ಒಂದಷ್ಟು ಯಶಸ್ಸು, ಸುತ್ತೆಲ್ಲ ಥಳುಕು ಬಳುಕಿನ ಪ್ರಭೆ ಮತ್ತು ನಿಂತಲ್ಲಿ ಕುಂತಲ್ಲಿ ಮೈಗೆ ತಾಕುವ ಕಾಸಿನ ಶಾಖ… ಬದುಕಿನಲ್ಲೆದುರಾಗೋ ಇಂಥಾದ್ದೊಂದು ಘಟ್ಟವಿದೆಯಲ್ಲಾ? ಅದು ಕೆಲ ಮಂದಿಯನ್ನು ಮನಬಂದಂತೆ ಕುಣಿಸಿ ಬಿಡುತ್ತದೆ. ಇಷ್ಟೆಲ್ಲ ಇದ್ದರೂ ಸಾದಾ ಸೀದವಾಗಿ ಬದುಕೋ ಮಹಾತ್ಮರು ಕೆಲವರಿರಬಹುದು. ಆದರೆ, ಅಂಥಾ ಹಂತದಲ್ಲಿ ತಲೆ ಭುಜದ ಮೇಲೆ ನಿಲ್ಲದಂತೆ ನಿಗುರಾಡುತ್ತಾ, ಮನುಷ್ಯತ್ವದ ಪಸೆಯೇ ಮಾಯವಾದಂತೆ ವರ್ತಿಸುವವರು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತಾರೆ. (dimple queen) ಡಿಂಪಲ್ ಕ್ವೀನ್ ಅಂತಲೇ ಪ್ರಸಿದ್ಧಿ ಪಡೆದುಕೊಂಡಿರುವ, ಇದೀಗ ಬೇಡಿಕೆಯ ನಟಿಯಾಗಿರುವ ರಚಿತಾ ರಾಮ್ (rachita ram) ಕೂಡಾ ಅಂಥಾ ಸಾಲಿಗೆ ಸೇರಿಕೊಂಡು ಬಿಟ್ಟಳಾ? ಹೀಗೊಂದು ಪ್ರಶ್ನೆಯೀಗ ಖುದ್ದು ಆಕೆಯನ್ನು ಆರಾಧಿಸುವ ಅಭಿಮಾನಿಗಳಲ್ಲಿಯ ಮೂಡಿಕೊಂಡಿದೆ!

ಅದಕ್ಕೆ ಕಾರಣವಾಗಿರೋದು ಇಂದು ಮಧ್ಯಾಹ್ನದ ಸುಮಾರಿಗೆ ಲಾಲ್ ಬಾಗ್ ಪ್ರದೇಶದಲ್ಲಿ ನಡೆದೊಂದು ಘಟನೆ. ಇಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತವಾಗಿ ವಾಡಿಕೆಯಂತೆ ಪ್ಲವರ್ ಶೋ ನಡೆಯುತ್ತಿದೆ. ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ರಚಿತಾ ರಾಮ್‍ಳನ್ನು ಆಹ್ವಾನಿಸಲಾಗಿತ್ತು. ಅದಕ್ಕೆಂದು ಬರುಆಗ ರಚಿತಾ ರಾಮ್ ಳ ಆರು ಲಾಲ್ ಬಾಗ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಲಿ, ಗಾಯಗಳಾಗಲಿ ಆಗಿಲ್ಲ. ಅದೆಲ್ಲ ಏನೇ ಇದ್ದರೂ ತನ್ ಕಾರು ಯಾರಿಗೋ ಗುದ್ದಿದೆ ಅಂತಾದಾಗ ಕೆಳಗಿಳಿದು ಬಂದು ವಿಚಾರಿಸೋದು ಮಾನವೀಯತೆ.

ಆದರೆ, ಚಿತಾ ರಾಮ್‍ಅದನ್ನೂ ಮರೆತಕೊಂಡಿದ್ದಾಳೆಂಬ ಆರೋಪ ಕೇಳಿ ಬಂದಿದೆ. ಯಾಕೆಂದರೆ, ಕಾರು ಡಿಕ್ಕಿಹೊಡೆದರೂ ಕೂಡಾ ಕೆಳಗಿಳಯುವ ಮನಸು ಮಾಡದ ರಚಿತಾ ಸೀದಾ ಕಾರ್ಯಕ್ರಮಕ್ಕೆ ತೆರಳಿದ್ದಾಳೆ. ಉ ಕಂಡು ಆ ಸಿಬ್ಬಂದಿಯೂ ಅಸಹ್ಯಪಟ್ಟುಕೊಂಡಿದ್ದಾರೆ. ರಚಿತಾ ಮಾತ್ರವಲ್ಲ; ಯಾವ ತೋಲಾಂಡಿ ನಟ ನಟಿಯರೇ ಆದರೂ ಹೀಗೆ ವರ್ತಿಸೋದು ತಪ್ಪು. ಆಕ್ಸಿಡೆಂಟ್ ಆದಾಕ್ಷಣವೇ ಇಳಿದು ಬಂದು ಯೋಗಕ್ಷೇಮ ವಿಚಾರಿಸಿದ್ದರೆ ರಚಿತಾಳ ಪಾದಗಳೇನು ಸವೆದು ಹೋಗುತ್ತಿರಲಿಲ್ಲ. ಅದರಂದ ಆಕೆಯ ಘನತೆಯೇ ಹೆಚ್ಚುತ್ತಿತ್ತು. ಆದರೆ ಕೀರ್ತಿ ಶನಿಯೆಂಬುದು ದುರಹಂಕಾರವಾಗಿಹೆಲೇರಿಕೊಂಡ ಫಲವೆಬಂತೆ ರಚಿತಾ ನಡೆದುಕೊಂಡಿದ್ದಾಳೆ. ಈ ಮೂಲಕ ಆಕೆಯ ವ್ಯಕ್ತಿತ್ವ ಸಾರ್ವಜನಿಕರ ಕಣ್ಣಲ್ಲಿ ಅದಃಪಾತಾಳಕ್ಕಿಳಿದು ಬಿಟ್ಟಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!