ಬಿಗ್ ಬಾಸ್ ಶೋನ (bigg boss seaosn 10) ಹತ್ತನೇ ಆವೃತ್ತಿ ಶುರುವಾಗಿದೆ. ಒಂದು ಕಾಲದಲ್ಲಿ ಒಂದಷ್ಟು ಸಂಚಲನ ಸೃಷ್ಟಿಸಿ, ಹೊಸತನದ ಸೆಳೆಮಿಂಚು ಪ್ರವಹಿಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್. ಅಷ್ಟಕ್ಕೂ ಅದ್ಯಾವುದೋ ದೇಶದಲ್ಲಿನ ಪುರಾತನ ಕಾನ್ಸೆಪ್ಟ್ ಅದು. ಅದರ ಹಿಂದೆ ಮನುಷ್ಯನಾಳದ ಅಸಲೀ ಸಕಾಲಜಿ ಇದೆ. ತಮ್ಮ ಮನೆಯಲ್ಲಿ ಸಮಸ್ಯೆಗಳ ಮೆರವಣಿಗೆ ನಡೆಯುತ್ತಿದದರೂ, ಪಕ್ಕದ ಮನೆಯ ಕಿಟಕಿಯಾಚೆ ಇಣುಕಿ ನೋಡೋ ಕೂರಿಯಾಸಿಟಿ ಇದೆಯಲ್ಲಾ? ಅದುವೇ ಈ ಕಾರ್ಯಕ್ರಮದ ಟಿಆರ್‍ಪಿ ತಳಹದಿ. ಅಂಥಾ ಕಾರ್ಯಕ್ರಮ ಕನ್ನಡದಲ್ಲಿ ಬರುತ್ತದೆಂದಾಕ್ಷಣವೇ ಥ್ರಿಲ್ ಮೂಡಿಕೊಂಡಿದ್ದದ್ದು ನಿಜ. ಅದರಲ್ಲಿಯೂ ಕಿಚ್ಚಾ ಸುದೀಪ್ (kiccha sudeep) ಸಾರಥ್ಯ ವಹಿಸಿಕೊಳ್ಳುತ್ತಾರೆ ಅಂದಾಕ್ಷಣ ಪ್ರೇಕ್ಷಕರು ಖುಷಿಗೊಂಡಿದ್ದೂ ಸತ್ಯ. ಅಥಾ ಥ್ರಿಲ್ಲುಗಳೆಲವೂ ಮೂರು ಸೀಜನ್ನು ಮುಗಿಯೋ ಹೊತ್ತಿಗೆಲ್ಲ ಉಸಿರು ಚೆಲ್ಲಿ ಬಿಟ್ಟಿದ್ದವು.

ಆ ಹೊತ್ತಿಗೆಲ್ಲ ಕಿಚ್ಚನ ಘನತೆಗೆ ಇಂಥಾ ಶೋಗಳು ಸರಿ ಹೊಂದೋದಿಲ್ಲ ಎಂಬಂಥಾ ಕೂಗೂ ಕೇಳಿ ಬರಲಾರಂಭಿಸಿತ್ತು. ಅದು ಹತ್ತನೇ ಸೀಜನ್ನು ಆರಂಭಗೊಂಡ ಈ ಘಳಿಗೆಯಲ್ಲಿ ಮತ್ತಷ್ಟು ತೀವ್ರವಾಗಿ ಬಿಟ್ಟಿದೆ. ಈ ಬಾರಿಯ ಸ್ಪರ್ಧಿಗಳನ್ನೊಮ್ಮೆ ನೋಡಿದರೆ, ಒಂದಷ್ಟು ಗಟ್ಟಿ ಕಾಳುಗಳಿರುವಂತೆ ಕಾಣಿಸೋದು ನಿಜ. ಅದೇ ಹೊತ್ತಿನಲ್ಲಿ, ಈ ಶೋ ಸೇರಿಕೊಳ್ಳಲು ಒಂದಷ್ಟು ಗಿಮಿಕ್ಕುಗಳನ್ನು ಮಾಡಿ ಬಂದವರೂ ಇದ್ದಾರೆ. ಸುಳು ಬೊಗಳುತ್ತಾ ಮೀಡಿಯಾಗಳನ್ನೂ ಮಂಗಾ ಮಾಡಿದ್ದ ದ್ರೋಣ್ ಪ್ರತಾಪ್, ಬುಲಟ್ ಪ್ರಕಾಶನ ಮಗನೆಂಬುದನ್ನೇ ಕಿರೀಟದಂತೆ ಧರಿಸಿಕೊಂಡು ಮೆರೆಯುತ್ತಿರುವ ಎಳಸು ಕುನ್ನಿಯಂಥಾ ಬುಲೆಟ್ ರಕ್ಷಕ್… ಇಂಥರನ್ನೆಲ್ಲ ಯಾವ ಸೌಭಾಗ್ಯಕ್ಕಾಗಿ ಬಿಗ್ ಬಾಸ್ ದೊಡ್ಡಿಗೆ ತುಂಬಿಕೊಂಡಿದ್ದಾರೆಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.

ಇನುಳಿದಂತೆ, ಈ ಸೀಜನ್ನಿನ ಬಿಗ್ ಬಾಸ್ ಸ್ಪರ್ಧಿಗಳ ವಿಚಾರದಲ್ಲಿ ಮತ್ತೊಂದು ಸೂಕ್ಷ್ಮವೂ ದಟ್ಟವಾಗಿ ಕಾಣಿಸುತ್ತಿದೆ. ಕೆಲ ನಟ ನಟಿಯರಿಗೆ ಬಿಗ್ ಬಾಸ್ ಸ್ಪರ್ಧಿಗಳಾಗಿ ಹೆಚ್ಚೆಚ್ಚು ಜನರನ್ನು ತಲುಪಿಕೊಳ್ಳಬೇಕೆಂಬ ತಲುಬಿದೆ. ಅದು ಸಹಜ. ಆದರೆ, ಅದನ್ನು ಸಾಧ್ಯವಾಗಿಸಿಕೊಳ್ಳುವ ದಾರಿಯಾದರೂ ನೆಟ್ಟಗಿರಬೇಕಾಗುತ್ತೆ. ಈ ಚರ್ಚೆಗೆ ಪ್ರಧಾನವಾಗಿ ಒಳಗೊಳ್ಳುವವರು ಕಿರುತೆರೆ ನಟಿಯರಾದ ತನಿಷಾ ತಾಪಂಡ ಮತ್ತು ನಮ್ರತಾ ಗೌಡ. ಅದ್ಯಾವುದೋ ಸವಕಲು ಧಾರಾವಾಹಿಯೊಂದರಲ್ಲಿ ವಿಲನ್ ಆಗಿ ನಟಿಸಿದ್ದಾಕೆ ತನಿಷಾ ಕುಪ್ಪಂಡ. ವಿಲನ್ನಾಗಿ ಅದೇನೇ ಕೋಪ, ತಾಪ ಪ್ರದರ್ಶಿಸಿದರೂ, ಹೇಳಿಕೊಳ್ಳುವಂಥಾ ಪ್ರಚಾರ ಸಿಕ್ಕಿರಲಿಲ್ಲ.

ರಾಮ್ ಜಿ ಎಂಬಾತ ಕಂತುಗಟ್ಟಲೆ ಎಳೆದಾಡಿದ್ದ ಆ ಖರಾಬು ಸೀರಿಯಲ್ಲು ಕಡೆಗೂ ಸಮಾಪ್ತಿಗೊಂಡಿತ್ತು. ಅದರ ಬೆನ್ನಲ್ಲಿಯೇ ತನಿಷಾಗೆ ಗುರು ದೇಶಪಾಂಡೆಯ ಪೆಂಟಗನ್ ಎಂಬ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಅದರಲ್ಲಿ ಬೆತ್ತಲೆ ಬೆನು ತೋರಸಿ, ನಾನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ಈಕೆ ಏಕಾಏಕಿ ಪ್ರಸಿದ್ಧಿ ಪಡೆದುಕೊಂಡಿದ್ದಳು. ನಂತರ ಸಾಮಾಜಿಕ ಜಾಲತಾಣಳಲ್ಲಿ ಬಿಡುಬೀಸಾಗಿ ಕಾಣಿಸಿಕೊಳ್ಳುವ ಮೂಲಕ, ಆ ಪ್ರಚಾರದ ಪ್ರಭೆಯನ್ನು ಕಾಪಿಟ್ಟಕೊಂಡಿದ್ದಳು. ಈವತ್ತಿಗೆ ಅಂಥಾ ಹಠಾತ್ ಪಬ್ಲಿಸಿಟಿಯೇ ತನಿಷಾಳನ್ನು ಬಿಗ್ ಬಾಸ್ಮನೆ ತಲುಪಿಸಿದೆ.

ಇನ್ನು ನಮ್ರತಾಳ ವಿಚಾರಕ್ಕೆ ಬಂದರೆ, ಕೃಷ್ಣ ರುಕ್ಮಿಣಿ ಅಂತೊಂದು ಸೀರಿಯಲ್ಲಿನ ಮೂಲಕ ಈಕೆ ಬಣ್ಣ ಹಚ್ಚಿದ್ದಳು. ಆ ನಂತರ ಪುಟ್ ಗೌರಿ ಮದುವೆ ಧಾರಾವಾಹಿಯಲ್ಲಿಯೂ ನಟಿಸಿದ್ದಳು. ಆ ನಂತರದಲ್ಲಿ ನಾಗಿಣಿಯಾಗಿ ಬುಸುಗುಟ್ಟಿದರೂ ಕೂಡಾ ಹೇಳಿಕೊಳ್ಳುವಂಥಾ ಹೈಪು ಸಿಕ್ಕಿರಲಿಲ್ಲ. ಅದೆಲ್ಲವೂ ಮುಗಿದಾದ ನಂತರ ಈಕೆ ಜಲಪಾತವೊಂದರ ಮುಂದೆ ಟೂ ಪೀಸ್ ನಲ್ಲಿ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿದ್ದಳು. ಇಂಥಾದ್ದಕ್ಕೆ ಬಾಯ್ತೆರೆದು ಕೂತು ಬರಗೆಟ್ಟ ವಾಹಿನಿಯೊಂದು ಅದನ್ನೇ ಸ್ಪೆಷಲ್ ಪ್ರೋಗ್ರಾಮು ಮಾಡಿ ಬಿಟ್ಟಿತ್ತು. ಆ ಪ್ರಚಾರವೇ ಬಿಗ್ ಬಾಸ್ ಮಂದಿ ನಮ್ರತಾಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಮಾಡಿದ್ದರೂ ಅಚ್ಚರಿಯೇನಿಲ್ಲ.

ಇದು ಈ ಸಮಾಜಕ್ಕೆ ಎಂಥಾ ಸಂದೇಶ ಕೊಡಲು ಸಾಧ್ಯ? ಈವತ್ತಿಗೂ ಬಿಗ್ ಬಾಸ್ ಸ್ಪರ್ಧಿಯಾಗಬೇಕೆಂಬ ಕನಸು ಅನೇಕರಲ್ಲಿದೆ. ಅವರೆಲರ ಮುಂದೆ ಬಟ್ಟೆ ಕಳಚಿ ನಿಲ್ಲೋ ಆಯ್ಕೆ ಒಂದೇ ಉಳಿದುಕೊಂಡರೆ ಅದಕ್ಕಿಂತಲೂ ದುರಂತ ಬೇರೇನಿದೆ? ಕೊಂಚವಾದರೂ ಸಾಧಿಸಿದವರನ್ನು, ಸಾಧಿಸೋ ಛಲ, ಪ್ರತಿಭ ಹೊಂದಿರುವವರನ್ನು, ತಲೆ ನೆಟ್ಟಗಿರುವವರನ್ನು ಮಾತ್ರ ಪರಿಗಣಿಸಿದರೆ ಈ ಕಾರ್ಯಕ್ರಮಕ್ಕೊಂದು ಘನತೆ ಇರುತ್ತದೆ. ಅಷ್ಟರ ಮಟ್ಟಿಗೆ ಕಿಚ್ಚನ ಮರ್ಯಾದೆಯೂ ಮುಕಾಗೋದು ತಪ್ಪುತ್ತದೆ. ಅದು ಬಿಟ್ಟು ಕಾಗೆ ಪ್ರತಾಪ, ಬುಲೆಟ್ ರಕ್ಷಕ್ ನಂಥಾ ಅರೆಬೆಂದ ಆಸಾಮಿಗಳನ್ನು, ಬಿಚ್ಚಮ್ಮಗಳನ್ನು ತುಂಬಿಕೊಂಡರೆ ಪ್ರೇಕ್ಷಕರು ಖುದ್ದಾಗಿ ಬಿಗ್ ಬಾಸ್ ಮುಖಕ್ಕೆ ತುಪುಕ್ಕನೆ ಉಗಿದು ಬಿಡುತ್ತಾರೆ. ದುರಂತವೆಂದರೆ, ಕಳೆದ ಒಂದಷ್ಟು ಸೀಜನ್ನುಗಳು ಬಿಗ್ ಬಾಸ್ ಮಂದಿಗೆ ರಾಚಿದ ಉಗುಳನ್ನು ಒರೆಸಿಕೊಂಡು ಮುಂದುವರೆಯುವ ಭಂಡತನ ಕಲಿಸಿದಂತಿದೆ!

About The Author