777 ಚಾರ್ಲಿ ಚಿತ್ರದಲ್ಲಿ (simple star rakshith shetty) ರಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿದ್ದವರು (actress sangeetha sringeri) ಸಂಗೀತಾ ಶೃಂಗೇರಿ. ಸಾಮಾನ್ಯವಾಗಿ, ಒಂದು ಹಿಟ್ ಸಿನಿಮಾದ ನಂತರದಲ್ಲಿ ಅದರ ಭಾಗವಾಗಿದ್ದ ನಟ ನಟಿಯರ ಮುಂದೆ ಅವಕಾಶದ ಹೆಬ್ಬಾಗಿಲೇ ತೆರೆದುಕೊಳ್ಳುತ್ತೆ. (777 charlie movie) ಚಾರ್ಲಿ ಕೂಡಾ ದೇಶಾದ್ಯಂತ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಸಂಗೀತಾ ಕೂಡಾ ಒಂದು ಮಟ್ಟಿಗೆ ಗಮನ ಸೆಳೆದಿದ್ದರು. ಆ ನಂತರ ಈಕೆ ಪಕ್ಕಾ ಬ್ಯುಸಿಯಾಗುತ್ತಾರೆ ಅಂದುಕೊಳ್ಳಲಾಗಿತ್ತು. ಆದರೇಕೋ ಅದು ಹುಸಿಯಾಗಿದೆ; ಅದರ ಹಿಂದಿರೋ ಒಂದಷ್ಟು ಅಸಲೀ ಸತ್ಯಗಳ ಬಗ್ಗೆ ಟಾಕ್ ಶುರುವಾಗಿದೆ. ಯಾವಾಗ ಆಕೆ ಬಿಗ್ ಬಾಸ್ (bigboss season 10) ಸ್ಪರ್ಧಿಯಾದರೋ, ಅದರ ಹಿಂದೆಯೇ ಒಂದಷ್ಟು ರೂಮರುಗಳೂ ಹಬ್ಬಿಕೊಂಡಿವೆ!
ಹಾಗಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆ ಸೇರಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾದ್ರೆ, ಸಂಗೀತ ಶೃಂಗೇರಿಗೆ ಅವಕಾಶಗಳ ಕೊರತೆಯಿತ್ತಾ? ಚಾರ್ಲಿಯ ನಂತರ ಆಕೆ ಖಾಲಿ ಕೂರುವ ಸ್ಥಿತಿ ನಿರ್ಮಾಣಗೊಂಡಿತ್ತಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿಕೊಳ್ಳುತ್ತವೆ. ಆ ನಿಟ್ಟಿನಲ್ಲಿ ಕೆದಲು ನಿಂತರೆ, ಒಂದಷ್ಟು ಅಚ್ಚರಿದಾಯಕ ಸಂಗತಿಗಳು ಜಾಹೀರಾಗುತ್ತವೆ.
ಆಸುಪಾಸಿನವರೇ ಹೇಳುವ ಪ್ರಕಾರ ಸಂಗೀತಾ ಆಯ್ಕೆಯ ವಿಚಾರದಲ್ಲಿ ಬಲು ಚೂಸಿ. ಸ್ಟಾರ್ ಸುವರ್ಣದ ಹರಹರ ಮಹಾದೇವ್ ಧಾರಾವಾಹಿಯ ಮೂಲಕ ಪ್ರಸಿದ್ಧಿ ಪಡೆದಿದ್ದ ಆಕೆ, ಆ ನಂತರ ಐವತ್ತಕ್ಕೂ ಹೆಚ್ಚು ಸ್ಕ್ರಿಪ್ಟುಗಳನ್ನು ನಿರಾಕರಿಸಿದ್ದರಂತೆ. ಆ ನಂತರ ಉಪ್ಪಿ ಶಿಷ್ಯನ ಎ ಪ್ಲಸ್ ಎಂಬ ಚಿತ್ರ ಒಪ್ಪಿಕೊಂಡರೂ, ಅದು ಬರಖತ್ತಾಗಲಿಲ್ಲ. ಆ ಬಳಿಕ ಸುದೀರ್ಘ ಗ್ಯಾಪಿನಲ್ಲಿ ಸಿಕ್ಕ ಒಪ್ಪಿಕೊಂಡ ಸಿನಿಮಾ 777 ಚಾರ್ಲಿ. ಅದರ ಗೆಲುವಿನ ನಂತರವೂ ಸಾಕಷ್ಟು ಅವಕಾಶಗಳು ಸಂಗೀತಾರನ್ನು ಅರಸಿ ಬಂದಿವೆ. ಆದರೆ, ಅವ್ಯಾವುವನ್ನೂ ಒಪ್ಪಿಕೊಳ್ಳದ ಸಂಗೀತಾ ಇದೀಗ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಅಲ್ಲಿಂದ ಹೊರ ಬಂದ ನಂತರವಾದರೂ ಈ ಹುಡುಗಿಯ ನಸೀಬು ಬದಲಾದೀತೇನೋ…