Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home » Blog » bollywood: ದಕ್ಷಿಣದ ಅಬ್ಬರದ ಮುಂದೆ ಮಂಕಾಯ್ತು ಬಾಲಿವುಡ್!
    ಸೌತ್ ಜೋನ್

    bollywood: ದಕ್ಷಿಣದ ಅಬ್ಬರದ ಮುಂದೆ ಮಂಕಾಯ್ತು ಬಾಲಿವುಡ್!

    By Santhosh Bagilagadde26/05/2025
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry) ಮುಂದೆ ಮಂಕೆದ್ದು ಕೂತಿರುವ ಸ್ಟಾರುಗಳೇ ದಕ್ಷಿಣ ಭಾರತೀಯ ಚಿತ್ರರಂಗವನ್ನು ಅಸಡ್ಡೆಯಿಂದ ಕಾಣುತ್ತಿದ್ದರು. ಖಾಸಗೀ ವಲಯದಲ್ಲಿ ಈ ಬಗ್ಗೆ ಲೇವಡಿಯ ಮಾತುಗಳು ಹರಿದಾಡುತ್ತಿದ್ದವು. ಬಹುಶಃ ಹಾಗೊಂದು ತಿಮಿರು (bollywood) ಬಾಲಿವುಡ್ ಮಂದಿಯ ನೆತ್ತಿಗೇರಿದ್ದ ಘಳಿಗೆಯಲ್ಲಿ, ದಕ್ಷಿಣದಿಂದ ಇಂಥಾದ್ದೊಂದು ಬಿರುಗಾಳಿ ಬೀಸಿ ಬರಬಹುದೆಂಬ ಸಣ್ಣ ಅಂದಾಜೂ ಇರಲಿಕ್ಕಿಲ್ಲ. ಇದೀಗ ಎಲ್ಲವನ್ನೂ ಮೀರಿದ್ದೊಂದು ಪಲ್ಲಟ ದಕ್ಷಿಣ ಭಾರತೀಯ ಚಿತ್ರರಂಗ, ಅದರಲ್ಲಿಯೂ ವಿಶೇಷವಾಗಿ ತೆಲುಗಿನ ದಿಕ್ಕಿಂದ ನಡೆಯುತ್ತಿದೆ. ಇಲ್ಲಿನ ಹೀರೋಗಳು ವರ್ಷಕ್ಕೊಬ್ಬರಂತೆ ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ.

    ಈಗೊಂದಷ್ಟು ವರ್ಷಗಳ ಹಿಂದಿನವರೆಗೂ ತೆಲುಗು ಚಿತ್ರರಂಗದ ಬಗ್ಗೆ ಬಾಲಿವುಡ್ ಮಂದಿ ಮಾಮೂಲು ತಾತ್ಸಾರ ಹೊಂದಿದ್ದರು. ಯಾವಾಗ ಬಾಹುಬಲಿ ಚಿತ್ರ ತೆರೆಗಂಡಿತೋ, ಆ ಕ್ಷಣದಿಂದಲೇ ಒಂದು ಕಂಪನ ಬಾಲಿವುಡ್ಡಿನ ತುಂಬೆಲ್ಲ ಸಂಚಲನ ಸೃಷ್ಟಿಸಿತ್ತು. ಅದುವರೆಗೆ ದಕ್ಷಿಣದ ಸಿನಿಮಾ ಮಂದಿ ಬಾಲಿವುಡ್ ಸಿನಿಮಾವೊಂದು ಬಿಡುಗಡೆಯಾದರೆ, ಹೀಗೆಯೇ ಕಂಪಿಸುತ್ತಿದ್ದರು. ಅಂಥಾದ್ದೊಂದು ಭಯ ಬಾಹುಬಲಿಯ ಮೂಲಕ ಬಾಲಿವುಡ್ಡಿಗೇ ರವಾನೆಯಾಗಿ ಬಿಟ್ಟಿದೆ. ಬಾಹುಬಲಿ೨ ಬಾಲಿವುಡ್ಡಿನಲ್ಲಿ ಅಂಥಾದ್ದೇ ವಾತಾವರಣ ಸೃಷ್ಟಿಸಿದ್ದದ್ದು ಸತ್ಯ. ಆ ಬಳಿಕ ತೆರೆಗಂಡ ಪ್ರಭಾಸ್ ಚಿತ್ರಗಳು ನೆಗೆಟಿವ್ ಅಂಶಗಳಾಚೆಗೂ ಬಾಲಿವುಡ್ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿದ್ದವು.

    ಒಬ್ಬ ಪ್ರಭಾಸ್ ಹೀಗೆ ಬಾಲಿವುಡ್ ಮಾರುಕಟ್ಟೆಯಲ್ಲಿ ಸಂಚಕಲನ ಸೃಷ್ಟಿಸುತ್ತಲೇ, ಅದು ತೆಲುಗು ಚಿತ್ರಂಗದ ಇತರೇ ನಾಯಕರಿಗೂ ಪ್ರವಹಿಸಿದಂತಾಗಿದೆ. ಅದರ ಫಲವಾಗಿಯೇ ತೆಲುಗಿನಲ್ಲೇ ಗಿರಕಿ ಹೊಡೆಯುತ್ತಿದ್ದ ಅಲ್ಲು ಅರ್ಜುನ್ ವೃತ್ತಿಬದುಕು ಏಕಾಏಕಿ ಮತ್ತೊಂದು ಹಂತಕ್ಕೇರಿದೆ. ಪುಷ್ಪಾ ಚಿತ್ರ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿ, ಬಾಲಿವುಡ್ಡಿಗೆ ಅಕ್ಷರಶಃ ಶಾಕ್ ಕೊಟ್ಟಿದೆ. ಇದೀಗ ಪುಷ್ಪಾ೨ ದೊಡ್ಡ ಮಟ್ಟದ ಹೈಪುಗಳೊಂದಿಗೆ ಬಿಡುಗಡೆಗೆ ತಯಾರಾಗಿದೆ. ಈಗಾಗಲೇ ಪುಷ್ಪರಾಜ್ ಗೆ ಬಾಲಿವುಡ್ಡಲ್ಲೊಂದು ಕಟ್ಟುಮಸ್ತಾದ ಮಾರುಕಟ್ಟೆ ಸೃಷ್ಟಿಯಾಗಿದೆ. ಹಾಗೆ ನೋಡಿದರೆ, ನಿರ್ದೇಶಕ ಸುಕುಮಾರನ ಸೋಂಭೇರಿತನದಿಂದಾಗಿ ಈ ಚಿತ್ರದ ಬಿಡುಗಡೆ ದಿನಾಂಕ ಪದೇ ಪದೆ ಮುಂದಕ್ಕೆ ಹೋಗುತ್ತಿದೆ. ಅದರ ನಿಖರವಾದ ಬಿಡುಗಡೆ ದಿನಾಂಕ ಅನೌನ್ಸ್ ಆದಾಕ್ಷಣ ಬಾಲಿವುಡ್ ಚಿತ್ರಗಳೂ ಒಂದು ಹೆಜ್ಜೆ ಹಿಂದೆ ಸರಿದು ಕಾಯುವಂಥಾ ವಾತಾವರಣ ನಿರ್ಮಾಣಗೊಂಡಿದೆ.

    ಹೀಗೆ ಬಾಲಿವುಡ್ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೂರನೇ ತೆಲುಗು ಸ್ಟಾರ್ ಜ್ಯೂನಿಯರ್ ಎನ್ಟಿಆರ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಮೂಲಕ ಜ್ಯೂ ಎನ್ಟಿಆರ್ ಕೂಡಾ ಬಾಲಿವುಡ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ದೇವರಾ ಚಿತ್ರಕ್ಕೂ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗೆಲುವು ಸಿಕ್ಕಿದೆ. ಹೀಗೆ ಒಬ್ಬೊಬ್ಬರಾಗಿ ತೆಲುಗು ಹೀರೋಗಳು ಹಿಂದಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಇತ್ತ ಕನ್ನಡದ ಯಶ್ ಕೂಡಾ ಈಗಾಗಲೇ ಹಿಂದಿ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ತಮಿಳಿಗಂತೂ ಅಲ್ಲಿ ಭದ್ರ ನೆಲೆ ಇದ್ದೇ ಇದೆ. ಹೀಗೆ ದಕ್ಷಿಣ ಭಾರತೀಯ ಚಿತ್ರರಂಗ ಹಿಂದಿ ಮಾರುಕಟ್ಟೆಯತ್ತ ಹಂತ ಹಂತವಾಗಿ ದಂಡೆತ್ತಿತ್ತಿ ಹೋಗುತ್ತಿದೆ. ಈ ಹೊತ್ತಿನಲ್ಲಿ ಬಾಲಿವುಡ್ ಸ್ಟಾರ್ ನಟರು ಅಕ್ಷರಶಃ ಮಂಕುಬಡಿದಂತಾಗಿದ್ದಾರೆ. ಸ್ತ್ರೀಯಂಥಾ ಭಿನ್ನ ಜಾಡಿನ ಚಿತ್ರ ಗೆದ್ದಿರೋದು ನಿಜ. ಹಾಗಂತ, ಅದೊಂದು ಗೆಲುವಿನಿಂದ ಸೊರಗಿದ ಬಾಲಿವುಡ್ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಮುಂದಿನ ದಿನಗಳಲ್ಲಿ ದಕ್ಷಿಣದ ದಿಕ್ಕಿಂದ ಬಾಲಿವುಡ್ಡಿನತ್ತ ಬಿರುಗಾಳಿ ಬೀಸಲಿದೆ!

    #alluarjun #jrntr bollywood kgf prabhas sandalwood southcinema tollywood yash
    Share. Facebook Twitter LinkedIn WhatsApp Telegram Email
    Previous Articlemrinal takur: ತೆಲುಗುನಾಡಲ್ಲೀಗ ಠಾಕೂರ್ ಹುಡುಗಿ ಲಕಲಕ!
    Next Article tripti dimri: ನಿರಾಸೆಗೀಡಾದರೇ ಪ್ರಭಾಸ್ ಫ್ಯಾನ್ಸ್?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

    03/12/2025

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    02/12/2025

    Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!

    02/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (78)
    • ಸೌತ್ ಜೋನ್ (131)
    • ಸ್ಪಾಟ್ ಲೈಟ್ (213)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202331 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views
    Don't Miss
    ಸೌತ್ ಜೋನ್ 03/12/2025

    Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

    ಬಾಹುಬಲಿ ಸರಣಿಯ ಅಗಾಧ ಗೆಲುವಿನ ನಂತರ ಡಾರ್ಲಿಂಗ್ ಪ್ರಭಾಸ್ ಹೀನಾಯ ಸೋಲಿನ ಪರ್ವವೊಂದನ್ನು ಎದುರುಗೊಂಡಿದ್ದ. ಒಂದು ಗೆಲುವಿನ ನಂತರ ಮತ್ತೊಂದು…

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!

    Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.