ಕಿರುತೆರೆಯಲ್ಲಿ ಒಂದು (serial) ಧಾರಾವಾಹಿ ಯಶಸ್ಸಿನ ಲಯ ಹಿಡಿದು ಬಿಟ್ಟರೆ ಸಾಕು; ಅದರ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡವರ ನಸೀಬೇ ಬದಲಾಗಿ ಬಿಡೋದಿದೆ. ಸಾಕಷ್ಟು ಮಂದಿ ಅಂಥಾ ಯಶಸ್ಸಿನ ಕಂದೀಲು, ಹಿರಿತೆರೆಯ ದಿಕ್ಕನ್ನು ಬೆಳಗಿ ಬಿಡುತ್ತದೆಂಬ ನಂಬಿಕೆ ಹೊಂದಿರುತ್ತಾರೆ. ಅದು ಕೆಲವೊಮ್ಮೆ ನಿಜವಾಗಿದೆ. ಹಲವಾರು ಬಾರಿ ಸುಳ್ಳಾಗಿದೆ. ಹಾಗೆ ನಿರೀಕ್ಷೆಯೆಲ್ಲ ಕಮರಿದ ಬಳಿಕ ಕೆಲ ನಟ ನಟಿಯರು ಗೊಂದಲದ ನಡುವೆಯೇ ಮಂಕಾಗೋದೂ ಇದೆ. ಆಯ್ಕೆಯ ಗೊಂದಲ, ಸಣ್ಣಗಿನ ಬಿಗುಮಾನಗಳೆಲ್ಲವೂ ಸೇರಿಕೊಂಡು ನೇಪಥ್ಯಕ್ಕೆ ಸರಿದವರ ಸಂಖ್ಯೆಯೂ ಸಾಕಷ್ಟಿದೆ. ಒಂದು ಕಾಲದಲ್ಲಿ (naagini serial) ನಾಗಿಣಿಯಾಗಿ ಬುಸುಗುಡುತ್ತಾ, ಕಿರುತೆರೆ ಪ್ರೇಕ್ಷಕರನ್ನೆಲ್ಲ ಅಪಾದಮಸ್ತಕ ಆವರಿಸಿಕೊಂಡಿದ್ದರಲ್ಲಾ ದೀಪಿಕಾ ದಾಸ್? (deepika das) ಆಕೆಯೂ ಅಂಥಾ ನೇಪಥ್ಯದ ಪಥದಲ್ಲಿದ್ದಾರಾ ಅಂತೊಂದು ಅನುಮಾನ ಖುದ್ದು ಅಭಿಮಾನಿಗಳನ್ನೇ ಕಾಡುತ್ತಿದೆ.

ಕೊಂಚ ಅಂತರ್ಮುಖಿಯಂತೆ ಕಾಣುತ್ತಾ, ಅಹಮ್ಮಿಕೆಯಂತೆ ಗೋಚರಿಸೋ ಪದರಿನೊಳಗೊಂದು ಮಮಕಾರವನ್ನು ಕಾಪಿಟ್ಟುಕೊಂಡಿರುವಾಕೆ ದೀಪಿಕಾ ದಾಸ್. ಬಿಗ್ ಬಾಸ್ ಶೋಗಳ ಮೂಲಕ ಆಕೆಯ ವ್ಯಕ್ತಿತ್ವದ ಮತ್ತೊಂದು ಮಜಲು ಪ್ರೇಕ್ಷಕರೆದುರು ಜಾಹೀರಾಗಿತ್ತು. ಹಾಗೆ ದೀಪಿಕಾ ಬಿಗ್ ಬಾಸ್ ಶೋಗೆ ಬಂದ ನಂತರದಲ್ಲಿ ಅವಕಾಶಗಳು ಸಾಲುಗಟ್ಟೋದೂ ಇದೆ. ಪ್ರತಿಭೆ ಸೇರಿದಂತೆ, ಎಲ್ಲವನ್ನೂ ಹೊಂದಿರುವ ದೀಪಿಕಾ ಕೂಡಾ ಬಿಗ್ ಬಾಸ್ ಬಳಿಕ ಮಿಂಚಬಹುದೆಂದು ಅಂದುಕೊಳ್ಳಲಾಗಿತ್ತು. ಆದರೆ, ಬರಬರುತ್ತಾ ಅದೂ ಸುಳ್ಳಾದಂತಿದೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ದೀಪಿಕಾ ಬರೀ ಸೋಶಿಯಲ್ ಮೀಡಿಯಾಗಳಿಗೆ ಮಾತ್ರವೇ ಸೀಮಿತವಾದಂತಿದೆ!

ಬಿಗ್ ಬಾಸ್ ಶೋನಿಂದ ಹೊರ ಬಂದ ನಂತರ ದೀಪಿಕಾ ಮತ್ತು ಸಹ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಸುತ್ತ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ಅವರಿಬ್ಬರು ಇನ್ನೇನು ಮದುವೆಯಾಗಿಯೇ ಬಿಡುತ್ತಾರೆಂಬರ್ಥದಲ್ಲಿಯೂ ಕಪೋಲಕಲ್ಪಿತ ಸುದ್ದಿಗಳು ಹರಿದಾಡಿದ್ದವು. ಅದರ ಹಿಂದೆ ಎಂಥಾ ಕಿಸುರಿದ್ದರೂ, ಅಂಥಾ ಅಂತೆಕಂತೆಗಳೇ ದೀಪಿಕಾಳು ಒದಷ್ಟು ಕಾಲ ಚಾಲ್ತಿಯಿಟ್ಟಿದ್ದಂತೂ ಸತ್ಯ. ಆ ನಂತರದಲ್ಲಿ ದೀಪಿಕಾ ಅಲ್ಲಿಲ್ಲಿ ರೌಂಡು ಹೊಡೆಯೋದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದೆಲ್ಲ ನಡೆಯುತ್ತಿದೆ. ಅದರ ಸುತ್ತ ಒಂದಷ್ಟು ಸುದ್ದಿಗಳೂ ಆಗುತ್ತಿವೆ. ಆದರೆ, ಆಕೆಯ ವೃತ್ತಿ ಬದುಕಿನ ದಿಕ್ಕು ದೆಸೆಗಳು ಮಾತ್ರ ಈ ಕ್ಷಣಕ್ಕೂ ಸ್ಪಷ್ಟವಿಲ್ಲ.

ಇದೆಲ್ಲವನ್ನೂ ನೋಡಿದರೆ, ದೀಪಿಕಾ ದಾಸ್ ಗೆ ಅವಕಾಶಗಳ ಕೊರತೆ ಕಾಡುತ್ತಿದೆಯಾ ಅಂತೊಂದು ಗುಮಾನಿ ಸಹಜವಾಗಿಯೇ ಕಾಡುತ್ತದೆ. ಒಂದು ಕೋನದಿಂದ ಅದರಲ್ಲಿ ಸತ್ಯವಿರುವಂತೆಯೂ ಭಾಸವಾಗುತ್ತದೆ. ಸಿನಿಮಾ ರಂಗದಲ್ಲಿ ನಾಯಕಿಯಾಗಿ, ಒಳ್ಳೆ ಪಾತ್ರಗಳಲ್ಲಿ ಮಿಂಚುವ ಅವಕಾಶಗಳ ದೀಪಿಕಾ ಮುಂದಿದದವು. ಆದರೆ ಅವ್ಯಾವುವೂ ಫಲಿಸಿದಂತಿಲ್ಲ. ಈ ಹಿಂದೆಯೂ ಒಂದಷ್ಟು ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದರು. ಆದರೆ, ಅವ್ಯಾವುವೂ ಬರಖತ್ತಾಗಿರಲಿಲ್ಲ. ಇದೀಗ ಮತ್ತೆಇರುತೆರೆಗೆ ಮರಳಲು ಆಕೆಗೆ ಇಷ್ಟವಾಗುತ್ತಿಲ್ಲ ಅನ್ನಿಸುತ್ತಿದೆ. ಈ ನಡುವೆ ಅಂತರಪಟ ಅಂತೊಂದು ಧಾರಾವಾಹಿಯಲ್ಲಿ ಆಕೆ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದೂ ಕೂಡಾ ನೋಡ ನೋಡುತ್ತಲೇ ಗಾಯಬ್ ಆಗಿದೆ. ಇದೆಲ್ಲ ಏನೇ ಇದ್ದರೂ ಕಿರುತೆರೆಯಲ್ಲಿ ಗೆದ್ದು ಬುಸುಗುಟ್ಟಿದ್ದ ನಾಗಿಣಿ, ಹಿರಿತೆರೆಯಲ್ಲಿಯೂ ಗೆಲುವಿನ ಹಾದಿ ಹಿಡಿಯುವಂತಾಗಲಿ ಎಂಬುದು ಅಭಿಮಾನಿಗಳ ಬಯಕೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!