ಗಾಗಲೇ ಗಡಿಗಳ ಮಿತಿ ಮೀರಿಕೊಂಡು ವಿಶ್ವಾದ್ಯಂತ ಸದ್ದು ಮಾಡಿರುವ ಚಿತ್ರ `ಪಿಂಕಿ ಎಲ್ಲಿ’. (pinki elli) ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಅಬ್ಬರ, ಸಿದ್ಧಸೂತ್ರಗಳ ಆಚೀಚೆ ಹೊರಳಲೊಲ್ಲದ ಕಮರ್ಶಿಯಲ್ ಕಂಟೆಂಟುಗಳ ಗೊಬ್ಬರಗಳ ಭರಾಟೆಯಲ್ಲಿ ಆಗಾಗ ಪಿಂಕಿ ಎಲ್ಲಿಯಂಥಾ ಸಿನಿಮಾಗಳ ತಂಗಾಳಿಯಂತೆ ಸುಳಿಯುತ್ತವೆ. ಸೀಮಿತ ಮಿತಿಗಳಾಚೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅದು ಯಾವುದೇ ಸಿನಿಮಾ ರಂಗಗಳ ಚಲನೆಗೊಂದು ಹೊಸಾ ಓಘ ಕೊಡುವ ಪ್ರಕ್ರಿಯೆ. (kannadafilmindusry) ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಅಂಥಾ ಹೊಸಾ ಹರಿವಿಗೆ ಕಾರಣವಾದ ಒಂದಷ್ಟು ಕ್ರಿಯಾಶೀಲ ಮನಸುಗಳಿವೆ. ಆ ಸಾಲಿನಲ್ಲಿ ಪಿಂಕಿ ಎಲ್ಲಿ (pinki elli)  ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು (prithvi konanur) ನಿಸ್ಸಂದೇಹವಾಗಿಯೂ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ…

ಬಹುಶಃ ಪಿಂಕಿ ಎಲ್ಲಿ (pinki elli) ಎಂಬೊಂದು ಚಿತ್ರ ಈ ಪರಿಯಾಗಿ ಸುದ್ದಿ ಮಾಡುತ್ತದೆ, ಕನ್ನಡ ಚಿತ್ರರಂಗದ ಘನತೆಯನ್ನು ವದೇಶಗಳಲ್ಲಿಯೂ ಫಳಗುಡುವಂತೆ ಮಾಡುತ್ತದೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಕ್ಕಿಲ್ಲ. ಆದರೆ, ಅತ್ಯಂತ ಆಸ್ಥೆಯಿಂದ ಮಾಡಿದ ಕೆಲಸ ನಿರೀಕ್ಷೆ ಮೀರಿ ಫಲ ಕೊಟ್ಟೇ ಕೊಡುತ್ತದೆಂಬ ಮಾತಿಗೆ ಪಿಂಕಿ ಎಲ್ಲಿ ಚಿತ್ರ ತಾಜಾ ಉದಾಹರಣೆಯಾಗಿ ನಿಲ್ಲುತ್ತದೆ. ಅದರ ಸಂಪೂರ್ಣ ಕೆಡಿಟ್ಟು ನಿರ್ದಶಕ ಪೃಥ್ವಿ ಕೋಣನೂರರಿಗೆ ಸಲ್ಲುತ್ತದೆ. ಹಾಗಾದರೆ, ಇಂಥಾದ್ದೊಂದು ವಾಸ್ತಿಕ ದೃಷ್ಯ ಕಾವ್ಯ ಹುಟ್ಟು ಪಡೆದದ್ದು ಹೇಗೆ? ಅದರ ತಯಾರಿಗಳು ಹೇಗಿದ್ದವು? ಈ ಭಿನ್ನ ಪಥದ ಯಾನದ ಶುರುವಾತು ಹೇಗಿತ್ತು? ಇಂಥಾ ನಾನಾ ಪ್ರಶ್ನೆಗಳಿಗೆಲ್ಲ ಖುದ್ದ ಪೃಥ್ವಿ ಕೋಣನೂರು (prithvi konanur) ಉತ್ತರ ನೀಡಿದ್ದಾರೆ. ಅವರು `ಸಿನಿ ಶೋಧದೊಂದಿಗೆ ಮನಬಿಚ್ಚಿ ಹಂಚಿಕೊಂಡ ಸಂಗತಿಗಳು ಇಲ್ಲಿವೆ…ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆ, ಸಾಹಿತ್ಯಗಳತ್ತ ಆಸಕ್ತಿ ಹೊಂದಿದ್ದ ಪೃಥ್ವಿ, ಆ ನಂತರದಲ್ಲಿ ಬದುಕಿನ ಅನಿವಾರ್ಯತೆಗೆ ಸಿಕ್ಕು ಐಟಿ ವಲಯದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಒಂದು ಮಟ್ಟಿಗೆ ತೃಪ್ತವೆಂಬಂಥಾ ಕೆಲಸ, ಕೈ ತುಂಬಾ ಸಂಬಳ… ಒಟ್ಟಾರೆ ಅದು ಬದುಕಿನಲ್ಲಿ ಸೆಟಲ್ ಆಗೋದೊಂದೇ ಮುಖ್ಯ ಎಂಬಂಥಾ ಮನಃಸ್ಥಿತಿಯವರಿಗದು ಅಕ್ಷರಶಃ ಕಂಫರ್ಟ್ ಜೋನ್. ಆದರೆ, ಕ್ರಿಯಾಶೀಲ ಮನಸುಗಳು ಅಂಥಾ ಸುರಕ್ಷಿತ ವಲಯದಲ್ಲಿ ಹೆಚ್ಚು ಕಾಲ ಉಸಿರಾಡೋದು ಕಷ್ಟ. ಅಂಥಾ ತುಮುಲಗಳನ್ನ ಕಂಡುಂಡ ಬಳಿಕ ಪೃಥ್ವಿ ಗಟ್ಟಿ ಮನಸು ಮಾಡಿ ತಮ್ಮ ಆಸಕ್ತಿಯ ಕ್ಷೇತ್ರವಾದ ಸಿನಿಮಾದತ್ತ ಹೊರಳಿಕೊಂಡಿದ್ದರು.

ಅವರೊಳಗಿದ್ದದ್ದು ಸಾದಾ ಕನಸುಗಳಾಗಿದ್ದರೆ ಗಾಂಧಿನಗರದ ಜಂಗುಳಿಯ ನಡುವೆ ಕಳೆದು ಹೋಗಿ ಬಿಡುತ್ತಿದ್ದರೇನೋ… ಆ ಎಚ್ಚರದಿದಲೇ ಬೇರೆ ದಾರಿಯತ್ತ ಹೊರಳಿಕೊಂಡಿದ್ದ ಪೃಥ್ವಿ `ಅಲೆಗಳು’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಮೂಲಕ ಭರಪೂರ ಮೆಚ್ಚುಗೆ ಗಳಿಸಿಕೊಂಡು `ರೈಲ್ವೇ ಚಿಲ್ಡ್ರನ್’ ಎಂಬ ಮತ್ತೊಂದು ಸಿನಿಮಾವನ್ನು ಕೂಡಾ ನಿರ್ದೇಶನ ಮಾಡಿದ್ದರು. ಅದರ ಕಥೆ, ಚಿತ್ರಕಥೆಗಳೆಲ್ಲವೂ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದವು. ಆ ಮೂಲಕವೇ ಪೃಥ್ವಿ ಅಪರೂಪದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಹೀಗೆ ಒಂದರ ಬೆನ್ನಿಗೊಂದರಂತೆ ಚೆಂದದ ಸಿನಿಮಾ ನಿರ್ದೇಶನ ಮಾಡಿದ್ದ ಪೃಥ್ವಿ ಪಾಲಿಗೆ ಮೂರನೇ ಹೆಜ್ಜೆ ಅಕ್ಷರಶಃ ಸವಾಲಿನದ್ದಾಗಿತ್ತು.

ಯಾಕೆಂದರೆ, ಹೀಗೆ ಆರಂಭದಿಂದಲೂ ಗಮನ ಸೆಳೆದ ನಿದೇಶಕರಪಲಿಗೆ ಹೊಸಾ ಯಾನವೆಂಬುದು ಬಲವಾದ ಜವಾಬ್ದಾರಿ ಹೊgರಿಸುತ್ತದೆ. ಆ ಎಚ್ಚರವನ್ನು ಎದೆಯಲಿಟ್ಟುಕೊಂಡೇ ಮತ್ತೊಂದು ಭಿನ್ನ ಕಥಾನಕದ ತಲಾಶಿನಲ್ಲಿರುವಾಗಲೇ ಪೃಥ್ವಿ ಕಣ್ಣಿಗೆ ವಾಸ್ತವಿಕವಾಗಿ ನಡೆದಿದ್ದೊಂದು ಘಟನೆ ಬಿದ್ದಿತ್ತು. ಸರಿಸುಮಾರು 2007-08ನೇ ಸಾಲಿನಲ್ಲಿ ನಡೆದಿದ್ದೊಂದು ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಜನ ಸಾಮಾನ್ಯರು ಹೀಗೂ ನಡೆಯಲು ಸಾಧ್ಯವೇ ಎಂಬಂತೆ ದಿಗ್ಭ್ರಾಂತರಾಗಿದ್ದರು. ಹಾಗಂತ ಆ ಸುದ್ದಿನ್ನಷ್ಟೇ ಇಟ್ಟುಕೊಂಡು ಸಿನಿಮಾ ರೂಪಿಸಲು ಸಾಧ್ಯವಿರಲಿಲ್. ಅದರ ಹಿಂಚುಮುಂಚಿನ ನಾನಾ ಪದರುಗಳನ್ನು ಕೆದಕಿ, ಒಂದಷ್ಟು ಫೀಲ್ಡ್ ವರ್ಕ್, ರಿಸರ್ಚ್ ನಡೆಸಬೇಕಿತ್ತು.

ಸಮಯ ಸಿಕ್ಕಾಗೆಲ್ಲ ಆ ಕಥೆಯನ್ನು ಕಾಡಿಸಿಕೊಂಡು, ತಯಾರಿ ನಡೆಸಿದ್ದ ಪೃಥ್ವಿ ವರ್ಷಾಂತರಗಳ ಕಲದ ಶ್ರಮ ಬಳಿಕ ಕಡೆಗೂ ಅದಕ್ಕೊಂದು ಸಿನಿಮಾ ರೂಪ ಕೊಟ್ಟಿದ್ದರು. ಹಾಗೆ ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದವರಿಗೆ ನಿರ್ಮಾಣ ಮಾಡಲು ಯಾರು ಮುಂದಾಗುತ್ತಾರೆಂಬ ಪ್ರಶ್ನೆ ಎದರಾಗಿತ್ತು. ಈ ಸಂಬಂಧವಾಗಿ ಕೃಷ್ಣೇಗೌಡರ ಬಳಿ ಮಾತಾಡುತ್ತಾ, ನಿರ್ಮಪಕರು ಯಾರಾದರೂ ಇದ್ದರೆ ತಿಳಿಸಿ ಎಂಬ ಪ್ರ್ತಾಪವಿಡುತ್ತಲೇ, ಕೃಷ್ಣೇಗೌಡರು ಬೇರೇನೂ ಯೋಚಿಸದೆ ಏಕಾಏಕಿ ತಾವೇ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಆ ಘಳಿಗೆಯಲ್ಲಿಯೇ ಅಮೂರ್ಥ ಕಥೆಯೊಂದನ್ನು ಒಡಲಲ್ಲಿಟ್ಟುಕೊಂಡಿದ್ದ ಪಿಂಕಿಗೆ ಉಸಿರು ಬಂದಂತಾಗಿತ್ತು!

ವಿಶೇಷವೆಂದರೆ, ಕೃಷ್ಣೇಗೌಡರುಪೂರ್ತಿ ಕಥೆಯನ್ನೇ ಕೇಳದೆ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರು. ಆ ಹಠಾತ್ ನಿರ್ಧಾರದ ಹಿಂದಿದ್ದದ್ದು ಪೃಥ್ವಿ ಮೇಲಿದ್ದ ನಂಬಿಕೆ. ಯಾಕೆಂದರೆ, ಅದಾಗಲೇ ಕೃಷ್ಣೇಗೌಡರು ಪೃಥ್ವಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರೈಲ್ವೇ ಚಿಲ್ಡ್ರನ್ ಚಿತ್ರವನ್ನು ನೋಡಿದ್ದರು. ಬಹುವಾಗಿ ಮೆಚ್ಚಿಕೊಂಡಿದ್ದರು. ಅಂಥಾ ಸಿನಿಮಾ ಮಾಡಿದ್ದ ಪೃಥ್ವಿ ಈ ಸಿನಿಮಾವನ್ನು ಕೂಡಾ ಚೆಂದಗೆ ಮಾಡುತ್ತಾರೆಂಬ ನಂಬಿಕೆಯೇ ಅವರನ್ನು ಅಂಥಾದ್ದೊಂದು ನಿರ್ಧಾರ ತಳೆಯುವಂತೆ ಮಾಡಿತ್ತು. ಕಡೆಗೂ ಪಿಂಕಿ ಎಲ್ಲಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ವ್ಯಾವಹಾರಿಕವಾಗಿಯೂ ಗಮನ ಸೆಳೆಯುತ್ತಲೇ, ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲು ಅಣಿಗೊಂಡಿದೆ. ಇದೆಲ್ಲವೂ ಸಾಧ್ಯವಾದ ತೃಪ್ತ ಭಾವವೊಂದೀಗ ನಿರ್ದೇಶಕರಲ್ಲಿದೆ.

ಪೃಥ್ವಿ ಪಾಲಿಗೆ ತಾರಾಗಣದ ಆಯ್ಕೆ ಕಾರ್ಯವೂ ಸವಾಲಿನದ್ದಾಗಿತ್ತು. ಇದರ ಪ್ರಧಾನ ಪಾತ್ರದಲ್ಲಿ ಯಾರು ನಟಿಸಬಹುದೆಂಬ ಆಲೋಚನೆಯಲ್ಲಿದ್ದಾಗ ಅವರ ಮನಸಲ್ಲಿ ಮೂಡಿದ್ದ ಮೊದಲ ಚಿತ್ರ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ. ಅದಕ್ಕೆ ಅಕ್ಷತಾ ಕೂಡಾ ತುಂಬು ಸಂತಸದಿಂದಲೇ ಒಪ್ಪಿಗೆ ಸೂಚಿಸಿದ್ದರು. ಇನ್ನುಳಿದಕೆಲ ಪಾತ್ರಗಳಿಗೆ ಪಳಗಿದ ಕಲಾವಿದರನ್ನು ಹಾಕಿಕೊಂಡರೆ ಅದರ ಅಸಲೀ ಅಂತಃಸತ್ವ ಮುಕ್ಕಾಗುತ್ತದೆಂಬ ಭಯ ನಿರ್ದೇಶಕರಿಗಿತ್ತು. ಕಡೆಗೂ ಸ್ಲಮ್ಮಿನಲ್ಲಿ ವಾಸಿಸುವ ಮಹಿಳೆಯರನ್ನು ಒಪ್ಪಿಸಿ ನಟಿಸುವಂತೆ ಮಾಡಿದ್ದರು. ಈ ಕಾರಣದಿಂದಲೇ ನಮ್ಮ ನಡುವೆಯೇ ಕಥೆ ಕದಲುತ್ತಿದೆಯೇನೋ ಎಂಬಂಥಾ ಫೀಲ್ ಮೂಡಿಸುವಷ್ಟು ಸಹಜವಾಗಿ ಈ ಸಿನಿಮಾ ಮೂಡಿ ಬಂದಿದೆಯೆಂಬ ಖುಷಿ ಪೃಥ್ವಿಗಿದೆ.

ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ತಾನು ಭಿನ್ನ ಎಂಬುದನ್ನು ಸಾಬೀತು ಪಡಿಸಿಕೊಂಡು ಬರುತ್ತಿರುವ ಪೃಥ್ವಿ ಕೋಣನೂರು ನಿಜಕ್ಕೂ ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕ. ಹೊಸತೇನೋ ಸೃಷ್ಟಿಸಬೇಕೆಂಬ ತಪನೆಯೊಂದನ್ನು ಸದಾ ಕಾಪಿಟ್ಟುಕೊಂಡಿರುವ ಪೃಥ್ವಿ ರಚಿಸಿದ್ದ ಮೊದಲ ಸ್ಕ್ರಿಫ್ಟ್ ಹಾಲಿವುಡ್ ಸಿನಿಮಾಗೆ ಆಪ್ಷನ್ ಆಗಿತ್ತು. ಅದು ಓರ್ವ ನಿರ್ದೇಶಕನಾಗಿಪೃವಿಯ ಅಸಲೀ ಕಸುವೆಂಥಾದ್ದು ಎಂಬುದಕ್ಕೊಂದು ಉದಾಹರಣೆ. ಇಂಥಾ ಪೃಥ್ವಿ ಪಿಂಕಿ ಎಲ್ಲಿಯ ಜೊತೆ ಜೊತೆಗೇ ಹದಿನಾರೆಂಟು ಎಂಬ ಮತ್ತೊಂದು ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಅದೂ ಕೂಡಾ ಅಂತಾರಾಷ್ಟರೀಯ ಮಟ್ಟದಲ್ಲಿ ಹವಾ ಸೃಷ್ಟಿಸಲು ಸಜ್ಜಾಗಿದೆ. ಕಮರ್ಶಿಯಲ್, ಆರ್ಟ್ ಮೂವಿ ಸೇರಿದಂತೆ ಪ್ರಾಕಾರ ಯಾವುದೇ ಇದ್ದರೂ ಅಲ್ಲಿ ಹೊಸತನದ ಹಾಜರಿ ಇರಬೇಕೆಂಬುದು ಪೃಥ್ವಿ ತುಡಿತ. ಅವರ ಕಡೆಯಿಂದ ಇನ್ನಷ್ಟು ಚೆಂದ ಸಿನಿಮಾಗಳು ಹೊರ ಬರಲೆಂಬುದು ನಮ್ಮ ಹಾರೈಕೆ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!