ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೆ ಪ್ರಚಾರದ ಭರಾಟೆಗಳಿಲ್ಲದೆ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಸೀಟ್ ಎಡ್ಜ್ ಬಿಡುಗಡೆಗೊಳ್ಳುವ ಕಡೇ ಘಳಿಗೆಯಲ್ಲಿ ಒಂದಷ್ಟು ಕುತೂಹಲ ಮೂಡಿಸಿರೋದರ ಹಿಂದೆ ಹಾಡುಗಳ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಸೀಟ್ ಎಡ್ಜ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಆಕಾಶ್ ಪರ್ವ ತಮ್ಮ ಕೆಲಸದಲ್ಲಿ ಗೆದ್ದಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡುಗಳೆಲ್ಲವೂ ಒಂದೊಂದು ತೆರನಾಗಿ ಕೇಳುಗರನ್ನು ಸೆಳೆದುಕೊಂಡಿವೆ.
ಈ ಸಿನಿಮಾದ ಎರಡು ಹಾಡುಗಳಂತೂ ಬಿಡುಗಡೆಯಾದ ವಾರದೊಪ್ಪತ್ತಿನಲ್ಲಿಕಯೇ ವ್ಯಾಪಕವಾಗಿ ಹರಿದಾಡಿತ್ತು. ಇದೀಗ ಅವೆರಡೂ ಹಾಡುಗಳು ಹಿಟ್ ಲಿಸ್ಟಿಗೆ ಸೇರಿಕೊಂಡಿವೆ. ಹಾಗೆ ಹಿಟ್ ಆದ ಹಾಡುಗಳಲ್ಲಿ ಬಂಗಾರದ ಗೊಂಬೆ ಎಂಬ ಹಾಡೂ ಸೇರಿಕೊಂಡಿದೆ. ಅದು ಸರೆಗಮಪ ಖ್ಯಾತಿಯ ಪಂಜಾಬಿ ಗಾಯಕ ಜಸ್ ಕರಣ್ ಸಿಂಗ್ ಹಾಡಿದ್ದರು. ಸದರಿ ಹಾಡಿಗಾಗಿ ಜಸ್ ಕರಣ್ ಸಿಂಗ್ ಅವರಿಗೆ ಚಿತ್ತಾರ ಅವಾರ್ಡ್ ಲಭಿಸಿದೆ. ವಿಶೇಷವೆಂದರೆ, ಆ ಪ್ರಶಸ್ತಿಯನ್ನು ಜಸ್ಕರಣ್ ಸಿಂಗ್ ಸಂಗೀತ ನಿರ್ದೇಸಕ ಆಕಾಶ್ ಪರ್ವ ಅವರಿಗೆ ಸಮರ್ಪಿಸಿದ್ದಾರೆ. ಸಂಗೀತ ನಿರ್ದೇಶಕನಾಗಿ ದೊಡ್ಡ ಎತ್ತರಕ್ಕೇರಬೇಕೆಂಬ ಕನಸು ಹೊಂದಿದ್ದ ಆಕಾಶ್ ಪಾಲಿಗೆ ಸೀಟ್ ಎಡ್ಜ್ ಹಾಡುಗಳು ಹೊಸಾ ಹುರುಪು ತುಂಬಿರೋದಂತೂ ಸತ್ಯ.
Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!
ಹೀಗೆ ಸೀಟ್ ಎಡ್ಜ್ ಚಿತ್ರದ ಸಂಗೀತ ನಿರ್ದೇಶಕರಾಗಿ ಸದ್ದು ಮಾಡುತ್ತಿರುವ ಆಕಾಶ್ ಪರ್ವ ಸರೆಗಮಪ ರಿಯಾಲಿಟಿ ಶೋ ವೇದಿಕೆಯಲ್ಲಿ ಕೀ ಬೋರ್ಡ್ ಪ್ಲೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು. ಸರೆಗಮಪದ ಒಂದಷ್ಟು ಸರಣಿಯಲ್ಲಿ ಕೀಬೋರ್ಡ್ ನುಡಿಕಸುತ್ತಲೇ ಸಂಗೀತ ಕ್ಷೇತ್ರದ ದಿಗ್ಗಜರನೇಕರ ಸಂಪರ್ಕಕ್ಕೆ ಬಂದಿದ್ದರು. ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದರು. ಆ ಬಳಿಕ ಸ್ವತಂತ್ರವಾಗಿ ಯಾನ ಶುರುವಿಟ್ಟುಕೊಂಡಿದ್ದ ಆಕಾಶ್ ಪರ್ವ, ವಿಜಯ ಪ್ರಕಾಶ್, ಎಸ್ಪಿಬಿ ಮುಂತಾದ ಗಾಯಕರ ಕಾರ್ಯಕ್ರಮಗಳಿಗೂ ಕೀಬೋರ್ಡ್ ಪ್ಲೇಯರ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದ್ದರು. ಹೀಗೆ ಒಂದು ದಿಕ್ಕಿನಲ್ಲಿ ಸಂಗೀತ ಯಾನ ಸಾಗುತ್ತಲೇ ಆಕಾಶ್ ಸ್ವತಂತ್ರ ಸಂಗೀತ ನಿರ್ದೇಶಕನಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದರು.
ಈ ಹಾದಿಯಲ್ಲಿ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದ ಆಕಾಶ್ ಅವರಿಗೆ ನೆನಪಿರಲಿ ಪ್ರೇಮ್ ನಾಯಕನಾಗಿ ನಟಿಸಿದ್ದ ಅಪ್ಪ ಐ ಲವ್ಯೂ ಚಿತ್ರಕ್ಕೆ ಸಂಗೀತ ನಿರ್ದೇಸನ ಮಾಡುವ ಅವಕಾಶ ಕೂಡಿ ಬಂದಿತ್ತು. ಅದರ ಹಾಡುಗಳೂ ಕೇಳಿಗರನ್ನು ಸೆಳೆದುಕೊಂಡಿದ್ದವು. ಆ ನಂತರ ಧ್ವಂದ್ವ ಮುಂತಾದ ಒಂದಷ್ಟಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಆಕಾಶ್ ವೃತ್ತಿ ಬದುಕಿಗೆ ಸೀಟ್ ಎಡ್ಜ್ ಚಿತ್ರ ಮತ್ತಷ್ಟು ಓಘ ತಂದುಕೊಟ್ಟಿದೆ. ಈ ಸಿನಿಮಾ ಮೂಡಿ ಬಂದಿರುವ ರೀತಿಯ ಬಗ್ಗೆ ಮೆಚ್ಚುಗೆ ಹೊಂದಿರುವ ಅವರಿಗೆ, ಗೆಲುವು ದಕ್ಕುತ್ತದೆಂಬ ಭರವಸೆಯೂ ಇದೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.
keywords: seatedge, akashparva, mucicdirector

