ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ಸೀಟ್ ಎಡ್ಜ್ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈ ಚಿತ್ರದ ವಿಶಿಷ್ಟ ಛಾಯೆಯಿರುವ ನಾಯಕನ ಪಾತ್ರಕ್ಕೆ ಜೀವ ತುಂಬಿರುವವರು ಸಿದ್ದು ಮೂಲಿಮನಿ. ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಒಂದು ಭಿನ್ನ ಬಗೆಯ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಿದ್ದು ಪಾಲಿಗೆ ಸೀಟ್ ಎಡ್ಜ್ ಮೂಲಕ ವಿಶಿಷ್ಟ ಪಾತ್ರವೊಂದು ಒಲಿದು ಬಂದ ಖುಷಿಯಿದೆ. ನಿರ್ದೇಶಕರ ಇಂಗಿತದಂತೆಯೇ ಈ ಪಾತ್ರಕ್ಕೆ ಜೀವ ತುಂಬಿರುವ ಸಿದ್ದು ಮೂಲಿಮನಿ ಚಿತ್ರೀಕರಣದ ಹಂತದಲ್ಲಿಯೇ ಖುಷಿಗೊಂಡಿದ್ದರು. ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಅಂಥಾದ್ದೊಂದು ಖುಷಿಯ ಪುಳಕ ದಾಟಿಕೊಳ್ಳಲಿದೆ ಎಂಬ ಗಾಢ ಭಯವಸೆ ಅವರಲ್ಲಿದೆ.
ಈ ಕಥೆಯನ್ನು ಸಿದ್ಧಪಡಿಸಿಕೊಳ್ಳುವ ಹಂತದಲ್ಲಿಯೇ ನಿರ್ದೇಶಕ ಚೇತನ್ ನಾಯಕನ ಪಾತ್ರಕ್ಕೆ ಸಿದ್ದು ಮೂಲಿಮನಿಯನ್ನು ನಿಕ್ಕಿಯಾಗಿಸಿದ್ದರಂತೆ. ಈ ಕಥೆ ಕೇಳಿದಾಕ್ಷಣವೇ ಸಿದ್ದು ಕೂಡಾ ಅದರ ಸೆಳೆತಕ್ಕೊಳಗಾಗಿದ್ದರು. ಅದಕ್ಕೆ ಕಾರಣ ಸದರಿ ಕಥೆಯಲ್ಲಿನ ಹೊಸತನ. ಇಲ್ಲಿ ಈಗಿನ ಯುವ ಸಮುದಾಯವನ್ನು ಬಹುವಾಗಿ ಆವರಿಸಿಕೊಂಡಿರುವ ವ್ಲಾಗಿಂಗ್ ಜಗತ್ತಿನ ಕಥಾ ಬಿಂದುವಿದೆ. ಪ್ರಸಿದ್ಧಿಯ ಬೆಂಬಿದ್ದು ಹರಡುವ ಯುವ ವ್ಲಾಗರ್ ಪಾತ್ರಕ್ಕೆ ಸಿದ್ದು ಮೂಲಿಮನಿ ಜೀವ ತುಂಬಿದ್ದಾರೆ. ವ್ಲಾಗಿಂಗ್ ಜಗತ್ತಲ್ಲಿ ಚಾಲ್ತಿಯಲ್ಲಿರಬೇಕೆಂದರೆ, ಹೊಸಾ ಸಾಹಸಗಳಿಗೆ ಕೈಹಾಕಲೇ ಬೇಕೆಂಬ ವಾತಾವರಣವಿದೆ. ಹೀಗೆ ಪ್ರಸಿದ್ಧಿಯ ಬೆಂಬಿದ್ದವರನ್ನು ಬಹುವಾಗಿ ಸೆಳೆಯೋ ವಿಷಯ ಘೋಸ್ಟ್ ಹಂಟಿಂಗ್.
Veera Kambala Movie: ಕಥೆ ಹುಟ್ಟಿದ ಬಗೆಯ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ಹಾಗೆ ವ್ಲಾಗರ್ ಆಗಿದ್ದುಕೊಂಡು ಘೋಸ್ಟ್ ಹಂಟಿಂಗ್ ಹುಚ್ಚಿಗೆ ಬೀಳೋ ರೋಚಕ ಪಾತ್ರವನ್ನು ಸಿದ್ದು ಮೂಲಿಮನಿ ನಿಭಾಯಿಸಿದ್ದಾರೆ. ಈ ಪಾತ್ರದ ಚಿತ್ರೀಕರಣದ ಪ್ರತೀ ಕ್ಷಣಗಳನ್ನೂ ಸಂಭ್ರ್ರಮಿಸಿದ್ದಾಗಿ ಹೇಳುವ ಸಿದ್ದುಗೆ ತನ್ನ ವೃತ್ತಿ ಬದುಕಿನಲ್ಲಿ ಸದರಿ ಚಿತ್ರವೊಂದು ಮೈಲಿಗಲ್ಲಾಗುತ್ತೆಂಬ ನಂಬಿಕೆಯಿದೆ. ಪ್ರೇಕ್ಷಕರನ್ನು ಪ್ರತೀ ಕ್ಷಣವೂ ಸೀಟ್ ಎಡ್ಜಿಗೆ ತಂದು ಕೂರಿಸೋ ಅಂಶಗಳೋಮದಿಗೆ ಭರ್ಜರಿ ಮನೋರಂಜನೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ ಎಂಬುದು ಸಿದ್ದು ಮಾತು. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.
keywords: siddu, moolimani, seatedge, sandalwood

