ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲೊಂದಾಗಿರುವ ಧರ್ಮಸ್ಥಳವೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣವಾಗಿರೋದು ಆ ಗ್ರಾಮದಲ್ಲಿ ನಡೆದಿರುವ ಅನುಮಾನಾಸ್ಪದ ಸಾವುಗಳು. ದಶಕದ ಹಿಂದೆ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಕೇಸಿನ ನಂತರದಲ್ಲಿಯಂತೂ ಧರ್ಮಸ್ಥಳದ ಸುತ್ತ ನಾನಾ ವಿವಾದಗಳು ಹಬ್ಬಿಕೊಳ್ಳುತ್ತಲೇ ಇದ್ದಾವೆ. ಈಗಂತೂ ಎಸ್‌ಐಟಿ ಅಧಿಕಾರಿಗಳು ಅನಾಮಿಕ ದೂರುದಾರನನ್ನಿಟ್ಟುಕೊಂಡು ಅಸ್ಥಿಪಂಜರ ಹುಡುಕೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದಾಗಲೇ ಈ ಎಲ್ಲ ವಿದ್ಯಮಾನಗಳಿಗೆ ಧರ್ಮೋನ್ಮಾದದ ರೂಪುರೇಷೆ ಕೊಡುವ ವ್ಯವಸ್ಥಿತ ಕಾರ್ಯವೂ ನಡೆಯುತ್ತಿದೆ. ಈ ನಡುವೆ ಕೊತಗುಡುತ್ತಿರುವ ಧರ್ಮಸ್ಥಳಕ್ಕೆ ತೆರಳಿ ಸೌಜನ್ಯಾ ತಾಯಿಯನ್ನು ಬಿಗ್ ಬಾಸ್ ಖ್ಯಾತಿಯ ರಜತ್ ಭೇಟಿಯಾಗಿದ್ದಾರೆ. ಇದರ ಸುತ್ತ ಮತ್ತಷ್ಟು ವಿವಾದಗಳು ಹಬ್ಬಿಕೊಂಡಿವೆ.
ರಜತ್ ಬಿಗ್ ಬಾಸ್ ಶೋನ ಹಿಂಚುಮುಂಚಿನಿಂದಲೇ ಸೌಜನ್ಯಾ ಪರವಾಗಿ ಧ್ವನಿಯೆತ್ತಿದ್ದರು. ಮನುಷ್ಯತ್ವವಿರುವ ಯಾರೇ ಆದರೂ ಅರಳೋ ವಯಸ್ಸಿನಲ್ಲಿಯೇ ಕಾಮುಕ ದುರುಳರಿಂದ ಹೊಸಕಲ್ಪಟ್ಟ ಈ ಹೆಣ್ಣುಮಗಳ ಪರವಾಗಿ ಧ್ವನಿಯೆತ್ತಲೇ ಬೇಕಿದೆ. ಹಾಗೆ ಧ್ವಿನಿಯೆತ್ತೋ ಪ್ರತಿಯೊಬ್ಬರೂ ಕೂಡಾ ಈ ಅತ್ಯಾಚಾರ ಮಾಡಿದ ಕಾಮುಕರಿಗೆ ತಕ,ಕ ಶಿಕ್ಷೆಯಾಗಲೆಂದು ಬಯಸುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ರಜತ್ ಕೂಡಾ ಅದೇ ದಿಕ್ಕಿನಲ್ಲಿ ಮಾತಾಡಿದ್ದರು. ಅದರ ಭಾಗವಾಗಿಯೇ ಮೊನ್ನೆ ದಿನ ಧರ್ಮಸ್ಥಳಕ್ಕೆ ತೆರಳಿ ಸೌಜನ್ಯಾ ತಾಯಹಿ ಕುಸುಮಾವತಿಯವರನ್ನು ಕಂಡು ಮಾತಾಡಿದ್ದರು. ಹಾಗೆ ರಜತ್ ವಾಪಾಸಾಗುವ ಸಂದರ್ಭದಲ್ಲಿ ಗೂಂಡಾ ಪಡೆ ಬಡಿದಾಟವನ್ನೇ ನಡೆಸಿ ಬಿಟ್ಟಿದೆ.
ಒಂದಷ್ಟು ಯೂಟ್ಯೂಬರ್ಸ್ ಮೇಲೆ ಡಿ ಗ್ಯಾಂಗಿನ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಸ್ವತಃ ರಜತ್ ಹೇಳುವಂತೆ ಆತನನ್ನೂ ಕೂಡಾ ತಳ್ಳಾಡುವ ಪ್ರಯತ್ನಗಳು ನಡೆದಿವೆ. ಇದೇ ಹೊತ್ತಿನಲ್ಲಿ ಅದ್ಯಾವುದೋ ಹೆಂಗಸೊಂದು ರಜತ್ ಬಗ್ಗೆ ಜೀವ ಬೆದರಿಕೆಯಂಥಾ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಅದರ ಬೆನ್ನಲ್ಲಿಯೇ ರಜತ್‌ಗೆ ಜೀವ ಬೆದರಿಕೆಯೂ ಬರಲಾರಂಭಿವೆಯಂತೆ. ಈ ಬಗ್ಗೆ ಆತ ಪೊಲೀಸದರಿಗೆ ದೂರನ್ನೂ ಕೊಟ್ಟು ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಬೇರೇನೇ ತಕರಾರುಗಳಿದ್ದರೂ ಕೂಡಾ ಬುಜ್ಜಿಯನ್ನು ಅಷ್ಟರ ಮಟ್ಟಿಗೆ ಮೆಚ್ಚಿಕೊಳ್ಳಲೇ ಬೇಕು.
ಅಷ್ಟಕ್ಕೂ ಸೌಜನ್ಯಾ ಪರವಾಗಿ ಧ್ವನಿಯೆತ್ತಿದರೆ ಖಾವಂದರ ಘನತೆಗೆ ಯಾಕೆ ಕುತ್ತುಂಟಾಗುತ್ತೆ? ಈ ಹುಡುಗಿಯ ಸಾವಿಗೆ ನ್ಯಾಯ ಕೇಳಿದರೆ ಧರ್ಮಸ್ಥಳದ ಪಾವಿತ್ರ್ಯ ಹಾಳಾಗುತ್ತದೆಂಬಂತೆ ಕೆಲ ಅವಿವೇಕಿಗಳು ಹಲುಬುತ್ತಿದ್ದಾರಲ್ಲಾ? ತಲೆ ನೆಟ್ಟಗಿರೋ ಯಾವನಾದರೂ ಆ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವೇ? ಒಂದು ಧರ್ಮ ಕ್ಷೇತ್ರದ ಪರಿಸರದಲ್ಲಿ ಇಂಥಾದ್ದೆಲ್ಲ ನಡೆದಾಗ ಸಹಜವಾಗಿಯೇ ಅದರ ಸುತ್ತ ಅನುಮಾನಗಳು ಮೂಡಿಕೊಳ್ಳುತ್ತವೆ. ಈ ಬಗ್ಗೆ ಕಾನೂನಾತ್ಮಕ ತನಿಖೆ ಈಗ ಚಾಲ್ತಿಯಲ್ಲಿದೆ. ಇದರ ಮೂಲಕವೇ ಸತ್ಯಾಸತ್ಯತೆ ಹೊರಬರಲು ಸಮಯ ಹಿಡಿದೀತು. ಆ ವರೆಗೆ ಭಕ್ತಗಣ ಸಾವಧಾನದಿಂದ ಇದ್ಚದರೊಳಿತು. ಯಾಕೆಂದರೆ, ಸತ್ಯ ಹೊರ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಮಾತ್ರವೇ ಇಂಥಾ ಕ್ಷೇತ್ರಗಳ ಘನತೆ ಉಳಿಯುತ್ತದೆ.
ಇಂಥಾ ಹೊತ್ತಿನಲ್ಲಿ ಸೌಜನ್ಯಾ ಪರ ಮಾತಾಡುವವರನ್ನೆಲ್ಲ ಧರ್ಮ ವಿರೋಧಿಗಳೆಂದು ಬಿಂಬಿಸೋದೇ ಅಧರ್ಮ. ಅವನ್ಯಾರೋ ಪವರ್ ಟೀವಿಯ ಹಡಬೆ ರಾಕೇಶ್ ಶೆಟ್ಟಿ ಅವಿವೇಕಿಯಂತೆ ಅಬ್ಬರಿಸುತ್ತಾನೆ. ಪತ್ರಿಕೋದ್ಯಮದ ಘನತೆ ಗೌರವಗಳ ಲವಲೇಶವೂ ಇಲ್ಲದ ಇಂಥವನನ್ನು ವೀರೇಂದ್ರ ಹೆಗ್ಗಡೆಯೇ ಈ ಹಿಂದೆ ಶಿವಗಣ ಅಂದುಬಿಟ್ಟಿದ್ದರು. ಅಸಲಿಗೆ ಈತ ಸದ್ಯದ ಮಟ್ಟಿಗೆ ಕಾಮುಕರ ಕೋಮಣದಂತಾಗಿದ್ದಾನೆ. ಈ ರಾಕೇಶ್ ಶೆಟ್ಟಿಯಂಥಾ ಮನಃಸ್ಥಿತಿಯ ಮಂದಿಗೆ ಸೌಜನ್ಯಳಿಗೆ ನ್ಯಾಯ ಸಿಗಲಿ ಅನ್ನುವ ರಜತ್ ಥರದವರೆಲ್ಲ ಧರ್ಮ ವಿರೋಧಿಗಳಂತೆ ಕಾಣಿಸುತ್ತಾರೆ. ಧರ್ಮಸ್ಥಳದ ಪರಿಸರದಲ್ಲಿ ಇಂಥಾ ಕೊಲೆ, ಅತ್ಯಾಚಾರಗಳ ಆರೋಪ ಕೇಳಿ ಬಂದಿರೋದರಿಂದ ಸಹಜವಾಗಿಯೇ ಆ ಕ್ಷೇತ್ರದ ಸುತ್ತ ವಿವಾದವೇಳುತ್ತೆ. ಅದರಿಂದಾಗಿ ದೇವರಿಗೆ ಕಳಂಕ ಮೆತ್ತಿಕೊಳ್ಳುತ್ತದೆಂಬುದು ಮೂರ್ಖತನ. ಮನುಷ್ಯಮಾತ್ರರ ಆರೋಪಗಳಿಂದ ದೇವರು ವಿಚಲಿತನಾಗುತ್ತಾನಾದರೆ ಅವನನ್ನು ದೇವರೆನ್ನಲು ಸಾಧ್ಯವೇ? ಭ್ರಮೆಯ ತೆಕ್ಕೆಗೆ ಬಿದ್ದು ಅರಚಾಡುವ ಮುನ್ನ ಸಮಚಿತ್ತದಿಂದ ಆಲೋಚಿಸಿದರೊಳಿತು!