ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ ಎಲ್ಲರಲ್ಲೂ ಉಳಿದುಕೊಂಡಿದೆ. ಯಾಕೆಂದರೆ, ಕಾನೂನು ಕಣಿಕೆ ಎಂಬುದು ಅಷ್ಟೊಂದು ಬಿಗುವಾಗಿ ಬಿಟ್ಟಿದೆ. ಯಾವ ದಿಕ್ಕಿನತ್ತ ಕಣ ಣು ಹಾಯಿಸಿದರೂ ಸಕಾರಾತ್ಮಕ ವಾತಾವರಣ ಕಾಣದೆ ಅಭಿಮಾನಿ ಬಳಗ ಕಂಗಾಲೆದ್ದಿದೆ. ಇದುವರೆಗೂ ಜೈಲೊಳಗೆ ಅನುಭವಿಸುತ್ತಿರೋ ನರಕದಿಂದ ಪಾರಾಗಲು ದರ್ಶನ್ ಕಡೆಯಿಂದ ಕೋರ್ಟಿಗೆ ಅರ್ಜಿಗಳು ರವಾನೆಯಾಗಿವೆ. ಆದರೆ, ತೀರ್ಪಿನ ರೂಪದಲ್ಲಿ ಬಂದೆರಗಿದ್ದು ಆಘಾತ ಮಾತ್ರ!
darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?
ಆದರೆ, ಈ ಬಾರಿ ಮಾತ್ರ ಕೋರ್ಟ್ ಕಡೆಯಿಂದ ದರ್ಶನ್ಗೆ ತುಸು ನಿರಾಳವಾಗುವಂಥಾ ತೀರ್ಪು ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪಾಲಾಗಿದ್ದ ದರ್ಶನ್ಗೆ ಆ ಅನುಭವ ಚೇತೋಹಾರಿಯಾಗಿತ್ತು. ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಮತ್ತೋರ್ವ ರೌಡಿ ಸೈಕಲ್ಲು ತನ್ನ ಶಿಷ್ಯ ಬೇಕರಿ ರಘುವನ್ನು ದಾಸನ ಪರಿಚಾರಿಕೆಗೆಂದೇ ಪರಪ್ಪನ ಅಗ್ರಹಾರಕ್ಕೆ ಅಂದರ್ ಆಗಿಸಿದ್ದ. ಸಿಗರೇಟು, ಎಣ್ಣೆ, ಪವಡಿಸಲು ಹಾಯೆನಿಸೋ ಪಲ್ಲಂಗವೂ ಸೇರಿದಂತೆ ಎಲ್ಲವೂ ಚೆನ್ನಾಗಿತ್ತು. ಆದರೆ, ಎರಡನೇ ಬಾರಿ ಬೇಲ್ ಕ್ಯಾನ್ಸಲ್ ಆಗಿ ಜೈಲು ಪಾಲಾದ ನಂತರ ದರ್ಶನ್ಗೆ ಪ್ರತೀ ದಿನವೂ ನರಕ ದರ್ಶನ ಮಾಡಿಸಲಾರಂಭಿಸಿದೆ.
ದರ್ಶನ್ ಸದಾ ತನ್ನ ಬಳಗದೊಂದಿಗೆ ಬೆರೆತು ಬದುಕುತ್ತಿದ್ದಾತ. ಅದೇನೇ ಮೆರೆದಾಟಗಳಿದ್ದರೂ ಕುಟುಂಬ ಮತ್ತು ಸ್ನೇಹ ವಲಯವನ್ನು ಬಿಟ್ಟಿರುತ್ತಿರಲಿಲ್ಲ. ಈ ವಲಯವನ್ನು ಎಣ್ಣೆಯಷ್ಟೇ ಉತ್ಕಟವಾಗಿ ಹಚ್ಚಿಕೊಂಡಿದ್ದ ದಾಸನಿಗೆ ಕುಟುಂಬಸ್ಥರನ್ನು, ಸ್ನೇಹಿತರನ್ನು ಭೇಟಿಯಾಗಬೇಕೆನ್ನಿಸುತ್ತಿದ್ದದ್ದು ಸಹಜ. ಆದರೆ, ಕಟ್ಟುನಿಟ್ಟಾದ ಪಹರೆ ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಈ ಸಂಬಂಧವಾಗಿ ದರ್ಶನ್ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೊಡುವಂತೆ ಕೋರಿ ಅರ್ಜಿ ಸಿಲ್ಲಿಸಿದ್ದರು. ಇದರ ಬಗ್ಗೆ ವಿಚಾರಣೆ ನಡೆಸಿದ ಐವತ್ತೇಳನೇ ಸೆಷನ್ಸ್ ಕೋರ್ಟ್ ದರ್ಶನ್ ಮನವಿಯನ್ನು ಪುರಸ್ಕರಿಸಿ, ಕೆಲ ನಿಯಮಗಳ ಪ್ರಕಾರವಾಗಿ ಕುಟುಂಬಸ್ಥರು ಮತ್ತು ಸ್ನೇಹಿತರ ಭೇಟಿಗೆ ಅವಕಾಶ ಮಾಡಿ ಕೊಟ್ಟಿದೆ. ಇದು ದರ್ಶನ್ ಪಾಲಿಗೆ ನಿಜಕ್ಕೂ ನಿರಾಳವಾಗುವಂಥಾ ತೀರ್ಪೆಂಬುದರಲ್ಲಿ ಯಾವ ಸಂದೇಹವೂ ಇಲ್ಲ!
keywords: darshan thoogudeepa, renukaswamy murder case, brutal murder, sandalwood

