೂ ಅದು ನೋಡುಗರ ಮನಸಲ್ಲುಳಿಯಬೇಕೆಂಬ ತುಡಿತ ಹೊಂದಿರುವವರು ವಿರಳ. ಆ ಯಾದಿಯಲ್ಲಿ ರಜನಿ ನಿಸ್ಸಂದೇಹವಾಗಿಯೂ ಸೇರ್ಪಡೆಗೊಳ್ಳುತ್ತಾರೆ. ವಿಶೇಷವೆಂದರೆ, ಆರಂಭಿಕ ಹೆಜ್ಜೆಯಲ್ಲಿಯೇ ಅವರಿಗೆ ಅಂಬುಜ ಚಿತ್ರದ ಮೂಲಕ ದೊಡ್ಡ ಅವಕಾಶವೇ ಸಿಕ್ಕಿದೆ. ಲಂಬಾಣಿ ಹುಡುಗಿಯಾಗಿ, ನಾನಾ ಶೇಡುಗಳಿರುವ ಪಾತ್ರವೊಂದಕ್ಕೆ ಜೀವ ತುಂಬಿರುವ ಖುಷಿ, ಪ್ರಧಾನ ಪಾತ್ರವೇ ಸಿಕ್ಕಿರುವ ಧನ್ಯತೆ ರಜನಿಗಿದೆ.

    90ff255e 21b6 482e 9eb3 66cdb3774ac0ಅವರೇ ಹೇಳುವ ಪ್ರಕಾರ ಇದೊಂದು ಚಾಲೆಂಜಿಂಗ್ ಪಾತ್ರ. ತಯಾರಿಯಿಲ್ಲದ ಹೊರತು ಆಳಕ್ಕಿಳಿದ ಆವಾಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂಥಾ ಕ್ಯಾರೆಕ್ಟರ್ ಅದು. ಅದಕ್ಕಾಗಿ ಮಾಡಿಕೊಂಡ ತಯಾರಿಗಳೇ ನಟಿಯಾಗಿ ರಜನಿಗೆ ಹೊಸಾ ಅನುಭವಗಳನ್ನು ಕಟ್ಟಿಕೊಟ್ಟಿದೆ. ಕೇವಲ ನಟನೆ ಮಾತ್ರವಲ್ಲ; ಲಂಬಾಣಿ ಶೈಲಿಯ ಉಡುಗೆಯನ್ನು ತೊಟ್ಟುಕೊಳುವುದು ಕೂಡಾ ರಜನಿ ಪಾಲಿಗೆ ಸವಾಲಾಗಿತ್ತು. ಆ ಕಾಸ್ಟ್ಯೂಮು ತಯಾರಾದ ಬಗ್ಗೆಯೇ ರಜನಿ ರಸವತ್ತಾದ ಪ್ರಸಂಗವೊಂದನ್ನು ಹಂಚಿಕೊಳ್ಳುತ್ತಾರೆ. ಪರಿಪೂರ್ಣವಾದ ಲಂಬಾಣಿ ಉಡುಗೆಯನ್ನು ಆ ಸಮುದಾಯದ ನುರಿತವರಿಂದ ಸ್ಟಿಚ್ ಮಾಡಿಸಲು ನಿರ್ದೇಶಕರು ತೀರ್ಮಾನಿಸಿದ್ದರು. ನಿರ್ಮಾಪಕರೂ ಅದಕ್ಕೆ ಅಸ್ತು ಅಂದಿದ್ದರು. ಆ ಪಾತ್ರ ಅತ್ಯಂತ ಸಹಜವಾಗಿ ಮೂಡಿ ಬರಬೇಕೆಂಬುದು ಸದರಿ ತೀರ್ಮಾನದ ಉದ್ದೇಶವಾಗಿತ್ತು. ನಮಗೆ ಲಂಬಾಣಿ ಉಡುಗೆಗಳು ಅಪರಿಚಿತವೇನಲ್ಲ. ಆದರೆ ಅದನ್ನು ತಯಾರಿಸೋದೊಂದು ಸುದೀರ್ಘವಾದ ಪ್ರಕ್ರಿಯೆ. ಒಂದೇ ಒಂದು ಉಡುಗೆಯ ತಯಾರಿಗೆ ಭರ್ತಿ ಆರು ತಿಂಗಳು ಹಿಡಿದಿತ್ತಂತೆ!

    43cac9cb 288e 40d6 8e6f a34238a4c4b6ಇನ್ನು ಆ ಸಮುದಾಯದ ಮಹಿಳೆಯರು, ಹೆಣ್ಣುಮಕ್ಕಳ ಹಾವಭಾವಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸವಾಲೂ ಕೂಡಾ ರಜನಿಗೆದುರಾಗಿತ್ತು. ಗದಗಿನ ತಾಂಡಾವೊಂದರಲ್ಲಿ ಚಿತ್ರೀಕರಣ ನಡೆಸೋದಾಗಿ ತೀರ್ಮಾನವಾದದ್ದೇ, ರಜನಿ ತಾಂಡಾಗೆ ಎಂಟರಿ ಕೊಟ್ಟಿದ್ದರು. ಆ ನಂತರ ಬಹುಕಾಲ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಆ ಪಾತ್ರವನ್ನು ಒಳಗಿಳಿಸಿಕೊಂಡಿದ್ದರು. ಆ ನಂತರ ಚಿತ್ರೀಕರಣ ಶುರುವಾದದ್ದೇ ಕಾಸ್ಟ್ಯೂಮಿನ ಅಸಲೀ ಕಿಮ್ಮತ್ತು ರಜನಿಯ ಅನುಭವಕ್ಕೆ ಬರಲಾರಂಭಿಸಿತ್ತು. ಯಾಕೆಂದರೆ, ಮೇಲುನೋಟಕ್ಕೆ ವಿಶೇಷವಾಗಿ ಕಾಣಿಸುವ ಆ ಸಮುದಾಯದ ಹೆಂಗಳೆಯರು ಧರಿಸೋ ಬಟ್ಟೆ ಊಹೆಗೆ ನಿಲುಕದಷ್ಟು ಭಿನ್ನವಾಗಿರುತ್ತದೆ. ರಜನಿಗಾಗಿ ಆರು ತಿಂಗಳು ಕಾಲ ತಯಾರಾಗಿದ್ದ ಲಂಬಾಣಿ ಶೈಲಿಯ ದಿರಿಸು ಇಪ್ಪತೈದು ಕೇಜಿಗೂ ಅಧಿಕ ತೂಕವಿತ್ತು.

    bb21d789 ef12 4c22 92cb 5809c2b3c6afಅಷ್ಟು ತೂಕದ ಬಟ್ಟೆ ಧರಿಸಿ, ಗಂಟೆಗಟ್ಟಲೆ ಚಿತ್ರೀಕರಣದಲ್ಲಲಿ ಭಾಗಿಯಾಗೋದೊಂದು ಸವಾಲು. ಅದರಲ್ಲಿಯೂ ಅದೇ ಬಟ್ಟೆ ಧರಿಸಿ ಹಾಡೊಂದಕ್ಕೆ ಹೆಜ್ಜೆ ಹಾಕಬೇಕಾಗಿ ಬಂದಾಗ ರಜನಿಗೂ ಒಂದಷ್ಟು ಅಳುಕು ಮೂಡಿತ್ತಂತೆ. ಮೋಹನ್ ಮಾಸ್ಟ್ ಕೋರಿಯೋಗ್ರಫಿ ಮಾಡಿದ್ದ ಆ ಹಾಡಿಗಾಗಿ ನಾಲಕ್ಕು ರಾತ್ರಿ ನಿರಂತರವಾಗಿ ಚಿತ್ರೀಕರಣ ನಡೆದಿತ್ತಂತೆ. ಒಟ್ಟಾರೆ ಹತ್ತಕ್ಕೂ ಹೆಚ್ಚು ದಿನಗಳ ಆ ಭಾಗದ ಚಿತ್ರೀಕರಣವನ್ನು ರಜನಿ ಅಕ್ಷರಶಃ ಸಂಭ್ರಮಿಸಿದ್ದಾರೆ. ಅದು ಒಟ್ಟಾರೆ ಚಿತ್ರದ ಪ್ರಧಾನ ಅಂಶವಾಗಿದೆ ಹಾಗೂ ಅದಕ್ಕೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆಂಬ ಧನ್ಯತಾ ಭಾವ ಅವರಲ್ಲಿದೆ. ಇನ್ನುಳಿದಂತೆ ಆ ಪಾತ್ರ ಹರವು ಕೂಡಾ ವಿಸ್ತಾರವಾದದ್ದು. ಭಾವನಾತ್ಮಕವಾಗಿ ಮನಸಿಗಿಳಿಯುತ್ತಲೇ ನಾನಾ ಬಗೆಯಲ್ಲಿ ಕಾಡುವ ಗುಣಗಳನ್ನು ರಜನಿಯ ಪಾತ್ರ ಹೊಂದಿದೆಯಂತೆ.

    4dc34a9d 6920 4700 b66c f911ece59944maja talkiesಮೂಲತಃ ತುಮಕೂರಿನವರಾದ ರಜನಿ ಪಾಲಿಗೆ ಓರ್ವ ನಟಿಯಾಗಿ ಅಂಬುಜ ವಿಶೇಷ ಚಿತ್ರ. ಈ ಮೂಲಕ ಇಷ್ಟು ವರ್ಷಗಳ ಕಾಲದ ಸುದೀರ್ಘ ಪಯಣವೊಂದು ಸಾರ್ಥಕಗೊಂಡಂತಾಗಿದೆ. ಅಮೃತವರ್ಶಿಣಿ ಎಂಬ ಧಾರಾವಾಹಿಯ ನಾಯಕಿಯಾಗಿ ನಟನೆಗಿಳಿದ್ದಿದ್ದ ರಜನಿ ಬಹುಮುಖ ಪ್ರತಿಭೆ. ನೃತ್ಯ, ನಟನೆ, ಗಾಯನ ಹೀಗೆ ಎಲ್ಲದಕ್ಕೂ ಸೈ ಅನ್ನುವವರು ರಜನಿ. ಅಮೃತವರ್ಶಿಣಿ ಧಾರಾವಾಹಿಯ ನಂತರದಲ್ಲಿ ಮಜಾ ಟಾಕೀಸ್ ಶನಲ್ಲಿಯೂ ಆಕೆ ಕಾಣಿಸಿಕೊಂಡಿದ್ದರು. ಡ್ಯಾನ್ಸಿಂಗ್ ಶೋ ಮೂಲಕವೂ ಪ್ರಸಿದ್ಧಿ ಪಡೆದುಕೊಂಡಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಹಿಟ್ಲರನ ಮನದನ್ನೆ ಅಂತರಾ ಪಾತ್ರದಲ್ಲಿಯೂ ರಜನಿ ನಟಿಸುತ್ತಿದ್ದಾರೆ. ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಅಂಬುಜ ಚಿತ್ರ ಇದೇ ಜುಲೈ 21ರಂದು ಬಿಡುಗಡೆಗೊಳ್ಳಲಿದೆ.

    #actress ambuja kashinathdmadivalar majatalkies rajani sreenihanumatharaju
    Share. Facebook Twitter LinkedIn WhatsApp Telegram Email
    Previous Articlesuchitra krishnamurthi: ಸುಚಿತ್ರಾ ಬದುಕಲ್ಲಿ ನಡೆದದ್ದಾದರೂ ಏನು?
    Next Article yogaraj bhat: ಭಟ್ಟರು ಬದಲಾದ ಸೂಚನೆ ಕೊಟ್ಟ ಕರಟಕ ದಮನಕ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    09/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.