Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    Facebook Twitter Instagram
    Wednesday, July 2
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » poonam kaur: ಯೂಟ್ಯೂಬರ್ ಕತ್ತಿ ಮಹೇಶನ ಕಥೆ ಮುಗಿಸಿದ್ಯಾರು?
    ಸೌತ್ ಜೋನ್

    poonam kaur: ಯೂಟ್ಯೂಬರ್ ಕತ್ತಿ ಮಹೇಶನ ಕಥೆ ಮುಗಿಸಿದ್ಯಾರು?

    By Santhosh Bagilagadde19/10/2024Updated:19/10/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ತೆಲುಗು ಚಿತ್ರರಂಗದೊಳಗಿನ (telugu film industry) ಕಾಮಪುರಾಣಗಳ (sex scandals) ಆಗಾಗ ಹಬೆಯಾಡುತ್ತಿರುತ್ತವೆ. ಈ ಸಿನಿಮಾ ರಂಗ ರಾಜಕೀಯವಾಗಿ, ಆರ್ಥಿಕವಾಗಿ ಪ್ರಭಾವಿಗಳಾಗಿರುವವರ ಮುಷ್ಠಿಯಲ್ಲಿರೋದರಿಂದ, ಕಾಮ ಸಂಬಂಧಿ ಹಗರಣಗಳು ದೊಡ್ಡ ಮಟ್ದಲ್ಲಿ ಸೌಂಡು ಮಾಡುವುದಿಲ್ಲ. ಜಾನಿ ಮಾಸ್ಟರ್ (janny master) ಥರದ ಮಂದಿ ತಲಗುಲಿಕೊಂಡರೆ ಅದೇ ಅಚ್ಚರಿಯ ಸಂಗತಿ. ಇಂಥಾ ವಾತಾವರಣದಲ್ಲಿ ಪೂನಂ ಕೌರ್ (actress poonam kaur) ಪುರುಷಾಧಿಪತ್ಯದ ವಿರುದ್ಧ ನಿರ್ಣಾಯಕ ಯುದ್ಧ ಸಾರಿದ್ದಾಳೆ. ಈಗ ಬೇರೆಯದ್ದೇ ವೇಷ ಹಾಕಿಕೊಂಡು, ಧರ್ಮೋದ್ದಾರಕನ ಪೋಸು ಕೊಡುತ್ತಿದ್ದಾನಲ್ಲಾ (pawan kalyan) ಪವನ್ ಕಲ್ಯಾಣ್? ಈತನ ವಿರುದ್ಧವಂತೂ ಸೋಶಿಯಲ್ ಮೀಡಿಯಾ ಮೂಲಕ ಪೂನಂ ಪ್ರಹಾರ ನಡೆಸುತ್ತಾ ಬಂದಿದ್ದಾಳೆ. ಪವನ್ ಕಲ್ಯಾಣ್ ನೆಚ್ಚಿನ ಭಂಟನಂತಿರೋ ಖ್ಯಾತ ನಿರ್ದೇಶಕ ತ್ರಿವಿಕ್ರಮ್ (director trivikram) ಮೇಲೂ ಕೆಂಡ ಕಾರುತ್ತಿದ್ದಾಳೆ. ಇದೆಲ್ಲವನ್ನೂ ಕಂಡ ಮಂದಿ ಕೆಂಡವಿಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ ಎಂಬ ಲೋಕರೂಢಿಯ ಸತ್ಯವನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ!

    ಸೋಶಿಯಲ್ ಮೀಡಿಯಾದಲ್ಲಿ (poonam kaur) ಪೂನಂ ಕೌರ್ ಅಕ್ಷರಶಃ ಸಂಚಲನ ಸೃಷ್ಟಿಸುತ್ತಾ ಬಂದಿದ್ದಾಳೆ. ಅದರಲ್ಲಿಯೂ ವಿಶೇಷವಾಗಿ ಪವನ್ ಕಲ್ಯಾಣ್ ವಿರುದ್ಧದ ಪೋಸ್ಟ್ ಗಳ ಮೂಲಕ ಈಕೆ ಸದಾ ಸುದ್ದಿಯಲ್ಲಿರುತ್ತಾಳೆ. ಇತ್ತೀಚೆಗೆ ಮತ್ತೆ ಬಾಂಬು ಸಿಡಿಸಿರುವ ಪೂನಂ, ಪವನ್ ಕಲ್ಯಾಣ್ ನೆಚ್ಚಿನ ಗೆಣೆಕಾರ ಡೈರೆಕ್ಟರ್ ತ್ರಿವಿಕ್ರಮ್ ಮೇಲೆ ಘನಗಂಭೀರ ಆರೋಪ ಮಾಡಿದ್ದಾಳೆ. ತ್ರಿವಿಕ್ರಮ್ ಓರ್ವ ಹೆಣ್ಣುಬಾಕ ಅಂದಿರೋ ಪೂನಂ, ಆತ ಅವಕಾಶ ಕೊಡುವ ನೆಪದಲ್ಲಿ ಪಂಜಾಬಿ ಹುಡುಗಿಯೋರ್ವಳ ಬದುಕನ್ನೇ ಬರ್ಬಾದೆಬ್ಬಿಸಿದ್ದಾನೆಂದು ಆರೋಪಿಸಿದ್ದಾಳೆ. ಎಳೇ ವಯಸ್ಸಿನ ಆ ಹುಡುಗಿಯನ್ನು ನಂಬಿಸಿ ಕತ್ತು ಕುಯ್ದಿದ್ದಾನೆ ಎಂಬಂಥಾ ಪೂನಂ ಮಾತುಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಚರ್ಚೆಗಳು ಶುರುವಾಗಿವೆ. ಅಷ್ಟಕ್ಕೂ ಇಂಥಾ ವಿಚಾರಗಳು ತೆಲುಗು ಚಿತ್ರರಂಗದ ಆಂತರಿಕ ವಲಯದಲ್ಲಿ ಮಾಮೂಲು ಸುದ್ದಿಯಾಗಿ ಉಸಿರುಚೆಲ್ಲಬಹುದೇನೋ. ಯಾಕೆಂದರೆ, ಅದರೊಳಗೆ ಅಂಥಾ ಕಿಸುರುಗಳು ಸಾವಿರವಿದ್ದಾವೆ!
    ಹಾಗಾದರೆ, ಪೂನಂ ಮಾತುಗಳಲ್ಲಿ ಸತ್ಯವಿಲ್ಲವೇ? ಆಕೆ ಯಾವುದೋ ವೈಯಕ್ತಿಕ ಜಿದ್ದಿಗೆ ಬಿದ್ದು ತ್ರಿವಿಕ್ರಮ್ ಮತ್ತು ಪವನ್ ಕಲ್ಯಾಣ್ ವಿರುದ್ಧ ದ್ವೇಷ ಸಾಧಿಸುತ್ತಿದ್ದಾಳಾ? ಇಂಥಾ ಒಂದಷ್ಟು ಪ್ರಶ್ನೆಗಳನ್ನಿಟ್ಟುಕೊಂಡು ತಲಾಷೆಗಿಳಿದರೆ ಬಣ್ಣ ಬಣ್ಣದ ಸೀಕ್ರೆಟ್ಟುಗಳು ತಂತಾನೇ ಜಾಹೀರಾಗುತ್ತವೆ. ಈವತ್ತಿಗೆ ತ್ರಿವಿಕ್ರಮ್ ಸ್ಟಾರ್ ಡೈರೆಕ್ಟರ್. ಆತ ಪವನ್ ಕಲ್ಯಾಣ್‌ಗಂತೂ ನೆಚ್ಚಿನ ಗೆಳೆಯ. ಒಂದು ಕಾಲದಲ್ಲಿ ನಾಗಾರ್ಜುನನ ಸಿನಿಮಾ ಮೂಲಕ ಬರಹಗಾರನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾತ ತ್ರಿವಿಕ್ರಮ್. ಸಿನಿಮಾ ಒಂದು ಚೆಂದಗೆ ರೂಪ;ಉಗೊಳ್ಳಲು ಯಾವ್ಯಾವ ಅಂಶಗಳು ಬೇಕಾದರೂ, ಅದರ ಆರಂಭ ಬಿಂದು ಬರವಣಿಗೆ. ಸಿನಿಮಾ ಬರವಣಿಗೆಯನ್ನು ಅರೆದು ಕುಡಿದಂತಿದ್ದ ತ್ರಿವಿಕ್ರಮನ ಪ್ರತಿಭೆ ಕಂಡು ತೆಲುಗು ಸಿನಿಮಾ ಮಂದಿ ಬೆಕ್ಕಸ ಬೆರಗಾಗಿದ್ದರು.

    ಈ ಕಾರಣದಿಂದಲೇ ಈತನಿಗೆ `ಮಾಟಲ ಮಾಂತ್ರಿಕುಡು’ ಅಂತೊಂದು ಬಿರುದು ಸಿಕ್ಕಿದೆ. ಮಾತಿನ ಮಾಂತ್ರಿಕನೆಂಬ ಆ ಬಿರುದಿಗೆ ತಕ್ಕಂತಿದ್ದ ತ್ರಿವಿಕ್ರಮ್ ನಿರ್ದೇಶಕನಾಗಿಯೂ ಗೆದ್ದಿದ್ದಾನೆ. ಬರಬರುತ್ತಾ ಈ ಅಕ್ಷರ ಮಾಂತ್ರಿಕ ಕಾಮಸನ್ನಿಯಿಂದ ನರಳಲಾರಂಭಿಸಿದ್ದ ಅಂತ ಹತ್ತಿರದಿಂದ ಬಲ್ಲ ಮಂದಿಯೇ ಗುಲ್ಲೆಬ್ಬಿಸಲಾರಂಭಿಸಿದ್ದರು. ಸಿನಿಮಾ ಒಂದು ಆರಂಭವಾದರೆ, ಆಡಿಷನ್ನುಗಳ ಮೂಲಕವೇ ಈತ ಹುಡುಗೀರ ಬೇಟೆಗಿಳಿಯುತ್ತಾನೆಂಬ ರೂಮರ್ ಹಬ್ಬಿಕೊಂಡಿತ್ತು. ತ್ರಿವಿಕ್ರಮ್ ಸುಸಜ್ಜಿತವಾದ ಫಾರ್ಮ್ ಹೌಸ್ ಒಂದನ್ನು ಕಟ್ಟಿಕೊಂಡಿದ್ದಾನೆ. ಅದು ಅಕ್ಷರಶಃ ಕಾಮದ ಕುಲುಮೆ ಎಂಬಂಥಾ ಆರೋಪಗಳಿವೆ. ಅಲ್ಲಿ ಬೇಟೆಯಾಡಿದ ಹುಡುಗೀರನ್ನು ಪಳಗಿಸಿಕೊಳ್ಳುತ್ತಾನೆ. ಮಧ್ಯ ರಾತ್ರಿಯ ಹೊತ್ತಿಗೆ ಒರಿಜಿನಲ್ ಗ್ಯಾಂಗ್‌ಸ್ಟರ್ ಪವನ್ ಕಲ್ಯಾಣ್ ಹೋಗಿ ಬರುತ್ತಾನೆಂಬ ಆರೋಪಗಳಿದ್ದಾವೆ. ಈವತ್ತಿಗೆ ದನದ ಕೊಬ್ಬು ಬೆರೆತ ತಿರುಪತಿ ಲಡ್ಡಿನ ಸುತ್ತಾ ಪವನ್ ಭರ್ಜರಿ ಮೈಲೇಜು ಗಿಟ್ಟಿಸಿಕೊಳ್ಳುತ್ತಿದ್ದಾನೆ. ಧರ್ಮ ಉಳಿಸಲೆಂದೇ ಅವತರಿಸಿದವನಂತೆ ನಾಟಕ ಶುರುವಿಟ್ಟಿದ್ದಾನೆ. ಇಂಥವನು ಎಳೇ ಹುಡುಗೀರನ್ನು ತುಂಬಿಕೊಂಡ ತ್ರಿವಿಕ್ರಮನ ಫಾರ್ಮ್ ಹೌಸಿಗೆ ಸರಹೊತ್ತಿನಲ್ಲಿ ದಾಂಗುಡಿಯಿಡೋದು ಬಹುಶಃ ಭಜನೆ ಮಾಡಲಿಕ್ಕಿರಬಹುದೇನೋ!


    ಇಂಥಾ ಪವನ್ ಕಲ್ಯಾಣ್ ವಿರುದ್ಧ ಯೂಟ್ಯೂಬರ್ ಆಗಿದ್ದ ಕತ್ತಿ ಮಹೇಶ ನೇರಾನೇರ ಪ್ರಹಾರಕ್ಕೆ ನಿಂತಿದ್ದ. ಪವನ್ ಸಿನಿಮಾಗಳನ್ನು ಟೀಕಿಸುತ್ತಲೇ, ಆತನನ್ನು ನಿಷ್ಠುರವಾಗಿ ವಿಮರ್ಶೆಗೊಳಪಡಿಸುತ್ತಿದ್ದ. ಅದೆಂಥಾ ಪ್ರತಿರೋಧ ಬಂದರೂ ಜಗ್ಗದೆ ಪವನ್ ಕಲ್ಯಾಣನನ್ನು ಎದುರು ಹಾಕಿಕೊಂಡಿದ್ದ. ಕತ್ತಿ ಮಹೇಶ ಮೆತ್ತಗೆ ತ್ರಿವಿಕ್ರಮನ ಫಾರ್ಮ್ ಹೌಸಿಗೆ ಕ್ಯಾಮೆರಾ ಫೋಕಸ್ ಮಾಡಿದ್ದನಾ? ಮಧ್ಯರಾತ್ರಿ ಎಳೇ ಹುಡುಗೀರೊಂದಿಗೆ ಪವನ್ ಕಲ್ಯಾಣ್ ಮಾಡುತ್ತಿದ್ದ ಧ್ವಾನದ ವಿಡಿಯೋಗಳನ್ನು ಹಿಡಿದಿಟ್ಟುಕೊಂಡಿದ್ದನಾ ಗೊತ್ತಿಲ್ಲ. ಇಂಥಾ ಕತ್ತಿಮಹೇಶ ವರ್ಷಗಳ ಹಿಂದೆ ಆಕ್ಸಿಡೆಂಟ್ ಒಂದರಲ್ಲಿ ಭೀಕರವಾಗಿ ಸತ್ತಿದ್ದ. ಆ ಕಾಲದಲ್ಲಿ ಆಂಧ್ರ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿ ಈ ಆಕ್ಸಿಡೆಂಟಿನ ಬಗ್ಗೆ ತನಿಖೆಗೆ ಆದೇಶ ನೀಡಿದ್ದ. ಆದರೆ, ಆ ತನಿಖೆ ಏನಾಯ್ತು? ಕತ್ತಿ ಮಹೇಶನದ್ದು ಕೊಲೆಯಾ ಎಂಬ ಪ್ರಶ್ನೆಗಳಿನ್ನೂ ಹಾಗೇ ಉಳಿದುಕೊಂಡಿವೆ.

    ಈ ಕತ್ತಿ ಮಹೇಶ ಅಪಘಾತಕ್ಕೆ ಬಲಿಯಾದಾಗ ತೆಲುಗುನಾಡಿನಲ್ಲಿ ಇದೊಂದು ಕೊಲೆ ಎಂಬಂಥಾ ಚರ್ಚೆ ನಡೆದಿತ್ತು. ಪವನ್ ಕಲ್ಯಾಣ್ ಸುತ್ತಾ ಗಾಢ ಅನುಮಾನ ಬೀಟು ಹೊಡೆದಿತ್ತು. ಒಂದು ಮೂಲದ ಪ್ರಕಾರ, ಈ ತ್ರಿವಿಕ್ರಮ್ ಸಿನಿಮಾ ಹೆಸರಿನಲ್ಲಿ ಹೆಣ್ಣಿನ ಹನನ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾನೆ. ಆತನ ಫಾರ್ಮ್ ಹೌಸು ಇಂಥಾ ದಂಧೆಗಳ ಗುಡಾಣವಾಗಿದೆ. ಅವಕಾಶ ಕೇಳಲು ಬಂದ ಹುಡುಗೀರನ್ನು ಮಂಚವೇರಿಸಲು ನೋಡಿ, ಅದಕ್ಕೊಪ್ಪದಿದ್ದರೆ ಪಾತ್ರದಿಂದಲೇ ಕಿತ್ತೆಸೆಯುತ್ತಾನೆಂಬ ಆರೋಪ ತ್ರಿವಿಕ್ರಮ್ ಮೇಲಿದೆ. ಈ ಹಿಂದೆ ತ್ರಿವಿಕ್ರಮ್ ನಿರ್ದೇಶನದ ಜಲ್ಸಾ ಅಂತೊಂದು ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಇದೇ ಪವನ್ ಕಲ್ಯಾಣ್ ನಾಯಕನಾಗಿದ್ದ. ಆರಂಭದಲ್ಲಿ ಆ ಸಿನಿಮಾ ನಾಯಕಿಯಾಗಿ ಪೂನಂ ಕೌರ್ ಳನ್ನು ಆಯ್ಕೆ ಮಾಡಲಾಗಿತ್ತಂತೆ. ಆ ನಂತರ ಅವಕಾಶ ಕಿತ್ತುಕೊಳ್ಳಲಾಗಿತ್ತೆಂದು ಪೂನಂ ಆರೋಪಿಸಿದ್ದಾಳೆ. ಈ ಆರೋಪಕ್ಕೂ, ಹಬ್ಬಿಕೊಂಡಿರುವ ರೂಮರುಗಳಿಗೂ ಸಾಮ್ಯತೆ ಇದೆಯೆಂದೇ ಅನ್ನಿಸುತ್ತಿದೆ!

    Share. Facebook Twitter LinkedIn WhatsApp Telegram Email
    Previous Articlebollywood: ದಕ್ಷಿಣದ ಅಬ್ಬರದ ಮುಂದೆ ಮಂಕಾಯ್ತು ಬಾಲಿವುಡ್!
    Next Article rishabh shetty: ಬೇರೆ ಭಾಷೆಗಳಲ್ಲೂ ರಿಷಭ್ ಗೆ ಬೇಡಿಕೆ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    allu arjun: ಪ್ಯಾನಿಂಡಿಯಾ ಪ್ರಾಜೆಕ್ಟು ಪಲ್ಟಿ ಹೊಡೆದದ್ದೇಕೆ?

    18/06/2025

    samyuktha menon: ಗಾಳಿಪಟ2 ಹುಡುಗಿ ಮುಂದೆ ಪ್ಯಾನಿಂಡಿಯಾ ಅವಕಾಶ!

    18/06/2025

    Nandamuri Balakrishna: ಬೆಚ್ಚಿ ಬೀಳಿಸಿತು ಬಾಲಯ್ಯನ ಅಖಂಡ ಕಾಮಿಡಿ!

    18/06/2025
    Search
    Category
    • OTT (3)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (21)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (56)
    • ಸೌತ್ ಜೋನ್ (98)
    • ಸ್ಪಾಟ್ ಲೈಟ್ (172)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202331 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views
    Don't Miss
    ಸ್ಪಾಟ್ ಲೈಟ್ 01/07/2025

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    777 ಚಾರ್ಲಿ ಚಿತ್ರದಲ್ಲಿ (simple star rakshith shetty) ರಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿದ್ದವರು (actress sangeetha sringeri)…

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.