Browsing: ಸೌತ್ ಜೋನ್

ಮಾಡೋ ಕ್ಯಾಮೆ ಬಿಟ್ಟು ಮತ್ತೇನೋ ಮಾಡಲು ಹೋದರೆ ಮತ್ಯಾವುದೂ ಬಗನೆಗೂಟ ಜಡಿದುಕೊಳ್ಳುವುದು ಖಾಯಂ. ಆದರೆ, ಕೆಲ ಆಸಾಮಿಗಳಿಗೆ ಹಾಗೆ ಜಡಿಸಿಕೊಳ್ಳೋದರಲ್ಲೇ ಏನೋ ಆನಂದ. ಅಂಥಾ ವಿಶೇಷ ವ್ಯಕ್ತಿಗಳ ಸಾಲಿನಲ್ಲಿ ತಮಿಳು ಚಿತ್ರರಂಗದ ಖ್ಯಾತ (stunt master) …

ಬಾಹುಬಲಿ ನಂತರದಲ್ಲಿ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿ, ವಿಶ್ವಾದ್ಯಂತ ಹವಾ ಎಬ್ಬಿಸಿರುವಾತ (prabhas) ಪ್ರಭಾಸ್. ಬಹುಬಲಿಯ ನಂತರದಲ್ಲಿ ಬಂದ ಪ್ರಭಾಸ್ (prabhas) ಚಿತ್ರಗಳು ನೆಲಕಚ್ಚಿವೆ. ಹೊರ ಜಗತ್ತಿನಲ್ಲಿ ಸೋಲೊಪ್ಪಿಕೊಂಡ ಅಂಥಾ ಸಿನಿಮಾಗಳ ಆರಂಭಿಕ ಕಲೆಕ್ಷನ್ನಿನ ಮಟ್ಟವಿದೆಯಲ್ಲಾ? ಅದು…

ಚಿತ್ರರಂಗದ ಮಟ್ಟಿಗೆ ಅಲ್ಲಿನ ಝಗಮಗದಷ್ಟು, ಬಣ್ಣಗಳಷ್ಟು ಸಂಬಂಧಗಳು ಗಾಢವಾಗಿರೋದು ಅಪರೂಪ. ಆ ಲೋಕದಲ್ಲೊಂದು ಪ್ರೀತಿ ಚಿಗುರಿಕೊಂಡು, ಮದುವೆಯ ಹಂತ ತಲುಪಿತೆಂದರೆ ಸಾಕು; ಅದು ಮುರಿದು ಬೀಳುವ ಮುನ್ಸೂಚನೆಯೂ ಒಟ್ಟೊಟ್ಟಿಗೇ ಕಾಣಿಸಲಾರಂಭಿಸುತ್ತೆ. ಯಾಕೆಂದರೆ, ಅಲ್ಲಿ ಬಂಧವೆಂಬುದು ಗಾಢವಾಗಿ…

ಕೆಲ ನಟ ನಟಿಯರ ನಸೀಬೆಂಬುದು ವಿಶ್ಲೇಷಣೆಗಳ ನಿಲುಕಿಗೆ ಸಿಗುವುದಿಲ್ಲ. ಮೊದಲ ಹೆಜ್ಜೆಯಲ್ಲಿಯೇ ಅಪೂರ್ವ ಅವಕಾಶಗಳು ಜೊತೆಯಾಗರುತ್ತವೆ. ಆದರೆ, ಅದೃಷ್ಟವೆಂಬುದೇಕೋ ಗಾವುದ ದೂರದಲ್ಲಿಯೇ ನಿಂತು ಬಿಟ್ಟಿರುತ್ತದೆ. ಈ ಮಾತಿಗೆ ಉದಾರಣೆಯಾಗಬಲ್ಲ ಒಂದಷ್ಟು ನಟನ ನಟಿಯರು ನಾನಾ ಭಾಷೆಗಳ…

ಕೆಜಿಎಫ್ ಸರಣಿಯ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಬಹು ಬೇಡಿಕೆ ಪಡೆದುಕೊಂಡಿರುವವರು ನಿರ್ದೇಶಕ (prashanth neel)  ಪ್ರಶಾಂತ್ ನೀಲ್. ಕೆಜಿಎಫ್2 ಬಂದ ಮೇಲಂತೂ ಬೇರೆ ಬೇರೆ ಭಾಷೆಗಳ ಮುಖ್ಯ ನಿರ್ಮಾಪಕರುಗಳೇ ನೀಲ್‍ಗಾಗಿ (neel) ಕಾದು ಕೂತಿದ್ದಾರೆ. ಸದ್ಯದ…

ಸಿನಿಮಾ ಮಾತ್ರವಲ್ಲ; ಯಾವುದೇ ಕ್ಷೇತ್ರಗಳಲ್ಲಿಯಾದರೂ ಸೋಲು ಗೆಲುವೆಂಬುದು ಮಾಮೂಲು. ಆದರೆ, ವಿಪರೀತವಾದ ಪ್ರಚಾರದ ಪಟ್ಟುಗಳಿರೋದರಿಂದಾಗಿ ಸಿನಿಮಾ ರಂಗದಲ್ಲಿ (filme industry) ಸೋಲೂ ಕೂಡಾ ಗೆಲುವನ್ನು ಸರಿಗಟ್ಟುವಂತೆ ಸುದ್ದಿಗೆ ಗ್ರಾಸವಾಗುತ್ತೆ. ಹುಚ್ಚಾಪಟ್ಟೆ ಪೋಸುಕೊಟ್ಟು, ಸವಕಲು ಸಿನಿಮಾ ಮಾಡಿದಾಗ…

ಯಾವುದೇ ಸಮಸ್ಯೆಗಳ ಕಾವಳ ಸರಿದು ಹೊಸಾ ದಿಕ್ಕು ಗೋಚರಿಸುತ್ತದೆಂಬುದು ಪ್ರತೀ ಜೀವಗಳ ನಂಬುಗೆ. ಆದರೆ, ಕೆಲವರ ಜೀವನದಲ್ಲಿ ಮಾತ್ರವೇ ಅದು ಬಹುಬೇಗನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ…

ಒಂದೆಡೆ ಛಿದ್ರಗೊಂಡಿದ್ದ ಖಾಸಗೀ ಬದುಕು, ಒಂಟಿಯಾಗಿ ನಿಂತಿದ್ದಾಗ ಬಂದು ತಬ್ಬಿಕೊಂಡ ಭಯಾನಕ ಖಾಯಿಲೆ… ಇದೆಲ್ಲದರಿಂದ ತಬ್ಬಿಗೊಂಡು, ರೌರವ ನರಕ ಅನುಭವಿಸಿದ್ದದ್ದಾಕೆ ನಟಿ (samantha) ಸಮಂತಾ. ಒಂದು ಕಾಲದಲ್ಲಿ ಈ ಸ್ನಿಗ್ಧ ಸೌಂದರ್ಯದ ಹುಡುಗಿಯನ್ನು ಕಂಡು ಪಡ್ಡೆಗಳೆಲ್ಲ…

ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬಾಲ ನಟಿಯರಾಗಿ ನಟಿಸಿದ್ದವರನೇಕರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಎಲ್ಲೆಲ್ಲೋ ಕಳೆದು ಹೋಗಿದ್ದಾರೆ. ಹಾಗೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟು, ಚಾಲ್ತಿಯಲ್ಲಿರುವವರ ಪೈಕಿ ತಮಿಳಿನಲ್ಲಿ…

ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ( kannada film industry) ಒಂದೇ ಒಂದು ಹೆಜ್ಜೆಗೆ ಭರಪೂರ ಗೆಲುವು ಮುತ್ತಿಕೊಳ್ಳುವ ಪವಾಡಗಳು ಸಂಭವಿಸುತ್ತವೆ. ಕೆಲ ಮಂದಿ ಎಲ್ಲ ಅರ್ಹತೆಗಳಿದ್ದರೂ ಅವಕಾಶ ಸಿಗದೆ, ಸರಿಯಾದೊಂದು ಗೆಲುವು ಕೈ ಹಿಡಿಯದೆ ಪಡಿಪಾಟಲು…