ರ್ಯಾಪ್ ಸಾಂಗುಗಳ (rap song) ಹೆಸರಲ್ಲಿ ಅಸಲೀ ಸಾಹಿತ್ಯದ ಮೇಲಿನ ನಡೆಯಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿದೆ. ಡಬ್ಬ ಅಲ್ಲಾಡಿಸಿ ಕಳೆದು ಹೋದವರ ನಡುವೆ ಕಾಲೂರಿ ನಿಂತ ರ್ಯಾಪರ್ಗಳ ಸಾಲಿನಲ್ಲಿ ಒಂದಷ್ಟು ಗಟ್ಟಿ ಕಾಳುಗಳಿವೆ. ಅಂಥಾ ಸಾಲಿನಲ್ಲಿ ಗುರುತಿಸಿಕೊಂಡಿದ್ದಾತ ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಅಲಿಯಾಸ್ ಬಾದ್ಶಾ. ಒಂದಷ್ಟು ರ್ಯಾಪ್ ಸಾಂಗ್ಗಳ ಮೂಲಕ ಸದ್ದು ಮಾಡಿದ್ದ ಈತನೀಗ ಮ್ಯೂಸಿಕ್ ರಿಯಾಲಿಟಿ ಶೋಗಳ ತೀರ್ಪುಗಾರನಾಗಿ ಪ್ರತಿಷ್ಠಾಪಿತನಾಗಿದ್ದಾನೆ. ಇಂಥಾ (badshah) ಬಾದ್ಶಾ ಇದೀಗ ಹೊಸಾ ಹಾಡೊಂದರಲ್ಲಿನ ಆಕ್ಷೇಪಾರ್ಹ ಸಾಹಿತ್ಯ ಮತ್ತು ನೃತ್ಯದ ಮೂಲಕ ವಿವಾದವೆಬ್ಬಿಸಿದ್ದಾನೆ.
ಬಾದ್ಶಾ ಇತ್ತೀಚೆಗೆ ತಟೀರೀ ಎಂಬ ಶೀರ್ಷಿಕೆಯ ವೀಡಿಯೋ ಸಾಂಗ್ ಒಂದನ್ನು ರೂಪಿಸಿದ್ದ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಲೇ ಭಾರೀ ವಿವಾದ ಸೃಷ್ಟಿಯಾಗಿತ್ತು. ಇದರಲ್ಲಿ ಶಾಲಾ ಶಾಲಾ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿಯೇ ಕುಣಿದಾಡುವ ದೃಷ್ಯಾವಳಿಗಳಿದ್ದವು. ಶಾಲಾ ಕಾಲೇಜು ಸಮವಸ್ತ್ರದಲ್ಲಿರುವ ವಿದ್ಯಾರ್ಥಿನಿಯರ ನೃತ್ಯ ಮತ್ತು ಅಶ್ಲೀಲ ಸಂಜ್ಞೆಗಳ ವಿರುದ್ಧ ಪ್ರಜ್ಞಾವಂತರು ಅಪಸ್ವರವೆತ್ತಿದ್ದರು. ನೋಡ ನೋಡುತ್ತಲೇ ವೀವ್ಸ್ ಅನ್ನೇ ಮೀರಿಸುವಂತೆ ವಿವಾದದ ತೀವ್ರತೆ ಹೆಚ್ಚಿಕೊಂಡಿತ್ತು. ಇದೆಲ್ಲವನ್ನೂ ನೋಡಿ ಕಂಗಾಲೆದ್ದಿರೋ ಬಾದ್ಶಾ ಇನ್ಸ್ಟಾಗ್ರಾಮ್ ಮೂಲಕ ಸಾಮೂಹಿಕವಾಗಿ ಕ್ಷಮೆ ಯಾಚಿಸಿದ್ದಾನೆ. ಇದಲ್ಲದೇ ಎಲ್ಲ ಮೂಲಗಳಿಂದಲೂ ಈ ಹಾಡನ್ನು ಡಿಲೀಟ್ ಮಾಡಿ ಬಚಾವಾಗಲೆತ್ನಿಸಿದ್ದಾನೆ.
ಬಾದ್ ಶಾ ಮತ್ತೋರ್ವ ರ್ಯಾಪರ್ ಯೋ ಯೋ ಹನಿಸಿಂಗ್ ಜೊತೆಗಿನ ಕಿತ್ತಾಟಗಳಿಂದಲೇ ಆರಂಭಿಕವಾಗಿ ಸದ್ದು ಮಾಡಿದ್ದವನು. ರ್ಯಾಪ್ ಜಗತ್ತು ಈವತ್ತಿಗೆ ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ರ್ಯಾಪರ್ಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗಾಗದ ವಾತಾವರಣವಿದೆ. ಕನ್ನಡದಲ್ಲಿಯೂ ಕೂಡಾ ರ್ಯಾಪರ್ಗಳ ಕಾಳಗ ಒಂದು ಹಂತದಲ್ಲಿ ಮೇರೆ ಮೀರಿಕೊಂಡಿತ್ತು. ಅಂಥಾದ್ದೊಂದು ಕಾಳಗ ಆರಂಭವಾದದ್ದು ಹನಿಸಿಂಗ್ ಮತ್ತು ಬಾದ್ಶಾ ಕದನದ ಮೂಲಕ. ಅದಾದ ಬಳಿಕ ರ್ಯಾಪ್ ನಲ್ಲಿ ಹೊಸಾ ಪ್ರಕಾರದತ್ತ ಹೊರಳಿಕೊಂಡಿದ್ದ ಬಾದ್ಶಾ, ತನ್ನ ಜವಾಬ್ದಾರಿ ಮರೆತು ಸದರಿ ಹಾಡಿನ ಮೂಲಕ ವಿವಾದವೆಬ್ಬಿಸಿದ್ದಾನೆ. ವಿಶೇಷವೆಂದರೆ ತಟೀರಿ ಹಾಡಿನ ವಿರುದ್ಧ ಬಾದ್ಶಾ ಅಭಿಮಾನಿಗಳೇ ಅಸಹನೆ ಹೊಂದಿದ್ದಾರೆ!
keywords: badshah, rapper, tatiri song, controvercy, bollywood

