Browsing: sandalwood

ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ…

ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ…

ಹಾಡುಗಳು ಮತ್ತು (trailer) ಟ್ರೈಲರ್ ಮೂಲಕ ಭಾರೀ ಸದ್ದು ಮಾಡೋ ಸಿನಿಮಾಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮೂಡಿಕೊಳ್ಳುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ನಿರೀಕ್ಷೆಗಳ ಬೆನ್ನಲ್ಲಿಯೇ ಗುಮಾನಿಯೊಂದು ಸರಿದಾಡಲಾರಂಭಿಸಿದೆ. ಯಾಕೆಂದರೆ, ನೀಟಾಗಿ ಟ್ರೈಲರ್ ರೂಪಿಸೋ ಮಂದಿ,…

ಕನ್ನಡದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ನಿರ್ಮಾಣ ಸಂಸ್ಥೆ (hombale films) ಹೊಂಬಾಳೆ ಫಿಲಂಸ್. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಾಣ ಮಾಡೋದರ ಜೊತೆ ಜೊತೆಗೇ ಹೊಸಾ ಬಗೆಯ ಸಾಹಸಗಳಿಗೆ, ಪ್ರಯೋಗಗಳಿಗೂ ಹೊಂಬಾಳೆಯ ಕಡೆಯಿಂದ…

ಯುವ ರಾಜ್ ಕುಮಾರ್ (yuva rajnkumar) ನಟಿಸಿರುವ ಎಕ್ಕ (Ekka movie) ಚಿತ್ರದ ಸುತ್ತಾ ಸಿನಿಮಾ ಪ್ರೇಮಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ. ಆರಂಭಿಕವಾಗಿಯೇ ಒಂದಷ್ಟು ಹಿನ್ನಡೆ ಅನುಭವಿಸಿದ್ದ (yuva) ಯುವನ ಬಗ್ಗೆ ಒಂದಷ್ಟು ಭರವಸೆಯ ಮಾತುಗಳೂ…

ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಪ್ರಕ್ರಿಯೆ ಅನೂಚಾನವಾಗಿ ಮುಂದುವರೆದಿದೆ. ಹೀಗೆ ಆಗಮಿಸೋ ಹೊಸಬರ ತಂಡಗಳು ಕಾಲಿಟ್ಟಲ್ಲೆಲ್ಲ ಗೆಲುವು ದಕ್ಕುತ್ತದೆಂದೇನೂ ಇಲ್ಲ. ಆದರೆ, ಹೊಸಬರ ಆಗಮನವಾದಾಗ ಹೊಸತೇನೋ ಛಳುಕು ಮೂಡಿಕೊಂಡೀತೆಂಬ ನಿರೀಕ್ಷೆಯೊಂದು ಕನ್ನಡದ ಪ್ರೇಕ್ಷಕರಲ್ಲಿರೋದು ಸುಳ್ಳಲ್ಲ. ಇಂಥಾದ್ದೊಂದು…

ಕನ್ನಡ ಚಿತ್ರರಂಗದಲ್ಲೀಗ ಹಂತ ಹಂತವಾಗಿ ಹೊಸಾ ಅಲೆ ಮೂಡಿಕೊಳ್ಳುತ್ತಿದೆ. ಕೆಲ ಮಂದಿ ಇನ್ನೂ (kgf movie) ಕೆಜಿಎಫ್‌ನ ಮಸಿ ಮಸಿ ಛಾಯೆಯಲ್ಲಿ ಉರುಳಾಡುತ್ತಿರುವಾಗಲೇ, ಒಂದಷ್ಟು ಭಿನ್ನ ಧಾಟಿಯ ಪ್ರಯೋಗಗಳೂ ನಡೆಯುತ್ತಿವೆ. ಮಾಸ್ ಭ್ರಮೆಯ ಏಕತಾನತೆಯನ್ನು ದಾಟಿಕೊಳ್ಳವ…

ಸಿನಿಮಾ ಪ್ರಚಾರದ ಪಟ್ಟುಗಳಲ್ಲಿ ಪಾರಂಗತರಾಗವಿರುವ ಜೋಗಿ ಪ್ರೇಮ್ ಶೋಮ್ಯಾನ್ ಅನ್ನೋ ಬಿರುದಾಂಕಿತವನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳ ನಂತರ ನಾನಾ ಏರಿಳಿತ ಕಂಡಿರುವ ಪ್ರೇಮ್ಸ್ ಆಗಾಗ ಫೀನಿಕ್ಸಿನಂತೆ ಪುಟಿದೇಳುವ ವಿಶೇಷ ಗುಣವನ್ನೂ ಹೊಂದಿದ್ದಾರೆ. ದ್ರುವ ಸರ್ಜಾ…

ಗಣಿ ಧೂಳಿನಿಂದ ಗೆಬರಿಕೊಂಡ ಕಾಸಲ್ಲಿ ಒಂದಿಡೀ ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿದ ಕುಖ್ಯಾತಿ ಗಾಲಿ ಜನಾರ್ಧನ ರೆಡ್ಡಿಗಿದೆ. ಬರ್ಳಳಾರಿ ಸೀಮೆಯಲ್ಲಿ ನೆಲ ಬಗೆಯುತ್ತಾ, ಅಕ್ರಮಗಳ ಮೇಲೆ ಅಕ್ರಮಗಳನ್ನು ನಡೆಸಿ ಕಡೆಗೂ ಜೈಲುವಾಸವನ್ನೂ ಅನುಭವಿಸಿದ್ದ ಕರಾಳ ಹಿಸ್ಟರಿ…

`ಅಲ್ಪನಿಗೆ ಐಶ್ವರ್ಯ ಬಂದರೆ ನಡುರಾತ್ರೀಲಿ ಕೊಡೆ ಹಿಡಿದನಂತೆ…’ ಹೀಗೊಂದು ನಾನ್ಣುಡಿ ನಮ್ಮ ನಡುವೆ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಅದು ಬಹುಕಾಲದಿಂದ ಜನಜನಿತವಾದರೂ ಸಲಕಲು ಗಾದೆ ಮಾತು ಅನ್ನಿಸಿಕೊಂಡಿಲ್ಲ. ಯಾಕೆಂದರೆ ನಡು ರಾತ್ರೀಲಿ ಕೊಡೆ ಹಿಡಿಯೋ ಅಲ್ಪರ ಸಂಖ್ಯೆ…