ರಣ್‌ವೀರ್ ಸಿಂಗ್ ನಾಯಕನಾಗಿ ನಟಿಸಿರುವ ದುರಂಧರ್ ಚಿತ್ರದ ನಾಗಾಲೋಟ ಅನೂಚಾನವಾಗಿ ಮುಂದುವರೆದಿದೆ. ಆರಂಭದಲ್ಲಿ ರಾಜಕೀಯ ಸಂಬಂಧಿತ ವಿಚಾರಗಳಿಗಾಗಿ ಈ ಸಿನಿಮಾ ಒಂದಷ್ಟು ವಿರೋಧಾಭಾಸಗಳನ್ನು ಎದುರಿಸಿತ್ತು. ಆದರೆ, ಬರ ಬರುತ್ತಾ ಹಾಗೊಂದು ಅಸಹನೆ ಹೊಂದಿರುವವರೂ ಕೂಡಾ ದುರಂಧರ್…

ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸಿರುವ ಲೆನಿನ್ ಚಿತ್ರ ಅಂತಿಮ ಘಟ್ಟದ ಕೆಲಸ ಕಾರ್ಯಗಳೀಗ ವೇಗ ಪಡೆದುಕೊಂಡಿವೆ. ಹಾಡುಗಳು ಸೇರಿದಂತೆ ಒಂದಷ್ಟು ಕೆಲಸ ಕಾರ್ಯಗಳು ಮಾತ್ರವೇ ಇದೀಗ ಬಾಕಿ ಉಳಿದುಕೊಂಡಿವೆ. ಮುರುಳಿಕೃಷ್ಣ ನಿರ್ದೇಶನದ ಸದರಿ ಚಿತ್ರದ ಬಗೆಗೀಗ…

ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಭಾರೀ ಅಡೆತಡೆಗಳು ಎದುರಾಗುತ್ತಿವೆ. ಊರು ತುಂಬೆಲ್ಲ ಹವಾ ಸೃಷ್ಟಿಯಾಗಿರುವ ಈ ಘಳಿಗೆಯಲ್ಲಿ ಜನನಾಯಗನ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಜಯ್ ಕಡೇಯ ಸಿನಿಮಾ ಅಂತ ಹುಯಿಲೆಬ್ಬಿಸಿದ ಕಾರಣದಿಂದಾಗಿ…

ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಕ್ರೇಜ್ ಇದೀಗ ಸಪ್ತಸಾಗರದಾಚೆಗೂ ಹಬ್ಬಿಕೊಂಡಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದವರು ರುಕ್ಮಿಣಿ ವಸಂತ್. ಇತ್ತೀಚೆಗಷ್ಟೇ ತೆರೆಗಂಡಿದ್ದ ಕಾಂತಾರ ಚಾಪ್ಟರ್೧ ಮೂಲಕ ರುಕ್ಮಿಣಿಯ ವೃತ್ತಿ ಬದುಕು…

ಕನ್ನಡ ಚಿತ್ರರಂಗಕ್ಕೆ ಕೊರೋನಾ ಕಾರ್ಮೋಡ ಕವುಚಿಕೊಂಡಿದ್ದ ಘಳಿಗೆಯಲ್ಲಿ ಗೆಲುವಿನ ಘಮ ಹಬ್ಬುವಂತೆ ಮಾಡಿದ್ದ ಚಿತ್ರ ಲವ್ ಮಾಕ್ಟೇಲ್. ಅದಾಗಲೇ ನಾಯಕ ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಒಂದು ಸಂದಿಗ್ಧ ಕಾಲಘಟ್ಟದಲ್ಲಿ…

ರೇವ್ ಪಾರ್ಟಿಯ ಕಾರಣದಿಂದ ಬೆಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿರುತ್ತೆ. ಹಣವಂತರ ತೆವಲಿನ ಕಾರಣಕ್ಕೆ ಬೆಂಗಳೂರಿಗೊಂದಷ್ಟು ಕುಖ್ಯಾತಿಯೂ ಅಂಟಿಕೊಂಡಿದೆ. ಈವತ್ತಿಗೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಕಡೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದ್ದಾರೆ.…

ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ…

ಭಾರತೀಯ ಚಿತ್ರರಂಗದಲ್ಲಿ ಲಾಗಾಯ್ತಿನಿಂದಲೂ ಪುಷಾಧಿಪತ್ಯದ್ದೇ ಪಾರುಪತ್ಯವಿದೆ. ಇದೆಲ್ಲದರ ನಡುವೆ, ಕರ್ಮಠ ನಂಬಿಕೆಗಳಿದ್ದ ದಿನಗಳಲ್ಲಿಯೇ ಒಂದಷ್ಟು ಮಹಿಳೆಯರು ಚಿತ್ರರಂಗದ ಭಾಗವಾಗಿ ಸಂಚಲನ ಸೃಷ್ಟಿಸಿದ್ದಿದೆ. ದುರಂತವೆಂದರೆ, ಜಗತ್ತು ಸಂಪೂರ್ಣ ಬದಲಾವಣೆಗೆ ಒಗ್ಗಿಕೊಂಡಿರುವ ಈ ದಿನಮಾನದಲ್ಲಿಯೂ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ…

ಈಗೊಂದಷ್ಟು ವರ್ಷಗಳಿಂದೀಚೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳ ಮೂಲಕ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್. ಕಳೆದ ವರ್ಷ ರವಿಮಾಮನ ಈ ನವ ಯಾನದಲ್ಲಿಯೂ ಕೊಂಚ ಅಡೆತಡೆಗಳು ಎದುರಾದಂತೆ ಭಾಸವಾಗಿತ್ತು. ಕಡೆಗೂ ಅವರು…

ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ದಳಪತಿ ವಿಜಯ್ ಈಗ ರಾಜಕಾರಣಿಯಾಗಿ ರೂಪಾಂತರ ಹೊಂದಿದ್ದಾರೆ. ರಾಜಕೀಯ ರಂಗದಲ್ಲಿ ತನ್ನದೇ ಅಸ್ತಿತ್ವ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ವಿಜಯ್, ರಾಷ್ಟ್ರ ರಾಜಕಾರಣದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.…