ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತು, ಚಾಲೆಂಜಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದಾತ (challenging star darshan) ದರ್ಶನ್. ಝೀರೋ ಲೆವೆಲ್ಲಿನಿಂದ ಯಾವ ಎತ್ತರಕ್ಕೇರಬೇಕನ್ನೋದಕ್ಕೂ, ಆ ಎತ್ತರದಿಂದ ಎಂಥಾ ಪಾತಾಳಕ್ಕಿಳಿಯಬಹುದು ಅನ್ನೋದಕ್ಕೂ ಈತ ಪಕ್ಕಾ ರೋಲ್ ಮಾಡೆಲ್. (darshan) ದರ್ಶನ್ ಗೆ ಸಿಕ್ಕ ಗೆಲುವು, ಪ್ರೀತಿ ಸಾಮಾನ್ಯ ತೂಕದ್ದಲ್ಲ. ತಲೆ ನೆಟ್ಟಗಿರುವ ಯಾವನೇ ಆಗಿದ್ರೂ ಅದನ್ನು ಕಡೇತನಕ ಕೈತಪ್ಪದಂತೆ ಕಾಪಿಟ್ಟುಕೊಳ್ತಿದ್ರು. ಬಹುಶಃ ಬದುಕನ್ನ ನಾನಾ ವ್ಯಸನಗಳು, ಖಯಾಲಿಗಳ ಸೆಳವಿಗೆ ಸಿಗದಂತೆ ಎಚ್ಚರ ವಹಿಸಿದ್ದರೆ ದರ್ಶನ್ ಕೊಲೆಗಡುಕನ ಸ್ಥಾನದಲ್ಲಿ ನಿಲ್ಲುವ ಪ್ರಮೇಯವೇ ಬರುತ್ತಿರಲಿಲ್ಲ. ಬಾಕ್ಸ್ ಆಫೀಸ್ ಸುಲ್ತಾನ, (d boss) ಡಿ ಬಾಸ್ ಅಂತೆಲ್ಲ ತಲೆತುಂಬ ಭ್ರಮೆಗಳ ಕಸ ತುಂಬಿಕೊಂಡಿದ್ದಾತ ದರ್ಶನ್. ಈಗ ವಿಧಿಯೆಂಬ ವಿಧಿ ಆ ಕಸಗಳಿಗೆ ಕಿಡಿಸೋಕಿಸಿದೆ. ಇಷ್ಟೂ ವರ್ಷದ ಎಫರ್ಟು ಮಾನ ಮರ್ಯಾದೆಗಳ ಸಮೇತ ಬೂದಿಯಾಗಿದೆ!

ಎಂಥಾ ಕಚಡಾ ಕೆಲಸ ಮಾಡಿ ಬಂದರೂ ಜನ ಸಿನಿಮಾ ನೋಡಿ ಗೆಲ್ಲಿಸ್ತಾರೆಂಬ ತಿಮಿರು ದರ್ಶನನ ನೆತ್ತಿಗೇರಿ ನರ್ತನ ಶುರುವಿಟ್ಟುಕೊಂಡಿತ್ತು. ತನ್ನ ಫ್ಯಾನ್ ಬೇಸಿನ ಮುಂದೆ ರಾಜ್ಯ ಮುಖ್ಯಮಂತ್ರಿಗಳೂ ಮಂಕಾಗ್ತಾರೆಂಬಂಥಾ ಅಹಂ ಆತನನ್ನು ಅಪಾದಮಸ್ತಕ ಆವರಿಸಿಕೊಂಡಿತ್ತು. ಸಿಕ್ಕವರ ಮೇಲೆ ಹಲ್ಲೆ ನಡೆಸೋದು, ಎಣ್ಣೆ ಏಟಲ್ಲಿ ಆವಾಜು ಬಿಡೋದು ಈತನ ಪಾಲಿಗೆ ಮಾಮೂಲಾಗಿ ಹೋಗಿತ್ತು. ಇಂಥಾ ದುಂಡಾವರ್ತನೆಗಳಿಗೆ ನೇರವತಿಂಕೆಯ ಮುಸುಕು ಹಾಕಿ ಬಚಾವಾಗುವ ಕ್ರಿಮಿನಲ್ಲು ಬುದ್ಧಿಯನ್ನ ದಾಸ ಪ್ರದರ್ಶಿಸಲಾರಂಭಿಸಿದ್ದ. ತನ್ನ ವಿಕೃತ ಮನಃಸ್ಥಿತಿಗೆ ತಕ್ಕುದಾದೊಂದು ಅಭಿಮಾನಿ ಪಡೆ ಕಟ್ಟಿಕೊಂಡಿದ್ದ. ಅದನ್ನ ನಂಬಿಕೊಂಡು ತೊಡೆ ತಟ್ಟಲಾರಂಭಿಸಿದ್ದ ದರ್ಶನ್ ಈಗ ಖಡಕ್ ಖಾಕಿ ಪಡೆಯ ಮುಂದೆ ಕೆಕರುಮಕರಾಗಿ ಕೈಕಟ್ಟಿ ನಿಲ್ಲುವಂತಾಗಿದೆ.

ಪವಿತ್ರಾಗೆ ಅಶ್ಲೀಲ ಮೆಸೇಜು ಕಳಿಸಿದನೆಂದು ಬಡಪಾಯಿಯೊಬ್ಬನ ಜೀವ ತೆಗೆದನಲ್ಲಾ ದರ್ಶನ್? ಹಾಗೊಂದು ಅವಘಡ ನಡೆದ ಘಳಿಗೆಯಲ್ಲಿಯೂ ಸಲೀಸಾಗಿ ಬಚಾವಾಗಿ ಬಿಡುವ ಭರವಸೆಯಿತ್ತು. ಮೈಸೂರಿನ ಹೊಟೇಲಿನಲ್ಲಿ ಕಸರತ್ತು ನಡೆಸುತ್ತಿದ್ದವನ ಮುಂದೆ ಖಾಕಿ ಪಡೆ ಪ್ರತ್ಯಕ್ಷವಾದಾಗಲೂ ಆ ತಿಮಿರೇನು ಕಡಿಮೆಯಾಗಿರಲಿಲ್ಲ. ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಒಂದೇ ಒಂದು ಆವಾಜಿಗೆ ಚಾಲೆಂಜಿಂಗ್ ಸ್ಟಾರ್ ನ ದುರಹಂಕಾರ ತಲ್ಲಣಿಸಿ ಹೋಗಿತ್ತು. ಅಲ್ಲಿಂದಾಚೆಗೆ ಇದರಿಂದ ಪಾರಾಗಲು ನಾನಾ ರೀತಿಯ ಕಸರತ್ತು ನಡೆಸಿದ್ದ. ಕಡೆಗೂ ರಾತ್ರಿ ಪೊಲೀಸ್ ಠಾಣೆಯಲ್ಲಿ ಚಾಪೆ ಹಾಸಿಕೊಂಡು ಮಲಗುವ ಸ್ಥಿತಿ ಬಂದಾಗ ಬಹುಶಃ ಕಾನೂನಿನ ಮುಂದೆ ಬಾಸೂ ಒಂದೇ ಬೂಸಾವೂ ಒಂದೇ ಎಂಬ ದಿಗ್ಧರ್ಶನವಾಗಿರಬಹುದು!

ದರ್ಶನ್‍ಗೆ ಎಣ್ಣೆ, ಸಿಗರೇಟು ಸೇರಿದಂತೆ ಒಂದಷ್ಟು ಚಟಗಳಿರೋದು ಗುಟ್ಟಾಗುಳಿದಿಲ್ಲ. ಸಾಮಾನ್ಯವಾಗಿ ಇಂಥಾ ಅಡಿಕ್ಷನ್ನು ಸರಿಯಾದ ಸಮಯಕ್ಕೆ ಮಾಲು ಸಿಗದೇ ಹೋದಾಗ ಉಲ್ಬಣಿಸುತ್ತೆ. ಹಾಗೆ ರೊಚ್ಚಿಗೆದ್ದ ದರ್ಶನ್ ಪೊಲೀಸ್ ಅಧಿಕಾರಿಗಳ ಮುಂದೆ ಗಾಂಚಾಲಿ ತೋರಿಸಿದನಾ? ಈತನ ದುರಹಂಕಾರ ಕಂಡು ತಾಳ್ಮೆ ಕಳೆದುಕೊಂಡ ಅಧಿಕಾರಿಯೊಬ್ಬರು ರಪ್ಪನೆ ಕೆನ್ನೆಗೊಂದು ಬಿಗಿದು ಕೂರಿಸಿದರಾ? ಹಾಗೊಂದು ಸುದ್ದಿ ಸದ್ಯ ಹರಿದಾಡ್ತಿದೆ. ಪೊಲೀಸ್ ವ್ಯಾನಿನಲ್ಲಿ ಕುಂತ ದರ್ಶನ್ ಮುಖ ಕೊಂಚ ಬಾತುಕೊಂಡಂತೆ ಭಾಸವಾಗುತ್ತಿತ್ತು. ಅದು ಖಾಕಿ ಕೈಚಳಕವಾಗಿದ್ದರೂ ಅಚ್ಚರಿಯೇನಿಲ್ಲ. ಓರ್ವ ಸ್ಟಾರ್ ನಟ ಈ ಸ್ಥಿಗೆ ತಲುಪಿಕೊಳ್ಳುತ್ತಾನಂದ್ರೆ ಅದಕ್ಕಿಂತ ನೋವಿನ ಸಂಗತಿ ಬೇರ್ಯಾವುದಿದೆ?

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!