ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ ಮೂಲಕ ತಾನೂ ಕೂಡಾ ದೇಶವನ್ನು ಕಿತ್ತು ತಿನ್ನುತ್ತಿರುವ ಖೂಳ ರಾಜಕಾರಣಿಗಳ ಸಾಲಿಗೆ ಸೇರಿದವನೆಂಬ ಸ್ಪಷ್ಟ ಸಂದೇಶವೊಂದನ್ನು ದಳಪತಿ ರವಾನಿಸಿದ್ದಾನೆ. ಈ ಮೂಲಕ ತೀವ್ರತರನಾದ ನಿರಾಸೆಯನ್ನೂ ಮೂಡಿಸಿದ್ದಾನೆದ. ಇದೇ ಹೊತ್ತಿನಲ್ಲಿ ಜನನಾಯಗನ್ ಚಿತ್ರದ ವಿಚಾರದಲ್ಲಿ ಮತ್ತೊಂದು ಮರ್ಮಾಘಾತ ಎದುರಾಗಿ ಬಿಟ್ಟಿದೆ!
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜನನಾಯಗನ್ ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆಯುತ್ತಿತ್ತು. ಇನ್ನೇನು ಬಿಡುಗಡೆಗೆ ಎರಡು ದಿನ ಇರುವಾಗಲೇ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಅಲ್ಲಿಂದ ಶುರುವಾದ ಆಘಾತಗಳ ಸರಣಿ ಅನೂಚಾನವಾಗಿ ಮುಂದುವರೆದಿದೆ. ಇದೀಗ ಅಮೇಜಾನ್ ಪ್ರೈಮ್ ಕೂಡಾ ಈ ಸಿನಿಮಾದ ಓಟಿಟಿ ಹಕ್ಕುಗಳಿಂದ ಹಿಂದೆ ಸರಿದಿದೆ. ಅದೇನು ಸಣ್ಣ ಮಟ್ಟದ ವ್ಯವಹಾರವಾಗಿರಲಿಲ್ಲ. ಭರ್ತಿ ನೂರಾ ಇಪ್ಪತ್ತು ಕೋಟಿಗಳಿಗೆ ಮಾತುಕತೆ ನಡೆದಿತ್ತು. ಜನನಾಯಗನ್ ಓಟಿಟಿ ಎಂಟ್ರಿಗೆ ಮುಹೂರ್ತವೂ ನಿಗಧಿಯಾಗಿತ್ತು. ಆದರೀಗ ಬಿಡುಗಡೆಯೇ ಪದೇ ಪದೆ ಮುಂದಕ್ಕೆ ಹೋಗುತ್ತಿರೋದರಿಂದ, ಹಳೇ ಮಾತುಕತೆಯಷ್ಟು ಮೊತ್ತ ಕೊಡಲಾಗುವುದಿಲ್ಲ ಅಂತ ಪ್ರೈಮ್ ಮಂದಿ ತಗಾದೆ ಶುರುವಿಟ್ಟಿದ್ದಾರೆ.
ಈ ಬಗ್ಗೆ ನಿರ್ಮಾಪಕರೊಂದಿಗೆ ಸುದೀರ್ಘವಾದ ಮಾತುಕತೆ, ಚೌಕಾಶಿ ವ್ಯವಹಾರ ನಡೆದು ಕಡೆಗೂ ಅಮೇಜಾನ್ ಪ್ರೈಂ ಈ ವ್ಯವಹಾರದಿಂದಲೇ ಹಿಂದೆ ಸರಿದಿದೆ ಎಂಬಂಥಾ ಸುದ್ದಿಗಳು ಹಬ್ಬಿಕೊಂಡಿವೆ. ಇದು ನಿಜಕ್ಕೂ ಧಳಪತಿಗೆ ಬಹುದೊಡ್ಡ ಆಘಾತ. ಹಾಗಂತ ಮದ್ಯ ಪ್ರವೇಶ ಮಾಡಿ ಯಾವ ಭರವಸೆ ಕೊಡಲೂ ಸಾಧ್ಯವಾಗದ ಸ್ಥಿತಿ ದಳಪತಿಯದ್ದು. ಯಾಕೆಂದರೆ, ಈಗಿರುವ ವಾತಾವರಣ ನೋಡಿದರೆ, ಮಳೆಗಾಲ ಬಂದರೂ ಈ ಚಿತ್ರ ಬಿಡುಗಡೆಯಾಗೋದು ಕಷ್ಟವಿದೆ. ಯಾಕೆಂದರೆ, ವಿಜಯ್ ವಿರೋಧಿ ಪಾಳೆಯ ಹಾಗೊಂದು ಅಡ್ಡಗಾಲು ಹಾಕಲು ಏನೇನು ಬೇಕೋ ಅದೆಲ್ಲ ತಯಾರಿಯನ್ನೂ ಮಾಡಿಕೊಂಡಿದೆ. ಅಂತೂ ಅಮೇಜಾನ್ ಪ್ರೈಂ ಡೀಲ್ ಕ್ಯಾನ್ಸಲ್ ಆಗಿರೋದರಿಂದ ಜನನಾಯಗನ್ಗೆ ಬಹುದೊಡ್ಡ ಹಿನ್ನಡೆ, ಅವಮಾನವಾಗಿರೋದಂತೂ ಸತ್ಯ!
keywords: jana nayagan movie, thalapathy vijay, amazon prime, kollywood

