ನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ದುನಿಯಾ ಸೂರಿ. ರಾ ಸನ್ನಿವೇಶಗಳ ಮೂಲಕವೇ ನೋಡುಗರ ಮನಸನ್ನು ಆದ್ರ್ರಗೊಳಿಸಬಲ್ಲ ಛಾತಿಯಿಂದಲೇ ಸೂರಿ ಇದುವರೆಗೂ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಅವರು ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿರೋ ಬ್ಯಾ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಆರಂಭಿಸಿದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಸೂರಿ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದತ್ತ ಅವರು ಹೊರಳಿಕೊಳ್ಳೋದಿಲ್ಲ. ಆದರೆ, ಸಣ್ಣದೊಂದು ಗ್ಯಾಪು ಸಿಕ್ಕರೂ ಹೊಸಾ ದೃಷಯ ಕಾವ್ಯವೊಂದಕ್ಕೆ ಅಣಿಗೊಂಡು ಬಿಡೋದು ಸೂರಿ ಸ್ಪೆಷಾಲಿಟಿ. ಇದೀಗ ಅವರು ಅದಕ್ಕೆ ತಕ್ಕುದಾಗಿಯೇ ಹೊಸಾ ಚಿತ್ರಕ್ಕೆ ತಯಾರಾಗಿದ್ದಾರೆ!


ಸೂರಿ ಬ್ಯಾಡ್ ಮ್ಯಾನರ್ಸ್ ನಂತರದಲ್ಲಿ ನಿರ್ದೇಶನ ಮಾಡಲಿರೋ ಈ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡೋದು ಪಕ್ಕಾ ಆದಂತಿದೆ. ಬ್ಯಾಡ್ ಮ್ಯಾನರ್ಸ್ ಬ್ಯುಸಿಯ ನಡುವೆಯೇ ಸೂರಿ ಜಯಣ್ಣನೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೀಗ ಅಧಿಕೃತವಾಗಿಯೇ ಚಾಲನೆಯೂ ಸಿಕ್ಕಂತಾಗಿದೆ. ಅಂದಹಾಗೆ, ಈ ಹೊಸಾ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ನಟಿಸಲಿದ್ದಾನಂತೆ. ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಹುಡುಗ ವಿರಾಟ್. ಅಪ್ಪಟ ನಟನಾಗಿ ನೆಲೆ ಕಂಡುಕೊಳ್ಳುವ ಕಸುವು ಹೊಂದಿರುವ ವಿರಾಟ್ ಸೂರಿ ಕಾಂಬಿನೇಷನ್ನಿನ ಚಿತ್ರದ ಬಗ್ಗೆ ಥ್ರಿಲ್ ಆಗಿದ್ದಾನೆ. ಸದ್ಯಕ್ಕೆ ತಯಾರಿ ಅಂತ ನಡೆದಿರೋದಷ್ಟೇ. ನಾಯಕಿ, ತಾರಾಗಣದ ಆಯ್ಕೆಯೆಲ್ಲವೂ ಮುಂಗಾರಿನ ಜೊತೆ ಜೊತೆಗೇ ಆರಂಭವಾಗುವ ಸಾಧ್ಯತೆಗಳಿದ್ದಾವೆ!


ಹಾಗೆ ನೋಡಿದರೆ, ಸೂರಿಯನ್ನು ಹೊರತಾಗಿಸಿ ನೋಡಿದರೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲೇನೂ ನಿರೀಕ್ಷೆ ಮೂಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಈ ಹಿಂದಿನ ಚಿತ್ರಗಳಲ್ಲಿ ಅಂಬಿ ಪುತ್ರ ಅಭಿಷೇಕ್ ಅಂಥಾದ್ದೊಂದು ನಿರೀಕ್ಷೆ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಅಷ್ಟಕ್ಕೂ ಅಂಬಿ ಪುತ್ರನೆಂಬ ಲೇಬಲ್ಲಿನ ಹೊರತಾಗಿ ಅಭಿಷೇಕ್‍ಗೆ ಬೇರ್ಯಾವ ಬಲವೂ ಇಲ್ಲ. ನಟನೆಯ ಗಂಧಗಾಳಿಯಂತೂ ಸೂರಿಯ ದಯೆಯಿಂದ ಮಾತ್ರವೇ ಆತನಿಗೆ ದಕ್ಕಬೇಕಷ್ಟೇ. ಫಾರಂ ಕೋಳಿಯಂತಿರೋ ಅಭಿಷೇಕನನ್ನು ಸೂರಿ ಅದು ಹೇಗೆ ಗುಮ್ಮೋ ಗೂಳಿಯಾಗಿಸಿದ್ದಾರೆಂಬ ಒಂದೇ ಒಂದು ಕುತೂಹಲ ಸದ್ಯ ಪ್ರೇಕ್ಷಕರಲ್ಲಿದೆ. ಬ್ಯಾಡ್ ಮ್ಯಾನರ್ಸ್ ಮೇ ಅಂತ್ಯದಲ್ಲಿ ಬಿಡುಗಡೆಗೊಂಡ ನಂತರದಲ್ಲಿ ಸೂರಿ ಗರಡಿಯಲ್ಲೊಂದು ವಿರಾಟ ಪರ್ವ ಶುರುವಾಗೋದಂತೂ ಸತ್ಯ!

About The Author