ಟಿಸೋ ಸಿನಿಮಾಗಳಿಗಿಂತಲೂ, ಆಗಾಗ ಹಂಚಿಕೊಳ್ಳುವ ಅಭಿಪ್ರಾಯಗಳಿಂದಲೇ ಚಾಲ್ತಿಯಲ್ಲಿರುವಾಕೆ (kangana ranaut) ಕಂಗನಾ ರಾಣಾವತ್. ಬಹುಶಃ ಅದೊಂದು ಬಲವಿಲ್ಲದೇ ಹೋಗಿದ್ದರೆ, ಅಡಿಗಡಿಗೆ ಕವುಚಿಕೊಂಡ ಸೋಲುಗಳಿಂದಾಗಿ ಈಕೆ ಅದ್ಯಾವತ್ತೋ ಮಂಕಾಗಿ ಬಿಡುತ್ತಿದ್ದಳೇನೋ. ಆಗಾಗ ಆಳೋ ಪಕ್ಷದ ಭಜನೆ ಮಾಡುತ್ತಾ, ಆ ಮೂಲಕ ಒಂದಷ್ಟು ಪರ, ವಿರೋಧದ ಚರ್ಚೆಯ ಕೇಂದ್ರವಾಗುವ ಕಂಗನಾ ಇದೀಗ ಏಕಾಏಕಿ ಅನಿಮಲ್ ಚಿತ್ರದ ನಿರ್ದೇಶಕ (sandip reddy vanga) ಸಂದೀಪ್ ರೆಡ್ಡಿ ವಂಗಾ ಮೇಲೆ ಕೆಂಡ ಕಾರಿದ್ದಾಳೆ. ಸಂದೀಪ್ ಸಿನಿಮಾಗಳಲ್ಲಿ ತನಗೆ ಯಾವ ಅವಕಾಶವೂ ಬೇಕಿಲ್ಲ, ಒಂದು ವೇಳೆ ಆತ ಅವಕಾಶ ಕೊಟ್ಟರೂ ತಾನು ಖಂಡಿತವಾಗಿಯೂ ನಟಿಸೋದಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿಕೆ ಕೊಟ್ಟಿದ್ದಾಳೆ!

ರಣಬೀರ್ ಕಪೂರ್ ನಾಯಕನಾಗಿ ನಟಿಸಿರುವ ಅನಿಮಲ್ ಚಿತ್ರ ಬಿಡುಗಡೆಗೊಂಡು ತಿಂಗಳಾಗುತ್ತಾ ಬಂದಿದೆ. ಅದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ ಕಲೆಕ್ಷನ್ನಿಗೇನೂ ಕೊರತೆಯಾದಂತಿಲ್ಲ. ರಣಭೀಕರ ಹಿಂಸೆ, ರಕ್ತಪಾತಗಳ ಕಾರಣದಿಂದ ಪ್ರಜ್ಞಾವಂತರು ಈ ಚಿತ್ರವನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದಾರೆ. ಇಂಥಾ ಸಿನಿಮಾಗಳು ಯಾವ್ಯಾವ ರೀತಿಯಲ್ಲಿ ಮಾರಕವಾಗಬಲ್ಲವು ಎಂಬ ದಿಕ್ಕಿನಲ್ಲಿ ಸಿನಿಮಾ ಪಂಡಿತರು ಪರಾಮರ್ಶೆ ನಡೆಸುತ್ತಿದ್ದಾರೆ. ಆದರೆ, ಕಂಗನಾ ಮಾತ್ರ ಆರಂಭದಲ್ಲಿಯೇ ಸಿನಿಮಾ ವೀಕ್ಷಿಸಿ ಅತ್ಯಂತ ನಿಷ್ಟುರವಾದ ಅಭಿಪ್ರಾಯ ಹಂಚಿಕೊಂಡಿದ್ದಳು. ಇದು ಹಿಂಸೆಯನ್ನು ವಿಜೃಂಭಿಸಿರುವ ಸ್ತ್ರೀ ವಿರೋಧಿ ಚಿತ್ರ ಅಂದಿದ್ದಳು.

ಸಂದರ್ಶನವೊಂದರಲ್ಲಿ ಸಂದೀಪ್ ರೆಡ್ಡಿ ವಂಗಾ ಮುಂದೆ ಕಂಗನಾಳ ಅಭಿಪ್ರಾಯವನ್ನು ಮಂಡಿಸಲಾಗಿತ್ತು. ಆ ನೆಗೆಟಿವ್ ಕಮೆಂಟಿನ ಬಗ್ಗೆ ತಲೆ ಕೆಡಿಸಿಕೊಳ್ಳದ ವಂಗಾ `ಮುಂದೆ ಕಂಗನಾ ಜೊತೆಗೂ ಸಿನಿಮಾ ಮಾಡ್ತೀನಿ’ ಅಂದಿದ್ದ. ಈ ವಿಚಾರ ಕಂಗನಾವರೆಗೂ ತಲುಪಿದೆ. ಆದ್ದರಿಂದಲೇ ವಂಗಾನ ಕಡೆಯಿಂದ ಬರುವ ಆಫರ್ ಅನ್ನು ತಿರಸ್ಕರಿಸುವ ನಿಷ್ಠುರ ನುಡಿಗಳ ಆಕೆಯ ಕಡೆಯಿಂದ ರವಾನೆಯಾಗಿವೆ. ಈ ವಿಚಾರದಲ್ಲಿ ಮಾತ್ರ ತನ್ನ ನಿಲುವಿಗೆ ಬದ್ಧಳಾಗಿರುವ, ಯಾವಚ ಮುಲಾಜೂ ಇಲ್ಲದೆ ಈ ಹಿಂಸೆಯ ಕಟಾಂಜನದಂಥಾ ಅನಿಮಲ್ ಚಿತ್ರವನ್ನು ವಿರೋಧಿಸಿದ ಕಂಗನಾಳನ್ನು ಮೆಚ್ಚಲೇ ಬೇಕು!

About The Author