ಪುಷ್ಪಾ ಸರಣಿ ಸಿನಿಮಾಗಳ ಭಾರೀ ಗೆಲುವಿನ ನಂತರ ಅಲ್ಲು ಅರ್ಜುನ್ ಬೇಡಿಕೆ ತೀವ್ರವಾಗಿ ಏರಿಕೆ ಕಂಡಿದೆ. ಬಾಲಿವುಡ್ಡೂ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ನಿರ್ದೇಶಕರೆಲ್ಲ ಕಥೆ ತಯಾರು ಮಡಿಕೊಂಡು ಅಲ್ಲುಗಾಗಿ ಕಾದು ಕೂತಿದ್ದಾರೆ. ಪ್ರಖ್ಯಾತ ನಿರ್ಮಾಣ ಸಂಸ್ಥೆಗಳೇ ಅಲ್ಲು ಸಿನಿಮಾವೊಂದು ಸಿಕ್ಕರೆ ಸಾಕೆಂಬಂಥಾ ಆಸೆಗಣ್ಣಿನಿಂದ ಕಾಯುತ್ತಿವೆ. ಹೀಗಿರುವಾಗಲೇ ಒಂದು ಸಿನಿಮಾ ಅಖಾಡಕ್ಕಿಳಿದಿರೋ ಅಲ್ಲು ಸಾಲು ಸಾಲಾಗಿ ಮತ್ತೊಂದಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಸಾಗುತ್ತಿದ್ದಾರೆ. ಈ ಹಾದಿಯಲ್ಲಿ ಅತ್ಯಂತ ಎಚ್ಚರದ ಹೆಜ್ಜೆಯಿಡುತ್ತಿರುವ ಅಲ್ಲು, ಇದೀಗ ಮಲೆಯಾಳಂನ ಪ್ರತಿಭಾನ್ವಿತ ನಿರ್ದೇಶಕ ಬೆಸಿಲ್ ಜೋಸೆಫ್ ಹೇಳಿದ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ!
ಈಗಾಗಲೇ ಬೇಸಿಲ್ ಜೋಸೆಫ್ ಮತ್ತು ಅಲ್ಲು ಅರ್ಜುನ್ ನಡುವೆ ಒಂದಷ್ಟು ಸುತ್ತಿನ ಮಾತುಕತೆಗಳು ನಡೆದಿವೆ. ಸದ್ಯದ ಮಟ್ಟಿಗೆ ಈ ಸಿನಿಮಾವನ್ನು ಎಎ೨೫ ಅಂತ ಹೆಸರಿಸಲಾಗಿದೆ. ಇದೀಗ ಸರಿಕಟ್ಟಾದೊಂದು ಶೀರ್ಷಿಕೆ ಇಡುವ ಸಲುವಾಗಿ ತಯಾರಿ ಆರಂಭವಾಗಿದೆ. ಈ ಮೂಲಕ ತೆಲುಗು ಸೂಪರ್ ಸ್ಟಾರ್ ಹಾಗೂ ಮಲೆಯಾಳಂನ ಪ್ರತಿಭಾವಂತ ನಿರ್ದೇಶಕರ ಮೊದಲ ಸಮಾಗಮ ಸಂಭವಿಸೋದು ಖಚಿತಗೊಂಡಂತಿದೆ. ಬೇಸಿಲ್ ಜೋಸೆಫ್ ತಮ್ಮ ಭಿನ್ನ ನಿರೂಪಣೆ ಹಾಗೂ ವಿಶಿಷ್ಟ ಕಥೆಗಳನ್ನು ಹೇಳುವ ಕಲೆಗಾರಿಕೆಯ ಮೂಲಕ ಗಮನ ಸೆಳೆದಿರುವ ನಿರ್ದೇಶಕ.
ಈ ಹಿಂದೆ ಮಿನ್ನಲ್ ಮುರಳಿಯೊಂದಿಗೆ ಬೇಸಿಲ್ ಜೋಸೆಫ್ ಸಿನಿಮಾವೊಂದು ರಾಷ್ಟರ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿತ್ತು. ಇದುವರೆಗೂ ನಿರ್ದೇಶಕನಾಗಿ ಭಿನ್ನ ಪಥದಲ್ಲಿ ಸಾಗಿ ಬಂದಿರುವ ಬೇಸಿಲ್ ಅಲ್ಲು ಅರ್ಜುನ್ಗಾಗಿ ಪ್ರೇಕ್ಷಕರನ್ನು ಅಚ್ಚರಿಗೊಳಿಸುವಂಥಾದ್ದೊಂದು ಕಥೆಯನ್ನೇ ಸಿದ್ಧಪಡಿಸಿದ್ದಾರಂತೆ. ಈ ಕಾರಣದಿಂದಲೇ ದೇಶವ್ಯಾಪಿ ಅಭಿಮಾನಿ ಪಡೆ ಈ ಸಿನಿಮಾಕ್ಕಾಗಿ ಕಾದು ಕೂತಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ಆಟ್ಲಿ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಬೆನ್ನಲ್ಲಿಯೇ ಮತ್ತೋರ್ವ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನ ದ ಸಿನಿಮಾ ಚಾಲೂ ಆಗಲಿದೆ. ಅದಾದ ಬಳಿಕ ಮುಂನ ವಷದ ಮೊದಲ ಭಾಗದಲ್ಲಿ ಸದರಿ ಸಿನಿಮಾಕ್ಕೆ ಚಾಲನೆ ಸಿಗಲಿದೆ.
keywords: besil josef, allu arjun, tollywood, mollywood, allu arjun upcoming movie updates

