Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    shefali jariwala: ಬ್ಯೂಟಿ ಕ್ವೀನುಗಳ ಸುತ್ತಾ ಸಾವಿನ ಬೋನು!

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    Facebook Twitter Instagram
    Thursday, July 3
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » nimika ratnakar: ಹೈ ವೋಲ್ಟೇಜ್ ಪರ್ಫಾಮೆನ್ಸ್ ಕೊಡಲಿದ್ದಾರೆ ನಿಮಿಕಾ!
    ಸ್ಪಾಟ್ ಲೈಟ್

    nimika ratnakar: ಹೈ ವೋಲ್ಟೇಜ್ ಪರ್ಫಾಮೆನ್ಸ್ ಕೊಡಲಿದ್ದಾರೆ ನಿಮಿಕಾ!

    By Santhosh Bagilagadde03/02/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಕರ್ನಾಟಕ ಸರ್ಕಾರ ಕಡೆಗೂ ಹಂಪಿ ಉತ್ಸವಕ್ಕೆ (hampi uthsava) ಮುಹೂರ್ತ ನಿಗಧಿ ಮಾಡಿದೆ. ಇದೇ ಫೆಬ್ರವರಿ 4ರಿಂದ ಮೂರು ದಿನಗಳ ಕಾಲ ಎಂದಿನಂತೆ ಅದ್ದೂರಿಯಾಗಿ ಈ ಉತ್ಸವ ಜರುಗಲಿದೆ. ಸದ್ಯದ ಮಟ್ಟಿಗೆ ವಿಜಯನಗರ ಸಾಮ್ರಾಜ್ಯದ ಕೆಲ ಕುರುಹುಗಳನ್ನಷ್ಟೇ ಹಂಪಿ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅದರ ಅಸಲೀ ಛಾಯೆಯನ್ನು ನೆನಪಿಸಿಕೊಳ್ಳುತ್ತಾ, ಆ ವೈಭವೋಪೇತ ಘಳಿಗೆಗಳನ್ನು ಮನನ ಮಾಡಿಕೊಳ್ಳುವ ಈ ಉತ್ಸವಕ್ಕೊಂದು ಘನತೆ ಇದೆ. ಈ ಕಾರಣದಿಂದಲೇ ಸದರಿ ಉತ್ಸವದಲ್ಲಿ ಭಾಗಿಯಾಗೋದನ್ನು ಸೆಲೆಬ್ರಿಟಿಗಳೂ ಕೂಡಾ ಪ್ರತಿಷ್ಠೆಯೆಂಬಂತೆ ಸಂಭ್ರಮಿಸುತ್ತಾರೆ. ಈ ಬಾರಿ ಅಂಥಾದ್ದೊಂದು ಸುವರ್ಣಾವಕಾಶ ನಟಿ (actress nimika ratnakar) ನಿಮಿಕಾ ರತ್ನಾಕರ್ ಪಾಲಿಗೆ ಒಲಿದು ಬಂದಿದೆ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star darshan) ಜೊತೆ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕುವ ಮೂಲಕವೇ ಮುನ್ನೆಲೆಗೆ ಬಂದವರು; ಪ್ರಸಿದ್ಧಿ ಪಡೆದುಕೊಂಡಿರುವವರು (nimika ratnakar) ನಿಮಿಕಾ ರತ್ನಾಕರ್. ಆ ಹಾಡಿನ ಪ್ರಭೆಯಲ್ಲಿಯೇ ಅವರಿಗೆ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಕೂಡಿ ಬಂದಿದೆ. ಆ ವೇದಿಕೆಯಲ್ಲಿ ಹೈ ವೋಲ್ಟೇಜ್ ನೃತ್ಯ ಪ್ರದರ್ಶನ ನೀಡಲು ನಿಮಿಕಾ ಇದೀಗ ಭರದಿಂದ ತಾಲೀಮು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಹಂಪಿ ಅಂದರೇನೇ ಕರುನಾಡಿನ ಎಲ್ಲ ದಿಕ್ಕುಗಳಲ್ಲಿಯೂ ಹೇಳಲಾರದ್ದೊಂದು ಮೋಹ ಹಬ್ಬಿಕೊಂಡಿದೆ. ಅಂಥಾದ್ದೊಂದು ಹಂಪಿಯೆಡೆಗಿನ ಪ್ರೀತಿ ಹೊಂದಿರುವವರು ನಿಮಿಕಾ. ಆದರೆ, ಈ ವರೆಗೂ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲವಂತೆ.

    ಆ ಕೊರಗೀಗ ನೀಗಿದೆ. ಕೇಳಿಸದೆ ಕಲ್ಲುಕಲ್ಲಿನಲಿ ಕನ್ನಡ ನುಡಿ ಎಂಬಂಥಾ ಹಾಡುಗಳಲ್ಲಿ ಮಾತ್ರವೇ ನೋಡಿದ್ದ ಹಂಪಿಯನ್ನು ಕಣ್ತುಂಬಿಕೊಳ್ಳುವ ಕ್ಷಣಕ್ಕಾಗಿ ನಿಮಿಕಾ ಕಾತರರಾಗಿದ್ದಾರೆ. ಇಂಥಾದ್ದೊಂದು ಸುವರ್ಣಾವಕಾಶ ತನ್ನ ಪಾಲಿಗೆ ಕೂಡಿ ಬಂದಿದ್ದಕ್ಕೆ ಪುಷ್ಪವತಿ ಹಾಡಿನ ಕ್ರೇಜೇ ಕಾರಣ ಎಂಬುದು ನಿಮಿಕಾರ ಧನ್ಯತೆ. ಅಷ್ಟಕ್ಕೂ ಅದೊಂದು ಹಾಡು ನಿಮಿಕಾ ಪಾಲಿಗೆ ಕಟ್ಟಿಕೊಟ್ಟ ಸಂಭ್ರಮ ಸಣ್ಣದೇನಲ್ಲ. ಅದು ಇಡೀ ಕರ್ನಾಟಕವನ್ನು ಟೂರು ಹೊಡೆಯುವ ಅವಕಾಶ ಕಲ್ಪಿಸಿದೆ. ರಾಜ್ಯದ ನಾನಾ ಭಾಗಗಳಲ್ಲಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿದೆ. ಇದೀಗ ಹಂಪಿ ಉತ್ಸವದ ಸರದಿ…

    ಹಂಪಿ ಉತ್ಸವದ ಮೂಲಕ ಉತ್ತರ ಕರ್ನಾಟಕದ ಸಿನಿಮಾ ಪ್ರೇಮಿಗಳನ್ನು ಮುಖಾಮುಖಿಯಾಗುತ್ತಿರೋ ಖುಷಿ ನಿಮಿಕಾರಲ್ಲಿದೆ. ಉತ್ತರ ಕರ್ನಾಟಕ ಸೀಮೆಯಲ್ಲಿ ಅದೆಂಥಾ ಸಿನಿಮಾ ಪ್ರೇಮವಿದೆ, ಅಲ್ಲಿನ ಮಂದಿಯ ಅಭಿಮಾನದ ತೀವ್ರತೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವಂಥಾದ್ದೆ. ಅಂಥಾ ಗಾಢ ಪ್ರೀತಿ, ಅಭಿಮಾನ ಪುಷ್ಪವತಿ ಹಾಡಿನ ಮೂಲಕ ನಿಮಿಕಾಗೂ ದಕ್ಕಿದೆ. ಅಂದಹಾಗೆ, ಈ ಹಿಂದೆ ಅವರು ದಸರಾ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿದಾಗ ಪೋಷಕರು ಹಾಜರಿದ್ದು ಸಂಭ್ರಮಿಸಿದ್ದರಂತೆ. ಹಂಪಿ ಉತ್ಸವವನ್ನೂ ಕೂಡಾ ಹೆತ್ತವರೊಂದಿಗೆ ಸಂಭ್ರಮಿಸುವ ಇರಾದೆ ನಿಮಿಕಾರಲ್ಲಿದೆ!

    nimika_ratnakar_hampiuthsav_bold_actress_darshan_sandalwood_kfi
    Share. Facebook Twitter LinkedIn WhatsApp Telegram Email
    Previous Articlesaramsha movie trailer review: ಇದು ರಕ್ತ ಕತ್ತಲೆ ಕರ್ಕಶಗಳಾಚೆಯ ಬೆರಗು
    Next Article puri jagannath drugs case: ಡ್ರಗ್ಸ್ ಕೇಸ್ ನಲ್ಲಿ ಬಿಗ್ ರಿಲೀಫ್!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    01/07/2025

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    01/07/2025

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    20/06/2025
    Search
    Category
    • OTT (3)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (21)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (57)
    • ಸೌತ್ ಜೋನ್ (99)
    • ಸ್ಪಾಟ್ ಲೈಟ್ (172)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202331 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views
    Don't Miss
    ಬಾಲಿವುಡ್ 02/07/2025

    shefali jariwala: ಬ್ಯೂಟಿ ಕ್ವೀನುಗಳ ಸುತ್ತಾ ಸಾವಿನ ಬೋನು!

    ಪ್ರಕೃತಿ ಸೂತ್ರಗಳಿಗೆ ವಿರುದ್ಧವಾಗಿ ಚಲಿಸಿ ಬಚಾವಾಗುವ ಯಾವ ಶಕ್ತಿಯೂ ಕೂಡಾ ಮನುಷ್ಯಮಾತ್ರರಿಗಿಲ್ಲ. ಇದು ಗೊತ್ತಿದ್ದೂ ಕೂಡಾ ಯೌವನವನ್ನು ಕಾಪಿಟ್ಟುಕೊಳ್ಳುವ, ಸಾವನ್ನು…

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.