ಮಿಳು ಚಿತ್ರರಂಗ ಪ್ರತೀ ಹಂತದಲ್ಲಿಯೂ ವಿಶಿಷ್ಟ ಪ್ರತಿಭೆಯ ನಟರ್‍ನು ಪ್ರೇಕಕರಿಗೆ ಮುಖಾಮುಖಿಯಾಗಿಸುತ್ತಾ ಬಂದಿದೆ. ಆ ಸಾಲಿನಲ್ಲಿ ನಿಲ್ಲಬಹುದಾದ ಈಚಿನ ನಟರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಗುಣ ಹೊಂದಿರುವಾತ ಧನುಷ್. ಒಂದು ಕಾಲದಲ್ಲಿ ರಜನೀಕಾಂತ್ ಅಳೀಮಯ್ಯನಾಗಿದ್ದರೂ, ಮಾವನ ಪ್ರಭಾವಳಿಯಾಚೆಗೆ ಸ್ವಂತದ ಅಸ್ತಿತ್ವ ಕಟ್ಟಿಕೊಂಡಿದ್ದವನು ಧನುಷ್. ಹಂತ ಹಂತವಾಗಿ ಮೇಲೇರಿ ಬಂದು ಸ್ಟಾರ್ ನಟನಾಗಿರುವ ಧನುಷ್ ಈಗ ಪ್ಯಾನಿಂಡಿಯಾ ಮಟ್ಟದಲ್ಲಿ ಅಭಿಮಾನಿ ವರ್ಗ ಸಂಪಾದಿಸಿಕೊಂಡಿದ್ದಾನೆ. ಪಕ್ಕದ ತೆಲುಗು ನಾಡಿನಲ್ಲಿಯೂ ಧನುಷ್ ಹವಾ ಏನು ಕಡಿಮೆ ಇಲ್ಲ. ಇಂಥಾ ಧನುಷ್ ಇಡ್ಲಿ ಕಡೈ ಎಂಬ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ರೂಪಾಂತರ ಹೊಂದಿರೋದೊಂದು ಅಚ್ಚರಿಯ ಬೆಳವಣಿಗೆ.


ಧನುಷ್ ಇಡ್ಲಿ ಕಡೈ ಚಿತ್ರವನ್ನು ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸೋ ಸುದ್ದಿಯೇ ಸಂಚಲನ ಸೃಷ್ಟಿಸಿತ್ತು. ಕ್ರಿಕಾಶೀಲ ವ್ಯಕ್ತಿತ್ವ ಹೊಂದಿರುವ ಧನುಷ್ ನಿರ್ದೇಶಕನಾಗಿಯೂ ಕಮಾಲ್ ಮಾಡೋದು ಗ್ಯಾರೆಂಟಿ ಎಂಬಂಥಾ ಮಾತುಗಳೂ ಕೇಳಿ ಬಂದಿದ್ದವು. ಅದೀಗ ಅಕ್ಷರಶಃ ನಿಜವಾಗಿದೆ; ಇಡ್ಲಿ ಕಡೈ ಸಿನಿಮಾದ ಗೆಲುವಿನ ಮೂಲಕ. ಇದೇ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಒಂದು ಮಟ್ಟಕ್ಕೆ ಕಂಡಿದೆ. ಓರ್ವ ನಿರ್ದೇಶಕನಾಗಿ ಧನುಷ್ ಕೈಗೆತ್ತಿಕೊಂಡಿರುವ ಕಥೆ, ಅದನ್ನು ನಿರೂಪಣೆ ಮಾಡಿರುವ ಆಪ್ತ ಶೈಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹೀಗೊಂದು ಮೆಚ್ಚುಗೆ ಪಡೆದ ಈ ಸಿನಿಮಾ ಇದೇ ತಿಂಗಳ ಇಪ್ಪತ್ತೊಂಬತ್ತರಿಂದ ಓಟಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.


ತಾನು ಮಾಡುತ್ತಿದ್ದ ಕೆಲಸವನ್ನ ಬಿಟ್ಟು ಬೇರುಗಳ ಸೆಳೆತಕ್ಕೆ ಒಳಪಡುವ ನಾಯಕನ ಪಾತ್ರವಾಗಿ ಧನುಷ್ ಅಮೋಘವಾಗಿ ನಟಿಸಿದ ರೀತಿ ಕಂಡು ಎಲ್ಲರೂ ಖುಷಿಗೊಂಡಿದ್ದಾರೆ. ತನಗೆ ತಂದೆಯಿಂದ ಬಳುವಳಿಯಾಗಿ ಬಂದ ಇಡ್ಲಿ ಕಡೈ ನಡೆಸುವ ನಾಯಹಕನ ಸುತ್ತ ಜರುಗುವ ಈ ನೆಲದ ಘಮಲಿನ ಕಥಾನಕವನ್ನು ತಮಿಳು ಪ್ರೇಕ್ಷಕರು ಸಂಭ್ರಮಿಸಿದ್ದಾರೆ. ಹಳ್ಳಿಯಿಂದ ವಿದೇಶದವರೆಗೂ ಸುತ್ತಾಡುವ ಚೆಂದದ ಕಥೆ ಮತ್ತು ಅದನ್ನು ಎಲ.ಲಿಯೂ ಸುಕ್ಕಾಗದಂತೆ ನಿರೂಪಣೆ ಮಾಡಿದ ಧನುಷ್ ಚಾಕಚಕ್ಯತೆ ಎಲ್ಲರ ಮನಗೆದ್ದಿದೆ. ಇಂಥಾ ಸಿನಿಮಾವೀಗ ಓಟಿಟಿಗೆ ಎಂಟ್ರಿ ಕೊಡುವ ಮೂಲಕ ಮತ್ತೊಂದಷ್ಟು ಭಾಗದ, ವರ್ಗದ ಪ್ರೇಕ್ಷಕರನ್ನು ತಲುಪಿಕೊಳ್ಳುವ ಸನ್ನಾಹದಲ್ಲಿದೆ.

About The Author