Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»krishnam pranaya sakhi: ಮತ್ತೆ ಪ್ರಣಯದ ಗುಂಗಿಗೆ ಬಿದ್ದರು ಗೋಲ್ಡನ್ ಸ್ಟಾರ್!
    ಸ್ಪಾಟ್ ಲೈಟ್

    krishnam pranaya sakhi: ಮತ್ತೆ ಪ್ರಣಯದ ಗುಂಗಿಗೆ ಬಿದ್ದರು ಗೋಲ್ಡನ್ ಸ್ಟಾರ್!

    By Santhosh Bagilagadde03/07/2023
    Facebook Twitter Telegram Email WhatsApp
    dc7a5ba2 88c7 4535 83b6 83e09e275281
    Share
    Facebook Twitter LinkedIn WhatsApp Email Telegram

    ಮುಂಗಾರು ಮಳೆಯಿಂದಾಗಿ (mungaru male) ಭರಪೂರ ಯಶಕ್ಕೆ ಮೈಯೊಡ್ಡಿ ಮುದಗೊಂಡಿದ್ದವರು (golden star ganesh) ಗೋಲ್ಡನ್ ಸ್ಟಾರ್ ಗಣೇಶ್. ಒಂದು ಕಾಲದಲ್ಲಿ ತೀರಾ ಸಾಮಾನ್ಯ ಹುಡುಗನಾಗಿ, ಸಣ್ಣಪುಟ್ಟ ಅವಕಾಶಗಳಿಗೂ ಪರದಾಡುತ್ತಿದ್ದ ಗಣೇಶ್ (ganesh) ಬದುಕಲ್ಲಿ ಗೋಲ್ಡನ್ ಟೈಂ ಶುರುವಾಗಿ ಬಹಳಷ್ಟು ವರ್ಷಗಳೇ ಕಳೆದಿವೆ. ಆದರೆ, ಮುಂಗಾರು ಮಳೆಯನ್ನು ಸರಿಗಟ್ಟುವಂಥಾ ಮತ್ತೊಂದು ಗೆಲುವು ಮಾತ್ರ ಗಣೇಶ್ ಪಾಲಿಗೆ ಮರೀಚಿಕೆಯಾಗುಳಿದಿದೆ. ಈ ನಡುವೆ ಒಂದಷು ಸೋಲು, ತೊಡರು ತಿಡರುಗಳನ್ನು ದಾಟಿಕೊಂಡು, ಸಾವರಿಸಿಕೊಂಡು ನಿಂತಿರುವ ಗಣೇಶ್ ಇದೀಗ ಮತ್ತೊಂದು ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಅದಕ್ಕೀಗ ಹೊಸಾ ಆವೇಗದ ಚಾಲನೆ ಸಿಕ್ಕಿದೆ.

    38a9266b 4077 4c71 8056 ea7da9ee38bcಗೋಲ್ಡನ್ ಸ್ಟಾರ್ ಪಾಲಿನ ನಲವತ್ತೊಂದನೇ ಈ ಚಿತ್ರಕ್ಕೆ `ಕೃಷ್ಣಂ ಪ್ರಣಯ ಸಖಿ’ ಎಂಬ ಶೀರ್ಷಿಕೆಯೂ ನಿಗಧಿಯಾಗಿದೆ. ಪ್ರೀತಿ, ಪ್ರೇಮ, ಭೋಳೇ ಸ್ವಭಾವದ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಗಣೇಶ್, ಇತ್ತಿತ್ತಲಾಗಿ ಒಂದಷ್ಟು ಭಿನ್ನ ಬಗೆಯ ಪ್ರಯೋಗಗಳಿಗೂ ಒಡ್ಡಿಕೊಂಡಿದ್ದರು. ಆದರೀಗ ಅವರು ಮತ್ತೆ ಪ್ರಣಯದ ಗುಂಗಿಗೆ ಬಿದ್ದಂತಿದ್ದಾರೆ. ಗಣೇಶ್ ಸಿನಿಮಾಗಳು ಹೆಚ್ಚಾಗಿ ಪ್ರೀತಿ ಪ್ರೇಮ ಮತ್ತು ಅದರ ಸುತ್ತಲಿನ ಹಳವಂಡಗಳ ನಡುವೆ ಗಿರಕಿ ಹೊಡೆಯುತ್ತವೆ. ಆದ್ದರಿಂದಲೇ ಅವರ ಸಿನಿಮಾವೊಂದು ಘೋಷಣೆಯಾದೇಟಿಗೆ ನಾಯಕ ಯಾರೆಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಕೊಳ್ಳುತ್ತದೆ. ಈ ಸಿನಿಮಾದ ಮಟ್ಟಿಗೆ ಹೇಳೋದಾದರೆ, ಮಲೆಯಾಳಿ ಹುಡುಗಿ ಮಾಳವಿಕಾ ನಾಯರ್ ಮಳೆ ಹುಡುಗನ ಮಗ್ಗುಲಲ್ಲಿ ಬಂದುನಿಂತಿದ್ದಾಳೆ.

    Malavika Nair Height Weight Size DOB Husband Boyfriends Family Biographyಈಗಾಗಲೇ ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಹೆಸರು ಗಳಿಸಿಕೊಂಡು, ಒಂದಷ್ಟು ಗೆಲುವನ್ನೂ ಕಂಡಿರುವಾಕೆ ಮಾಳವಿಕಾ ನಾಯರ್. 2012ರಲ್ಲಿ ತೆರೆ ಕಂಡಿದ್ದ ಮಲೆಯಾಳದ `ಉಸ್ತಾದ್ ಹೋಟೇಲ್’ ಎಂಬ ಚಿತ್ರದ ಮೂಲಕ ಈಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಳು. ಆ ಮೊದಲ ಹೆಜ್ಜೆಯಲ್ಲಿಯೇ ಪುಷ್ಕಳ ಗೆಲುವೊಂದು ಮಾಳವಿಕಾಗೆ ದಕ್ಕಿತ್ತು. ಹಾಗೆ ಮಲೆಯಾಳಂನಲಿ ಒಂದಷ್ಟು ಸಿನಿಆಗಳಲ್ಲಿ ನಟಿಸಿದ್ದಮಾಳವಿಕಾ ಆ ನಂತರ ತಮಿಳಿನಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ತೆಲುಗಿನಲ್ಲಿಯೂ ಬೇಡಿಕೆ ಗಿಟ್ಟಿಸಿಕೊಂಡಿದ್ದಳು. ಹೀಗೆ ದಕ್ಷಿಣ ಭಾರತೀಯ ಚಿತ್ರರರಂಗದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿ, ಇದೀಗ ಗಣೇಶ್‍ಗೆ ಜೋಡಿಯಾಗಿ ಕನ್ನಡಕ್ಕೂ ಪಾದಾರ್ಪಣೆ ಮಾಡಿದ್ದಾಳೆ.

    78601eb5 77d7 4390 bc3b e465c57caaacಕೃಷ್ಣಂ ಪ್ರಣಯ ಸಖಿ ಎಂಬುದು ಗಣೇಶ್ ಪಾಲಿಗೆ ಮಹತ್ವದ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗ ವಿಚಾರದಲ್ಲಿ ಹೇಳೋದಾದರೆ, ಒಂದು ಬಗೆಯ ಸಿನಿಮಾ ಯಶ ಕಂಡರೆ ಮತ್ತದೇ ಧಾಟಿಯಲ್ಲಿ ರೀಲು ಸುತ್ತುವ ಐಲು ಹತ್ತಿಕೊಳ್ಳುತ್ತೆ. ಆ ಭರಾಟೆಯಲ್ಲಿ ನಾಯಕ ನಟರೇ ಸೋಲಿನ ಕಹಿ ಉಣ್ಣ ಬೇಕಾಗುತ್ತದೆ. ಗಣೇಶ್ ಕೂಡಾ ಆ ದುರಂತವನ್ನು ದಾಟಿಕೊಂಡಿದ್ದಾರೆ. ಅದರ ಫಲವಾಗಿಯೇ ಒಂದಷ್ಟು ವಿಶಿಷ್ಟ ಬಗೆಯ ಸಿನಿಮಾಗಳಿಗೂ ತೆರೆದುಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ವಿಖ್ಯಾತ್ ನಿರ್ಮಾಣದ ಪ್ಯಾನಿಂಡಿಯಾ ಸಿನಿಮಾದಲ್ಲಿಯೂನಟಿಸುತ್ತಿದ್ದಾರೆ. ಸಮಯ ಸಂದರ್ಭ ಕೂಡಿ ಬಂದಿದ್ದರಿಂದ ಗಾಳಿಪಟ2 ಮೂಲಕ ಗಣೇಶ್‍ಗೆ ಸಣ್ಣ ಗೆಲುವೊಂದು ಸಿಕ್ಕಿತ್ತಷ್ಟೆ. ಆವರೇಜ್ ಸಿನಿಮಾಗಳಲ್ಲಿ ಕಳೆದು ಹೋಗಿದ್ದ ಗಣೇಶ್‍ಗೆ ಆ ಮೂಲಕ ಉಸಿರು ಸಿಕ್ಕಂತಾಗಿದೆ. ಈಗಿನ ಅವಕಾಶಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ಬೆರಗುಗೊಳಿಸುವ ಅವಕಾಶಗಳು ಗೋಲ್ಡನ್ ಸ್ಟಾರ್ ಮುಂದಿದೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

    cinishodha goldenstarganesh kfi krishnampranayasakhi malavikanair sandalwood
    Share. Facebook Twitter LinkedIn WhatsApp Telegram Email
    Previous Articlegolden star ganesh: ಗಣೇಶ್ 42ನೇ ಚಿತ್ರಕ್ಕೆ ವಿಖ್ಯಾತ್ ಚಿತ್ರ ಸಾರಥ್ಯ!
    Next Article prashanth neel: ಬಹುನಿರೀಕ್ಷಿತ ಚಿತ್ರಕ್ಕೆ ಸಲಾರ್ ಅಡ್ಡಗಾಲು!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    09/12/2025

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.