ಭಾರತೀಯ ಚಿತ್ರರಂಗದ ಅತ್ಯಪರೂಪದ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಸಾಯಿಪಲ್ಲವಿ. ಅವಕಾಶಕ್ಕಾಗಿ ಯಾವ ಅವತಾರಕ್ಕೂ ಸೈ ಎಂಬುದೇ ಬಹುತೇಕ ನಟಿಯರ ಸಿದ್ಧಾಂತ. ಅಂಥಾ ಭರಾಟೆಯಲ್ಲಿ ತನಗೆ ತಾನೇ ಗೆರೆ ಹಾಕಿಕೊಂಡು, ಅಂಥಾ ಮಿತಿಗಳ ನಡುವೆಯೂ ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಳ್ಳೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಆ ನಿಟ್ಟಿನಲ್ಲಿ ನೋಡ ಹೋದರೆ, ಸಾಯಿ ಪಲ್ಲವಿಯ ಸಿನಿಮಾ ಯಾನ ಅಚ್ಚರಿಯಂತೆ ಕಾಣಿಸುತ್ತದೆ. ಇಂಥಾ ಸಾಯಿಪಲ್ಲವಿ ಆಮೀರ್ ಖಾನ್ ಪುತ್ರನಿಗೆ ನಾಯಕಿಯಾಗುವ ಮೂಲಕ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದಾಳೆ. ಏಕ್ ದಿನ ಎಂಬ ಸದರಿ ಚಿತ್ರದ ಟೀಸರ್ ಇದೀಗ ಬಿಡುಗಡೆಗೊಂಡಿದೆ.
ಆಮೀರ್ ಖಾನ್ ಪುತ್ರ ಝುನೈದ್ ಖಾನ್ ನಾಯಕನಾಗಿ ನಟಿಸಿರೋ ಏಕ್ ದಿನ ಟೀಸರ್ಗೆ ವ್ಯಾಪ;ಕ ಮೆಚ್ಚುಗೆ ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಪ್ರಸಿದ್ಧರ ಮಕ್ಕಳು ಚಿತ್ರರಂಗಕ್ಕೆ ಕಾಲಿಟ್ಟಾಗ ನೆಪೋಟಿಸಂ ಸುತ್ತಾ ಒಂದಷ್ಟು ಮೂದಲಿಕೆಗಳು ಕೇಳಿ ಬರುತ್ತವೆ. ಝುನೈದ್ ಖಾನ್ ಕೂಡಾ ಅಂಥಾ ಹತ್ತಾರು ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ, ಈ ಟೀಸರ್ನಲ್ಲಿ ಝುನೈದ್ ಕಾಣಿಸಿಕೊಂಡಿರೋ ರೀತಿ ಎಲ್ಲ ಟೀಕೆಗಳನ್ನು ಥಂಡಾ ಹೊಡೆಸುವಂತಿದೆ. ಈ ಅಪೂರ್ವ ಪ್ರೇಮ ಕಥೆಯ ಭಾಗವಾಗಿರುವ ಸಾಯಿ ಪಲ್ಲವಿ ಕೂಡಾ ರೋಮಾಂಚಕವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ತಾನೇ ಮಾಡಿದ್ದ ಶಪಥವೊಂದನ್ನು ಖುದ್ದು ಸಾಯಿಪಲ್ಲವಿ ಮುರಿದಿದ್ದಾರೆ!
saipallavi new movie updates: ರೊಮ್ಯಾಂಟಿಕ್ ಪಾತ್ರಕ್ಕೆ ಫಿದಾ ಆದ ಚೆಲುವೆ!
ತಾನು ರೀಮೇಕ್ ಸಿನಿಮಾಗಳಲ್ಲಿ ನಟಿಸೋದಿಲ್ಲ ಅಂತ ಸಾಯಿಪಲ್ಲವಿ ಈ ಹಿಂದೆಯೇ ಸ್ಪ;ಷ್ಟವಾಗಿ ಹೇಳಿಕೊಂಡಿದ್ದರು. ಚಿರಂಜೀವಿಯಂಥಾ ಸ್ಟಾರ್ ನಟನ ಸಿನಿಮಾವನ್ನೇ ರೀಮೇಕ್ ಎಂಬ ಕಾರಣಕ್ಕೆ ತಿರಸ್ಕರಿಸುವಂಥಾ ಗಟ್ಟಿತನವನ್ನೂ ಪ್ರದರ್ಶಿಸಿದ್ದರು. ಆದರೆ, ಕಥೆ ಚೆಂದಗಿದೆ ಎಂಬ ಕಾರಣದಿಂದಲೋ ಏನೋ ಏಕ್ ದಿನ ಚಿತ್ರ ಜಪಾನೀಸ್ ಥಾಯ್ ಸಿನಿಮಾದ ರೀಮೇಕ್ ಆದರೂ ನಾಯಕಿಯಾಗಿದ್ದಾಳೆ. ಅಂದಹಾಗೆ, ಆಕೆಯೀಗ ರಾಮಾಯಣ ಚಿತ್ರದ ಸೀತೆಯಾಗಿಯೂ ನಟಿಸುತ್ತಿದ್ದಾಳೆ. ರಾಮಾಯಣವೇ ಸಾಯಿಪಲ್ಲವಿಯ ಮೊದಲ ಬಾಲಿವುಡ್ ಸಿನಿಮಾ ಅಂತ ಅನೇಕರು ಅಂದುಕೊಂಡಿದ್ದಾರೆ. ಆದರೆ, ಏಕ್ ದಿನ ಆಕೆಯ ವೃತ್ತಿಬದುಕಿನ ಮೊದಲ ಬಾಲಿವುಡ್ ಚಿತ್ರವಾಗಿ ದಾಖಲಾಗುತ್ತದೆ!
keywords: saipallavi, junaidkhan, ekdin, bollywood

