ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ ಅನ್ನಿಸಿದಂತಿದೆ.ಒಂದು ವೇಳೆ ಕೂಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿದ್ದರೆ ಲೋಕೇಶ್ ಮನೆ ಮುಂದೆ ಸ್ಟಾರ್ ಹೀರೋಗಳ ದಂಡು ನೆರೆಯುತ್ತಿತ್ತು. ಆದರೀಗ ಆರಂಭಿಕವಾಗಿ ಲೋಕೇಶ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ಹೊತ್ತಿದ್ದವರೂ ಕೂಡಾ ಅನುಮಾನಗೊಂಡಿದ್ದಾರೆ. ಇದೆಲ್ಲದರಾಚೆಗೆ ದೊಡ್ಡದೊಂದು ಪ್ಯಾನಿಂಡಿಯಾ ಪ್ರಾಜೆಕ್ಟಿಗಾಗಿ ಲೋಕೇಶ್ ಸರ್ಕಸ್ಸು ಆರಂಭಿಸಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಸದರಿ ಚಿತ್ರದಲ್ಲಿ ಯಾರು ಹೀರೋ ಆಗಲಿದ್ದಾರೆಂಬ ಪ್ರಶ್ನೆಯೀಗ ಸಿನಿಮಾಸಕ್ತರಲ್ಲಿ ಮೂಡಿಕೊಂಡಿದೆ!
ಲೋಕೇಶ್ ಕನಗರಾಜ್ ಕೂಲಿ ಚಿತ್ರದ ಸೋಲಿನ ನಂತರವೂ ತುಸು ಆತ್ಮವಿಶ್ವಾಸದಿಂದಿದ್ದರು. ಯಾಕೆಂದರೆ, ಈ ಹಿನ್ನಡೆಯ ನಂತರವೂ ಕೂಡಾ ಲೋಕೇಶನಿಗೆ ಮತ್ತೊಂದು ಅವಕಾಶ ಕೊಡುವ ಔದಾರ್ಯವನ್ನು ತಲೈವಾ ಪ್ರದರ್ಶಿಧಸಿದ್ದರು. ಆದರೆ, ಅಲ್ಲಿಯೂ ಈ ಯುವ ನಿರ್ದೇಶಕನ ನಸೀಬು ಕೈ ಕೊಟ್ಟಿತ್ತು. ಹಳೇ ಕಥೆಯನ್ನೇ ಮಾಲೀಶು ಮಾಡಿಕೊಂಡಿದ್ದ ಲೋಕೇಶ್‌ಗೆ ಸದ್ಯಕ್ಕೆ ಈ ಪ್ರಾಜೆಕ್ಟು ಬೇಡ, ಮುಂದೆಂದಾದರೂ ನೋಡೋಣ ಎಂಬಂಥಾ ಆಘಾತಕರ ಸಂದೇಶ ರಜನಿ ಕಡೆಯಿಂದ ಸಿಕ್ಕಿತ್ತು. ಹಾಗೊಂದು ನಿರಾಸೆಯ ಬೆನ್ನಲ್ಲಿಯೇ ಲೋಕೇಶ್ ಕನಗರಾಜ್ ಅಲ್ಲು ಅರ್ಜುನ್‌ಗಾಗಿ ಒಂದು ಕಥೆಯನ್ನು ಸಿದ್ಧಪಡಿಸಿಕೊಂಡಿದ್ದರು. ಆದರೀಗ ಅದಕ್ಕೂ ಕೂಡಾ ಕೊಂಚ ಹಿನ್ನಡೆಯೇ ಎದುರಾದ ಹಾಗಿದೆ!
ಲೋಕೇಶ್ ಇದೀಗ ಈ ಕಥೆಯನ್ನೇ ಆಮೀರ್ ಕಾನ ಗೆ ಹೇಳುತ್ತಿದ್ದಾರೆಂಬ ಸುದ್ದಿಯೊಂದು ಹಬ್ಬಿಕೊಂಡಿದೆ. ಇತ್ತೀಚಿನ ವರ್ಷದಲ್ಲಿ ಮಂಕಾದಂತಿರುವ ಆಮೀರ್ ಖಾನ್ ಈ ಪ್ರಾಜೆಕ್ಟಿಗೆ ಒಪ್ಪಿಗೆ ಸೂಚಿಸುವ ಲಕ್ಷಣಗಳಿದ್ದಾವೆ. ಒಂದು ಮೂಲದ ಪ್ರಕಾರ, ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಿಗೆ ಆಮೀರ್ ಖಾನ್ ಜೊತೆ ಈ ಪ್ರಾಜೆಕ್ಟನ್ನು ಮುಂದುವರೆಸುವ ಮನಸಿಲ್ಲ. ಈಗ ಆಮೀರ್ ಜವಾ ಸಂಪೂರ್ಣವಾಗಿ ತಗ್ಗಿದೆ. ಆದರೆ, ಅಲ್ಲು ಅರ್ಜುನ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಆತನೊಂದಿಗೆ ಸಿನಿಮಾ ಮಾಡಿದರೆ ರಿಸ್ಕಿಲ್ಲದೆ ವ್ಯವಹಾರ ಕುದುರುತ್ತದೆಂಬ ಆಸೆ ನಿರ್ಮಾಪಕರದ್ದು. ಆದರೆ, ಲೋಕೇಶ್ ಕನಗರಾಜ್‌ಗೆ ತನ್ನ ಕಥೆಯನ್ನು ಅಲ್ಲು ಒಪ್ಪಿಕೊಳ್ಳಬಹುದೆಂಬ ಸಂಪೂರ್ಣ ವಿಶ್ವಾಸ ಇದ್ದಂತಿಲ್ಲ. ಒಂದು ವೇಳೆ ಅಲ್ಲುಗೆ ಕಥೆ ಹೇಳಿದರೆ ಆತ ಒಪ್ಪಿಕೊಳ್ಳುತ್ತಾರಾ? ಆಮೀರ್ ಒಪ್ಪಿಕೊಂಡರೂ, ನಿರ್ಮಾಪಕರನ್ನು ಮನವೊಲಿಸಿ ಒಪ್ಪಿಸಲು ಲೋಕೇಶ್ ಕೈಲಿ ಸಾಧ್ಯವಾಗುತ್ತಾ? ಇಂಥಾ ಶಂಕೆಗಳೆಲ್ಲ ಈ ತಿಂಗಳ ಅಂಚಿನಲ್ಲಿ ಪರಿಹಾರವಾಗೋ ಲಕ್ಷಣಗಳು ಗೋಚರಿಸಲಾರಂಭಿಸಿವೆ!
keywords: lokesh kanagaraj, allu arjun, aamir khan, rajnikanth, thalaivar, coolie, pushpa2, tollywood, bollywood

