ರಶ್ಮಿಕಾ ಮಂದಣ್ಣ ಇದೀಗ ಮದುವೆ ಗೌಜುಗಳ ನಡುವೆ ಕಳೆದು ಹೋಗಿದ್ದಾಳೆ. ಒಂಬತ್ತು ವರ್ಷಗಳ ಕಾಲ ಪಟ್ಟು ಹಿಡಿದು ಸಿನಿಮಾಗಾಗಿಯೇ ಸಮರ್ಪಿಸಿಕೊಂಡಂತೆ ಕಿರಿಕ್ ಹುಡುಗಿ ಜೀವಿಸಿದ್ದಳು. ಈ ಹುಡುಗಿಯ ಗೆಲುವು ಕಂಡ ಅನೇಕರು ಪುಂಖಾನುಪುಂಖವಾಗಿ ಟ್ರೋಲ್ ಮಾಡುತ್ತಾ ಬಂದಿದ್ದಾರೆ. ನಿಂತಲ್ಲಿ ಕುಂತಲ್ಲಿ ಟೀಕಿಸುತ್ತಾರೆ. ಆದರೆ, ಸಿನಿಮಾಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡದೇ ಹೋಗಿದ್ದರೆ, ಒಂಬತ್ತು ವರ್ಷದ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ಡಲ್ಲಿಯೂ ಬೇಡಿಕೆ ಹೊಂದಿರುವ ರಶ್ಮಿಕಾ ಸದ್ಯದ ಮಟ್ಟಿಗೆ ಗಮನವನ್ನೆಲ್ಲ ತನ್ನ ಮದುವೆಯ ಸುತ್ತ ಕೇಂದ್ರೀಕರಿಸಿದಂತಿದೆ. ಈ ಹಿನ್ನೆಲೆಯಲ್ಲಿ ಪ್ಯಾನಿಂಡಿಯಾ ಸಿನಿಮಾ ಪೆದ್ದಿಯಲ್ಲಿ ರಾಮ್ಚರಣ್ ಜೊತೆ ವಿಶೇಷ ಹಾಡೊಂದಕ್ಕೆ ನಿರಾಕರಿಸಿದ್ದಾಳೆ.
ಪೆದ್ದಿ ಚಿತ್ರದ ಬಗೆಗೀಗ ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಮೂಡಿಕೊಂಡಿದೆ. ಇದರಲ್ಲೊಂದು ಸಣ್ಣ ಅವಕಾಶ ಸಿಕ್ಕರೂ ಸಾಕೆಂಬಂಥಾ ಬಯಕೆ ಹಲವಾರು ನಟಿಯರಲ್ಲಿದೆ. ಇಂಥಾ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಲು ರಶ್ಮಿಕಾ ಒಪ್ಪಿಗೆ ಸೂಚಿಸಿದ್ದಳು. ದೊಡ್ಡ ಮೊತ್ತದ ಸಂಭಾವನೆಯ ಮಾತುಕತೆಯೂ ನಡೆದಿತ್ತು. ಚಿತ್ರತಂಡ ಕಡೇಯ ಶೆಡ್ಯೂಲಿನಲ್ಲಿ ಈ ವಿಶೇಷ ಹಾಡಿನ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿತ್ತು. ಇದೀಗ ಪೆದ್ದಿ ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಆದರೆ, ಈ ಕಡೇಯ ಘಳಿಗೆಯಲ್ಲಿ ರಶ್ಮಿಕಾ ಮಂದಣ್ಣ ಒಲ್ಲೆ ಅಂದಿದ್ದಾಳೆಂಬ ಸುದ್ದಿ ಹರಿದಾಡುತ್ತಿದೆ.
ಇದೀಗ ವ್ಯಾಪಕ ಕಾರ್ಯಾಚರಣೆ ನಡೆಸಿದ ಬಳಿಕ ರಜನೀಕಾಂತ್ ಮಾಜಿ ಅಳಿಯ ಧನುಷನ ಗೆಳತಿ ಮೃಣಾಲ್ ಠಾಕೂರ್ ಈ ಹಾಡಿನಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳಂತೆ. ಹಾಗಂತ ರಶ್ಮಿಕಾ ಮಂದಣ್ಣ ಈ ಹಾಡಟಿನಲ್ಲಿ ನಟಿಸಲೊಲ್ಲೆ ಅಂದಿದ್ದನ್ನು ನಖರಾ ಎಂಬಂತೆ ಅರ್ಥೈಸಬೇಕಿಲ್ಲ. ಮದುವೆ ಮೂಡಿನಲ್ಲಿ ಒಂಬತ್ತು ವರ್ಷಗಳ ನಿರಂತರ ಸಿನಿಮಾ ಚಟುವಟಿಗಳ ಆಯಾಸ ನೀಗಿಕೊಳ್ಳಲು ಮುಂದಾದಂತಿದೆ. ಆದರೆ, ಯಥಾಪ್ರಕಾರವಾಗಿ ಈ ಸುದ್ದಿ ಹೊರ ಬಿದ್ದೇಟಿಗೆ ರಶ್ಮೀಕಾ ಬಗ್ಗೆ ಟ್ರೋಲುಗಳು ಹರಿದಾಡುತ್ತಿವೆ. ಸದ್ಯದ ಮಟ್ಟಿಗೆ ಮದುವೆ ಮೂಡಿನಲ್ಲಿರುವ ರಶ್ಮಿಕಾಳ ಕೈ ತುಂಬಾ ದೊಡ್ಡ ಬಜೆಟ್ಟಿನ ಚಿತ್ರಗಳಿದ್ದಾವೆ. ಖುದ್ದು ಈಕೆಯ ಗೆಳೆಯ ವಿಜ ದೇವರಕೊಂಡನನ್ನು ಸೋಲಿನ ಶೂಲದಿಂದ ಬಚಾವು ಮಾಡೋ ಭಾರವನ್ನೂ ರಶ್ಮಿಕಾ ಹೊತ್ತುಕೊಂಡಿದ್ದಾಳೆ. ಮದುವೆಯ ನಂತರ ವಿಜಯ್ ಮತ್ತು ರಶ್ಮಿಕಾ ಜೋಡಿಯದ್ದೊಂದು ಸಿನಿಮಾ ಚಾಲೂ ಆಗಲಿದೆ!
keywords: rashmika, mandanna, tollywood, peddi

