ಕರ್ನಾಟಕದ ರಂಗಭೂಮಿಯ ಪಾಲಿನ ನಕ್ಷತ್ರಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಯಶವಂತ ಸರದೇಶಪಾಂಡೆಯ ಅಕಾಲಿಕ ನಿರ್ಗಮನದ ಸೂತಕ ಮಾಸುವ ಮನ್ನವೇ, ಮತ್ತೋರ್ವ ರಂಗಭೂಇ ಕಲಾವಿದ ರಾಜು ತಾಳಿಕೋಟಿಯವರನ್ನು ಹೃದಯಾಘಾತ ಬಲಿ ತೆಗೆದುಕೊಂಡಿದೆ. ಅತ್ಯಂತ ಕಡುಗಷ್ಟದಿಂದ ಮೇಲೆದ್ದು ಬಂದು, ಎಳವೆಯಲ್ಲಿಯೇ ನಾನಾ ಆಘೈಆತಗಳಿಗೆ ಎದೆಯೊಡ್ಡಿ ರಂಗಭೂಮಿ ಕಂಪೆನಿಯೊಂದರ ಮಾಲೀಕರಾಗಿದ್ದವರು ರಾಜು ತಾಳಿಕೋಟಿ. ತಮ್ಮದೇ ಶೈಲಿಯಲ್ಲಿ ನಗಿಸುತ್ತಾ ಬದುಕಿದ್ದ ಅವರೀಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ರಾಜು ತಾಳಿಕೋಟಿ ರಂಗಭೂಮಿಯಲ್ಲಿ ಮಾತ್ರವಲ್ಲದೇ ಸಿನಿಮಾ ರಂಗದಲ್ಲಿಯೂ ಹೆಸರುವಾಸಿಯಾಗಿದ್ದ ನಟ. ಇತ್ತೀಚಿನ ದಿನಗಳ್ಲ್ಲಿ ಅವರ ಆರೋಗ್ಯ ತುಸು ಹದಗೆಟ್ಟಿದೆ ಎಂಬ ಮಾತು ಆಪ್ತ ವಲಯದಲ್ಲಿ ಹರಿದಾಡುತ್ತಿತ್ತು. ಇದರಾಚೆಗೂ ಸಿನಿಮಾ ಅವಕಾಶಗಳು ವಿರಳವಾಗಿ ಅವರತ್ತ ಕೈ ಚಾಚುತ್ತಿದ್ದವು. ಇತ್ತೀಚೆಗಷ್ಟೇ ಅವಕಾಶವೊಂದು ಬಂದು ಸಿನಿಮಾ ಒಂದರ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದರು. ಆ ಸಂಬಂಧವಾಗಿಯೇ ಮಂಗಳೂರಿಗೆ ತೆರಳಿದ್ದ ರಾಜು ತಾಳಿಕೋಟಿಗೆ ನೆನ್ನೆ ರಾತ್ರಿ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು.
ವೈದ್ಯರು ನಿರಂತರವಾಗಿ ರಾಜು ತಾಳಿಕೋಟಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಇಂದು ಸಂಜೆಯ ಹೊತ್ತಿಗೆಲ್ಲ ರಾಜು ತಾಳಿಕೋಟಿ ಉಸಿರು ನಿಲ್ಲಿಸಿದ್ದಾರೆ. ಕಲಿಯುಗದ ಕುಡುಕ ಎಂಬ ಕ್ಯಾಸೆಟ್ ನಾಟಕದ ಮೂಲಕ ಹೆಸರಾಗಿದ್ದ ರಾಜು ತಾಳಿಕೋಟಿ ಓರ್ವ ರಂಗಕಮ ಇಯಾಗಿಯೂ ಸಾಹಸಿ. ತನ್ನ ಖಾಸಗಿ ಬದುಮಕಿನ ವ್ಯಸನಗಳಾಚೆಗೂ ನಾಟಕಗಳಿಗಾಗಿಯೇ ಮುಡಿಪಾದಂತೆ ಬಂದುಕಿದ್ದ ಅವರು, ಅನಿವಾರ್ಯತೆಗಳಿಂದಲೇ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ವಿಶಿಷ್ಟ ಮ್ಯಾನರಿಸಂ, ಮಾತಿನ ಶೈಲಿಯ ಮೂಲಕ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದರು. ಬಿಗ್ ಬಾಸ್‌ಗೂ ಸ್ಪರ್ಧಿಯಾಗಿಕ ಬರುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಇಂಥಾ ನಟ ಇನ್ನು ನೆನಪು ಮಾತ್ರ…