ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಕನ್ನಡದ ಸಿನಿಮಾಸಕ್ತರನ್ನು ಸೆಳೆದುಕೊಂಡಾಕೆ ರುಕ್ಮಿಣಿ ವಸಂತ್. ಮೊದಲ ಹೆಜ್ಜೆಯಲ್ಲಿಯೇ ಸಮ್ಮೋಹಕ ಗೆಲುವು ಕಂಡಿದ್ದ ರುಕ್ಮಿಣಿಯ ವೃತ್ತಿ ಬದುಕಿನಲ್ಲಿ ವರ್ಷಗಟ್ಟಲೆ ನಿರ್ವಾತ ಸ್ಥಿತಿಯೊಂದು ಆವರಿಸಿಕೊಂಡಿತ್ತು. ಆದರೆ, ಅದರ ಬೆನ್ನಲ್ಲಿಯೇ ಪ್ಯಾನಿಂಡಿಯಾ ಮಟ್ಟದ ಅವಕಾಶಗಳ ಸರಣಿ ರುಕ್ಮಿಣಿಯನ್ನು ಹಿಂಬಾಲಿಸಲಾರಂಭಿಸಿದೆ. ಇದೀಗ ಟಾಕ್ಸಿಕ್ ಚಿತ್ರದ ಭಾಗವಾಗಿರುವ ರುಕ್ಮಿಣಿ ವಸಂತ್ ಪಾಲಿಗೆ ಮತ್ತೊಂದಷ್ಟು ಅವಕಾಶಗಳು ಬೇರೆ ಬೇರೆ ಭಾಷೆಗಳಿಂದ ಅರಸಿ ಬರಲಾರಂಭಿಸಿವೆ. ಇದೀಗ ಚಿಯಾನ್ ವಿಕ್ರಂ ಪುತ್ರ ಧ್ರುವ್ ವಿಕ್ರಂ ನಾಯಕನಾಗಿ ನಟಿಸಲಿರುವ ಚಿತ್ರವೊಂದಕ್ಕೆ ರುಕ್ಮಿಣಿ ನಾಯಕಿಯಾಗಲು ತಯಾರಾಗಿದ್ದಾರೆ.
ಧ್ರುವ್ ವಿಕ್ರಂ ನಿರೀಕ್ಷೆಗೂ ಮೀರಿ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾನೆ. ಅದ್ಭುತ ನಟನಾಗಿರುವ ತಂದೆಯ ಗರಡಿಯಲ್ಲಿ ಪಳಗಿಕೊಂಡಿರುವ ಧ್ರುವ್ ಈಗಾಗಲೇ ಮೂರು ಸಿನಿಮಾಗಳ ಮೂಲಕ ಮುಖ್ಯ ನಟನಾಗುವತ್ತ ದಾಪುಗಾಲಿಡುತ್ತಿದ್ದಾನೆ. ಇದೀಗ ಆತನ ನಾಲಕ್ಕನೇ ಚಿತ್ರಕ್ಕಾಗಿ ತಂಡವೊಂದು ಒಗ್ಗೂಡಿದೆ. ಸದಾ ಹೊಸತನ, ಹೊಸಾ ಪಾತ್ರಗಳ ಧ್ಯಾನದಲ್ಲಿರುವವರು ವಿಕ್ರಮ್. ಖುದ್ದು ಅವರೇ ತನ್ನ ಮಗನ ಸಿನಿಮಾದ ಪ್ರತಿಯೊಂದನ್ನೂ ನಿರ್ಧರಿಸುತ್ತಿದ್ದಾರೆ. ವಿಶೆಷವೆಂದರೆ, ಯುವ ನಿರ್ದೇಶಕನೊಬ್ಬನಿಗೆ ಸಾರಥ್ಯ ವಹಿಸಿದ್ದಾರೆ. ಸಾಮಾನ್ಯವಾಗಿ ವಿಕ್ರಂ ಥರದ ನಟರು ಪಳಗಿಕೊಂಡ ನಿರ್ದೇಶಕರಿಗೆ ಮಾತ್ರವೇ ಆದ್ಯತೆ ಕೊಡುತ್ತಾರೆ. ಆದರೆ, ಈ ಸಿನಿಮಾದಲ್ಲಿ ಹೊಸಾ ಹುಡುಗ ದೀಪಕ್ ರೆಡ್ಡಿಗೆ ಸ್ವತಂತ್ರ ನಿರ್ದೇಶಕನಾಗೋ ಅವಕಾಶ ಲಭಿಸಿದೆ.
ದೀಪಕ್ ರೆಡ್ಡಿ ಈ ಹಿಂದೆ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದ. ಇದರತ ಬಗ್ಗೆ ವ್ಯಾಪಕ ಮೆಚ್ಚುಗೆ ಕೇಳಿ ಬಂದಿತ್ತು.ಆ ಕಿರುಚಿತ್ರವನ್ನು ನೋಡಿ, ದೀಪಕ್ನ ನಿರ್ದೇಶನಾ ಕೌಶಲ್ಯವನ್ನು ಮೆಚ್ಚಿಕೊಂಡಿರೋ ವಿಕ್ರಂ ಮಗನ ನಾಲಕ್ಕನೇ ಚಿತ್ರದ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಇದೀಗ ಈ ಚಿತ್ರದ ತಾರಾಗಣ ಮತ್ತು ತಾಂತ್ರಿಕ ವರ್ಗದ ಭರ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ, ಆರಂಭದಲ್ಲಿಯೇ ನಾಯಕಿಯಾಗಿಕ ರುಕ್ಮಿಣಿ ವಸಂತ್ ನಿಕ್ಕಿಯಾಗಿದ್ದರಂತೆ. ಇತ್ತೀಚೆಗೆ ಕಥೆ ಕೇಳಿದ ರುಕ್ಮಿಣಿ ಕೂಡಾ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿಂದೆ ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಂತರ ವಿಜಯ್ ಸೇತುಪತಿಯ ಚಿತ್ರದಲ್ಲಿ ರುಕ್ಮಿಣಿ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. ಇದೀಗ ಆಕೆ ಮತ್ತೊಂದು ಸಿನಿಮಾ ಮೂಲಕ ತಮಿಳು ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ.
keywords: rukmini vasanth, toxic, rukmini upcoming project

