Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಬಣ್ಣದ ಹೆಜ್ಜೆ»greeshma shridhar: ಅಪರೂಪದ ಪಾತ್ರಗಳೇ ಅರಸಿ ಬಂದಾಗ..!
    ಬಣ್ಣದ ಹೆಜ್ಜೆ

    greeshma shridhar: ಅಪರೂಪದ ಪಾತ್ರಗಳೇ ಅರಸಿ ಬಂದಾಗ..!

    By Santhosh Bagilagadde22/06/2023
    Facebook Twitter Telegram Email WhatsApp
    7f9acacc 214a 4e5d 8501 b26f03556bfa
    Share
    Facebook Twitter LinkedIn WhatsApp Email Telegram

    ಕೃಷ್ಣೇಗೌಡ ನಿರ್ದೇಶಿಸಿ, ನಿರ್ಮಾಣ ಮಾಡಿರುವ `ನಾನು ಕುಸುಮ’ (naanu kusuma) ಚಿತ್ರ ಜೂನ್ 30ರಂದು ಬಿಡುಗಡೆಗೊಳ್ಳಲಿದೆ. ಒಂದು ಭಿನ್ನ ಕಥಾನಕ ಬೇರೆಯದ್ದೇ ಧಾಟಿಯಲ್ಲಿ ದೃಷ್ಯರೂಪಕ್ಕಿಳಿದಾಗ ಅದರ ಬಗೆಗೊಂದು ಕುತೂಹಲ ಮೂಡಿಕೊಳ್ಳುವುದು ಸಹಜ. ಈವತ್ತಿಗೆ `ನಾನು ಕುಸುಮ’ (naanu kusuma) ಚಿತ್ರ ಈ ಮಟ್ಟದಲ್ಲಿ ನಿರಕ್ಷೆಮೂಡಿಸಿದೆಯೆಂದರೆ, ಅದಕೆ ಪ್ರಧಾನ ಕಾರಣ ಅದರ ಒಡಲಲ್ಲಿರುವ ವಿಶಿಷ್ಟ ಕಥೆ ಮತ್ತು ಅದು ರೂಪುಗೊಂಡಿರುವ ರೀತಿ. ಈಗಾಗಲೇ ಈ ಚಿತ್ರ ಒಂದಷ್ಟು ಪ್ರತಿಷ್ಟಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಒಂದಷ್ಟು ಮೌಲಿಕವಾದ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ನರ್ಸ್ ಒಬ್ಬಳ ಸುತ್ತ ಚಲಿಸುವ ಈ ಕಥಾನಕದಲ್ಲಿ ಪ್ರಧಾನ ಪಾತ್ರಕ್ಕೆ ಜೀವ ತುಂಬಿರುವವರು (greeshma shridhar)  ಗ್ರೀಷ್ಮ ಶ್ರೀಧರ್.

    3ba1b170 2c84 4c85 92a4 b3e6005c0547 1ಗ್ರೀಷ್ಮ ಶ್ರೀಧರ್ (greeshma shridhar) ಎಂಬ ಹೆಸರು ಕನ್ನಡ ಚಿತ್ರಪ್ರೇಮಿಗಳಿಗೆ ಅಪರಿಚಿತವೇನಲ್ಲ. ನಟಿಸಿರುವುದು ಕೆಲವೇಸಿನಿಮಾಗಳಲ್ಲಾದರೂ ಅವರ ಪಾತ್ರಗಳು ನೋಡುಗರ ಮನಸಿಗಿಳಿದಿವೆ. ಕೆಲವೊಮ್ಮೆ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸಿ, ಪ್ರಸಿದ್ಧಿ ಸಿಕ್ಕ ಮೇಲೂ ಕೆಲ ನಟಿಯರನ್ನು ಕಂಟೆಂಟೆಂಟ್ ಓರಿಯಂಟೆಡ್ ಪಾತ್ರಗಳ ಸೆಳೆತ ಆವರಿಸಿಕೊಳ್ಳುತ್ತದೆ. ಆದರೆ, ದಕ್ಕುವುದು ಕೆಲವೇ ಕೆಲವರಿಗೆ ಮಾತ್ರ. ಈ ನಿಟ್ಟಿನಲ್ಲಿ ನೋಡೋದಾದರೆ, ಗ್ರೀಷ್ಮ ನಿಜಕ್ಕೂ ಅದೃಷ್ಟವಂತೆ. ನಟಿಯಾಗಬೇಕೆಂಬ ತೀವ್ರ ಹಂಬಲದೊಂದಿಗೆ ಮುಂದುವರೆಯುತ್ತಿರುವ ಆಕೆಗೆ ಅಪರೂಪದ ಪಾತ್ರಗಳು ತಾನೇತಾನಾಗಿ ಒಲಿದು ಬರುತ್ತಿವೆ. ಹಾಗೆ ಸಿಕ್ಕ ಪಾತ್ರಕ್ಕಾಗಿ ತಯಾರಾಗುವ ರೀತಿ, ಅದಕ್ಕೆ ಜೀವ ತುಂಬುವ ಪರಿಯೇ ಮತ್ತೊಂದಷ್ಟು ಬೆರಗಿನ ಪಾತ್ರಗಳಿಗೆ ಗ್ರೀಷ್ಮಾರನ್ನು ಮುಖಾಮುಖಿಯಾಗಿಸಿವೆ.

    45765a67 4beb 4904 80ac f41b3b829629ಇದೀಗ ಕುಸುಮಳಾಗಿ, ಎಲ್ಲ ಹೆಣ್ಣು ಜೀವಗಳ ಒಳತೋಟಿಗಳ ಪ್ರಾತಿನಿಧಿಕ ಪಾತ್ರವೊಂದಕ್ಕೆ ಜೀವ ತುಂಬಿರುವವರು ಗ್ರೀಷ್ಮ. ಮೂಲತಃ ಬೆಂಗಳೂರು ಹುಡುಗಿ ಗ್ರೀಷ್ಮ ರಾಷ್ಟ್ರ ಮಟ್ಟದ ಸ್ವಿಮ್ಮರ್ ಕೂಡಾ ಹೌದು. ಸ್ವಿಮ್ಮಿಂಗಿನಲ್ಲಿ ಕಾಂತಾರ ಯಾತಿಯ ಸಪ್ತಮಿ ಗೌಡ ಇವರ ಜೊತೆಗಾತಿ. ವಕೀಲರು, ಶಿಕ್ಷಕ ವೃತ್ತಿಯವರೇ ತುಂಬಿದ ಸಂಪ್ರದಾಯಸ್ಥ ಕುಟುಂಬದವರಾದ ಗ್ರೀಷ್ಮಾಗೆ ಆರಂಭದಿಂದಲೂ ನಟನೆÀಯತ್ತ ಅತೀ ಆಸಕ್ತಿಯಿತ್ತು. ಸಾಮಾನ್ಯವಾಗಿ ಇಂಥಾ ಕುಟುಂಬಗಳ ಹೆಣ್ಣುಮಕ್ಕಳು ಇಂಥಾ ಕಲಾಸಕ್ತಿ ಹೊಂದಿದ್ದರೆ, ಹೆತ್ತವರ ಬೆಂಬಲ ಸಿಗುವುದು ತುಸು ತ್ರಾಸದಾಯಕ ಸಂಗತಿ. ಆ ವಿಚಾರದಲ್ಲಿ ಗ್ರೀಷ್ಮ ಅದೃಷ್ಟವಂತೆ. ಯಾಕೆಂದರೆ, ಪೋಷಕರು ಅವರಿಗೆ ತನ್ನಿಚ್ಛೆಯಂತೆ ಮುಂದುವರೆಯುವ ಸ್ವಾತಂತ್ರ್ಯ ಕೊಟ್ಟಿದ್ದರು. ಅದೆಲ್ಲವನ್ನೂ ಸರಿಕಟ್ಟಾಗಿ ಬಳಸಿಕೊಂಡು, ಒಂದೊಂದೇ ಹಂತಗಳನ್ನು ದಾಟಿ ಬಂದು ನಟಿಯಾಗಿ ನೆಲೆ ಕಂಡುಕೊಂಡ ಹಾದಿ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು.

    241951971 583865409704157 4640512683580041108 n ತನ್ನ ಅಭಿರುಚಿಗೆ ತಕ್ಕಂತೆ ಪರ್ಫಾರ್ಮಿಂಗ್ ಆಟ್ರ್ಸ್‍ನಲ್ಲಿ ಪದವಿ ಪಡೆದುಕೊಂಡಿದ್ದ ಗ್ರೀಷ್ಮ, ಮೇಜರ್ ಥಿಯೇಟ್ರ್ ಆಕ್ಟಿಂಗಿನಲ್ಲಿ ಡಿಪೊಮೋ ಕೂಡಾ ಮಾಡಿಕೊಂಡಿದ್ದಾರೆ. ಆ ಬಳಿಕ ನಾನಾ ಜಾಹೀರಾತುಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡು, ಆ ಮೂಲಕ ಒಂದಷ್ಟು ಭಾಷೆಗಳಲ್ಲಿ ಜನಪ್ರಿಯತೆ ಗಳಿಸಿಕೊಂಡ ಬಳಿಕ ಸಿನಿಮಾಗಳಲ್ಲಿ ನಟಿಸಬೇಕೆಂಬ ತುಡಿತ ಗ್ರೀಷ್ಮಾರನ್ನು ಕಾಡಲಾರಂಭಿಸಿತ್ತು. ಅದಕ್ಕೊಂದು ಭೂಮಿಕೆ ಒದಗಿಸಿಕೊಟ್ಟ ಸಿನಿಮಾ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ `ನಾತಿಚರಾಮಿ’. ಮಂಸೋರೇ ಫೇಸ್‍ಬುಕ್‍ನಲ್ಲಿ ಹಾಕಿದ್ದ ಪೋಸ್ಟ್ ಒಂದನ್ನು ಕಂಡು ಗ್ರೀಷ್ಮ ಆಡಿಷನ್ನಿಗೆ ಹೋಗಿದ್ದರು. ಬಳಿಕ ಸಣ್ಣ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದರು. ಅದು ಗ್ರೀಷ್ಮಾ ಪಾಲಿಗೆ ಮೊದಲ ಹೆಜ್ಜೆಯಾಗಿ ದಾಖಲಾಗುತ್ತದೆ.

    32bb43fa e7c8 4488 9c68 f4442e58be63 ಅದಾದ ಬಳಿಕ ನೋಡಿ ಸ್ವಾಮಿ ನಾನಿರೋದೇ ಹೀಗೆ ಚಿತ್ರಕ್ಕವ ತಯಾರಿ ನಡೆಸುತ್ತಿದ್ದ ರಿಷಿ, ಪ್ರಧಾನ ಪಾತ್ರಕ್ಕಾಗಿ ಗ್ರೀಷ್ಮರನ್ನು ಸಂಪರ್ಕಿಸಿದ್ದರು. ಅದರಲ್ಲಿನ ಮೂವರು ನಾಯಕಯರ ಪಕಿ ಒಬ್ಬಾಗಿ ಆಯ್ಕೆ ಮಾಡಿಕೊಂಡಿದ್ದರು. ಅದು ನಾಯಕಿಯಾಗಿ ಗ್ರೀಷ್ಮಾರದ್ದು ಪ್ರಥಮ ಹೆಜ್ಜೆ. ಅದಾದ ಬಳಿಕ ಒಲಿದು ಬಂದಿದ್ದು ಮಾಲ್ಗುಡಿ ಡೇಸ್ ಚಿತ್ರದ ಅವಕಾಶ. ಆ ಸಿನಿಆದಲಿ ಗ್ರೀಷ್ಮ ವಿಜಯ್ ರಾಘವೇಂದ್ರರ ಜೊತೆ ಅಭಿನಯಿಸಿದ್ದರು. ಗಮನೀಯ ಅಂಶವೆಂದರೆ, ಹೀಗೆ ತಾನೇತಾನಾಗಿ ಗ್ರೀಷ್ಮಾರನ್ನು ಅರಸಿ ಬಂದ ಅವಕಾಶಗಳೆಲ್ಲವೂ ಪ್ರಯೋಗಾತ್ಮಕ ಗುಣಗಳನ್ನು ಹೊಂದಿರುಂಥವೇ. ಸಿಕ್ಕ ಪಾತ್ರಗಳು ಕೂಡಾ ಭಿನ್ನ ಧಾಟಿಯವುಗಳೇ. ಒಂದು ಸಣ್ಣ ಅಧಿಯಲ್ಲಿ ದೊಡ್ಡನುಭವ ಗಿಟ್ಟಸಿಕೊಂಡ ಗ್ರೀಷ್ಮ ಪಾಲಿಗೆ ಅಚಾನಕ್ಕಾಗಿ ಒದಗಿ ಬಂದ ಅವಕಾಶ `ನಾನು ಕುಸುಮ’ ಚಿತ್ರದ್ದು.

    244705038 598123011611730 5088248465075236106 nನಾತಿ ಚರಾಮಿ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಗ್ರೀಷ್ಮ ನಟಿಸಿದ್ದರಲ್ಲಾ? ಆ ಚಿತ್ರದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದವರು ರಮೇಶ್. ಅದೊಂದು ದಿನ ಗ್ರೀಷ್ಮಾಗೆ ಕರೆ ಮಾಡಿದ್ದ ರಮೇಶ್ ಒಂದು ಚೆಂದದ ಪಾತ್ರ ಕಾಯುತ್ತಿರೋದರ ಸುಳಿವು ಕೊಟ್ಟಿದ್ದರು. ನಂತರ ರೀಡಿಂಗ್ ಪಡೆದುಕೊಂಡ ಗ್ರೀಷ್ಮಾಗೆ ಕಥೆ, ಪಾತ್ರಗಳೆಲ್ಲವೂ ಹಿಡಿಸಿದ್ದವು. ಆ ಕ್ಷಣದಲ್ಲಿ ಅವರ ಮುಂದೆ ಎರಡು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಕಾಶಗಳಿದ್ದವು. ಆ ಎರಡರಲ್ಲಿ ಗ್ರೀಷ್ಮಾಗೆ ತುಂಬಾ ಇಷ್ಟವಾಗಿದ್ದು ಕುಸಮಾ ಪಾತ್ರ. ಅದನ್ನೇ ಆಯ್ಕೆ ಮಾಡಿಕೊಂಡವರಿಗೆ ನಿರ್ದೇಶಕರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕಿತ್ತು. ಆ ನಂತರ ಆರಂಭವಾದದ್ದ ಕುಸುಮಾಳ ಪಾತ್ರವನ್ನು ಪರಿಣಾಮಕಾರಿಯಾಗಿ ಒಳಗಿಳಿಸಿಕೊಳ್ಳುವ ತುರ್ತಿನ ತಯಾರಿ!

    262186281 636775651079799 8848895709737752549 nಆ ಪಾತ್ರ ಗ್ರೀಷ್ಮಾ ಪಾಲಿಗೆ ಅಪರಿಚಿತವಾಗಿದ್ದ ಅನುಭವಗಳ ಕಟಾಂಜನದಂತಿತ್ತು. ಅದೊಂದು ಪಾತ್ರ ಮಾತ್ರವೇ ಆಗಿರದೆ, ಹೆಣ್ಣುಮಕ್ಕಳೆಲ್ಲರ ತವಕ, ತಲ್ಲಣಗಳ ಪ್ರತಿನಿಧಿಯಂತಿತ್ತು. ಆ ನರ್ಸ್ ಪಾತ್ರವನ್ನು ಆವಾಹಿಸಿಕೊಳ್ಳುವ ಸಲುವಾಗಿಯೇ ಗ್ರೀಷ್ಮ, ಒಂದು ವಾರಗಳ ಕಾಲ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುತ್ತಾ, ಎಲವನ್ನೂ ಸೂಕ್ಷ್ಮವಾಗಿ ಗಮನಿಸಲಾರಂಭಿಸಿದ್ದರು. ನಂತರ ರವೀಂದ್ರ ಕಲಾಕ್ಷೇತ್ರದ ಬಾಜಿನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೂ ಭೇಟಿ ಕೊಟ್ಟು ಆ ವಾತಾವರಣ, ನರ್ಸ್, ಡಾಕ್ಟರುಗಳನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದ್ದರು. ಆ ನಂತರ ಕುಸುಮ ಎಂಬ ಪಾತ್ರದ ಒಂದೊಂದೇ ಪಕಳೆಗಳನ್ನು ಮನಸಿಗಾನಿಸಿಕೊಂಡು ಅಣಿಗೊಂಡಿದ್ದ ಗ್ರೀಷ್ಮಾಗೀಗ ಆ ಪಾತ್ರಕ್ಕೆ ಶಕ್ತಿ ಮೀರಿ ನ್ಯಾಯ ಸಲ್ಲಿಸಿದ ತೃಪ್ತಿ ಇದೆ.

    292946662 751587892872752 1388194405716164991 nಕುಸುಮ ಎಂಬ ಹೆಸರಲ್ಲಿಯೂ ವಿಶೇಷತೆಯಿದೆ. ಅದನ್ನು ಈ ಕಥೆಗೆ ಪೂರಕವಾಗಿ ಹೂವಿನ ರೂಪಕವಾಗಿ ಬಳಸಿಕೊಳ್ಳಲಾಗಿದೆ. ಈ ಸಮಾಜದಲ್ಲಿ ಹೂವನ್ನು ದೂರದಿಂದಲೇ ನೋಡಿ ಮುದಗೊಳ್ಳುವವರಿದ್ದಾರೆ. ಅದನ್ನು ನೀರೆರೆದು ಪೋಶಿಸುವವರು, ಜತನಿದ ಕಾಪಾಡುವವರೂ ಇದ್ದಾರೆ. ಅದೇ ರೀತಿ ಅದನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹೊಸಕಿ ಹಾಕುವ ರಕ್ಕಸರಿದ್ದಾರೆ, ಬಳಸಿ ಬಿಸಾಡುವ ವಿಷಜಂತುಗಳೂ ಈ ಸಮಾಜದಲ್ಲಿ ಪಿತಗುಡುತ್ತಿವೆ. ಇಂಥಾ ವಾತಾವರಣದ ಸಮಯದ ಬೊಂಬೆಯಂಥಾ ಪಾತ್ರ ಕುಸುಮಾ. ಅಮ್ಮನನ್ನು ಕಳೆದುಕೊಂಡು, ಅಪ್ಪನನ್ನೇ ಜಗತ್ತೆಂದುಕೊಂಡು ಬದುಕೋ ಪಾತ್ರ ದಿನನಿತ್ಯ ಒಂದೊಂದು ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತೆ. ನೊಂದುಕೊಳ್ಳುತ್ತೆ. ಅದೆಲ್ಲ ಭಾವಗಳನ್ನೂ ಜೀವತುಂಬಿ ನಟಿಸಿದ ತುಂಬು ಖುಷಿ ಗ್ರೀಷ್ಮಾರಲ್ಲಿದೆ.

    dd3ca51c 2e4e 461b 8b0c 6cc981dfc7d6 ಈಗಾಗಲೇ ಟ್ರೈಲರ್ ಮೂಲಕ ಕುಸುಮಾಳ ಪಾತ್ರದ ತೀವ್ರತೆ ಏನೆಂಬ ವಿಚಾರ ಜಾಹೀರಾಗಿದೆ. ಗ್ರೀಷ್ಮಾ ನಿರ್ವಹಿಸಿರುವ ಕುಸುಮ ಎಂಬ ಪಾತ್ರದ ಚಹರೆಗಳಂತೂ ಸಿನಿಮಾಸಕ್ತರನ್ನು ಬಹುವಾಗಿ ಕಾಡಿವೆ. ಬಹುಶಃ ಈ ಪಾತ್ರದ ಮೂಲಕ ಗ್ರೀಷ್ಮಾ ವೃತ್ತಿ ಬದುಕು ಮತ್ತೊಂದು ಎತ್ತರದತ್ತ ಪಥ ಬದಲಿಸಬಹುದು. ಸದ್ಯಕ್ಕು ನಾನು ಕುಸುಮ ಚಿತ್ರದ ಬೆನ್ನಲ್ಲಿಯೇ, ಗ್ರೀಷ್ಮ ನಟಿಸಿರುವ ಮತ್ತೊಂದಷ್ಟು ಸಿನಿಮಾಗಳು ಬಿಡುಗಡೆಯ ತಯಾರಿಯಲ್ಲಿವೆ. ಸೈತಾನ್, ಪ್ರಾಜೆಕ್ಟ್ ಶರಪಂಜರ ಮುಂತಾದ ಚಿತ್ರಗಳಲ್ಲಿಯೂ ಗ್ರೀಷ್ಮ ಅಭಿನಯಿಸಿದ್ದಾರೆ. ತೃಪ್ತಿ ಕುಲಕರ್ಣಿ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಥರ್ಡ್ ವ್ಹೀಲ್ ಚಿತ್ರದಲ್ಲವರು ಕನ್ನಡತಿ ಖಾತಿಯ ರಂಜನಿ ರಾಘನ್ ಜೊತೆ ನಟಿಸಿದ್ದಾರೆ. ಈ ಎಲ್ಲದರಲ್ಲಿಯೂ ಗ್ರೀಷ್ಮಾ ಪಾತ್ರ ವಿಶೇಷವಾಗಿಯೇ ಇರಲಿದೆಯಂತೆ…

    #actress bannadahejje cinishodha greeshma greeshmasridhar kfi lifestory naanukusuma sandalwood
    Share. Facebook Twitter LinkedIn WhatsApp Telegram Email
    Previous Articledaisy bopanna: ಆಕೆಯ ಗಾಳಿಪಟ ಹಾರಾಡಲೇ ಇಲ್ಲ!
    Next Article rishabh shetty: ಬಿಜೆಪಿ ಪಾಳೆಯದಲ್ಲಿ ತಣ್ಣಗೆ ನಡೆಯುತ್ತಿದೆ ಕಸರತ್ತು!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    06/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.