ಲಿಯೋ (leo movie) ಚಿತ್ರದ ಆಘಾತಕರ ಸೋಲಿನಿಂದ ದಳಪತಿ ವಿಜಯ್ (thalapathy vijay) ಕೊಂಚ ಕಳವಳಗೊಂಡಿದ್ದಾರೆ. ಹಲವಾರು ಸೋಲು ಗೆಲುವುಗಳನ್ನು ಕಂಡುಂಡಿರುವ ವಿಜಯ್ ಪಾಲಿಗೆ ಅದು ಖಂಡಿತಾ ಹಿನ್ನಡೆಯಲ್ಲ. ಆದರೆ, ವೃತ್ತಿ ಬದುಕಿನ ಓಘಕ್ಕೆ ಆ ಸೋಲು ಕೊಂಚ ಜರ್ಕು ಹೊಡೆಸಿರೋದಂತೂ ನಿಜ. ಹೀಗೆ ಹಠಾತ್ತನೆ ಎದುರಾಗ ಸೋಲನ್ನು ಮತ್ತೊಂದು ಮಹಾ ಗೆಲುವಿನ ಮೂಲಕವಷ್ಟೇ ಮೀರಿಕೊಳ್ಳಲು ಸಾಧ್ಯ. ಅದು (vijay) ವಿಜಯ್ ಪಾಲಿಗೂ ಕರಗತವಾಗಿದೆ. ಲಿಯೋ ಸೋಲಿನ ಬರೆನ್ನಲ್ಲಿಯೇ ಹೊಸಾ ಸಿನಿಮಾದತ್ತ ಗಮನ ಹರಿಸಿದ್ದ ಅವರು ಅದ್ಭುತ ಕಥೆತಯೊಂದನ್ನು ಆರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿ, ಸದರಿ ಸಿನಿಮಾದಲ್ಲಿ ಮಜವಾದ ಅಚ್ಚರಿಗಳೊಂದಿಗೆ (vijay new movie updates) ವಿಜಯ್ ಪ್ರೇಕ್ಷಕರನ್ನು ಮುಖಾಮುಖಿಯಾಗಲಿರುವ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ!

ಅಂದಹಾಗೆ, ವಿಜಯ್ ನಟಿಸಲಿರೋ ಮುಂದಿನ ಸಿನಿಮಾ ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬರಲಿದೆ. ಚಿತ್ರತಂಡ ಈಗಾಗಲೇ ಎಲ್ಲಾ ಬಗೆಯ ತಯಾರಿಗಳನ್ನೂ ಮುಗಿಸಿಕೊಳ್ಳುತ್ತಿದೆ. ಇದೇ ಹಂತದಲ್ಲಿ ಸದರಿ ಚಿತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿರುವ ಗೆಟಪ್ಪುಗಳು ಮತ್ತು ಪಾತ್ರದ ಸುತ್ತ ಒಂದಷ್ಟು ವಿಚಾರಗಳು ಹರಿದಾಡುತ್ತಿದ್ದಾವೆ. ಆ ಪ್ರಕಾರವಾಗಿ ಹೇಳೋದಾದರೆ, ಆ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಆಗಿಯೂ ಅಬ್ಬರಿಸಲಿದ್ದಾರೆ. ತಂದೆ ಮತ್ತು ಮಗನ ಸುತ್ತ ಘಟಿಸಲಿರುವ ಈ ಕಥಾನಕದಲ್ಲಿ ವಿಜಯ್ ಭಿನ್ನವಾದ ರೀತಿಯಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಅಷ್ಟಕ್ಕೂ ಈ ಹಿಂದೆ ಬಿಗಿಲ್ ಚಿತ್ರದಲ್ಲಿಯೂ ಕೂಡಾ ವಿಜಯ್ ಈ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಮುಂಬರುವ ಚಿತ್ರ ಅದಕ್ಕಿಂತಲೂ ಭಿನ್ನವಾಗಿರಲಿದೆಯಂತೆ. ಅದರಲ್ಲಿಯೂ ತಂದೆಯ ಗೆಟಪ್ಪಿಗಾಗಿ ಈಗಾಗಲೇ ನಾನಾ ಥರದಲ್ಲಿ ತಯಾರಿಗಳು ನಡೆಯುತ್ತಿವೆ. ಖುದ್ದು ವಿಜಯ್ ಲಿಯೋ ಸೋಲನ್ನು ಈ ಮೂಲಕ ಮೀರಿಕೊಳ್ಳುವ ಸಲುವಾಗಿ ಕಾರ್ಯಾರಂಭ ಮಾಡಿದ್ದಾರೆ. ಇನ್ನೊಂದೆಡೆಯಲ್ಲಿ ನಿರ್ದೇಶಕ ವೆಂಕಟ್ ಪ್ರಭು, ನಿರ್ಮಾಪಕರಾದ ಅರ್ಚನಾ ಕಲ್ಪಾತಿ, ಸಹ ನಿರ್ಮಾಪಕರಾದ ಜಗದೀಶ್ ವಿದೇಶಕ್ಕೆ ತೆರಳಿ ಅಲ್ಲಿಯೇ ಪ್ಲಾನುಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಇಂಥಾ ವಿಚಾರಗಳೆಲ್ಲವೂ ಲಿಯೋ ಸೋಲಿನಿಂದ ನಿರಾಶರಾಗಿದ್ದ ದಳಪತಿ ಅಭಿಮಾನಿ ಬಳಗವನ್ನು ಥ್ರಿಲ್ ಆಗಿಸಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!