ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 9puneeth rajkumar) ಅಭಿನಯದ ನಟಸಾರ್ವಭೌಮ ಮೂಲಕ ಕನ್ನಡಿಗರ ಮನಗೆದ್ದಿದ್ದಾಕೆ (anupama parameshwaran) ಅನುಪಮಾ ಪರಮೇಶ್ವರನ್. ಆ ನಂತರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ, ಒಂದಷ್ಟು ಕಾಲ ಮಂಕಾಗಿದ್ದ ಅನುಪಮಾ ನಟಿಸಿದ್ದೆಲ್ಲ ಡೀಸೆಂಟ್ ಪಾತ್ರಗಳಲ್ಲಿಯೇ. ಹೆಚ್ಚೇನೂ ಎಕ್ಸ್ ಪೋಸ್ ಇಲ್ಲದೆ, ಯಾವ ವಿವಾದಗಳನ್ನೂ ಮೈಮೇಲೆಳೆದುಕೊಳ್ಳದ ಈ ಮಲೆಯಾಳಿ ಹುಡುಗಿ ಹುಟ್ಟು ಹಾಕಿದ್ದ ಕ್ರೇಜ್ ಏನು ಸಣ್ಣ ಮಟ್ಟದಲ್ಲ. ಇಂಥಾ ಅನುಪಮಾ ಪರಮೇಶ್ವರನ್ ಏಕಾಏಕಿ ಎತ್ತಿರೋ ಅವತಾರ ಕಂಡು ಪ್ರೇಕ್ಷಕರೆಲ್ಲ ಅವಾಕ್ಕಾಗಿಬಿಟ್ಟಿದ್ದಾರೆ. ಆಕೆಯೀಗ ಸಾಮಾಜಿಕ ಜಾಲತಾಣದ ತುಂಬಾ ಅಕ್ಷರಶಃ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದ್ದಾಳೆ!

ಅಂದಹಾಗೆ, ಅನುಪಮಾ ಪರಮೇಶ್ವರನ್ (anupama parameshwaran) ಇಂಥಾದ್ದೊಂದು ಅವತಾರದಲ್ಲಿ ಕಾಣಿಸಿಕೊಂಡಿರೋದು ಮಲ್ಲಿಕ್ ರಾಮ್ ನಿರ್ದೇಶನದ ಟಿಲ್ಲು ಸ್ಕ್ವೇರ್ ಚಿತ್ರಕ್ಕಾಗಿ. ಸಿದ್ದು ಜೊನ್ನಲಗಡ್ಡನಿಗೆ ನಾಯಕಿಯಾಗಿ ನಟಿಸಿರುವ ಅನುಪಮಾ, ಆತನೊಂದಿಗೆ ಮೈಚಳಿ ಬಿಟ್ಟು ಲಿಪ್ ಲಾಕ್ ಸೀನುಗಳಲ್ಲಿ ನಟಿಸಿದ್ದಾಳೆ. ಇದಲ್ಲದೇ ಸೆಕ್ಸ್ ಕುರಿತಾಗಿ ಬಿಡುಬೀಸಾದ ಡೈಲಾಗುಗಳನ್ನೂ ಹೊಡೆದಿದ್ದಾಳೆ. ಇತ್ತೀಚೆಗಷ್ಟೇ ಲಾಂಚ್ ಆಗಿದ್ದ ಟ್ರೈಲರ್‍ನಲ್ಲಿ ಇಂಥಾ ದೃಷ್ಯಾವಳಿಗಳೆಲ್ಲವೂ vಜಾಹೀರಾಗಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅಂಥಾ ದೃಷ್ಯಾವಳಿಗಳು ಭಾರೀ ಸದ್ದು ಮಾಡುತ್ತಿವೆ. ಅದನ್ನು ಹಠಾತ್ತನೆ ಸಿಕ್ಕ ಮೈಲೇಜ್ ಎಂದೇ ಪರಿಭಾವಿಸಿರುವ ಚಿತ್ರತಂಡ ಖುಷಿಗೊಂಡಿದೆ.

ಮಾರ್ಚ್ 29ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಹಿಂದೆ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಮಲ್ಲಿಕ್ ಈ ಮೂಲಕ ದೊಡ್ಡ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದ್ದಾರೆ. ಇದುವರೆಗೂ ಸಾಕಷ್ಟು ಬಾರಿ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಡುತ್ತಾ ಬಂದಿದೆ. ಕಡೆಗೂ ಈಗ ಅದು ನಿಗಧಿಯಾಗಿದೆ. ಇನ್ನುಳಿದಂತೆ, ಮಲೆಯಾಳಂ ಚಿತ್ರದ ಮೂಲಕವೇ ನಟಿಯಾಗಿ ಹೊರಹೊಮ್ಮಿದ್ದ ಅನುಪಮಾ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬೇಡಿಕಮೆ ಹೊಂದಿರುವಾಕೆ. ಆದರೆ, ಈವರೆಗೆ ಯಾವತ್ತೂ ಇಂಥಾ ದೃಷ್ಯಗಳಲ್ಲಿ ಕಾಣಿಸಿರಲಿಲ್ಲ. ಈಗೊಂದಷ್ಟು ವರ್ಷಗಳಿಂದ ಅವಕಾಶಕ್ಕೆ ತತ್ವಾರವಾಗಿದ್ದರಿಂದಲೋ ಏನೋ, ಬೋಲ್ಡ್ ಮೂಡಿಗೆ ಜಾರಿದ್ದಾರೆ. ಈ ಚಿತ್ರದ ಮೂಲಕ ಅನುಪಮಾಗೆ ಭರ್ಜರಿ ರೀ ಓಪನಿಂಗ್ ಸಿಗೋ ಲಕ್ಷಣಗಳು ಗೋಚರಿಸುತ್ತಿವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!