ಗಾಗ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಾ ಚಾಲ್ತಿಯಲ್ಲಿರುವಾಕೆ (amisha patel)  ಅಮಿಷಾ ಪಟೇಲ್. ಕಹೋನ ಪ್ಯಾರ್ ಹೈ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಅಮಿಷಾಳ (amisha) ವಯಸ್ಸೀಗ ನಲವತ್ತರ ಗಡಿ ದಾಟಿದೆ. ಅದಕ್ಕೆ ಸರಿಯಾಗಿ ಅವಕಾಶಗಳೂ ಕಡಿಮೆಯಾಗಿದೆ. ಇದೆಲ್ಲದರ ನಡುವೆಯೂ ಅಮಿಷಾ, ಗದರ್2 (gadar2) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ (sunnydeol) ಜೊತೆ ಈಕೆ ತೆರೆ ಹಂಚಿಕೊಂಡಿರುವ ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದೇ ಹೊತ್ತಿನಲ್ಲಿ ಅಮಿಷಾ ಸರಣಿ ಟ್ವೀಟ್‍ಗಳ ಮೂಲಕ ಬಾಂಬಿಟ್ಟು, ಚಿತ್ರತಂಡವನ್ನು ಮುಜುಗರಕ್ಕೀಡು ಮಾಡಿದ್ದಾಳೆ!

ಹೀಗೆ ನಟೀಮಣಿಯರು ಸಿನಿಮಾ ತಂಡದ ಮೇಲೆ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ತಿರುಗಿ ಬಿದ್ದಾಕ್ಷಣ, ಇದು ಕಾಸ್ಟಿಂಗ್ ಕೌಚ್ ಕಿಸುರಿರಬಹುದಾ ಅಂತ ಜನ ಅಂದುಕೊಳ್ಳುತ್ತಾರೆ. ಹಾಗಾದರೆ, ಅಮಿಷಾ ಸರಣಿ ಟ್ವೀಟ್‍ನ ಹಿಂದೆಯೂ ಅಂಥಾದ್ದೇ ಹಿನ್ನೆಲೆ ಇದೆಯಾ ಅಂತ ನೋಡ ಹೋದರೆ, ಆಕೆಯ ಅಸಹನೆಗೆ ಬೇರೆಯದ್ದೇ ರೀತಿಯ ಕಾರಣಗಳಿರೋದು ಪತ್ತೆಯಾಗುತ್ತೆ. ನಿರ್ದೇಶಕ ಅನಿಲ್ ಶರ್ಮಾ ಮತ್ತು ಪ್ರೊಡಕ್ಷನ್ ಟೀಮಿನ ಕಡೆಯಿಂದಾಗಿದೆ ಎನ್ನಲಾದ ಪ್ರಮಾದಗಳೇ ಅಮಿಷಾರ ಪ್ರಧಾನ ಆರ್ಗೆಟ್. ಅದರನ್ವಯ ಹೇಳೋದಾದರೆ, ಗದರ್2 ಚಿತ್ರೀಕರಣದ ಪ್ರೀ ಹಂತದಲ್ಲಿಯೂ ಕಲಾವಿದರು ಸಂಕಷ್ಟಕ್ಕೀಡಾಗಿದ್ದಾರೆ.

ಸಿನಿಮಾ ಅಂದ ಮೇಲೆ ನಿರ್ದೇಶಕರು ಮತ್ತು ಪ್ರಡಕ್ಷನ್ ಟೀಮಿನ ಮೇಲೆ ಮಹತ್ತರವಾದ ಜವಾಬ್ದಾರಿಗಳಿರುತ್ತವೆ. ಆದರೆ ಅವರು ತಮ್ಮ ಜವಾಬ್ದಠಾರಿಯನ್ನು ಮರೆತು ವರ್ತಿಸಿದ್ದಾರೆಂಬುದು ಅಮಿಷಾ ಆರೋಪ. ಮೇಕಪ್, ವಸ್ತ್ರ ವಿನ್ಯಾಸರು ಸೇರಿದಂತೆ ನಾನಾ ವಿಭಾಗದವರಿಗೆ ಸಂಭಾವನೆಯನ್ನೂ ರಿಯಾಗಿ ಕೊಡದೆ ಸತಾಯಿಸಲಾಗಿತ್ತಂತೆ. ಆದರೆ ಝೀ ನಿರ್ಮಾಣ ಸಂಸ್ಥೆ ಇದನ್ನು ಮನಗಂಡು ಬಾಕಿ ಚುಕ್ತಾ ಮಾಡಬೇಕಾಗಿ ಬಂದಿತ್ತಂತೆ. ಇನ್ನುಳಿದಂತೆ ಶೂಟಿಂಗ್ ಸೆಟ್ಟಿನಲ್ಲಿ ಊಟದ ವ್ಯವಸ್ಥೆ ಸೇರಿದಂತೆ ಎಲ್ಲದರಲ್ಲಿಯೂ ಅವ್ಯವಸ್ಥೆ ತಾಂಡವವಾಡುತ್ತಿತ್ತೆಂದು ಅಮಿಷಾ ಆರೋಪಿಸಿದ್ದಾರೆ. ಅಮಿಷಾ ಆರೋಪದ ಬಗ್ಗೆ ಚಿತ್ರತಂಡ ಮಾತ್ರ ಈವರೆಗೂ ಪ್ರತಿಕ್ರಿಯಿಸಿಲ್ಲ. ಅಮಿಷಾ ಆಕ್ರೋಶದ ಹಿಂದಿರೋ ಅಸಲೀ ಮ್ಯಾಟರ್ ಇನ್ನಷ್ಟೇ ಜಾಹೀರಾಗಬೇಕಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!