ghost movie: ಇಲ್ಲಿರೋದು ಯಾವ ರೀತಿಯ ಯುದ್ಧ?

1e96024a-aa4b-4cc3-91c9-ed1ba16ee6ea

ನ್ನಡ ಚಿತ್ರರಂಗದ ಮಟ್ಟಿಗೆ ವಯಸ್ಸನ್ನು ಕೇವಲ ಸಂಖ್ಯೆ ಮಾತ್ರವೆಂಬಂತೆ ಬಿಂಬಿಸಿರುವ ನಟ (shivaraj kumar) ಶಿವರಾಜ್ ಕುಮಾರ್. ಸೋಲು ಗೆಲುನ್ನು ಸಮಾನವಾಗಿ ಸ್ವೀಕರಿಸುತ್ತಾ, ಒಂದು ಸೋಲನ್ನು ದೊಡ್ಡ ಗೆಲುವಿನ ಮೂಲಕ ನೀಗಿಕೊಳ್ಳುತ್ತಾ ಬಂದವರು ಶಿವಣ್ಣ. ಇತ್ತೀಚೆಗೆ ತೆರೆ ಕಂಡಿದ್ದ ಜೈಲರ್ (jailer movie) ಚಿತ್ರ ಶಿವಣ್ಣನಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಅದರ ಪ್ರಭೆಯಲ್ಲಿಯೇ ಅವರೀಗ ಮತ್ತೆ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿಸ ಹೊರಟಿದ್ದಾರೆ; ಘೋಸ್ಟ್ (ghost movie updates) ಚಿತ್ರದ ಮೂಲಕ!

ಪ್ರತಿಭಾನ್ವಿತ ನಿರ್ದೆಶಕ, ಒಂದು ಶಶಕ್ತವಾದ ತಂಡ ಮತ್ತು ಎಂಥಾ ಪಾತ್ರಕ್ಕಾದರೂ ಸೈ ಎನ್ನುವಂಥಾ ನಾಯಕ… ಇಷ್ಟಿದ್ದು ಬಿಟ್ಟರೆ ಪುಷ್ಕಳ ಗೆಲುವು ನಿಕ್ಕಿ. ಅದರಲ್ಲಿಯೂ ಘೋಸ್ಟ್ ಚಿತ್ರ ಏಕಕಾಲದಲ್ಲಿಯೇ ಮೂರು ಭಾಷೆಗಳಲ್ಲಿ ತಯಾರಾಗಿದೆ. ಈ ಹಿಂದೆ ಆ ಮೂರೂ ಭಾಷೆಗಳಲ್ಲಿನ ಸಣ್ಣ ತುಣುಕೊಂದರ ಮೂಲಕ ಶಿವಣ್ಣ ಮೋಡಿ ಮಾಡಿದ್ದರು. ಅದೇ ಬಿಸಿಯಲ್ಲೀಗ ಟ್ರಲರ್ ಲಾಂಚ್ ಆಗಿದೆ.

ಈ ಟ್ರೈಲರ್ ನಲ್ಲಿ ಪ್ರಧಾನವಾಗಿ ಕಾಣಿಸಿರೋದು ಪ್ಯಾನಿಂಡಿಯಾ ಮಟ್ಟದ ಮೇಕಿಂಗ್ ಚಹರೆ ಮತ್ತು ಕಟ್ಟುಮಸ್ತಾದ ಕಥೆಯ ಮುನ್ಸೂಚನೆ. ಇದೇ ಹೊತ್ತಿನಲ್ಲಿ ಘೋಸ್ಟ್ ಬಸವಳಿದು ನಿಂತಿರೋ ಕನ್ನಡ ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ಆಗಬಹುದಾದ ನಿರೀಕ್ಷೆ ಕೂಡಾ ಗರಿಗೆದರಿಕೊಂಡಿದೆ. ಕಾಂತಾರ ಆ ಪರಿಯ ಗೆಲುವು ದಾಖಲಿಸಿದ ನಂತರವೂ ಚಿತ್ರರಂಗಕ್ಕೊಂದು ಗ್ರಹಣ ಕವುಚಿಕೊಂಡಿತ್ತು. ಅದು ಘೋಸ್ಟ್ ಮೂಲಕ ನೀಗೀತೆಂಬ ಭರವಸೆ ದಟ್ಟವಾಗಿಯೇ ಮೂಡಿಕೊಂಡಿದೆ.

ಒಂದು ಪ್ಯಾನಿಂಡಿಯಾ ಮಟ್ಟದ ಗೆಲುವು ಚಿತ್ರರಂಗದ ಪರಿಸ್ಥಿತಿಯನ್ನ ಸುಧಾರಿಸು ಸಾಧ್ಯವಿಲ್ಲ. ಒಂದರ ಬೆನ್ನಿಗೊಂದರಂತೆ ಗೆಲುವು ದಕ್ಕುತ್ತಾ ಹೋದರೆ, ಬದಲಾವಣೆ ಖಂಡಿತಾ ಸಾಧ್ಯ. ಈಗಂತೂ ಎಲ್ಲರೂ ಕಂಟೆಂಟು, ಗುಣಮ್ಟದ ಕಡೆಗೆ ಲಕ್ಷ್ಯ ವಹಿಸುತ್ತಿದ್ದಾರೆ. ಬೇಕಾಬಿಟ್ಟಿ ರೀಲು ಸುತ್ತಿದರೆ ಬರಖತ್ತಾಗೋದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಹೀಗಿರುವ ಚಿತ್ರರಂಗಕ್ಕೆ ಘೋಸ್ಟ್ ಗೆಲುವಿನ ಮೂಲಕ ಬೂಸ್ಟರ್ ಡೋಸ್ ಆಗುವ ಲಕ್ಷಣಗಳ ಢಾಳಾಗಿ ಗೋಚರಿಸುತ್ತಿವೆ!