ದಳಪತಿ ವಿಜಯ್ ಅಭಿನಯನ ಕಟ್ಟ ಕಡೆಯ ಚಿತ್ರವಾದ ದಳಪತಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಕೂಡಿ ಬರುವ ಲಕ್ಷಣಗಳಿಲ್ಲ. ಎಲ್ಲವೂ ಅಂದಸುಕೊಂಡಂತೆಯೇ ಆಗಿದ್ದರೆ, ಈ ಹೊತ್ತಿಗೆಲ್ಲ ಜನನಾಯಕನ ಜಾತ್ರೆ ಜೋರಾಗಿರುತ್ತಿತ್ತು. ವಿಜಯ್ ಸೇರಿದಂತೆ ಎಲ್ಲರೂ ಕಡೇ ಕ್ಷಣದವರೆಗೂ ಬಿಡುಗಡೆಗಾಗಿ ಭಾರೀ ಪ್ರಯತ್ನ ನಡೆಸಿದ್ದರು. ಒಂದು ಹಂತದಲ್ಲಿ ಕೋರ್ಟ್ನಿಂದ ಯು ಎ ಸರ್ಟಿಫಿಕೇಟು ಕೊಟ್ಟು ಬಿಡುಗಡೆಗೊಳಿಸುವಂತೆ ಆದೇಶವೂ ಹೊರ ಬಿದ್ದಿತ್ತು. ಕಡೆಗೂ ಕಂಟಕವೊಂದು ನಿರಾಳವಾದ ಖುಷಿಯಲ್ಲಿರುವಾಗಲೇ, ಮಧ್ಯಾನ್ಹದ ಹೊತ್ತಿಗೆಲ್ಲ ನ್ಯಾಯಪೀಠ ತಾನು ನೀಡಿದ ಆದೇಶಕ್ಕೆ ತಾನೇ ತಡೆಯೊಡ್ಡುವ ಮೂಲಕ ಚಿತ್ರತಂಡಕ್ಕೆ ಭಾರೀ ಶಾಕ್ ಕೊಟ್ಟಿತ್ತು. ಅಲ್ಲಿಗೆ ಜನನಾಯಕನ ಬಿಡುಗಡೆ ಕಡೇ ಕ್ಷಣದಲ್ಲಿ ಮುಂದಕ್ಕೆ ಎಗರಿಕೊಂಡಿದೆ.
ನೆನ್ನೆ ಬೆಳಗ್ಗೆಯ ಹೊತ್ತಿಗೆಲ್ಲ ಜನನಾಯಗನ್ ಬಿಡುಗಡೆಗೆ ಖುದ್ದು ಕೋರ್ಟ್ ಹಸಿರು ನಿಶಾನೆ ತೋರಿಸಿತ್ತು. ಇದಾದದ್ದೇ ನಿರ್ಮಾಪಕರು ಬಿಡುಗಡೆಯ ವ್ಯವಹಾರವನ್ನೆಲ್ಲ ಪಕ್ಕಾ ಮಾಡುತ್ತಿದ್ದಂತೆಯೇ, ಕೋಟನಿಂದ ವ್ಯತಿರಿಕ್ತ ನಿರ್ಧಾರ ವ್ಯಕ್ತವಾಗಿದೆ. ಒಂದಿಡೀ ಸಿನಿಮಾವನ್ನು ಮತ್ತೊಂದು ಬಾರಿ ಪರಿಶೀಲಿಸಬೇಕಿರೋದರಿಂದ ಕಾಲಾವಕಾಶ ಬೇಕೆಂದು ನ್ಯಾಯಪೀಠ ಪ್ರತಿಪಾದಿಸಿತ್ತು. ಹೀಗೊಂದು ಅಚ್ಚರಿದಾಯಕ ಪಲ್ಲಟ ಘಟಿಸಿದ್ದರ ಹಿಂದೆ ರಾಜಕೀಯ ಷಡ್ಯಂತ್ರಗಳಿದ್ದಾವೆಂದು ಮಂದಿ ಮಾತಾಡಲಾರಂಭಿಸಿದ್ದಾರೆ. ಇದರಲ್ಲಿ ಸತ್ಯವೂ ಇದ್ದಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣವಾಗಿರೋದು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣವನ್ನೇ ಅದುರಿಸಿ ಹಾಕಿರುವ ವಿಜಯ್ ರಾಜಕೀಯ ನಡೆ!
ಆನನಾಯಗನ್ ವಿಜಯ್ ಅವರ ರಾಜಕೀಯ ನಡೆಗಳಿಗೆ ಬೂಸ್ಟರ್ ಡೋಸ್ ಎಂಬಂತೆ ಸಿದ್ಧಗೊಂಡಿದ್ದ ಸಿನಿಮಾ. ಈ ಕಾರಣದಿಂದಲೇ ಅದರಲ್ಲಿ ಸಾಕಷ್ಟು ರಾಜಕಾರಣಕ್ಕೆ ಸಂಬಂಧಿಸಿದ ಅಂಶಗಳಿದ್ದವು. ಈ ಬಗ್ಗೆ ಟ್ರೈಲರ್ ಬಿಡುಗಡೆಯಾದಾಗಲೇ ಚರ್ಚೆಗಳು ನಡೆದಿದ್ದವು. ತಮಿಳು ನಾಡಿನ ರಾಜಕಾರಣ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ವಿಜಯ್ ಮಿಂಚೋದು ಗ್ಯಾರೆಂಟಿ ಎಂಬ ವಿಚಾರವಂತೂ ತಿಂಗಳ ಹಿಂದೆಯೇ ಸ್ಪಷ್ಟವಾಗಿತ್ತು. ಅಂಥಾ ವಿಜಯ್ ನಾಗಾಲೋಟಕ್ಕೆ ಬ್ರೇಕ್ ಹಾಕುವ ಸಲುವಾಗಿ ರಾಜಕೀಯ ಷಡ್ಯಂತ್ರ ನಡೆದಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಅಂತೂ ವಿಜಯ್ ಪಾಲಿಗಿದು ಆರಂಭಿಕ ಹಿನ್ನಡೆ. ಅದನ್ನು ಆತ ಹೇಗೆ ದಾಟಿಕೊಳ್ಳುತ್ತಾರೆಂಬುದೇ ಸದ್ಯದ ಕುತೂಹಲ!
keywords: jananayagan, vijay, postponed, thalapathy

