Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಹೀಗಿದೆ ಈ ಪಿಚ್ಚರ್»pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!
    ಹೀಗಿದೆ ಈ ಪಿಚ್ಚರ್

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    By Santhosh Bagilagadde03/06/2023
    Facebook Twitter Telegram Email WhatsApp
    c04a0f11 7106 423e bea0 409c7acc841d
    Share
    Facebook Twitter LinkedIn WhatsApp Email Telegram

    ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದ್ದ ಚಿತ್ರ (pinki elli) `ಪಿಂಕಿ ಎಲ್ಲಿ’. ಪೃಥ್ವಿ ಕೋಣನೂರು (prithvi konanur)  ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ವಿಶ್ವಾದ್ಯಂತ ಹೆಸರು ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾಗಳು ಪ್ರೇಕ್ಷಕರ ಪಾಲಿಗೆ ಮರೀಚಿಕೆಯಾಗುಳಿಯುತ್ತವೆ. ಆದರೆ, ಪಿಂಕಿ ಎಲ್ಲಿ ಚಿತ್ರವೀಗ ಸಿನಿಮಾ ಮಂದಿರಗಳಲ್ಲಿಯೂ ಬಿಡುಗಡೆಗೊಂಡಿದೆ. ಹಾಗೆ ಪ್ರೀತಿಯಿಂದ ಬಂದ ನೋಡಿದ್ದ ಪ್ರತಿಯೊಬ್ಬರ ನರನಾಡಿಗಳಿಗಿಳಿದು ಪಿಂಕಿ (pinki)  ಕಾಡಿದ್ದಾಳೆ. ಅಬ್ಬರವಿಲ್ಲದೆಯೇ ಆದ್ರ್ರಗೊಳಿಸುವ ಈ ಸಿನಿಮಾದ ಗುಣವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ.

    e0dbab9d f2d6 4d15 82e7 62f623103002ಇಲ್ಲಿ ಹಿನ್ನೆಲೆ ಸಂಗೀತದ ಆರ್ಭಟವಿಲ್ಲ, ಪಾತ್ರಗಳೂ ಕೂಡಾ ಸಹಜತೆಯ ಗೆರೆ ದಾಟಿ ವರ್ತಿಸುವುದಿಲ್ಲ, ಯಾವ ನಾಟಕೀಯತೆಗೂ ಇಲ್ಲಿ ಆಸ್ಪದವಿಲ್ಲ… ಹೀಗಿದ್ದರೂ ಒಂದು ಭರ್ಜರಿ ಸಸ್ಪೆನ್ಸ್ ಥ್ರಿಲ್ಲರ್ ಸೀನಿಮಾವನ್ನು ನಿವಾಳಿಸಿ ಎಸೆಯುವಂಥಾ ಅನುಭೂತಿಯೊಂದನ್ನು ಈ ಚಿತ್ರ ಮುಫತ್ತಾಗಿ ಕೊಟ್ಟು ಬಿಡುತ್ತದೆ. ಇಲ್ಲಿ ಪಾತ್ರವಾಗಿರೋ ಪ್ರತೀ ಜೀವಗಳ ಏರಿಳಿತಗಳೂ ಎದೆಗೆ ನಾಟುತ್ತವೆ. ಅಲ್ಲಿನ ವಿಷಾದ, ಕಣ್ಣಂಚು ದಾಟದ ದುಃಖ, ಭಾವಗಳೆಲ್ಲವೂ ಅನಾಯಾಸವಾಗಿ ನೋಡುಗರನ್ನು ದಾಟಿಕೊಳ್ಳುತ್ತದೆ. ಅಷ್ಟೊಂದು ಸಮರ್ಥವಾಗಿ ದೃಷ್ಯ ಕಟ್ಟುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು (pruthvi konanur) ಗೆದ್ದಿದಾರೆ.

    8152b6db 8f74 4ba2 8896 86de85e4570eಬೆಂಗಳೂರಿನಂಥಾ ಮಹಾ ನಗರಗಳಲ್ಲಿನ ಬದುಕಿನ ಕ್ರಮವೇ ಬೇರೆ. ಮೇಲುನೋಟಕ್ಕೆ ಥಳುಕು ಬಳುಕುಗಳನ್ನಿಟ್ಟುಕೊಂಡಿರುವ ಇಂಥಾ ನಗರಗಳ ಗರ್ಭದಲ್ಲಿ ಘಾಸಿಗೊಂಡ ಬದುಕುಗಳು ಸಾಕಷ್ಟು ಅಸಂಖ್ಯೆಯಲ್ಲಿದ್ದಾವೆ. ಒಂದು ಕಾಲದಲ್ಲಿ ನಡೆದಿದ್ದಂಥಾ ಎಳೆಯನ್ನೇ ಇಟ್ಟುಕೊಂಡು ನಿರ್ದೇಶಕರಿಲ್ಲಿ ದೃಷ್ಯ ಕಟ್ಟಿದ್ದಾರೆ. ಮುರಿದು ಬಿದ್ದ ಸಂಸಾರ, ಗಂಡನಿಂದ ದೂರವಾಗಿ ಪುಟ್ಟ ಮಗುವಿನೊಂದಿಗೆ ಬದುಕು ಕಟ್ಟಿಕೊಳ್ಳಬಯಸೋ ಹೆಣ್ಣು ಮಗಳು. ಆ ಕೆಲಸದ ಅನಿವಾರ್ಯತೆಯಿಂದ ಹಸುಗೂಸು ಪಿಂಕಿಯನ್ನು ಕೆಲಸದಾಕೆಗೆ ಒಪ್ಪಿದಾಗ ನಡೆಯೋ ದಿಗ್ಭ್ರಮೆ ಮೂಡಿಸೋ ಘಟನಾವಳಿಗಳೇ ಇಡೀ ಸಿನಿಮಾದ ಸಾರ.

    908b7c36 ecb7 459c 9471 0be3cabbb8deಹೆತ್ತವರ ಮುನಿಸಿಗೆ ಸಿಕ್ಕ ಲೋಕವರಿಯದ ಕೂಸು ಭಿಕ್ಷಾಟನೆಗೆ ಬಳಕೆಯಾಗುತ್ತದೆ. ಅಲ್ಲಿಂದ ಅದು ಹೇಗೋ ನಾಪತ್ತೆಯಾದ ಆ ಮ ಗು ಮತ್ತೆ ಹೆತ್ತವರ ಮಡಿಲು ಸೇರುತ್ತಾ ಎಂಬ ಕುತೂಹಲಕ್ಕೆ ಈ ಸಿನಿಮಾದ ತುಂಬಾ ರೋಚಕ ಉತ್ತರ ಸಿಗುತ್ತದೆ. ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿದರೇನೇ ಚೆಂದ. ಇಲ್ಲಿ ಪರಿಸ್ಥಿತಿ ಅನಿವಾರ್ಯತೆಗೆ ಸಿಕ್ಕು ಘಟಿಸುವ ಘಟನಾವಳಿಗಳನ್ನು ನಿರ್ದೇಶಕರು ಕ್ರೈಂ ಎಂಬಂತೆ ವಿಜೃಂಭಿಸಿಲ್ಲ. ಅಂಥಾ ಅತಿಶಯಗಳು ಚಿತ್ರದುದ್ದಕ್ಕೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಅದೇ ಒದಿಡೀ ಸಿನಿಮಾದ ಹೆಚ್ಚುಗಾರಿಕೆ ಮತ್ತು ಗೆಲುವಿಗೆ ಕಾರಣ. ಮಗುವನ್ನು ಭಿಕ್ಷಾಟನೆಗೆ ಬಿಟ್ಟ ಮನೆಗೆಲಸದ ಹಂಗಸಿನ ಹಿಂದಿರುವ ಅನಿವಾರ್ಯತೆ, ಆ ಕೂಸು ಅಚಾನಕ್ಕಾಗಿ ಮಡಿಲಿಗೆ ಬಿದ್ದಾಗ ಅದನ್ನು ತನ್ನದೇ ಎಂಬಂತೆ ಬೆಳೆಸುವ ಉಮೇದು ಪ್ರದರ್ಶಿಸೋ ಕಸ ಗುಡಿಸೋ ಮಹಿಳೆಯ ತುಮುಲ… ಇಂಥಾ ಅದೆಷ್ಟೋ ಸೂಕ್ಷ್ಮಗನ್ನು ಕಣ್ಣಿಗೆ ಕಟ್ಟುವಂತೆ, ಎದೆಗೆ ಮುಟ್ಟುವಂತರೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

    99a734bc 99fd 4b8b a841 dcb1587adb01ಇನ್ನುಳಿದಂತೆ, ಇಲ್ಲಿನ ಪಾತ್ರಗಳನ್ನು ನಿರ್ವಹಿಸಿದವರೆಲ್ಲರೂ ಒಬ್ಬರಿಗೊಬ್ಬರು ಮಿಇಲೆಂಬಂತೆ ಕಾಣಿಸಕೊಂಡಿದ್ದಾರೆ. ನಟನೆಯ ಗಂಧ ಗಾಳಿ ಇಲ್ಲದಿದ್ದರೂ ಆ ಪಾತ್ರಗಳಿಗೆ ಜೀವ ತುಂಬಿದ ಮಹಿಳೆಯರು ಮತ್ತು ಮಗುವನ್ನು ಕಳೆದುಕೊಂಡ ತಾಯಿಯಾಗಿ ಕಾಣಿಸಿಕೊಂಡಿರುವ ಅಕ್ಷತಾ ಪಾಂಡವಪುರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣಗಳನ್ನು ಹೊಂದಿರುವ ಪಿಂಕಿ ಎಲ್ಲಿ ಒಂದು ಅಪರೂಪದ ಚಿತ್ರ. ಅದನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನೋಡುವ ಮೂಲಕ ಪ್ರೀತ್ಸಾಹಿಸಿದರೆ ಇಂಥಾ ಭಿನ್ನ ಪ್ರಯೋಗಗಳಿಗೆ ಅನುವು ಮಾಡಿ ಕೊಟ್ಟಂತಾಗುತ್ತದೆ. ಇಂಥಾದ್ದೊಂದು ಉತ್ಸಾಹವೀಗ ಪ್ರೇಕ್ಷಕರನ್ನು ಆವರಿಸಿಕೊಂಡಂತಿದೆ!

    'santhoshbagilagadde #prithvikonanur akshathapandavapura cinishodhareview heegideepicchar kfi krishnegowda pinkielli pinkiellireview sandalwood
    Share. Facebook Twitter LinkedIn WhatsApp Telegram Email
    Previous Articlesamantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!
    Next Article yava mohana murali kareyitho: ಇದು ಪಟೇಲ್ ವರುಣ್ ರಾಜ್ ಎರಡನೇ ಹೆಜ್ಜೆ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

    01/01/2026

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (137)
    • ಸ್ಪಾಟ್ ಲೈಟ್ (217)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 01/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    ಈಗೊಂದಷ್ಟು ವರ್ಷಗಳಿಂದೀಚೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳ ಮೂಲಕ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್. ಕಳೆದ…

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

    Ar Rehman : ಎ.ಆರ್ ರೆಹಮಾನ್‌ರ ನವ ಸಾಹಸ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (169) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (197) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.