ನ್ನಡದ ಕೆಲ ನಟಿಯರ ಪಾಲಿಗೆ ಅದೃಷ್ಟವೆಂಬುದು ಒಲಿದು ಬರೋದೇ ಅಚ್ಚರಿ. ಒಂದು ಸಿನಿಮಾ ಹಿಟ್ ಆಗುತ್ತಲೇ ಕನ್ನಡದಲ್ಲೂ ಬ್ಯುಸಿಯಾಗಿ, ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಪಡೆದು ಮಿಂಚಿದ ಒಂದಷ್ಟು ನಟಿಯರಿದ್ದಾರೆ. ಇದೀಗ ಆ ಸಾಲಿಗೆ ರುಕ್ಮಿಣಿ ವಸಂತ್ ಕೂಡಾ ಸೇರ್ಪಡೆಯಾಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ನಟಿಯಾಗಿ ಆಗಮಿಸಿದ್ದವರು ರುಕ್ಮಿಣಿ. ಆರ್ಧ್ರ ಭಾವಗಳ ಆ ಪಾತ್ರವನ್ನು ಆಕೆ ಆವಾಹಿಸಿಕೊಂಡ ರೀತಿಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದರು. ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದ ರುಕ್ಮಿಣಿ ಮೊದಲ ಹೆಜ್ಜೆಯಲ್ಲಿಯೇ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರು. ಅಂಥಾದ್ದೊಂದು ಹಠಾತ್ ಗೆಲುವಿನ ಪ್ರಭೆಯಲ್ಲಿ ಮಿಂದೇಳುತ್ತಿರುವ ರುಕ್ಮಿಣಿಗೀಗ ಡಾರ್ಲಿಂಗ್ ಪ್ರಭಾಸ್ ಗೆ ನಾಯಕಿಯಾಗುವ ಅವಕಾಶ ಒಲಿದು ಬಂದಂತಿದೆ!

ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರಕ್ಕೆ ಈಕೆಯೇ ನಾಯಕಿ ಎಂಬಂಥಾ ಸುದ್ದಿ ಹಬ್ಬಿಕೊಂಡಿದೆ. ಅದರ ಬೆನ್ನಲ್ಲಿಯೇ ಪ್ರಶಾಂತ್ ನೀಲ್ ಮತ್ತು ಜ್ಯೂ ಎನ್ಟಿಆರ್ ಕಾಂಬಿನೇಷನ್ನಿನ ಸಿನಿಮಾಕ್ಕೂ ರುಕ್ಮಿಣಿ ನಾಯಕಿಯಾಗಲಿದ್ದಾರೆಂಬ ಸುದ್ದಿ ಹಬ್ಬಿಕೊಂಡಿದೆ. ಈ ಬಗೆಗಿನ ಅಧಿಕೃತ ಮಾಹಿತಿಗಳು ಹೊರಬಿದ್ದರೆ, ಖಂಡಿತವಾಗಿಯೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ರುಕ್ಮಿಣಿಯ ಶಖೆ ಶುರುವಾಯ್ತೆಂದೇ ಅರ್ಥ. ಬಹುಶಃ ಸಲೀಸಾಗಿ ಆಕೆ ರಶ್ಮಿಕಾ ಮಂದಣ್ಣ, ಶ್ರೀಲೀಲಾಳಂಥಾ ನಟಿಯರನ್ನು ಹಿಂದಿಕ್ಕಿ ಮಿಂಚುವಂತಾದರೂ ಅಚ್ಚರಿಯೇನಿಲ್ಲ. ಹಾಗಂತ ತೆಲುಗು ಸೇರಿದಂತೆ ಅನೇಕ ಭಾಷೆಯ ಚಿತ್ರರಂಗಗಳ ಮಂದಿಯೇ ಭವಿಷ್ಯ ನಿಡಿಯಲಾರಂಭಿಸಿದ್ದಾರೆ. ಅಂಥಾದ್ದೊಂದು ಮಟ್ಟ ಮುಟ್ಟಬಲ್ಲ ಛಾತಿ ಖಂಡಿತವಾಗಿಯೂ ಕನ್ನಡದ ಹುಡುಗಿ ರುಕ್ಮಿಣಿಗಿದ್ದೇ ಇದೆ.

ಹಾಗೆನೋಡಿದರೆ, ಈ ಹುಡುಗಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೂಡಿ ಬಂದಿದ್ದೇ ಅಚಾನಕ್ಕಗಿ. ಅದಾಗಲೇ ನಟಿಯಾಗಬೇಕೆಂಬ ಕನಸಿಟ್ಟುಕೊಂಡಿದ್ದ ರುಕ್ಮಿಣಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಿಗಾಗಿ ಆಡಿಷನ್ ನಡೆಸುತ್ತಿರುವ ವಿಚಾರ ಗಮನಕ್ಕೆ ಬಂದಿತ್ತು. ತುಸು ಅಳುಕಿನೊಂದಿಗೆ ಚಿತ್ರತಂಡವನ್ನು ಸಂಪರ್ಕಿಸಿದ್ದ ರುಕ್ಮಿಣಿ, ನಂತರ ಒಂದಷ್ಟು ಸ್ಪರ್ಧೆಯನ್ನು ದಾಟಿಕೊಂಡು ನಾಯಕಿಯಾಗಿ ಆಯ್ಕೆಯಾಗಿದ್ದರು. ಅದಕ್ಕೆ ತನ್ನ ಪ್ರತಿಭೆ ಮಾತ್ರವಲ್ಲದೇ ಅದೃಷ್ಟವೂ ಕಾರಣವೆಂಬ ಮನಃಸ್ಥಿತಿ ಹೊಂದಿರುವ ರುಕ್ಮಿಣಿಯೀಗ ತಮಿಳು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಅದೇ ಹೊತ್ತಿನಲ್ಲಿ ತೆಲುಗಿನಲ್ಲಿಯೂ ಒಂದಷ್ಟು ಅವಕಾಶಗಳು ಅರಸಿ ಬರಲಾರಂಭಿಸಿವೆ.

ಒಂದು ವೇಳೆ ಈಗ ತೆಲುಗು ಚಿತ್ರರಂಗದಲ್ಲಿ ಹಬ್ಬಿಕೊಂಡಿರುವ ಸುದ್ದಿಗಳು ನಿಜವಾದರೆ, ಖಂಡಿತವಾಗಿಯೂ ಅದು ರುಕ್ಮಿಣಿ ಪಾಲಿಗೆ ಜಾಕ್ ಪಾಟ್. ಅಲ್ಲಿಂದ ಬಾಲಿವುಡ್ ಎಂಟ್ರಿಗೆ ಹಾದಿ ಮತ್ತಷ್ಟು ಸಲೀಸಾಗುತ್ತದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್ಟಿಆರ್ ಗೆ ನಾಯಕಿಯಾಗಬೇಕೆಂದು ಬಾಲಿವುಡ್ ನಟಿಯರೇ ಪ್ರಯತ್ನ ಪಡುತ್ತಾರೆ. ಅಂಥಾದ್ದರಲ್ಲಿ ಆ ಅವಕಾಶ ರುಕ್ಮಿಣಿಗೆ ತಾನೇತಾನಾಗಿ ಒಲಿದು ಬಂದರೆ ಅದು ಅದೃಷ್ಟವಲ್ಲದೆ ಬೇರೇನಲ್ಲ. ಇಂಥಾ ಸುದ್ದಿಗಳ ಕೇಂದ್ರ ಬಿಂದುವಾಗಿರುವ ರುಕ್ಮಿಣಿ ವ್ಯಕ್ತಿಗತವಾಗಿಯೂ ಗಮನ ಸೆಳೆಯೋ ನಟಿ. ಥಳುಕು ಬಳುಕಿನ ಧಿಮಾಕುಗಳನ್ನು ಮೀರಿಕೊಂಡಂತಿರುವ ಈಕೆ ಒಂದಷ್ಟು ಸೂಕ್ಷ್ಮ ಮನಃಸ್ಥಿತಿಯಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಇಂಥಾ ಹುಡುಗಿ ಕನ್ನಡದಲ್ಲಿ ಸಕ್ರಿಯವಾಗಿದ್ದುಕೊಂಡೇ ಪರಭಾಷೆಗಳಲ್ಲೂ ಮಿಂಚಿದರೆ ಕನ್ನಡಗರೆಲ್ಲ ಖುಷಿ ಪಡದಿರಲು ಸಾಧ್ಯವೇ?

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!