ಈ ಸಿನಿಮಾ ಮಂದಿ ತೋಪು ಪ್ರಾಡಕ್ಟನ್ನು ಬಚಾವು ಮಾಡಲು ಯಾವ್ಯಾವ ಥರದ ನೌಟಂಕಿ ನಾಟಕವಾಡಲೂ ಹಿಂದೆಮುಂದೆ ನೋಡುವವರಲ್ಲ. ಅಗತ್ಯ ಬಿದ್ದರೆ ಸ್ಟಾರ್ ನಟರೂ ಕೂಡಾ ಮೂರೂ ಬಿಟ್ಟವರಂತೆ ಇಂಥಾ ಬೃಹನ್ನಾಟಕದ ಪಾತ್ರಧಾರಿಗಳಾಗಿ ಬಿಡುತ್ತಾರೆ. ಈ ಮಾತಿಗೆ…
ವ್ಯಕ್ತಿತ್ವದಲ್ಲೊಂದು ಪ್ರಾಮಾಣಿಕತೆ, ಮಾತು, ವರ್ತನೆಗಳಲ್ಲಿ ಘನತೆ ಗೌರವಗಳಿಲ್ಲದಿದ್ದರೆ ಅಂಥಾ ವ್ಯಕ್ತಿಯ ಅವಸಾನಕ್ಕೆ ಬೇರೆ ಕಾರಣಗಳೇ ಬೇಕಾಗುವುದಿಲ್ಲ. ಅದರಲ್ಲಿಯೂ ಸಿನಿಮಾದಂಥಾ ಸಾರ್ವಜನಿಕ ಬದುಕಿನಲ್ಲಿರುವವರಂತೂ ಇಂಥಾದ್ದನ್ನೆಲ್ಲ ಬಲು ಎಚ್ಚರಿಕೆಯಿಂದ ಪರಿಪಾಲಿಸಬೇಕಾಗುತ್ತದೆ. ಈಗಂತೂ ತಂತ್ರಜ್ಞಾನ ಮನುಷ್ಯನ ನರನಾಡಿಗಳನ್ನೂ ಆವರಿಸಿಕೊಂಡಿರುವ ದಿನಮಾನ.…
ಸಿನಿಮಾ, ಕಿರುತೆರೆ ಜಗತ್ತಿನ ಕಾಮಪುರಾಣಗಳು ಆಗಾಗ ಹೊರ ಜಗತ್ತಿನೆದುರು ಜಾಹೀರಾಗುತ್ತಿರುತ್ತವೆ. ಇದೀಗ ಕಿರುತೆರೆ ಲೋಕವನ್ನು ಅಪಾದಮಸ್ತಕ ಆವರಿಸಿಕೊಂಡಿರುವ ರಿಯಾಲಿಟಿ ಶೋಗಳ ಪ್ರಭೆಯಲ್ಲಿಯೂ ಅಂಥಾದ್ದೇ ಕಾಮಚೇಷ್ಠೆಗಳು ಮೇರೆ ಮೀರಿಕೊಂಡಿವೆ. ಹಾಗೆನೋಡಿದರೆ, ಕನ್ನಡದ ಬಹುತೇಕ ಕಾಮಿಡಿ ಶೋಗಳಲ್ಲಿ ಡೈಲಾಗುಗಳ…
ಕಂಗಾಲು ಮಾತೆಯ ಮಗ್ಗುಲಲ್ಲಿ ಬೊಮ್ಮಣ್ಣನ ಅಳೀಮಯ್ಯ! ರೇಣುಕಾ ಸ್ವಾಮಿ ಕೊಲೆ ಕೇಸಿನ ಸಂಬಂಧವಾಗಿ ಬೇಲ್ ಪಡೆದು ನಿರಾಳವಾಗಿರೋ ದರ್ಶನ್ ಇದೀಗ ಫಾರ್ಮಿಗೆ ಮರಳಿದಂತಿದೆ. ಓರ್ವ ಸ್ಟಾರ್ ನಟನಾಗಿ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದ್ದಾತ ದರ್ಶನ್. ಒಂದು ಹಂತದಲ್ಲಿ…
ಮನಸಲ್ಲಿ ಬರೀ ದ್ವೇಷ, ಸಮಯಸಾಧಕತನವನ್ನಷ್ಟೇ ಸಾಕಿಕೊಂಡ ಅವಿವೇಕಿಗಳು ಸುಲಭಕ್ಕೆ ಬದಲಾಗೋದು ಕಷ್ಟವಿದೆ. ತನಗೆ ತಾನೇ ನವರಸ ನಾಯಕ ಅಂದುಕೊಂಡಿರುವ ಜಗ್ಗೇಶಿಯಂತೂ ಈ ಜನ್ಮದಲ್ಲಿ ಬದಲಾಗೋದಿಲ್ಲ. ಬಾಯಿಬೇಧಿ ಎಂಬುದು ಈತನ ಪಾಲಿಗೆ ಎಂದೂ ವಾಸಿಯಾಗದ ಕಾಯಿಲೆ. ಒಂದು…
ಗುರುಪ್ರಸಾದ್ ಸತ್ತ ಸುದ್ದಿ ಕೇಳಿದಾಕ್ಷಣ ಅವರೊಂದಿಗೆ ಒಡನಾಟವಿಲ್ಲದ ದುನಿಯಾ ವಿಜಯ್ ಥರದವರು ಬಂಧುವಿನಂತೆ ದಿಕ್ಕೆಟ್ಟ ಕುಟುಂಬದ ಜೊತೆ ನಿಂತಿದ್ದರು. ತನಗೆ ನಾಯಕನಾಗಿ ಉಸಿರು ನೀಡಿದ್ದ ಗುರುವನ್ನು ನೆನೆಸಿಕೊಳ್ಳುತ್ತಲೇ ಡಾಲಿ ಧನಂಜಯ ಕೂಡಾ ಓಡೋಡಿ ಬಂದಿದ್ದರು.…
ಈ ಬಾರಿಯ (biggboss season11) ಬಿಗ್ ಬಾಸ್ ಶೋ ಆರಂಭದಲ್ಲಿಯೇ ಭಾರೀ ವಿರೋಧ ಎದುರಿಸುವಂತಾಗಿತ್ತು. ಅಂಥಾದ್ದೊಂದು ವಿದ್ಯಮಾನಕ್ಕೆ ಕಾರಣವಾಗಿರೋದು ವಂಚಕಿ ಚೈನ್ ಚೈತ್ರಾಳ (chaithra kundapura) ಆಗಮನ. ಸಮಯ ಸಿಕ್ಕಾಗೆಲ್ಲ ದ್ವೇಷ ಭಾಷಣ ಮಾಡುತ್ತಾ, ಆ…
ಹಿಂಗಾರಿನ ಮುಕ್ತಾಯ ಘಟ್ಟದಲ್ಲಿ ಜಿಬುರು ಮಳೆ ಹನಿಯುವುದು ಮಾಮೂಲು. ಥಂಡಿ, ಧಗೆ, ಚಳಿಯ ಮಿಶ್ರ ವಾತಾವರಣದಲ್ಲಿ ನಾನಾ ವೆರೈಟಿಯ ಜ್ವರಗಳು, ಸಾಂಕ್ರಾಮಿಕಗಳೂ ವಾಡಿಕೆಯಂತೆ ಹಬ್ಬಿಕೊಳ್ಳುತ್ತವೆ. ಆದರೆ, ಈಗೊಂದು ಹತ್ತು ವರ್ಷದಿಂದೀಚೆಗೆ ಮತ್ತೊಂದು ಖಾಯಂ ಕಾಯಿಲೆ ಕರ್ನಾಟಕಕ್ಕೆ…
ದರ್ಶನ್ (renukaswamy murder case) ಪ್ರಕರಣ ದಿನ ಕಳೆದಂತೆಲ್ಲ ಮತ್ತಷ್ಟು ಜಟಿಲವಾಗುತ್ತಿದೆ. ಬಹುಶಃ ಪೊಲೀಸರು ಮೈಸೂರಿಂದ ದರ್ಶನ್ (darshan arrest) ನನ್ನು ಜೀಪಿಗೆ ತುಂಬಿಕೊಂಡು ಬಂದ ಘಳಿಗೆಯಲ್ಲಿ ಯಾರೆಂದರೆ ಯಾರೂ ಇಂಥಾ ಗಂಭೀರ ಘಳಿಗೆಗಳನ್ನು ಊಹಿಸಿರಲಿಲ್ಲ.…
ಕೀರ್ತಿ ಶನಿ ನೆತ್ತಿಯೇರಿ ಕುಳಿತಾಗ ಎಂಥೆಂಥಾ ಘಟಾನುಘಟಿಗಳೆಲ್ಲ ಹಾಳಾಗಿ ಹೋದದ್ದಿದೆ. ಅದರಲ್ಲಿಯೂ ಈ ಸಿನಿಮಾ ಎಂಬ ಭ್ರಾಮಕ ಜಗತ್ತಿನಲ್ಲಿ ಸಿಕ್ಕ ಗೆಲುವನ್ನು ಸಂಭಾಳಿಸೋದೇ ಒಂದು ಸಾಹಸ. (kannada film industry) ಕನ್ನಡದ ಮಟ್ಟಿಗೆ ಡಾ.ರಾಜ್ ಕುಮಾರ್,…